Skip to main content

ಹೃದಯಶಿವ

ಸ್ವರ್ಗವಾಸಿ,

ಪ್ರೀತಿಯ ಮಾವನಿಗೆ, ಅಂದು ಹುಟ್ಟಿದ ದಿನದ ನೆನಪಿಗೆ ಇಂದು ಈ ನನ್ನ  ಪತ್ರ.

ನೀನು ಇಂದು ಸ್ವರ್ಗದಲ್ಲಿ ಸಂತೃಪ್ತಿಯ ದಿನಗಳನ್ನು ಕಾಣುತ್ತಾ ಸುಖವಾಗಿದ್ದೀಯ ಎಂದು ದಿನವೂ ನಾವೆಲ್ಲರೂ ಭಾವಿಸಿದ್ದೇವೆ. ನಾವು ಇಲ್ಲಿ ಅಲ್ಪತೃಪ್ತರಾಗಿ ಸುಖವಾಗಿಯೇ ಇದ್ದೇವೆ ಎನ್ನಬಹುದು, ಆಗಾಗ ಕಾಡುವ  ನಿನ್ನ ನೆನಪೊಂದನ್ನು ಬಿಟ್ಟರೆ.

"ಹುಟ್ಟು ಹಬ್ಬವೆಂದರೆ ಏನು ವಿಶೇಷ ಅಲ್ಲ ಮಾರಾಯ್ತಿ ಮೊದಲು ವಿಷ್ ಮಾಡದೇ ಇದ್ರೆ ಅದಕೆಲ್ಲ ಯಾರಾದ್ರೂ ಬೇಜಾರ್ ಮಾಡ್ತವ" ಈಗ ವಿಷ್ ಮಾಡಿದ್ದೆ ಆತಲಿ ಖುಷಿಪಡು ಎಂದು ನನ್ನ ಹುಟ್ಟು ಹಬ್ಬದ ದಿನ ಪೋನು ಮಾಡಿ ನೀನು ಹೇಳುತ್ತಿದ್ದೆ. ಆದರೂ ನಾನು ಪ್ರತಿ ವರ್ಷವೂ ನೀನೆಕೆ ಇಷ್ಟು ತಡಮಾಡಿದೆ? ಎಂದೇ ಕೇಳುತ್ತಿದ್ದೆ‌.



ಇಲ್ಲಿ ಕಾಟಾಚಾರದ ಪರೀಕ್ಷೆಗಳೆಲ್ಲ ನಡೆಯುತ್ತಿದೆ. ನೀನು ಓದಿದ್ದನ್ನು ಗೆಳೆಯರಿಗೆ ಧಾರೆ ಎರೆದರೆ ಅವರು ಪಾಸಾಗಬಹುದು. ನೀನುಯಾವಾಗಲೂ ಹುಡುಗಿಯರ ಓದಿನ ಕುರಿತು ಹೀಗೆ ಅಲ್ಲವೇ ತಮಾಷೆ ಮಾಡಿ ನಗುತ್ತಿದ್ದುದು.

ಕನಸಲ್ಲಿ ಬರುತ್ತೇನೆ ಎಂದು ಭರವಸೆ ಕೊಟ್ಟ ನೀನು ಇತ್ತೀಚೆಗೆ ಯಾಕೊ ಗೈರು ಹಾಕುತ್ತಿದ್ದೀಯಾ ಹೀಗೆಂದೆ ನಾನು ಬೇಸರಮಾಡಿ ಅತ್ತದಿನ ರಾತ್ರಿ ನೀನು ಕನಸಿನಲ್ಲಿ ಬಂದದ್ದು ಖುಷಿ ಎನಿಸಿತು.

ಹಿಂದಿನ ವರ್ಷವೇ ನಿನ್ನ ಜೀವನದ ಕೊನೆಯ ಹುಟ್ಟು ಹಬ್ಬವೆಂದು ತಿಳಿದಿದ್ದರೆ ಅದೇನಾಗುತ್ತಿತ್ತೊ ಗೊತ್ತಿಲ್ಲ. ನಿನ್ನ ಅಮ್ಮನಿಗೆ ಪೋನುಮಾಡಿದಾಗ ಅವಳೂ ಇದನ್ನೇ ಹೇಳಿ ಅಳುತ್ತಾಳೆ. ನಿನ್ನ ನೆನಪುಗಳು ದಿನದ ಇಪ್ಪತ್ನಾಲ್ಕು ಗಂಟೆಯೂ ಮನಸಿನಲ್ಲೇ ಇಟ್ಟು ಕೊಂಡ ಕೆಂಡವಾಗಿ ಅವರೆದೆಯಲ್ಲಿ ಉರಿಯುತ್ತಿರುತ್ತದೆ ಆದರೂ ಬೂದಿ ಮುಚ್ಚಿಕೊಂಡಂತೆ ಕಾಣಿಸದೇ ಇರುವುದು ತುಂಬಾ ಕಷ್ಟ.

ನಿನ್ನೆಲ್ಲಾ ಸವಿಘಳಿಗೆ, ನೀನು ಬಿಟ್ಟುಹೋದ ವಸ್ತು, ನಿನ್ನ ದನಿ ಇದೆಲ್ಲವನ್ನು ಹಂಬಲಿಸಿ ನಿನ್ನಾಪ್ತರಲ್ಲಿ ಹಲವರು ಇನ್ನೂ ಕುಗ್ಗಿಹೋಗಿದ್ದಾರೆ. ಇನ್ನು ಕೆಲವರು ಮರೆಯಲು ಯತ್ನಿಸುತ್ತಿದ್ದಾರೆ. ನಿನ್ನೊಡನೆ ಆಡಬೇಕಾದ ಮಾತುಗಳನ್ನು ನಾವು ನಮ್ಮವರಲ್ಲೇ ಹಂಚಿಕೊಂಡು ಭಾರ ಇಳಿಸಿಕೊಳ್ಳುತ್ತಿದ್ದೇವೆ.

ನೆಲದಡಿಯಲ್ಲಿ ಹುದುಗಿರುವ ಜ್ವಾಲಾಮುಖಿಯಂತೆ ನಿನ್ನ ನೆನಪುಗಳು ಆಗಾಗ ಸ್ಪೂಟಗೊಳ್ಳದೇ ಬಿಡುವುದಿಲ್ಲ. ಹಾಗಾದಾಗ ಮೈಗೆ ಬಿಸಿನೀರು ಚಲ್ಲಿದಂತೆ ಬೆಚ್ಚಿ ಬೀಳುತ್ತೇವೆ. ಇರುವ ನೆನಪುಗಳಲ್ಲೇ ನಿನ್ನ ಮತ್ತೆ ಮತ್ತೆ ನೆನೆಯುತ್ತೇವೆ. 
ಅವನು ಅಲ್ಲಿಂದ ಕಳಿಸಿದ್ದು.

ನನ್ನ ಬಳಿಯಂತು ಹೇಳ ತೀರದಷ್ಟು ನಿನ್ನ ಕತೆಗಳಿವೆ ನಾನು ನಿನ್ನಾಪ್ತರಿಗೆ ಕೆಲವು ನಿಮಿಷಗಳಾದರೂ ನಿನ್ನ ಇರುವಿಕೆಯನ್ನು ತಂದುಕೊಡುತ್ತೇನೆ. ಅಮ್ಮ, ಅಪ್ಪ, ಆಯಿ, ಯೋಗಿಶ, ತಂಗಿ(ಚಿಕ್ಕಮ್ಮ) ಮಾವ, ಅಣ್ಣ, ಅತ್ತಿಗೆ, ಅಕ್ಕಂದಿರು, ಕುಟುಂಬದವರು, ಗೆಳೆಯರು, ಅಕ್ಕ,ಅಣ್ಣ  ಎಲ್ಲರೂ ಈ ಮೂಲಕ ನಿನಗೆ ಅವರ ನಗು ಮುಖ ತೋರಿಸುತ್ತಿದ್ದೇವೆ. ಮೇಲಿನಿಂದಲೆ‌ ನೋಡಿ ಸಮಾಧಾನಿಸು. ಇಂದು ಸ್ವರ್ಗದಲ್ಲಿ ಆಚರಿಸಿದ ನಿನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದೇವೆ ಅಲ್ಲೆ ನಗುತಿರು, ನಕ್ಷತ್ರವಾಗಿ ಮಿನುಗಿತಿರು.


ಇಂತಿ
ಸುಮಾ.

Comments

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...