Skip to main content

ಮದುವೆಯ ಹಿಂದಣ ದಿನ

ಮದುಮಗನ‌ ಕಡೆಯವರಾಗಿ ಮದುವೆ ಮನೆಯಲ್ಲಿ ಕೆಲಸ ಕಮ್ಮಿಯಾದರೂ ಹಿಂದಿನ‌ ತಯಾರಿಯೇ ಬಲು ಜೋರು. ಇಂದು ಅರಶಿನೆಣ್ಣೆ ಮಾಡಿಯಾಯಿತು. ಹೋಮ, ಹವನ ಕಾಶಿಗೋಪವನ ಕೊಡೆ ತಡೆಯುವುದು ಇಷ್ಟೆಲ್ಲ ಕೆಲಸ ಇತ್ತು. ನೋಡಲು ಬಲು ಮಜವಿತ್ತು. ನಡುವೆ ಗೆಳೆಯ ಹರೀಶನ ಮದುವೆಗೆ ಹೋಗಿ ಬಂದದ್ದೂ ಆಯ್ತು. ಅದೇನೆ ಆಗಲಿ ಇದು ಗಂಡನ ಜೊತೆಗೆ ಹೋದ ಮೊದಲ ಮದುವೆ ಎಂದರೂ ತಪ್ಪಿಲ್ಲ. ಒಟ್ಟೊಟ್ಟಿಗೆ ಸ್ಕೂಟಿಯಲ್ಲಿ ಸೀರೆಯುಟ್ಟು ಒಂದೇ ಬದಿ ಕಾಲು ಹಾಕಿ ಭುಜ ಹಿಡಿದು ಸಾಗುವ ಹೆಂಗಸರ ದಿಸೆಯನ್ನೂ ಇಂದು ಮಾಡಿಯಾಯಿತು. 



ಮತ್ತೆ ಅಲ್ಲಿ ಉಂಡು ಸ್ನೇಹಿತರನ್ನೆಲ್ಲ ಭೇಟಿಯಾಗಿ ಬಂದದ್ದೂ ಆಯ್ತು. ರಾತ್ರಿ ತಯಾರಿ ಇನ್ನಷ್ಟು ಜೋರಿತ್ತು. ಮದುಮಗನಿಗೆ ಬೇಕಾಗುವ ಎಲ್ಲ ಅರಿವೆ - ವಸ್ತ್ರಗಳನ್ನು ಜೋಡಿಸಿಯಾಯಿತು. ಇತ್ತ ಊಟಕ್ಕೆ ರೆಡಿ ಮಾಡಿವುದು. ಸಿದ್ದೆಗೆ ಬಣ್ಣ ಹಚ್ಚುವುದು ಹೀಗೆ ಹತ್ತಾರು ಕೆಲಸ. 

ಅದೆಲ್ಲ ಆದ ಮೇಲೆ ಸಿಂಗಾರದ ಮಾಲೆಯ ಸಡಗರ. ಅದಂತು ಒಂದೇ ನೂಲಿನಲ್ಲಿ ನವಿರಾಗಿ ಮುಟ್ಟಷ್ಟೂ ಗಂಟು ಹಾಕಿಕೊಳ್ಳುತ್ತಿತ್ತು ಅದನ್ನು ಗಿಳಿಗುಟ್ಟಕ್ಕೆ ಸೇರಿಸಿಯಾಯಿತು. 
ಇನ್ನೊಂದೆರಡನ್ನು ಹೀಗೆ ಬಾಳೆಗೆ ಸುತ್ತಿಟ್ಟೆವು. ಅಷ್ಟರಲ್ಲಿ ಮಧ್ಯಾಹ್ನದ ಸಾರು, ಪಾಯಸ ಬಿಸಿ ಮಾಡಿ ಮತ್ತೆ ಬಡಿಸಲು ಸಿದ್ಧತೆ ನಡೆಸಿದೆವು. ನಾನು ಬಡಿಸಿದೆ. ಉಂಡೆ - ತಿಂದೆ ಈಗ ಬ್ಲಾಗ್ ಬರೆಯುತ್ತಿದ್ದೇನೆ. 

ಇದಾದ ಮೇಲೆ ಕಾರಿಗೆ ಅಲಂಕಾರ ಮಾಡುವುದೂ ಒಂದಿದೆ. ಅದೇನೆ ಇರಲಿ ಈಗ ಅತ್ತಿಗೆಯ ಚೌರಿ ಸಿಕ್ಕಿಸುವ ಪರಿ ಹೇಗೆ ಎಂದು ನೋಡಿಕೊಳ್ಳುವ ಸಮಯ. ಅವೞು ಕೂಗುತ್ತಿದ್ದಾಳೆ. ಇತ್ತ ನಮ್ಮನೆಯವರು ಬಂದು "ಕಾರಿಗೇನಾದರೊಂದು ಮಾಡು ಮಾರಾಯ್ತಿ ವರ್ಕ್ ಬತ್ತು ಮನ್ಗವಾ ಸಾಕು ಬೆಳಿಗ್ಗೆ ನಾಕಕ್ ಏಳ" ಎಂದು ಹೇಳಿ ಒಳನಡೆದರು.

ಒಳಗಡೆಯಂತು ಎಲ್ಲವೂ ರೆಡಿಯಾಗಿ ಮದುವೆಗೆ ಹೊರಡುವುದೊಂದೆ ಬಾಕಿ ಎನ್ನುವ ರೀತಿ ಕಾಣುತ್ತಿತ್ತು. ಸುಮಿತಾ ಪಕ್ಕದಲ್ಲೇ ಬಂದು ಕುಳಿತು "ಅರೇ ಬ್ಲಾಗ್ ಬರಿತಾ ಇದ್ಯಾ?" ಎಂದಾಗ ನನ್ನ ಬರೆಯುವ ವೇಗ ಇನ್ನೊಂದಷ್ಟು ಹೆಚ್ಚಾಯಿತು.

 ಅವಳದ್ದು ಇಂದು ಇದೇ ಕೆಲಸ. ಮನೆಯ ಮಕ್ಕಳಿಬ್ಬರು ಓಡಾಡಿಕೊಂಡು ಚಿಕ್ಕಪ್ಪನ ಮದುವೆ ಸಡಗರದಲ್ಲಿದ್ದಾರೆ ಎನ್ನುವಷ್ಟರಲ್ಲಿ ನೆನಪಾಯಿ ಪನ್ನಗ ಆಗಲೇ ಜನ ಜಂಗುಳಿಯಲ್ಲಿ ಜಗುಲಿಯಲ್ಲೇ ಒರಗಿ ಆಗಿದೆ. ಅವನಿಗೀಗ ಅರ್ಧ ರಾತ್ರಿ ಕಳೆದಿದೆ.

ಕೈಗಾಯಿಯ ಸೊಗಸು ನೋಡಿ, ಸುಶೀಲಕ್ಕನ ಕೈಚಳಕ. ಬೆಂಗಳೂರಿನಿಂದ ಬಂದು ಆಗಾಗ ಇಂತಹ ಮದುವೆಯಲ್ಲಿ ತಂಪಾದ ರಾತ್ರಿ ಲೈಟು- ಪೆಂಡಾಲಿನಡಿ ಚಳಿಯಲ್ಲಿ ಬ್ಲಾಗ್ ಬರೆಯುವ ಮಜವೇ ಬೇರೆ.

ಟಾಟಾ ..... ಶುಭರಾತ್ರಿ

ಸುಮಾ ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...