Skip to main content

ಅನು ಮದುವೆ


ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು. 

ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ.

ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು. 
ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು. 

ನಾವೇ ಆ ಮೂವರು "ಅನು, ನಿಧಿ, ಸುಮಾ" ನಮ್ಮ ಉಮೇದಿಗೆ ಪಾರವೇ ಇಲ್ಲ. ನಾವು ಒಂಥರ ಭೂತಕಾಲ,
ವರ್ತಮಾನಕಾಲ, ಭವಿಷ್ಯತ್ತ ಕಾಲ ಇದ್ದ ಹಾಗೆ
ನನಗೆ ಮದುವೆ ಆಗಿದೆ - ನಾನು ನನ್ನ ಮದುವೆಯಂದು ಹಾಗಾತು, ಹೀಗಾತು ಎಂದರೆ
ಅನು, ಮದುವೆ ನಡೆಯುತ್ತಿದೆ - ಅವಳು ಈ ಹೊತ್ತಿನ ಚಿಂತೆ ಮತ್ತು ಖುಷಿಯಲ್ಲಿ ಮುಳುಗಿದ್ದಾಳೆ.
ನಿದಿ- ಮುಂದೆ ಆಗುವ ಮದುವೆಯಲ್ಲಿ ನಾನು ಹೀಗಿರಬೇಕು, ಹಾಗೆ ಮಾಡಬೇಕು ಎನ್ನುತ್ತಿದ್ದಾಳೆ.

ಹಿಂದೊಂದು ದಿನ ನಮಗೆ ಇದ್ಯಾವುದರ ಅರಿವೂ ಇರಲಿಲ್ಲ. ಯಾರಿಗೆ ಮೊದಲು ಮದುವೆ,ಯಾರಗೆ ನಂತರ ಎಂಬ ಸುಳಿವಿರಲಿಲ್ಲ. ಈಗ ನಮ್ಮ ಸರದಿ ಸಾಲಾಗಿ ನಿಂತು ಕಣ್ಣೆದುರಿಗಿತ್ತು. ಈಗ ಗೌರಿ ಪೂಜೆ ನಡೆಯುತ್ತಿದೆ. ನಾನು ಅವಳಿಂದ ಮೂರು ಗೇಣಿನ ಅಂತರದಲ್ಲಿ ಕೂತು ಇದನ್ನೆಲ್ಲ ಬರೆಯುತ್ತಿದ್ದೇನೆ. 

ಅವಳಿಗಿನ್ನೆಂದು ಪರುಸತ್ತಾಗುವುದೋ ಆಗ ಅವಳು ಓದುವಳು.. ಮತ್ತೆ ಸಿಗೋಣ ಟಾಟಾ...

ಯಾವ್ದಕ್ಕೂ ಇದೊಂದೆರಡು ಫೊಟೋ ಸ್ಟೋರ್ ಮಾಡಿ ಬಿಡುತ್ತೇನೆ. 

ಚಂದ, ಚಂದ

ಅರಶಿನ ಮತ್ತು ಕಂಕಣ

ಅವಳ ಕೈ ಮೇಲೆ ಅಂದದೊಂದು ನವಿಲು

ಅವಳನ್ನು ಡಿಸ್ಟರ್ಬ್ಮಾಮಾಡದೆ ಒಂದು ಸೆಲ್ಪಿ

ನಮ್ಮ ಮುಂದಿನ ಮದು ಮಗಳು ನಿಧಿ...

ಆದರೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ, ಸಿಕ್ಕ ರಜೆಯಲ್ಲೆ ಅಲ್ಲೊಂಚೂರು,ಇಲ್ಲೊಂರು ಎಂದು ಪುರುಸೊತ್ತು ಮಾಡಿಕೊಂಡು ಬರುವ ನಮಗೆ " ಗಂಡ್ ಬೈಂದ್ನಿಲ್ಯ?" ಎನ್ನುವುದೊಂದು ಖಾಯಂ ಪ್ರಶ್ನೆ... 

ಸುಮಾ ಕಂಚೀಪಾಲ್ 


Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...