Skip to main content

Posts

ಬಾಸಿಂಗ

ಕೆಂಡಸಂಪಿಗೆ ಬಾಸಿಂಗ ಇನ್ನು ಮೈನೆರೆಯದ ಮುದ್ದು ಹುಡುಗಿ, ನಿನ್ನೆಯಷ್ಟೆ ಚಿಕ್ಕಪ್ಪನ ಮದುವೆಯಲ್ಲಿ ಕಂಬದಾಟ ಆಡಿದವಳು, ಇಂದು ವಧುವಾಗಿ ಮದುವೆ ಮಂಟಪದ ಬಾಸಿಂಗವೇ ಅವಳಾಗಿದ್ದಾಳೆ. ರಾತ್ರಿ ಹನ್ನೆರಡರ ಮೂಹೂರ್ತ ಮಲ್ಲಿಗೆ ಬ್ರಹ್ಮಕಮಲಗಳು ಬಿರಿದುನಿಂತಿವೆ. ಮಿಣುಕು ಹುಳಕೂ ಮೈತುಂಬ ಬಂಗಾರ, ಎಷ್ಟು ಹೊಳೆದರೂ ಸಾಲ. ಅಪ್ಪ ಮಾಡಿದ್ದಲ್ಲವೇ? ತೋರಣದ ಮಾವಿನೆಲೆ ಸಸಿದು ಆಡುವ ಹುಡುಗಿ ತಾಳಿ ಕಟ್ಟಿಸಿಕೊಳ್ಳುವಾಗ ಎಚ್ಚರವೂ ಇರಲಿಲ್ಲ. ಅವಳಪ್ಪ ಹೇಳುತ್ತಾನೆ. ಇವತ್ತಿಗೆ ಅವಳು ಹುಟ್ಟಿ ಹನ್ನೆರಡು ವರ್ಷ. ಅಮ್ಮ ಬಿಕ್ಕುತ್ತಾಳೆ. ಸುಮಾ.ಕಂಚೀಪಾಲ್

ಹೃದಯಶಿವ

ಸ್ವರ್ಗವಾಸಿ, ಪ್ರೀತಿಯ ಮಾವನಿಗೆ, ಅಂದು ಹುಟ್ಟಿದ ದಿನದ ನೆನಪಿಗೆ ಇಂದು ಈ ನನ್ನ  ಪತ್ರ. ನೀನು ಇಂದು ಸ್ವರ್ಗದಲ್ಲಿ ಸಂತೃಪ್ತಿಯ ದಿನಗಳನ್ನು ಕಾಣುತ್ತಾ ಸುಖವಾಗಿದ್ದೀಯ ಎಂದು ದಿನವೂ ನಾವೆಲ್ಲರೂ ಭಾವಿಸಿದ್ದೇವೆ. ನಾವು ಇಲ್ಲಿ ಅಲ್ಪತೃಪ್ತರಾಗಿ ಸುಖವಾಗಿಯೇ ಇದ್ದೇವೆ ಎನ್ನಬಹುದು, ಆಗಾಗ ಕಾಡುವ  ನಿನ್ನ ನೆನಪೊಂದನ್ನು ಬಿಟ್ಟರೆ. "ಹುಟ್ಟು ಹಬ್ಬವೆಂದರೆ ಏನು ವಿಶೇಷ ಅಲ್ಲ ಮಾರಾಯ್ತಿ ಮೊದಲು ವಿಷ್ ಮಾಡದೇ ಇದ್ರೆ ಅದಕೆಲ್ಲ ಯಾರಾದ್ರೂ ಬೇಜಾರ್ ಮಾಡ್ತವ" ಈಗ ವಿಷ್ ಮಾಡಿದ್ದೆ ಆತಲಿ ಖುಷಿಪಡು ಎಂದು ನನ್ನ ಹುಟ್ಟು ಹಬ್ಬದ ದಿನ ಪೋನು ಮಾಡಿ ನೀನು ಹೇಳುತ್ತಿದ್ದೆ. ಆದರೂ ನಾನು ಪ್ರತಿ ವರ್ಷವೂ ನೀನೆಕೆ ಇಷ್ಟು ತಡಮಾಡಿದೆ? ಎಂದೇ ಕೇಳುತ್ತಿದ್ದೆ‌. ಇಲ್ಲಿ ಕಾಟಾಚಾರದ ಪರೀಕ್ಷೆಗಳೆಲ್ಲ ನಡೆಯುತ್ತಿದೆ. ನೀನು ಓದಿದ್ದನ್ನು ಗೆಳೆಯರಿಗೆ ಧಾರೆ ಎರೆದರೆ ಅವರು ಪಾಸಾಗಬಹುದು. ನೀನುಯಾವಾಗಲೂ ಹುಡುಗಿಯರ ಓದಿನ ಕುರಿತು ಹೀಗೆ ಅಲ್ಲವೇ ತಮಾಷೆ ಮಾಡಿ ನಗುತ್ತಿದ್ದುದು. ಕನಸಲ್ಲಿ ಬರುತ್ತೇನೆ ಎಂದು ಭರವಸೆ ಕೊಟ್ಟ ನೀನು ಇತ್ತೀಚೆಗೆ ಯಾಕೊ ಗೈರು ಹಾಕುತ್ತಿದ್ದೀಯಾ ಹೀಗೆಂದೆ ನಾನು ಬೇಸರಮಾಡಿ ಅತ್ತದಿನ ರಾತ್ರಿ ನೀನು ಕನಸಿನಲ್ಲಿ ಬಂದದ್ದು ಖುಷಿ ಎನಿಸಿತು. ಹಿಂದಿನ ವರ್ಷವೇ ನಿನ್ನ ಜೀವನದ ಕೊನೆಯ ಹುಟ್ಟು ಹಬ್ಬವೆಂದು ತಿಳಿದಿದ್ದರೆ ಅದೇನಾಗುತ್ತಿತ್ತೊ ಗೊತ್ತಿಲ್ಲ. ನಿನ್ನ ಅಮ್ಮನಿಗೆ ಪೋನುಮಾಡಿದಾಗ ಅವಳೂ ಇದನ್ನೇ ಹೇಳಿ ಅಳುತ್ತಾ...

ಬಾಲ್ಯದ ಘಮಲು ಭಾಗ ೨

ಚಿಕ್ಕವರಿರುವಾಗ ಮೂಗಲ್ಲಿ ಸುಂಬಳ ಸುರಿಸಿ ಸೊರ ಸೊರ ಸ್ವರ ಹೊರಡಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಹೀಗೆ,... ಬರೆಯೋದಿಕ್ಕೆ ಅದು ಇದು ವಿಷಯ ಹೊಳೆಯುತ್ತಿರುವಾಗ ಬಾಲ್ಯದ ಕುರಿತೇ ಬರೆಯಬೇಕು ಎಂಬ ಮಾತು ಬಂತು ಅದಲ್ಲದೇ ವಿಷಯವನ್ನೂ ಅವರೇ ಸೂಚಿಸಿದ್ದರಿಂದ ಬಾಲ್ಯದ ಬುತ್ತಿಗಂಟಿಗೆ ಇನ್ನೊಂದಿಷ್ಟು ನೆನಪುಗಳನ್ನು ತುಂಬೋಣ ಎನಿಸಿತು, ನಿಮ್ಮ ಬಾಲ್ಯದ ನೆನಪುಗಳೇನಾದರು ಇದ್ದರೆ ನನಗೂ ತಿಳಿಸಿ. ಒಂದೊಮ್ಮೆ ಜ್ವರ ಬಂದರೂ ಶಾಲೆಗೆ ರಜಾ ಹಾಕದ ದಿನಗಳು ಅವು, ಅದೆಷ್ಟು ಮುಖ್ಯವಾದ ತರಗತಿಗಳು ಇರುತ್ತಿದ್ದವೋ? ಏನೋ!? ಎಂಬಂತೆ ಹಠಮಾಡಿ ಶಾಲೆಗೆ ಹೋಗೋದು, ಅರ್ಧ ತರಗತಿಯಲ್ಲಿ ಸುಸ್ತಾಗಿ ಬಿದ್ದು ಶಾಲೆಯವರೆಗೆ ಮನೆಗೆ ಕಳುಹಿಸಿ ಕೊಡುತ್ತಿದ್ದ ದಿನಗಳು ನಮ್ಮ ಕನ್ನಡ ಶಾಲೆ ದಿನಗಳು. ಆಟ ಆಡುವಾಗ ಬಿದ್ದು ಮೊಣಕಾಲಿಗೆ ಆದ ಗಾಯ ಇನ್ನೇನು ಮಾಸುತ್ತದೆ ಎನ್ನುವಷ್ಟರಲ್ಲಿ ಮತ್ತೆ ಬೀಳದೆ ಇದ್ದರೆ ನಮ್ಮ ಜಾಯಮಾನಕ್ಕೆ‌ ಅವಮಾನ ಎನ್ನುವ ಗಂಡು ಹುಡುಗರು. ಕೈ ಕಾಲಿಗೆ ಆದ ಗಾಯಕ್ಕೆಲ್ಲಾ ಬೇರೆ ಮದ್ದೇನು ಇಲ್ಲ. ತಕ್ಷಣ ಹಾದಿ ಬದಿಯ ಕಾಂಗ್ರೇಸ್ ಗಿಡ ಸಿಕ್ಕರೆ ಸಾಕು ಅದನ್ನೇ ಅರೆದು ಹಚ್ಚುವುದು. ಅದರ ಹಸಿರು ರಸ ರಕ್ತಕ್ಕೆ ಬಿದ್ದಾಗ ಗಾಯದಿಂದ ರಕ್ತ ಸೋರುವುದು ನಿಲ್ಲುತ್ತಿತ್ತು.  ಸರಿಯಾಗಿ ಟೈ ಕಟ್ಟಿಕೊಳ್ಳಲೂ ಬರದ ಕಾಲ. ಇನ್ನು ವರ್ಷಕ್ಕೊಂದು  ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಪರೀಕ್ಷೆ, ಶಾರದಾ ಪೂಜೆ,  ವಾರ್ಷಿಕೋತ್ಸ...

ರುದ್ರಪ್ರಯಾಗದ ಭಯಾನಕ ನರಭಕ್ಷಕ

ರುದ್ರಪ್ರಯಾಗ ಭಯಾನಕ ನರಭಕ್ಷಕ. ದೃಶ್ಯಗಳು ಕಣ್ಣೆದುರು ಬಂದಾಗ ನಾವು ಅದಕ್ಕೆ ಪ್ರತಿಯಾದ ಪ್ರತಿಕ್ರಿಯೆ ನೀಡುತ್ತೇವೆ. ಆದರೆ ಕೇವಲ‌ ಬರವಣಿಗೆಗೆ ನಾವು ಅಷ್ಟು ಪ್ರಖರವಾದ ಪ್ರತಿಕ್ರಿಯೆಗೆ ಒಳಪಡುವಂತೆ ಮಾಡುವ ಬರವಣಿಗೆ ಅದು ತೇಜಸ್ವಿ ಅವರದ್ದು. ರುದ್ರಪ್ರಯಾಗದ ಭಯಾನಕ ನರಭಕ್ಷಕ ಎಂಬ ಒಂದು ಹುಲಿಯ ಕುರಿತಾದ ಕಾದಂಬರಿ ಅದು ಜಿಮ್ ಕಾರ್ಬೆಟ್ ಎಂಬ ಬೇಟೆಗಾರನ "Man eating lepord of rudraprayaga" ಎಂಬ ಪುಸ್ತಕದ ಅನುವಾದಿತ ಕೃತಿ. ಆ ಹುಲಿ ಪ್ರತಿನಿತ್ಯವೂ ಒಂದಲ್ಲಾ ಒಂದು ಜೀವವನ್ನು ಬಲಿ ತೆಗೆದುಕೊಳ್ಳದೇ ಬಿಡುತ್ತಿರಲಿಲ್ಲ. ನಾವು ಪುಸ್ತಕ ಓದುತ್ತಿದ್ದೇವೆ ಎಂದಾದರೆ ಹುಲಿ ನಮ್ಮ ಸುತ್ತಲೇ ಓಡಾಡುತ್ತಿದೆ ಎಂದು ಅನಿಸುವಷ್ಟರ ಮಟ್ಟಿಗೆ ಇದು ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಈ ಕಾದಂಬರಿಯಲ್ಲಿ ಮುಖ್ಯವಾಗಿ ಹುಲಿಯನ್ನು ಬೇಟೆ ಆಡುವುದಕ್ಕಾಗಿ ಹೊಂಚುಹಾಕಿದ ಬೇಟೆಗಾರ ಹುಲಿಯ ಜಾಡನ್ನು ಹಿಂಬಾಲಿಸುವ ಪ್ರತೀ ಸನ್ನಿವೇಶಗಳೂ ಕಥಾವಸ್ತುವಾಗಿದೆ. ಸಂಜೆ ಆರರ ನಂತರ ಕತ್ತಲು ಆವರಿಸುವ ಹೊತ್ತಿಗಾಗಲೇ ಎಲ್ಲರು ಮನೆ ಸೇರಿಕೊಂಡು ಬಿಡಬೇಕು ಇಲ್ಲವೆಂದರೆ ಆ ಹುಲಿಯ ಅಂದಿನ ಹೊಟ್ಟೆ ತುಂಬಿಸುವ ಜೀವಿ ಇವರೇ ಆಗಿರತ್ತಾರೆ ಎಂಬುದು ಖಚಿತ. ಮನೆಯಹತ್ತಿರದಲ್ಲಿ ರಾತ್ರಿ ಹೊತ್ತು ಮೂತ್ರವಿಸರ್ಜಿಸಲೆಂದು ಹೋದವರು ತಿರುಗಿ ಬರಲಿಲ್ಲ. ಕಟ್ಟಿಗೆ ತರಲು ಹೋದವರ ಪತ್ತೆ ಇಲ್ಲ. ಮನೆಯಂಗಳದಲ್ಲೆ ಆಡುತ್ತಿದ್ದ ಪುಟ್ಟ ಮಗುವೂ ಸಹ ನಾಪತ್ತೆ....

ಚಿತ್ರ ಕಲಾವಿದ ಸುಬ್ರಹ್ಮಣ್ಯ ಹೆಗಡೆ

e - uttrakannada ಯುವ ಪ್ರತಿಭೆ ಸುಬ್ರಹ್ಮಣ್ಯ ಹೆಗಡೆ ತನ್ನೆದುರು ಕುಳಿತ ವ್ಯಕ್ತಿಯ ಯತಾವತ್ ಚಿತ್ರ ಬಿಡಿಸುವ ಕಲೆಯನ್ನು ಸ್ವ ಆಸಕ್ತಿಯಿಂದ ಒಲಿಸಿಕೊಂಡವರು ಸುಬ್ರಮಣ್ಯ ಹೆಗಡೆ. ನೂರೈವತ್ತಕ್ಕೂ ಹೆಚ್ಚು ಚಿತ್ರಗಳನ್ನು ಬರೆದ ಇವರು ರಾಜ್ಯ ಮಟ್ಟದಲ್ಲಿ ಚಿತ್ರ ಕಲೆಯಲ್ಲಿ ಸಾಧನೆ ಮಾಡಿದ್ದಾರೆ. ಪೆನ್ಸಿಲ್, ಬಣ್ಣ ಯಾವುದಾದರೂ ಸರಿ ಅಂದವಾಗಿ ಚಿತ್ರ ಬಿಡಿಸುತ್ತಾರೆ. ತಬಲವನ್ನು ಅಭ್ಯಸಿಸುತ್ತಿದ್ದಾರೆ. ಇವರು ಅಭ್ಯಾಸದಲ್ಲೂ ಮುಂದಿದ್ದಾರೆ. ಶಿರಸಿಯ ಬಲವಳ್ಳಿ ಗ್ರಾಮದ ಕಬ್ಬಿನಮನೆಯ ಕೃಷಿಕ ದಂಪತಿಯ ಪುತ್ರರಾದ ಇವರು ವಂಶಪಾರಂಪರ್ಯವಾಗಿ ಮನೆಯಲ್ಲಿ ಚಿತ್ರಕಲಾವಿದರಿದ್ದರು ಅವರಿಂದಲೇ ಈ ಕಲೆ ಒಲಿದಿದೆ ಎನ್ನುತ್ತಾರೆ. ಯಾವುದೇ ತರಬೇತಿ ಪಡೆಯದೆ ನಿರಂತರ ಪ್ರಯತ್ನದಿಂದ ತಮ್ಮ ಐದನೇ ವರ್ಷದಿಂದ ಚಿತ್ರ ಬಿಡಿಸತೊಡಗಿದವರು. ಇವರು ವಿಷಯ ವಸ್ತುವಾಗಿ ನಿಸರ್ಗ, ಭಾವಚಿತ್ರ, ಕಾರ್ಟೂನ್ ಮತ್ತು ವಾಹನಗಳಗಳನ್ನು ಹೆಚ್ಚಾಗಿ ಚಿತ್ರಿಸುತ್ತಾರೆ. ಪೆನ್ಸಿಲ್ ಚಿತ್ರ, ತೈಲ ವರ್ಣ, ವರ್ಲಿ ಕಲೆ, ಜಲವರ್ಣ , ಅಕ್ರಾಲಿಕ್, ಚಾರ್ಕೊಲ್ ( ಮಸಿ) ಮತ್ತು ತ್ರೀಡಿ ಚಿತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ.  ಹಾಗೇಯೆ ವೈಜ್ಞಾನಿಕ ಮಾದರಿಗಳನ್ನು ತಯಾರಿಸುವ ಹವ್ಯಾಸವೂ ಇದೆ ಅವರು ತಯಾರಿಸಿದ ಸಿರಿಂಜ್ ಜೆ,ಸಿ,ಬಿ ಗೆ ಪ್ರಶಸ್ತಿ ಲಭಿಸಿದೆ. ಇವರು ಬಿಡಿಸಿದ ತ್ರೀಡಿ ಚಿತ್ರಗಳನ್ನು ನೋಡಿದವರು ಅದು ನಿಜವಾದ ವಸ್ತು ಎಂದು ಮೋಸಹೊಗುತ್ತಾರೆ ಅಷ್...

ಕಾಲ್ಪನಿಕ ಸಂದರ್ಶನ

ಕಳೆದ ಎರಡು ಮೂರು ವರ್ಷಗಳಿಂದ ಮಳೆಯ ಅಬ್ಬರಕ್ಕೆ ಎಲ್ಲೆಡೆ ಭೂ ಕುಸಿತ ಆಗ್ತಾ ಇದೆ. ಈ ಕುರಿತು ಪರಿಸರ ತಜ್ಞರನ್ನು, ಭೂ ಶಾಸ್ತ್ರಜ್ಞರನ್ನು ಸಂದರ್ಶನ ಮಾಡಿಯಾಗಿದೆ. ಈಗ ಭೂಮಿತಾಯಿ ಈ ಕುರಿತು ಏನು ಹೇಳ್ತಾಳೆ ನೋಡೋಣ. ಅವಳನ್ನೇ ಕರೆದು ವಿಶೇಷ ಸಂದರ್ಶನ ಮಾಡುತ್ತಿದ್ದೇವೆ. ಮೊದ ಮೊದಲು ನಮ್ಮೊಟ್ಟಿಗೆ ಮಾತನಾಡಲು ನಿರಾಕರಿಸಿದರು ಒತ್ತಾಯಕ್ಕೆ ಮಣಿದು ಭೂ ತಾಯಿ ಒಪ್ಪಿಕೊಂಡಿದ್ದಾರೆ. ಈ ಒಂದು ಕಾಲ್ಪನಿಕ ಸಂದರ್ಶನ ನಿಮಗಾಗಿ. ಮನುಷ್ಯ: ಸಮಸ್ತ ಜೀವ ಸಂಕುಲವನ್ನು  ತನ್ನ ಒಡಲೊಳಗಿಟ್ಟು ಸಲಹುವ ಭೂ ತಾಯಿಯ ಚರಣಗಳಿಗೆ ನಮಿಸಿ ಸ್ವಾಗತಿಸುತ್ತಿದ್ದೇನೆ. ಮಾತೆ ನೀವು ಕಳೆದ ಎರಡು ವರ್ಷಗಳಿಂದ ಯಾಕೆ ಕೋಪಗೊಳ್ಳುತ್ತಿದ್ದೀರಿ? ಭೂಮಿ ತಾಯಿ: ಪ್ರತಿ ವರ್ಷ ನಾನು ಶಾಂತಳಾಗಿಯೇ ಇರುತ್ತಿದ್ದೆ. ಉತ್ತಿ ಬಿತ್ತಿ ಬೆಳೆತೆಗೆಯಲು ನನ್ನ ಮೈ ಮನೆಗಳನ್ನು ನೀಡುತ್ತಿದೆ. ಪುಟ್ಟ ಮಕ್ಕಳಂತೆ ಮನುಜ ಸಂಕುಲವನ್ನು ಸಲಹುತ್ತಿದ್ದೆ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ನನಗೂ ನನ್ನ ಮಕ್ಕಳ ಮೇಲೆ ಕೋಪ ಬಂದಿದೆ. ಮನುಷ್ಯರೇ ಮಾಡುತ್ತಿರುವ ಕೃತ್ಯಗಳ ಫಲವಾಗಿ ನಾನು ಕುಪಿತಳಾಗಿದ್ದೇನೆ. ಮನುಜ ಮತ್ತೆ ತನ್ನ ತಪ್ಪನ್ನು ಅರಿತರೆ ನಾನು ಸಮಾಧಾನ ಪಡುತ್ತೇನೆ. ಮನುಷ್ಯ: ಭೂಮಿ ತಾಯಿಯಾದ ನೀವೆ ಕೋಪಿಸಿಕೊಂಡರೆ ಹೇಗೆ? ಸಣ್ಣ ಪುಟ್ಟ ಶಿಕ್ಷೆ ನೀಡಿ ಕ್ಷಮಿಸಿ ಬಿಡುವುದು ಒಳ್ಳೆಯದಲ್ಲವೇ? ಭೂ ತಾಯಿ: ನಾನು ಹಲವು ವರ್ಷಗಳಿಂದ ನನ್ನದೇ ಮಕ್ಕಳು ಎಂಬ ಪ್ರೀತಿಗೆ ನಿಮ್ಮನ್ನು ಕ್ಷಮಿಸುತ...

ನಾಗರಪಂಚಮಿ

ಪ್ರಾಣಿಗಳನ್ನು ಸಹ ಪೂಜಿಸಿ ದೇವರಂತೆ ಕಾಣುವ ಸಂಪ್ರದಾಯ ಮತ್ತು ಆಚರಣೆಗಳು ನಮ್ಮ ಭಾರತದಲ್ಲಿದೆ. ನಂದಿ, ಕಾಮಧೇನು, ನಾಗರ, ಇಲಿ, ವರಾಹ, ಕೂರ್ಮ, ಹುಲಿಯಪ್ಪ, ದತ್ತಾತ್ರೇಯನ ವಾಹನ ಶ್ವಾನ, ಹೀಗೆ ಹಲವಾರು ಪ್ರಾಣಿಗಳಿಗೂ ಪೂಜನೀಯ ಸ್ಥಾನ ಇದೆ. ಇಂದು ವಿಶೇಷವಾಗಿ ನಾಗದೇವರ ಹಬ್ಬ ನಾಗರಪಂಚಮಿ. ನಾಗರಪಂಚಮಿ ಹಬ್ಬವನ್ನು ಒಂದೊಂದು ಕಡೆಯ ಒಂದೊಂದು ತರನಾಗಿ ವಿಭಿನ್ನ ಆಚರಣೆಗಳ ಮೂಲಕ ಆಚರಿಸಲಾಗುತ್ತದೆ. ಪ್ರಾದೇಶಿಕತೆಗೆ ತಕ್ಕಂತೆ ಆಚರಣೆಯ ವಿಧಾನಗಳು ಭಿನ್ನವಾಗುತ್ತದೆ. ನಾಗರಪಂಚಮಿ ನಾಡಿಗೆ ದೊಡ್ಡದು ಎಂಬ ಮಾತು ಬಯಲುಸೀಮೆಯವರ ಬಾಯಿಂದ ಕೇಳಬಹುದು. ನಾಗರಪಂಚಮಿಯಂದು ಹಲವಾರು ಬಗೆಯ ಉಂಡೆಗಳನ್ನು ಮಾಡಿ ನೈವೇದ್ಯ ನೀಡುವುದು ಅವರ ಸಂಪ್ರದಾಯ. ನಾಗರ ಪ್ರತಿಮೆಗೆ ಹಾಲೆರೆದು ಅರಶಿನ ಹಚ್ಚಿ ಪೂಜಿಸಲಾಗುತ್ತದೆ. ಮಹಾರಾಷ್ಟ್ರದ ಲಾಥೂರ್ ಜಿಲ್ಲೆಯಲ್ಲಿ ಜೀವಂತ ಹಾವುಗಳನ್ನು ತಂದು ಅವುಗಳಿಗೆ ಪೂಜೆ ಮಾಡಿ ಮತ್ತೆ ಅವನ್ನು ಕಾಡಿಗೆ ಬಿಡುವ ಸಂಪ್ರದಾಯವಿದೆ ಕೇಳಿದ್ರೆ ದಂಗಾಗುತ್ತೆ ಅಲ್ವಾ.?  ಮತ್ತೆ ನಾಗರ ಪಂಚಮಿ ಹಬ್ಬಕ್ಕೆ  ಅಕ್ಕ ತಮ್ಮಂದಿರ ಹಬ್ಬ ಅಂತಲೂ ಹೆಸರಿದೆ ಯಾಕೆ ಗೊತ್ತಾ?! ಒಬ್ಬಾಕೆ ಹಾವು ಕಚ್ಚಿದ ತನ್ನ ತಮ್ಮನನ್ನು ಬದುಕಿಸಿಕೊಳ್ಳುತ್ತಾಳೆ. ಆ ಕಾರಣದಿಂದ ಈ ಹೆಸರು ಬಂದಿದೆ ಎನ್ನುತ್ತಾರೆ. ನಾಗರಪಂಚಮಿಗೆ ಉಯ್ಯಾಲೆ ಕಟ್ಟಿ ಅದರಲ್ಲಿ ಕೂತು ಆಡುವುದು ಇದೆ. ಇನ್ನು ಶ್ರೀ ಕೃಷ್ಣ ಕಾಳಿಂಗ ಮರ್ದನ ಮಾಡಿದ ನೆನಪಿಗೂ...