Skip to main content

ಸೂರ್ಯನ ನೆರಳು.

ಸೂರ್ಯನ ನೆರಳು ಅನುವಾದಿತ ಕೃತಿಯ ಓದು

ಆಪ್ರಿಕಾ ಖಂಡದ ಕುರಿತು ಅಷ್ಟೇನೂ ತಿಳಿದಿರದ ನಮಗೆ ಆಫ್ರಿಕಾ ಒಂದು ಕಗ್ಗತ್ತಲೆಯ ಖಂಡ ಎಂಬ ವಾಕ್ಯ ಒಂದು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಆಫಿಕಾದಲ್ಲಿ ಸದಾಕಾಲ ಕಡುಗತ್ತಲೇ ಇರುತ್ತದೆಯೇ? ಬರೀ ದಟ್ಟ ಕಾಡು ಹರಿವ ನದಿ, ಸೂರ್ಯನ ಬೆಳಕೇ ಇಲ್ಲದ ಜಾಗವೇ? ಇಂತಹ ಕುತೂಹಲ ಕೆರಳಿಸುವ ವಿಷಯಗಳಿಗಷ್ಟೇ ಸೀಮಿತವಾಗಿದ್ದೇವೆ ಹೊರತಾಗಿ ಅಲ್ಲಿನ ಭೌಗೋಳಿಕ ರಚನೆ, ಸಾಮಾಜಿಕ ಜನಜೀವನ, ಸಂಪ್ರದಾಯ ಆಹಾರಪದ್ದತಿ ಇದಾವುದರ ಕುರಿತಾಗಿಯೂ ನಾವು ತಲೆಕೆಡಿಸಿಕೊಂಡವರಲ್ಲ. 

ರೈ಼ಷಾರ್ಢ ಕಪುಶಿನಸ್ಕೀ ಒಬ್ಬ ಅತ್ಯುತ್ತಮ ಪತ್ರಕರ್ತ ಆಪ್ರೀಕಾದ ಕುರಿತು ಇಂಚಿಚನ್ನೂ ವಿಸ್ತಾರವಾಗಿ ವಿವರಿಸಿದ ಪುಸ್ತಕ ಸೂರ್ಯನ ನೆರಳು ಈ ಪುಸ್ತಕವನ್ನು ಓದಿದ ನಂತರವೇ ನಮಗೆ ಆಫ್ರಿಕಾದ ಶೋಚನೀಯ ಸ್ಥಿತಿ ಅಲ್ಲಿನ‌ ಜನರ ಪರಿಸ್ಥಿತಿ ವರ್ಣಭೇದ ನೀತಿ ಮತ್ತಿತರ  ಎಷ್ಟೋ ವಿಷಯಗಳ ಕುರಿತು ನಮಗೂ ಅರಿವು ಮೂಡುವುದು. ಒಬ್ಬ ಪತ್ರಕರ್ತನಾದವನು ಎಷ್ಟರ ಮಟ್ಟಿಗೆ ಜನರನ್ನು ಮುಟ್ಟಬಹುದು ಎನ್ನುವುದಕ್ಕೆ ಈ ಪುಸ್ತಕ ಒಂದು ಉತ್ತಮ ಉದಾಹರಣೆಆಗಿದೆ.
ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪ್ಯುಶಿನಸ್ಕಿ  'ಹೆಬಾನ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದರು. ಇದನ್ನು ಕ್ಲಾರಾ ಗ್ಲೋವೆಸ್ಕಾ ಇಂಗ್ಲಿಷ್ ಗೆ 'ಶಾಡೋ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದಿಸಿದರು. ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ " ಸೂರ್ಯನ ನೆರಳು" ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.

' ಆಫ್ರಿಕಾದ ನೋವು, ಸಂಕಷ್ಟಗಳನ್ನು ಕುರಿತಾದ ಪ್ರಾಮಾಣಿಕ,ಸವಿವರ ಆದರೆ ಅಷ್ಟೇ ನಿರ್ಭಾವುಕ  ಪ್ರವೇಶಿಕೆ ಹಾಗೂ ಅದರ ಗಾಢ ಆಕರ್ಷಣೆಯಿಂದ ಹುಟ್ಟಿದ ಒಂದು ನಿಶ್ಯಬ್ಧ ಪ್ರೇಮಗೀತೆ ' ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿರುವುದು ಅತ್ಯಂತ ಸೂಕ್ತವಾಗಿದೆ.
ಅವನಲ್ಲಿ ಹಣದ ಅಭಾವ ಇರುವುದರಿಂದ ಕಾಲ್ನಡಿಗೆಯಲ್ಲಿ, ಗಾಡಿಗಳಲ್ಲಿ, ಬೇರೆ ಬೇರೆ ಪತ್ರಕರ್ತರೊಡನೆ ತಿರುಗಾಡಿದ್ದರಿಂದ ಈ ಕೃತಿಯು ಇಷ್ಟರಮಟ್ಟಿಗೆ ಯಶಸ್ಸು ಹೊಂದಿದೆ. ಎಲ್ಲವನ್ನು ತಾವು ಸ್ವತಃ ಅನುಭವಿಸಿ ನೋಡಬೇಕೆಂಬ ಬಯಕೆಯು ಅವರಲ್ಲಿತ್ತು.
ಇನ್ನು ಅನುವಾದದ ಕುರಿತಾಗಿ ಹೇಳುವುದಾದರೆ ಇದು ಇನ್ನೊಬ್ಬರ ಅನುಭವದ ಕಥನ ಎಂಬುದನ್ನು ಸದಾ ಗಮನದಲ್ಲಿಟ್ಟುಕೊಂಡು ಮೂಲ ಪಠ್ಯಕ್ಕೆ ನ್ಯಾಯ ಒದಗಿಸಿದ್ದಾರೆ ಸಹನಾ ಹೆಗಡೆಯವರು.

ಸಹನಾ ಹೆಗಡೆಯವರನ್ನು ಅಭಿನಂದಿಸಿದ ಕ್ಷಣ. ( MM.arts and science college )

ಮುಖಪುಟದ ವಿನ್ಯಾಸವೂ ಒಂದುರೀತಿ ಅರ್ಥಪೂರ್ಣವಾಗಿ ಮೂಡಿದೆ. ಆಫ್ರಿಕಾದ ಆತ್ಮ ಆನೆಯ ರೂಪದಲ್ಲಿರುತ್ತದೆ ಆನೆಯನ್ನು ಮತ್ತಾವ ಪ್ರಾಣಿಯು ಸೋಲಿಸಲಾರದು. ಇದೇ ಉದ್ದೇಶದಿಂದ ಮುಖಪುಟದಲ್ಲಿ ಆನೆಯನ್ನು ಬಿಂಬಿಸಿದ್ದಾರೆ.
ಈತ ಕೇವಲ ಪತ್ರಕರ್ತನೊಂದೇ ಆಗಿದ್ದರೆ ಈ ಕೃತಿ ವಿಷಯಾದಾರಿತ ಮಾತ್ರವೇ ಆಗಿರುತ್ತಿತ್ತು. ಆದರೆ ಇದು ಅವನ ಸಾಹಿತ್ತಿಕ ಬರವಣಿಗೆಯ ಶೈಲಿಯನ್ನು ಒಳಗೊಂಡಿದೆ. ಹಲವೆಡೆ ವ್ಯಕ್ತಿ ಚಿತ್ರಣವನ್ನು ಕಾಣಬಹುದು ಹಲವು ಧರ್ಮದ ಸಂಸ್ಕೃತಿ ಆಚರಣೆಯ ಕುರಿತಾಗಿ ಕಾಣಬಹುದು. ಒಂದುಕಡೆಯಿಂದ ಇನ್ನೊಂದು ಕಡೆ ಗುಳೆ ತಿರುಗುತ್ತಲೇ ಬದುಕುತ್ತಿರುವ ಜನಾಂಗದ ಕುರಿತಾಗಿ ಅವರನಿತ್ಯದ ಬದುಕಿನ ಕುರಿತಾದ ವಿವರವಿದೆ.

ಜನರ ಮೂಢನಂಬಿಕೆ ಕುರಿತು ಹಲ್ಲಿಯ ತೊಗಲು ಹಕ್ಕಿಯ ತಲೆ, ಹುಲ್ಲಿನ ಕಟ್ಟು, ಮೊಸಳೆಯ ಹಲ್ಲು ಇಂತವುಗಳನ್ನು ಕಟ್ಟಿಕೊಂಡಿದ್ದರೆ ಅಲ್ಲಿಂದ ಮುಂದಕ್ಕೆ ಸಾಗುವುದು ನಿಶಿದ್ಧ ಎಂಬ ಸೂಚನೆ ಇದೆ.
ಒಂದು ರೀತಿಯ ಮೇಲು ಕೀಳು ವರ್ಗೀಕರಣ ಅದು ವರ್ಣಬೇಧ ನೀತಿಯ ಆದಾರಿತವಾದ ಆಳುವವರು ಮತ್ತು ಕನಿಷ್ಠರು ಎಂಬ ತಾರತಮ್ಯದ ಭಾವವಿದೆ. ಜನರ ಮಾರಾಟಮಾಡುವಂತ ಶೋಚನೀಯ ಸ್ಥಿತಿಗಳು ನಡೆಯುತ್ತಿದ್ದವು.
ಸರ್ಪಹೃದಯ ಎಂಬ ಅಧ್ಯಾಯವಂತೂ ನನಗೆ ತುಂಬಾ ಅಚ್ಚರಿಯನ್ನು ಮೂಡಿಸಿತು ಹಾವಿನೊಡನೆ ಸೆಣಸಾಟದ ದೃಶ್ಯ ಕಣ್ಣಿಗೆಕಟ್ಟುವಂತಿತ್ತು.ಕಾರಿನಲ್ಲಿ ಕಾಡೆಮ್ಮೆಗಳ ಗುಂಪೊಂದನ್ನು ಹಾದು ಹೋಗುವ ಸನ್ನಿವೇಶದಲ್ಲಿ ನಮಗೂ ಭಯಹುಟ್ಟುತ್ತದೆ.
ಮಲೇರಿಯಾ ಬಂದಾಗ ಅವರ ಕಷ್ಟ ಆಸ್ಪತ್ರೆಯ ಸನ್ನಿವೇಶ ಎಲ್ಲವು ತುಂಬಾ ಮನಮುಟ್ಟುವಂತಿದೆ.


ಆಫ್ರಿಕಾದ ಜನತೆಗೆ ರಸ್ತೆ , ರೈಲು, ಸೇತುವೆ ಮಾರ್ಗ ನಿರ್ಮಾಣವಾಗಬೇಕಿತ್ತು ಆದರೆ ಬಿಳಿ ಗುಲಾಮರನ್ನು ಕೆಲಸಕ್ಕೆ ತರುವಂತಿರಲಿಲ್ಲಾ. ಇದೇ ಸನ್ನಿವೇಶ ಪ್ರಸ್ತುತ ದಿನಗಳಲ್ಲಾದರೆ ನಡೆಯುತ್ತಿರಲಿಲ್ಲಾ. ಇಂದಿಗೆ ಈ ಗುಲಾಮಪದ್ದತಿಗಳಿಲ್ಲ.
ಝೊಂಗು ಎಂದರೆ ನರಭಕ್ಷಕ ಎಂದರ್ಥವಂತೆ ಚಿಕ್ಕ ಮಕ್ಕಳು ಹಠ ಮಾಡಿದಾಗ ಬಿಳಿಯರು( ಝುಂಗು) ನಿನ್ನನ್ನು ಹಿಡಿದುಬಿಡುತ್ತದೆ ಎಂದು ಹೆದರಿಸಿ ಊಟಮಾಡಿಸುತ್ತಿದ್ದರಂತೆ.
ಹೀಗೆ ಹೇಳುತ್ತಾ ಹೋದರೆ ಇನ್ನು ಎಷ್ಟೆಷ್ಟೋ ಅಚ್ಚರಿಯ ವಿಷಯಗಳಿವೆ. ಕೃತಿಯನ್ನು ಓದುವುದನ್ನು ನಿಲ್ಲಿಸಿ ಬೇರೆ ಕೆಲಸದಲ್ಲಿ ತೊಡಗಿಕೊಂಡರು ಪದೇ ಪದೇ ತಲೆಯಲ್ಲಿ ಸುಳಿಯುವುದು ಒಂದೇ ಪ್ರಶ್ನೆ.

ಹಾಗಾದರೆ  ಈಗ ಆಫ್ರಿಕಾ ಶಾಂತವಾಗಿದೆಯೇ? ಅಲ್ಲೆಲ್ಲಾ ಜನ ತುಸುವಾದರು ನೆಮ್ಮದಿಯನ್ನು ಕಾಣುತ್ತಿರಬಹುದೇ? ಎಂದು ಅದಕ್ಕೂ ಉತ್ತರ ಕೊನೆಯಲ್ಲಿ ಲೇಖಕರೇ ಹೇಳಿದ್ದಾರೆ " ಆಫ್ರಿಕಾ ಎಂದರೆ ವಿವಿಧವಾದ, ವಿಭಿನ್ನವಾದ,ವಿಶೇಷವಾದ, ಕೆಲವೊಮ್ಮೆ ವಿರೋಧಾತ್ಮಕವಾದ  ಸಾವಿರಾರು ಸನ್ನಿವೇಶಗಳು. ಯಾರೋ ಒಬ್ಬ ಹೇಳಬಹುದು  ಅಲ್ಲಿ ಯುದ್ದ ನಡೆಯುತ್ತಿದೆ, ಹಾಗು ಅದು ಸತ್ಯವೂ ಆಗಿರಬಹುದು. ಮತ್ತೊಬ್ಬ ಹೇಳುತ್ತಾನೆ ಅಲ್ಲಿ ಶಾಂತಿನೆಲೆಸಿದೆ.”ಅವನು ಹೇಳುವುದು ಸರಿ ಇರಬಹುದು. ಎಲ್ಲವೂ ಅವಲಂಬಿಸಿರುವುದು ಎಲ್ಲಿ ಮತ್ತು ಯಾವಾಗ ಎನ್ನುವುದನ್ನು ಎಂದು ಹೇಳುವುದರ ಮೂಲಕ ಅಸ್ಪಷ್ಟತೆಯೊಳಗೆ ಸ್ಪಷ್ಟತೆಯನ್ನು ನೀಡುತ್ತಾರೆ. ೩೩೯ ಪುಟಗಳುಳ್ಳ ಈ ಅಪೂರ್ವ ಕೃತಿಯೊಂದನ್ನು ಮನಸ್ಥಿತಿ ತಾಳ್ಮೆಯನ್ನು ಪರಿಶೀಲಿಸುವಂತದ್ದು. ಪ್ರಾಮಾಣಿಕವಾಗಿ ಇದನ್ನು ಅನುವಾದಿಸಿದ ಸಹನಾ ಹೆಗಡೆಯವರು ಅಭಿನಂದನಾರ್ಹರು.
ಈ ಅನುವಾದಿತ ಕೃತಿಯು, ವಿಭಿನ್ನ ಅನುಭವದ ನೋಟಕ್ಕಾಗಿ  ಹೆಚ್ಚು ಜನರನ್ನು ತಲುಪಿಯೇ ತಲುಪುತ್ತದೆ.
ಪುಸ್ತಕ ಓದಿನ ಖುಷಿಯದಿನದ ಚಿತ್ರ ರಂಗೋಲಿಯಲ್ಲಿ ಮೂಡಿತ್ತು.

ಸುಮಾ.ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...