ಸೂರ್ಯನ ನೆರಳು ಅನುವಾದಿತ ಕೃತಿಯ ಓದು ಆಪ್ರಿಕಾ ಖಂಡದ ಕುರಿತು ಅಷ್ಟೇನೂ ತಿಳಿದಿರದ ನಮಗೆ ಆಫ್ರಿಕಾ ಒಂದು ಕಗ್ಗತ್ತಲೆಯ ಖಂಡ ಎಂಬ ವಾಕ್ಯ ಒಂದು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಆಫಿಕಾದಲ್ಲಿ ಸದಾಕಾಲ ಕಡುಗತ್ತಲೇ ಇರುತ್ತದೆಯೇ? ಬರೀ ದಟ್ಟ ಕಾಡು ಹರಿವ ನದಿ, ಸೂರ್ಯನ ಬೆಳಕೇ ಇಲ್ಲದ ಜಾಗವೇ? ಇಂತಹ ಕುತೂಹಲ ಕೆರಳಿಸುವ ವಿಷಯಗಳಿಗಷ್ಟೇ ಸೀಮಿತವಾಗಿದ್ದೇವೆ ಹೊರತಾಗಿ ಅಲ್ಲಿನ ಭೌಗೋಳಿಕ ರಚನೆ, ಸಾಮಾಜಿಕ ಜನಜೀವನ, ಸಂಪ್ರದಾಯ ಆಹಾರಪದ್ದತಿ ಇದಾವುದರ ಕುರಿತಾಗಿಯೂ ನಾವು ತಲೆಕೆಡಿಸಿಕೊಂಡವರಲ್ಲ. ರೈ಼ಷಾರ್ಢ ಕಪುಶಿನಸ್ಕೀ ಒಬ್ಬ ಅತ್ಯುತ್ತಮ ಪತ್ರಕರ್ತ ಆಪ್ರೀಕಾದ ಕುರಿತು ಇಂಚಿಚನ್ನೂ ವಿಸ್ತಾರವಾಗಿ ವಿವರಿಸಿದ ಪುಸ್ತಕ ಸೂರ್ಯನ ನೆರಳು ಈ ಪುಸ್ತಕವನ್ನು ಓದಿದ ನಂತರವೇ ನಮಗೆ ಆಫ್ರಿಕಾದ ಶೋಚನೀಯ ಸ್ಥಿತಿ ಅಲ್ಲಿನ ಜನರ ಪರಿಸ್ಥಿತಿ ವರ್ಣಭೇದ ನೀತಿ ಮತ್ತಿತರ ಎಷ್ಟೋ ವಿಷಯಗಳ ಕುರಿತು ನಮಗೂ ಅರಿವು ಮೂಡುವುದು. ಒಬ್ಬ ಪತ್ರಕರ್ತನಾದವನು ಎಷ್ಟರ ಮಟ್ಟಿಗೆ ಜನರನ್ನು ಮುಟ್ಟಬಹುದು ಎನ್ನುವುದಕ್ಕೆ ಈ ಪುಸ್ತಕ ಒಂದು ಉತ್ತಮ ಉದಾಹರಣೆಆಗಿದೆ. ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪ್ಯುಶಿನಸ್ಕಿ 'ಹೆಬಾನ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದರು. ಇದನ್ನು ಕ್ಲಾರಾ ಗ್ಲೋವೆಸ್ಕಾ ಇಂಗ್ಲಿಷ್ ಗೆ 'ಶಾಡೋ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದಿಸಿದರು. ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ " ಸೂರ್ಯನ ನೆರಳು" ಎಂಬ ಹೆಸರಿ...