ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.
ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ
ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.
ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ್ದರೆ ಅತ್ತೆ ನಿಧಿ ಎತ್ತಿ ಮುದ್ದಾಡಿದಳು, ಅದು ಇದು ಶಾಸ್ತ್ರಗಳಾದ ನಂತರ ನಿಧಿ ಅಪ್ಪ ಒಂದು ಪದ್ಯ ಹಾಡಿದರು. ಬಂದಿದ್ದ ಸಭಿಕರೆಲ್ಲರೂ ತುಂಬಾ ಆಸಕ್ತಿಯಿಂದ ಕಿವಿಗೊಟ್ಟರು. ಇನ್ನು ದೀಪಕ್ ಮತ್ತು ಶ್ರೀನಿಧಿ ಏನು ಕಮ್ಮಿ ಇಲ್ಲ. ಇಬ್ಬರೂ ಕಲಾವಿದರೆ ಅವರು ಒಬ್ಬರಿಗೊಬ್ಬರು ಹಾಡಿದನ್ನು ನೋಡಿ, ಇದು ಹೇಳಿ ಮಾಡಿಸಿದ ಜೋಡಿ ಎನಿಸಿದ್ದಂತು ನಿಜ ನೋಡಿ. ನಿಧಿ ಆ..ಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು ಎನ್ನುತ್ತಿದ್ದರೆ ಹುಡುಗನ ಎದೆಯಲ್ಲಿ ಸಮುದ್ರದ ಅಲೆಗಳೆದ್ದವು.
ಹೀಗೆ ನಿಶ್ಚಿತಾರ್ಥ ಸಡಗರದಿಂದ ಜರುಗಿತು ಎಂಬಲ್ಲಿಗೆ ವಿಷಯ ಮುಗಿಯಿತು. ಮದುವೆಗೆ ಹೋಗುವ ಪ್ರಯತ್ನ ಇಲ್ಲಿಂದ ಆರಂಭ.
Comments
Post a Comment