Skip to main content

Posts

Showing posts from October, 2026

ಪ್ರತಿಭಾ ಕಾರಂಜಿ

ನನ್ನ ಜೀವನದಲ್ಲಿ ನನ್ನ ಉತ್ತಮ ಮತ್ತು ಗರ್ವ ಪಡುವಂತ ಸಾಕಷ್ಟು ವಿಷಯವನ್ನು ನಾನು ಪಡೆದುಕೊಂಡಿದ್ದು ಕನ್ನಡ ಶಾಲೆಯಲ್ಲಾಗುವ ಪ್ರತಿಭಾ ಕಾರಂಜಿಯಲ್ಲಿ. ನಾನು ಯಾವ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಅದರಲ್ಲಿ ಬಹುಮಾನ ಬಂದಿಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಪ್ರಥಮ, ದ್ವಿತೀಯ, ತೃತೀಯ ಹೀಗೆ ಒಂದಲ್ಲದಿದ್ದರೆ ಇನ್ನೊಂದು ಖಂಡಿತ ಬಂದೇ ಬರುತ್ತಿತ್ತು. ಆದರೆ ನಾನು ಯಾವಾಗ ಪಿಯುಸಿಗೆ ಕಾಲಿಟ್ಟೆನೋ ಆಗ ನನಗೆ ನಾನು ಬಾವಿಯಲ್ಲಿದ್ದ ಕಪ್ಪೆಯಂತೆ ತೋರತೊಡಗಿದೆ.  ಜಗತ್ತು ವಿಶಾಲವಾಗುತ್ತಾ ಬಂತು. ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲೂ ಬಹುಮಾನ ಬಂದೇ ಬರುತ್ತದೆ ಎಂಬ ನನ್ನ ಗರ್ವಕ್ಕೆ ಭಂಗ ಬಂತು. ಅಷ್ಟೇ ಅಲ್ಲ ಎಂದಿಗೂ ಸೋಲಿನ ರುಚಿಯನ್ನೇ ಕಾಣದ ನನಗೆ ಅದನ್ನು ಅರಗಿಸಿಕೊಳ್ಳುವುದು ಕೂಡ ತುಂಬಾ ಕಷ್ಟದ ಸಂಗತಿಯಾಯಿತು. ಅದಾದ ನಂತರ ನಾನು ಅಪರೂಪಕ್ಕೆ ಕೆಲವು ಸಲ ಸೋತಿದ್ದೇನೆ.  ಇನ್ನು ಬಹುಮಾನಗಳನ್ನು ಗೆದ್ದಿದ್ದೂ ಸಹ ಇದೆ. ಹಾಗೇ ನಾನು ಕೆಲಸಕ್ಕೆ ಸೇರಿಕೊಂಡ ನಂತರ ನಾಟಕ, ನೃತ್ಯಗಳಿಂದ ದೂರವಾದೆ. ಆದರೆ ಎಲ್ಲದರಲ್ಲೂ ಏಕತಾನತೆ ಕಂಡ ನಾನು ಒಮ್ಮೆ ವೇದಿಕೆ ಹತ್ತಬೇಕು. ನಾಟಕವನ್ನಾಗಲಿ ಅಥವಾ ನೃತ್ಯವನ್ನಾಗಲಿ ಮಾಡಬೇಕು ಎಂಬ ಹಂಬಲ ಹೊತ್ತಿದ್ದೆ. ಅದಕ್ಕೆ ಸರಿಯಾಗಿ ಪ್ರತಿಬಿಂಬ ಕಾರ್ಯಕ್ರಮದಲ್ಲಿ ನನಗೆ ಯಕ್ಷನೃತ್ಯ ಮಾಡುವ ಅವಕಾಶ ಸಿಕ್ಕಿತು. ವೇದಿಕೆಯ ಹಿಂದಿನ ಪರಿಶ್ರಮ ಎಂದರೆ ಪ್ರಾಕ್ಟಿಸ್‌ ಸಮಯ.  ...