ಮದುಮಗನ ಕಡೆಯವರಾಗಿ ಮದುವೆ ಮನೆಯಲ್ಲಿ ಕೆಲಸ ಕಮ್ಮಿಯಾದರೂ ಹಿಂದಿನ ತಯಾರಿಯೇ ಬಲು ಜೋರು. ಇಂದು ಅರಶಿನೆಣ್ಣೆ ಮಾಡಿಯಾಯಿತು. ಹೋಮ, ಹವನ ಕಾಶಿಗೋಪವನ ಕೊಡೆ ತಡೆಯುವುದು ಇಷ್ಟೆಲ್ಲ ಕೆಲಸ ಇತ್ತು. ನೋಡಲು ಬಲು ಮಜವಿತ್ತು. ನಡುವೆ ಗೆಳೆಯ ಹರೀಶನ ಮದುವೆಗೆ ಹೋಗಿ ಬಂದದ್ದೂ ಆಯ್ತು. ಅದೇನೆ ಆಗಲಿ ಇದು ಗಂಡನ ಜೊತೆಗೆ ಹೋದ ಮೊದಲ ಮದುವೆ ಎಂದರೂ ತಪ್ಪಿಲ್ಲ. ಒಟ್ಟೊಟ್ಟಿಗೆ ಸ್ಕೂಟಿಯಲ್ಲಿ ಸೀರೆಯುಟ್ಟು ಒಂದೇ ಬದಿ ಕಾಲು ಹಾಕಿ ಭುಜ ಹಿಡಿದು ಸಾಗುವ ಹೆಂಗಸರ ದಿಸೆಯನ್ನೂ ಇಂದು ಮಾಡಿಯಾಯಿತು. ಮತ್ತೆ ಅಲ್ಲಿ ಉಂಡು ಸ್ನೇಹಿತರನ್ನೆಲ್ಲ ಭೇಟಿಯಾಗಿ ಬಂದದ್ದೂ ಆಯ್ತು. ರಾತ್ರಿ ತಯಾರಿ ಇನ್ನಷ್ಟು ಜೋರಿತ್ತು. ಮದುಮಗನಿಗೆ ಬೇಕಾಗುವ ಎಲ್ಲ ಅರಿವೆ - ವಸ್ತ್ರಗಳನ್ನು ಜೋಡಿಸಿಯಾಯಿತು. ಇತ್ತ ಊಟಕ್ಕೆ ರೆಡಿ ಮಾಡಿವುದು. ಸಿದ್ದೆಗೆ ಬಣ್ಣ ಹಚ್ಚುವುದು ಹೀಗೆ ಹತ್ತಾರು ಕೆಲಸ. ಅದೆಲ್ಲ ಆದ ಮೇಲೆ ಸಿಂಗಾರದ ಮಾಲೆಯ ಸಡಗರ. ಅದಂತು ಒಂದೇ ನೂಲಿನಲ್ಲಿ ನವಿರಾಗಿ ಮುಟ್ಟಷ್ಟೂ ಗಂಟು ಹಾಕಿಕೊಳ್ಳುತ್ತಿತ್ತು ಅದನ್ನು ಗಿಳಿಗುಟ್ಟಕ್ಕೆ ಸೇರಿಸಿಯಾಯಿತು. ಇನ್ನೊಂದೆರಡನ್ನು ಹೀಗೆ ಬಾಳೆಗೆ ಸುತ್ತಿಟ್ಟೆವು. ಅಷ್ಟರಲ್ಲಿ ಮಧ್ಯಾಹ್ನದ ಸಾರು, ಪಾಯಸ ಬಿಸಿ ಮಾಡಿ ಮತ್ತೆ ಬಡಿಸಲು ಸಿದ್ಧತೆ ನಡೆಸಿದೆವು. ನಾನು ಬಡಿಸಿದೆ. ಉಂಡೆ - ತಿಂದೆ ಈಗ ಬ್ಲಾಗ್ ಬರೆಯುತ್ತಿದ್ದೇನೆ. ಇದಾದ ಮೇಲೆ ಕಾರಿಗೆ ಅಲಂಕಾರ ...