Skip to main content

Posts

ಹೊಸ ಪಯಣ

Recent posts

ನಮ್‌ ಶಿವು ಮದ್ವೆ ಕಣ

ಶಿವು ಮದ್ವೆ ಎಂದು ದೋಸ್ತರೆಲ್ಲ ತಿಂಗಳುಗಳ ಕಾಲ ಹೇಳಿ ಹೇಳಿ ಅಂತು ಆ ದಿನ ಬಂದೇ ಬಿಡ್ತು. ಬೆಳಿಗ್ಗೆ ಎದ್ದು ತಿಂಡಿಯನ್ನೂ ಸಹ ತಿನ್ನದೆ ಸೀದಾ ಮದುವೆ ಮಂಟಪಕ್ಕೆ ನಾವೆಲ್ಲ ಹೋಗಿದ್ದೆವು. ಹಸಿದ ಹೊಟ್ಟೆಗೆ ಬಿಸಿ ಬಿಸಿ ಇಡ್ಲಿ, ಸಾಂಬಾರ್‌, ಪೊಂಗಲ್‌ ಮತ್ತು ಹಲ್ವಾ ತಿಂದು ಸಮಾಧಾನ ಆಯ್ತು. ಅಷ್ಟೆಲ್ಲ ಮುಗಿಸಿ ಬಂದ ಮೇಲೆ ನಾವೆಲ್ಲ ಕುಳಿತು ಮಾತನಾಡಿದೆವು. ಒಟ್ಟು ನಾಲ್ಕು ಜನರ ಒಂದು ಗಟ್ಟಿ ದೋಸ್ತರ ಬಳಗದಲ್ಲಿ ಈಗ ಇಬ್ಬರಿಗೆ ಮದುವೆ ಆಗಿದೆ. ಇನ್ನಿಬ್ಬರು ಬಾಕಿ ಇದ್ದಾರೆ. ಅವರ ಬಳಿ ನಾನು ಮದುವೆ ವಿಚಾರ, ಆ ಕಡೆ ಮದುವೆ ಸಂಪ್ರದಾಯ, ನಮ್ಮ ಕಡೆ ಹೇಗಿರುತ್ತದೆ ಎಂದೆಲ್ಲ ಮಾತನಾಡುತ್ತಿದ್ದೆ. ಅಷ್ಟರಲ್ಲಿ ಪ್ರಗತಿಯನ್ನು (ಮದುಮಗಳು) ಹಸೆ ಮಣೆಗೆ ಕರೆದುಕೊಂಡು ಬಂದರು.  (ಎಲ್ರೂ ಸೈಡ್ ಬಿಡ್ಬೇಕು - ಯಾಕಂದ್ರೆ ಇದೊಂದ್ ಸ್ವಲ್ಪ ಸ್ಪೆಷಲ್ ಪೋಟೋ) ನಾವೆಲ್ಲ ಅತ್ತ ಗಮನಹರಿಸಿದೆವು, ಹಾರ ಹಾಕುವಾಗ ಹಿಡಿದ ಅಂತರ್ಪಟಕ್ಕಿಂತ ಹೆಚ್ಚು ಎತ್ತರಕ್ಕೆ ಪ್ರಗತಿಯನ್ನು ಎತ್ತಿ ಹಿಡಿದರು. ಎಲ್ಲರೂ ಚಪ್ಪಾಳೆ ತಟ್ಟಿ ನಕ್ಕು ನಲಿಯುತ್ತಿದ್ದರೆ ನಾನು ಇತ್ತ ಯಾರಾದ್ರೂ ಹೋಗ್ರೋ ಶಿವಣ್ಣನನ್ನು ಎತ್ತಿ ಎಂದು ಕೂಗುತ್ತಿದ್ದೆ. ಅಷ್ಟೆಲ್ಲ ಆದ ನಂತರ ಹಾರ ಬದಲಿಸಿಕೊಂಡಾಯ್ತು. ಬಂದವರನ್ನೆಲ್ಲ ಮಾತಾಡಿಸುತ್ತ ಸಮಯ ಸಿಕ್ಕಾಗೆಲ್ಲ ಮದುಮಕ್ಕಳ ಫೋಟೋ ತೆಗೆದೆ. ಪರಿಚಯದ ಹಲವರು ಮದುವೆಗೆ ಬಂದಿದ್ದ ಕಾರಣ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.  ಶೆ...

ಹೂಗಳಿಂದ ತುಂಬಿದ ಬೆಂಗಳೂರು ಬೀದಿಗಳು

ಪ್ರತಿದಿನ ಬೆಳಗ್ಗೆ ರೆಡಿಯಾಗಿ ಆಫೀಸಿಗೆ ಹೊರಡುವಾಗ ತಡವಾಯ್ತು ಎಂಬ ಗಾಬರಿಯೊಟ್ಟಿಗೆ ಹೊರಡುವುದು. ಆದರೆ ಮನೆ ಬಿಟ್ಟು ರಸ್ತೆಗೆ ಕಾಲಿಟ್ಟ ತಕ್ಷಣ ಹಳದಿ ಹೂಗಳ ಹಾಸಿಗೆ ಕಂಡು ಮನ ಕುಣಿಯುತ್ತದೆ. ಸಿಕ್ಕ ಸಿಕ್ಕದ್ದನ್ನೆಲ್ಲಾ ಫೋಟೋ ತೆಗೆಯುತ್ತಾ ಇನ್ನಷ್ಟು ತಡವಾಗಿಬಿಡುತ್ತದೆ. ನನ್ನ ಪಾಲಿಗೆ ಆ ರಸ್ತೆ ಬರಿ ಡಾಂಬರು ರಸ್ತೆಯಲ್ಲ, ಅದು ಹೂವುಗಳ ಹಳದಿ ಹೊದಿಕೆ ಹೊದ್ದ ರಾಜಮಾರ್ಗ.  ಆ ಹಳದಿ ಹೂಗಳನ್ನು ಕಂಡ ತಕ್ಷಣ ನನ್ನ ಕೈ ತಾನಾಗಿಯೇ ಬ್ಯಾಗ್ ಒಳಗೆ ಹೋಗಿ ಮೊಬೈಲ್ ಹುಡುಕುತ್ತದೆ. ಮೊಬೈಲ್‌ನಲ್ಲಿ ಚಾರ್ಜ್ ಎಷ್ಟಿದೆ? ಸ್ಟೋರೇಜ್ ಫುಲ್ ಆಗಿದೆಯೇ? ಆಫೀಸಿಗೆ ತಡವಾಗುತ್ತಿದೆಯೇ? ಯಾವುದರ ಚಿಂತೆಯೂ ಇಲ್ಲ. ನನ್ನ ಗಡಿಬಿಡಿಯೇನಿದ್ದರೂ ಆ ಹೂವುಗಳನ್ನು ನನ್ನ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯುವುದರಲ್ಲೇ ಇರುತ್ತದೆ.   ಹಾಗೆ ನಾಲ್ಕು ಹೆಜ್ಜೆ ಮುಂದೆ ನಡೆದರೆ ಸಾಕು, ಅಲ್ಲಿ ಮತ್ತೊಂದು ವಿಸ್ಮಯ. ಹಳದಿ ಹೂಗಳ ನಡುವೆ ಅಲ್ಲಲ್ಲಿ ನೀಲಿ ಮಿಶ್ರಿತ ಬಿಳಿ ಮೊಗ್ಗಿನ ರೀತಿಯ ಹೂಗಳು ಕಣ್ಣು ಮಿಟುಕಿಸುತ್ತಾ ನನ್ನನ್ನು ಕರೆಯುತ್ತಿರುತ್ತವೆ. ಅವುಗಳ ಆ ಮುಗ್ಧ ನೋಟಕ್ಕೆ ಮನಸೋತು ಮತ್ತೆ ಅಲ್ಲಿ ಎರಡು ನಿಮಿಷ ನಿಲ್ಲಲೇಬೇಕು. ನಡೆಯುವುದು, ಹೂವು ನೋಡಿ ನಿಲ್ಲುವುದು, ಫೋಟೋ ತೆಗೆಯುವುದು—ಇದೇ ಆಯಿತು ನನ್ನ ನಿತ್ಯದ ಕಾಯಕ. ಆಫೀಸಿಗೆ ಮುಟ್ಟುವುದು ತಡವಾದರೂ ನನ್ನ ಮನಸ್ಸು ಮಾತ್ರ ಆ ಹೂವುಗಳ ಬಣ್ಣದಲ್ಲೇ ಮಿಂದೆದ್ದು ಫ್ರೆಶ...

ಮೇಗಣ್ಮನೆ ಅಜ್ಜ

ಬೆಂಗಳೂರಿನಲ್ಲಿರುವ ನಮಗೆ ಊರಿನ ಸುದ್ದಿ ತಿಳಿಯಲು ಹೆಚ್ಚೇನು ಸಮಯ ಬೇಡ. ಆದರೂ ನನಗೆ ಈ ವಿಷಯ ತುಸು ತಡವಾಗೇ ಗೊತ್ತಾಗಿದ್ದು. ಅಮ್ಮ ಫೋನ್‌ ಮಾಡಿ ವಿಷಯ ಹೌದಾ? ಅಂತ ಅಂದ ತಕ್ಷಣ ಯಾವ ವಿಷಯ ಅಂತ ಗೊತ್ತಾಗಲಿಲ್ಲ. ನಂತರ ನಿಧಾನಕ್ಕೆ ಅರ್ಥವಾಯ್ತು. ಹೇಗಂದ್ರು ಮರುದಿನ ಶನಿವಾರ ಊರಿಗೆ ಹೊರಟೇ ಬಿಡೋಣ ಅಂದುಕೊಂಡರೆ ಅನಿವಾರ್ಯವಾಗಿ ಮತ್ತೆ ಮೂರು ದಿನಗಳ ನಂತರ ಬಸ್‌ ಬುಕ್‌ ಆಗಿತ್ತು. ಇದೆಲ್ಲ ಒಂದು ಕಡೆಯ ಯೋಚನೆ ಆದರೆ. ಸುಬ್ಬಜ್ಜ, ರಾಮಜ್ಜರ ವಿಡಿಯೋ ತುಣುಕೊಂದು ಮನಸಿಗೆ ನಾಟಿತು.  ಹಾಗೇ ಮೇಗಣ್ಮನೆ ಅಜ್ಜ (ಸುಬ್ಬಜ್ಜ) ನನ್ನ ಅಜ್ಜ ತೀರಿಕೊಂಡಾಗ ರಾಮಾ, ಏ ರಾಮಾ, ಎನ್ನುತ್ತಾ ಮೈಮುಟ್ಟಿ ಕಣ್ಣೀರು ಸುರಿಸಿದ್ದು ನೆನಪಾಗಿ ಹೋಯ್ತು. ಎಲ್ಲ ತಮ್ಮಂದಿರನ್ನು ಕಳೆದುಕೊಂಡು ಅಷ್ಟೊಂದು ಅಪಾರ ದುಃಖವನ್ನು ವರ್ಷದಿಂದ ವರ್ಷಕ್ಕೆ ನೋಡುತ್ತಲೇ ತನ್ನ ತಮ್ಮಂದಿರ ಅಳಿವನ್ನು ಕಣ್ಣಾರೆ ಕಂಡು ಮರುಗುತ್ತಲೇ ಬಂದವ ಮೇಗಣ್ಮನೆ ಅಜ್ಜ. ತಮ್ಮಂದಿರು ಹೋದಾಗಲೆಲ್ಲ ಮಂಕಾಗುತ್ತಾ ಬಂದಿದ್ದ.   ನಮ್ಮ ಮನೆ ಕಂಚೀಪಾಲಿನ ಹಿರಿಕೊಂಡಿಗಳೆಲ್ಲವೂ ಈಗ ಸುಬ್ಬಜ್ಜನ ಅಂತ್ಯದಿಂದ ಕಳಚಿಕೊಂಡಂತಾಯಿತು. ನನಗೆ ಒಟ್ಟು 4 ಜನ ಮನೆ ಅಜ್ಜಂದಿರು. ಒಂಭತ್ತು ಜನ ಅಜ್ಜನ ಮನೆ ಅಜ್ಜಂದಿರು. ಈಗ ಮನೆಯ ನಾಲ್ಕೂ ಅಜ್ಜಂದಿರೂ ಇಹದ ಋಣ ಮುಗಿಸಿಕೊಂಡು ಹೊರಟಿದ್ದಾರೆ. ಎಲ್ಲರಿಗೂ ಹಿರಿಯಣ್ಣನಾಗಿದ್ದ ಸುಬ್ಬಜ್ಜನೂ ನಿನ್ನೆ ಹೋಗಿಬಿಟ್ಟ. ಯಾವಾಗಲೂ ನನ್ನ ಅಜ್ಜ ರಾಮಜ್ಜ ಹಾಗ...

ಭಾಸ್ಕರ ಪರ್ವ

ನಾನು ಹಲವಾರು ಪೋಟೋಗಳನ್ನು ಈಗಾಗಲೇ ಪೋಸ್ಟ್ ಮಾಡಿದ್ದೇನೆ. ಭಾಸ್ಕರ ಪರ್ವ ಕಾರ್ಯಕ್ರಮದ ಬಗ್ಗೆ ನಿಮಗೆ ಈಗಾಗಲೇ ಎಲ್ಲ ತಿಳಿದಿದೆ. ಪೋಸ್ಟ್ ಮಾಡಿ ಮುಗಿಸಲಾಗದಷ್ಟು ಪಟ ಮತ್ತು ನೆನಪುಗಳು ನನ್ನೊಳಗಡೆ ತುಂಬಿಕೊಂಡಿದೆ. ನಾನು ಉಜಿರೆಯಲ್ಲಿ ಪತ್ರಿಕೋದ್ಯಮ ಕಲಿಯುವಾಗ ಧೀಮಹಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಅಲ್ಲಿಗೆ ಮತ್ತೆ ಹೋಗಿ ಉಳಿಯುತ್ತೇನೆ ಎಂಬ ಅಂದಾಜು ಸಹ ನಾನು ಮಾಡಿರಲಿಲ್ಲ. ಆದರೆ ಮತ್ತದೆ ಹಳೆ ನೆನಪು ಮರುಕಳಿಸಿತು, ಅಷ್ಟೇ ಅಲ್ಲ ಎಲ್ಲ ಗೆಳತಿಯರು ಜೂನಿಯರ್‌ಗಳು ಸಹ ಅಲ್ಲೇ ಸಿಕ್ಕರು.  ಕಾಲೇಜು ಕ್ಯಾಂಟಿನ್‌ನಲ್ಲಿ ತಿಂಡಿ‌ ಸವಿದಾಯಿತು. ವಿಶೇಷ ಎಂದರೆ ನನ್ನ ಗುರು (ಪತಿ) ಕೂಡ ಇದೇ ಕಾಲೇಜಿನಲ್ಲಿ ಕಲಿತದ್ದು, ಆದರೆ ನಾವು ಒಟ್ಟಿಗೆ ಕಲಿತವರಲ್ಲ. ನಾನು ಸೇರಿದ ವರ್ಷ ಅವನಿಗೆ ಬೀಳ್ಕೊಡುಗೆ ಆಗಿತ್ತು. ಇದು ನಮ್ಮ ಸರ್ ಬೀಳ್ಕೊಡುಗೆ ಆದ ಕಾರಣ ನಾವಿಬ್ಬರು ಹಳೆ ವಿದ್ಯಾರ್ಥಿಗಳಾಗಿ ಹೋಗಿದ್ದೆವು. ಜೊತೆಗೆ ಅವನ ದೋಸ್ತರು ಕೂಡ ಜೊತೆಯಾದರು.‌ ಎಷ್ಟೋ ದಿನದಿಂದ ಕೂಡಿಟ್ಟ ಮಾತೆಲ್ಲ ಒಟಗುಟ್ಟಿ ಆಯಿತು. ಆದರೆ ಎಷ್ಟು ಮಾತಾಡಿದರು ಮುಗಿಯದ ಒಂದಷ್ಟು ಮಾತುಗಳು ಇನ್ನೂ ಉಳಿದಿದೆ. ನಾವು ಅಂತಷ್ಟೆ ಅಲ್ಲ ಎಲ್ಲರಿಗೂ ಹೀಗೆ ಆಗಿದೆ. ಹಳೆ ಸ್ನೇಹಿತರ ಹೊಸ ಬದುಕಿನ ತಿರುವುಗಳನ್ನೆಲ್ಲ ನೋಡಿ, ಕೇಳಿದ್ದಾಯಿತು. ಎಷ್ಟು ಜನ ಸೇರಿದ್ದರು ನೋಡಿ, ಆ ಖುಷಿಯೇ ಬೇರೆ ಇತ್ತು. ಸಾಕಷ್ಟು ಮಾಧ್ಯಮಗಳಲ್ಲಿ ಕೆಲಸ ಮಾಡು...

2025 to 2026

ರಾತ್ರೊ ರಾತ್ರಿ ಬ್ಲಾಗ್ ಬರೆಯುವ ಮನಸಾಯಿತು ಕಾರಣ ಎಲ್ಲರ ಸ್ಟೇಟಸ್. ಎಷ್ಟೊಂದು ಜನ ತಮ್ಮ ಆಸೆ, ಕನಸುಗಳನ್ನು ಬರೆದುಕೊಂಡಿದ್ರು ತಮ್ಮ ನೋವನ್ನು ತೋಡಿಕೊಂಡಿದ್ರು. ಎಂದಿಗೂ ಒಂದು ದಿನವೂ ಸ್ಟೇಟಸ್ ಹಾಕದವರೂ ಸಹ ತಕ್ಷಣ ಒಂದು ಪೋಸ್ಟ್ ಮಾಡಿದ್ರು. ಇನ್ನು ಹೊಸ ಜೋಡಿಗಳಂತು‌ ತಮ್ಮ ಪೋಟೋ ಮೊಗೆ ಮೊಗೆದು ಹಂಚಿಕೊಂಡಿದ್ರು.  ಇನ್ನೊಂದಷ್ಟು ಜನರದ್ದು ಬರೀ Sad ಸ್ಟೇಟಸ್. ಈ ವರ್ಷ ನಾನು ಇವರ ಸಾಲಿನಲ್ಲೇ ನಿಲ್ತೀನಿ ಬಹುಶಃ. ಲೈಪು ಎಲ್ಲ ನಾನಂದುಕೊಂಡ ಹಾಕೆ ಒಂದು ಹಂಪ್ ಕೂಡ ಬರ್ದಾಗೆ ಸಾಗ್ತಾ ಇತ್ತು. 2024ರ ವರೆಗೂ ಎಲ್ಲ ಅರಾಮಾಗೇ ಇತ್ತು. ಅಂದುಕೊಂಡಿದ್ದೆಲ್ಲ ಆಗ್ತಾ ಇತ್ತು ಅಂದ್ರೂ ತಪ್ಪೇನು ಇಲ್ಲ. ನಾನು ಆಸೆ ಪಟ್ಟಂತೆ ಮಾಸ್ಟರ್ ಡಿಗ್ರಿ, ಆಮೇಲೆ ನನ್ನಿಷ್ಟದ ಕೆಲಸ. ನಾನು ಇಷ್ಟ ಪಟ್ಟ ಹುಡುಗ, ಮದುವೆ, ಟ್ರಿಪ್, ಪ್ರಮೋಷನ್, ಹೈಕ್ ಹೀಗೆ ಸಾಕಷ್ಟು.  ಆದರೆ 2025 ಬರೋಬ್ಬರಿ ಪೆಟ್ಟು ಕೊಟ್ಟಿದೆ. ಇಷ್ಟು ದಿನ ಕಷ್ಟ ಬಂದ್ರೆ ಹೇಗಿರುತ್ತೆ ಅಂತ ಗೊತ್ತಿಲ್ಲದ ನನಗೆ ಸಾಲು ಸಾಲಾಗಿ ಕಷ್ಟಗಳೇ ಬಂತು ಹಾಗಂತ ತಲೆ ಹೋಗುವಂತ ಕಷ್ಟನೂ ಅಲ್ಲ. ತಲೆ ಹಾಳು ಮಾಡಿದ ಕಷ್ಟ. ಪ್ರಪ್ರಥಮ ಬಾರಿಗೆ ಲೈಫ್‌ನಲ್ಲಿ ಬ್ರೇಕ್ ಬಿತ್ತು. ನಾನು ಕೆಲಸ ಕಳ್ಕೊಂಡೆ.  ಕಾಲೇಜ್‌ನಲ್ಲಿ ಎಕ್ಸಾಂ ಬರಿಯೋಕು ಮುಂಚೆನೆ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದ ನನಗೆ ಕೆಲಸ ಹುಡುಕೋದು, ಕೆಲಸ ಇಲ್ಲದೆ ಕಳಿಯೋದು ಎಷ್ಟು ಡಿಫಿಕಲ್ಟ್ ಅಂತ ನಿಜಕ್ಕೂ ಗೊತ್ತಿರಲಿಲ್ಲ. ಫ್ರೆಂಡ್ಸ್ ಹ...

ಮದುವೆಯ ಹಿಂದಣ ದಿನ

ಮದುಮಗನ‌ ಕಡೆಯವರಾಗಿ ಮದುವೆ ಮನೆಯಲ್ಲಿ ಕೆಲಸ ಕಮ್ಮಿಯಾದರೂ ಹಿಂದಿನ‌ ತಯಾರಿಯೇ ಬಲು ಜೋರು. ಇಂದು ಅರಶಿನೆಣ್ಣೆ ಮಾಡಿಯಾಯಿತು. ಹೋಮ, ಹವನ ಕಾಶಿಗೋಪವನ ಕೊಡೆ ತಡೆಯುವುದು ಇಷ್ಟೆಲ್ಲ ಕೆಲಸ ಇತ್ತು. ನೋಡಲು ಬಲು ಮಜವಿತ್ತು. ನಡುವೆ ಗೆಳೆಯ ಹರೀಶನ ಮದುವೆಗೆ ಹೋಗಿ ಬಂದದ್ದೂ ಆಯ್ತು. ಅದೇನೆ ಆಗಲಿ ಇದು ಗಂಡನ ಜೊತೆಗೆ ಹೋದ ಮೊದಲ ಮದುವೆ ಎಂದರೂ ತಪ್ಪಿಲ್ಲ. ಒಟ್ಟೊಟ್ಟಿಗೆ ಸ್ಕೂಟಿಯಲ್ಲಿ ಸೀರೆಯುಟ್ಟು ಒಂದೇ ಬದಿ ಕಾಲು ಹಾಕಿ ಭುಜ ಹಿಡಿದು ಸಾಗುವ ಹೆಂಗಸರ ದಿಸೆಯನ್ನೂ ಇಂದು ಮಾಡಿಯಾಯಿತು.  ಮತ್ತೆ ಅಲ್ಲಿ ಉಂಡು ಸ್ನೇಹಿತರನ್ನೆಲ್ಲ ಭೇಟಿಯಾಗಿ ಬಂದದ್ದೂ ಆಯ್ತು. ರಾತ್ರಿ ತಯಾರಿ ಇನ್ನಷ್ಟು ಜೋರಿತ್ತು. ಮದುಮಗನಿಗೆ ಬೇಕಾಗುವ ಎಲ್ಲ ಅರಿವೆ - ವಸ್ತ್ರಗಳನ್ನು ಜೋಡಿಸಿಯಾಯಿತು. ಇತ್ತ ಊಟಕ್ಕೆ ರೆಡಿ ಮಾಡಿವುದು. ಸಿದ್ದೆಗೆ ಬಣ್ಣ ಹಚ್ಚುವುದು ಹೀಗೆ ಹತ್ತಾರು ಕೆಲಸ.  ಅದೆಲ್ಲ ಆದ ಮೇಲೆ ಸಿಂಗಾರದ ಮಾಲೆಯ ಸಡಗರ. ಅದಂತು ಒಂದೇ ನೂಲಿನಲ್ಲಿ ನವಿರಾಗಿ ಮುಟ್ಟಷ್ಟೂ ಗಂಟು ಹಾಕಿಕೊಳ್ಳುತ್ತಿತ್ತು ಅದನ್ನು ಗಿಳಿಗುಟ್ಟಕ್ಕೆ ಸೇರಿಸಿಯಾಯಿತು.  ಇನ್ನೊಂದೆರಡನ್ನು ಹೀಗೆ ಬಾಳೆಗೆ ಸುತ್ತಿಟ್ಟೆವು. ಅಷ್ಟರಲ್ಲಿ ಮಧ್ಯಾಹ್ನದ ಸಾರು, ಪಾಯಸ ಬಿಸಿ ಮಾಡಿ ಮತ್ತೆ ಬಡಿಸಲು ಸಿದ್ಧತೆ ನಡೆಸಿದೆವು. ನಾನು ಬಡಿಸಿದೆ. ಉಂಡೆ - ತಿಂದೆ ಈಗ ಬ್ಲಾಗ್ ಬರೆಯುತ್ತಿದ್ದೇನೆ.  ಇದಾದ ಮೇಲೆ ಕಾರಿಗೆ ಅಲಂಕಾರ ...