Skip to main content

ಕಾಲ್ಪನಿಕ ಸಂದರ್ಶನ



ಕಳೆದ ಎರಡು ಮೂರು ವರ್ಷಗಳಿಂದ ಮಳೆಯ ಅಬ್ಬರಕ್ಕೆ ಎಲ್ಲೆಡೆ ಭೂ ಕುಸಿತ ಆಗ್ತಾ ಇದೆ. ಈ ಕುರಿತು ಪರಿಸರ ತಜ್ಞರನ್ನು, ಭೂ ಶಾಸ್ತ್ರಜ್ಞರನ್ನು ಸಂದರ್ಶನ ಮಾಡಿಯಾಗಿದೆ. ಈಗ ಭೂಮಿತಾಯಿ ಈ ಕುರಿತು ಏನು ಹೇಳ್ತಾಳೆ ನೋಡೋಣ. ಅವಳನ್ನೇ ಕರೆದು ವಿಶೇಷ ಸಂದರ್ಶನ ಮಾಡುತ್ತಿದ್ದೇವೆ. ಮೊದ ಮೊದಲು ನಮ್ಮೊಟ್ಟಿಗೆ ಮಾತನಾಡಲು ನಿರಾಕರಿಸಿದರು ಒತ್ತಾಯಕ್ಕೆ ಮಣಿದು ಭೂ ತಾಯಿ ಒಪ್ಪಿಕೊಂಡಿದ್ದಾರೆ. ಈ ಒಂದು ಕಾಲ್ಪನಿಕ ಸಂದರ್ಶನ ನಿಮಗಾಗಿ.

ಮನುಷ್ಯ: ಸಮಸ್ತ ಜೀವ ಸಂಕುಲವನ್ನು  ತನ್ನ ಒಡಲೊಳಗಿಟ್ಟು ಸಲಹುವ ಭೂ ತಾಯಿಯ ಚರಣಗಳಿಗೆ ನಮಿಸಿ ಸ್ವಾಗತಿಸುತ್ತಿದ್ದೇನೆ. ಮಾತೆ ನೀವು ಕಳೆದ ಎರಡು ವರ್ಷಗಳಿಂದ ಯಾಕೆ ಕೋಪಗೊಳ್ಳುತ್ತಿದ್ದೀರಿ?

ಭೂಮಿ ತಾಯಿ: ಪ್ರತಿ ವರ್ಷ ನಾನು ಶಾಂತಳಾಗಿಯೇ ಇರುತ್ತಿದ್ದೆ. ಉತ್ತಿ ಬಿತ್ತಿ ಬೆಳೆತೆಗೆಯಲು ನನ್ನ ಮೈ ಮನೆಗಳನ್ನು ನೀಡುತ್ತಿದೆ. ಪುಟ್ಟ ಮಕ್ಕಳಂತೆ ಮನುಜ ಸಂಕುಲವನ್ನು ಸಲಹುತ್ತಿದ್ದೆ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ನನಗೂ ನನ್ನ ಮಕ್ಕಳ ಮೇಲೆ ಕೋಪ ಬಂದಿದೆ. ಮನುಷ್ಯರೇ ಮಾಡುತ್ತಿರುವ ಕೃತ್ಯಗಳ ಫಲವಾಗಿ ನಾನು ಕುಪಿತಳಾಗಿದ್ದೇನೆ. ಮನುಜ ಮತ್ತೆ ತನ್ನ ತಪ್ಪನ್ನು ಅರಿತರೆ ನಾನು ಸಮಾಧಾನ ಪಡುತ್ತೇನೆ.

ಮನುಷ್ಯ: ಭೂಮಿ ತಾಯಿಯಾದ ನೀವೆ ಕೋಪಿಸಿಕೊಂಡರೆ ಹೇಗೆ? ಸಣ್ಣ ಪುಟ್ಟ ಶಿಕ್ಷೆ ನೀಡಿ ಕ್ಷಮಿಸಿ ಬಿಡುವುದು ಒಳ್ಳೆಯದಲ್ಲವೇ?

ಭೂ ತಾಯಿ: ನಾನು ಹಲವು ವರ್ಷಗಳಿಂದ ನನ್ನದೇ ಮಕ್ಕಳು ಎಂಬ ಪ್ರೀತಿಗೆ ನಿಮ್ಮನ್ನು ಕ್ಷಮಿಸುತ್ತಲೇ ಬಂದೆ. ಆದರೆ ನೀವು ನನ್ನ ಒಡಲನ್ನು ಬರಡು ಮಾಡುತ್ತಾ ಹೋಗಿದ್ದೀರಿ. ಈಗಲೂ ನನ್ನ ನೋವಿಗಲ್ಲ ನಿಮ್ಮ ವಳಿತಿಗಾಗಿ ಹೇಳುತ್ತಿದ್ದೇನೆ.‌ ನಿಮ್ಮ ರಕ್ಷಣೆಗಾಗೆ ಕಷ್ಟ ಪಡುತ್ತಿದ್ದೇನೆ. " ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ " ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲಾರಳು. ನಿಮ್ಮನ್ನು ನಾನು ಎಂದಿಗೂ ರಕ್ಷಿಸದೆ ಕೈ ಬಿಡಲಾರೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚುತ್ತಿರುವ ನಿಮ್ಮ ಕೆಡುಕಿನ ಆಟವನ್ನು ಸಹಿಸಹಿಸದೆ ಈ ನಿರ್ಧಾರಕ್ಕೆ ಬರುವಂತಾಯಿತು.

ಮನುಷ್ಯ: ನಮ್ಮ ಹೊಸ ಚಿಂತನೆಗಳಿಂದ ನಿನಗೊಂದು ಹೊಸ ರೂಪ ಕೊಡುತ್ತಿದ್ದೇವೆ ಇ ಕುರಿತು ನಿನ್ನ ಅನಿಸಿಕೆ ಏನು?

ಭೂಮಿತಾಯಿ: ನಿಮ್ಮ ಹೊಸ ಚಿಂತನೆಗಳು ಮಿತಿಯನ್ನು ಕಳೆದು ಕೊಂಡಿದೆ. ಭೂಮಿತೂಕದ ಸಹನೆ ಎಂಬ ಮಾತೇ ಇರುವಾಗ ನನ್ನ ತಾಳ್ಮೆಯನ್ನೇ ನೀವು ಮೀರಿದ್ದೀರಿ. ಅನಗತ್ಯ ಅವಶ್ಯಕತೆಗಳನ್ನು ಸೃಷ್ಟಿಸಿಕೊಂಡಿದ್ದೀರಿ. ಚತುಷ್ಪತ ರಸ್ತೆ, ಇಲ್ಲ ಅಲ್ಲದ ರಲ್ವೇ ಮಾರ್ಗಗಳು, ಅಣು ವಿದ್ಯುತ್ ಕೇಂದ್ರಗಳು ಗಣಿಗಾರಿಕೆ, ಅವೈಜ್ಞಾನಿಕ ಅಣೆಕಟ್ಟುಗಳು, ಅರಣ್ಯನಾಶ, ಈ ಎಲ್ಲಾ ನಿಮ್ಮ ಹೊಸ‌ಚಿಂತನೆಗಳಿಂದ ನಾನು ದಣಿದು ಹೋಗಿದ್ದೇನೆ. ಇದೇ ನನ್ನ ಅನಿಸಿಕೆ.

ಮನುಷ್ಯ: ನಿನಗೆ ಸಾವಿಲ್ಲ ಎಂದು ಕೇಳಲ್ಪಟ್ಟಿದ್ದೇವೆ ನಿಜವೇ?

ಭೂಮಿತಾಯಿ: ಎಲ್ಲರೂ ಹಾಗೆ ಅಂದು ಕೊಂಡಿದ್ದೀರಿ ಮತ್ತು ಅದು ನಿಜವೂ ಇರಬಹುದು. ಆದರೆ ಇತ್ತೀಚೆಗೆ ನನ್ನ ಆರೋಗ್ಯ ಹದಗೆಟ್ಟ ಪರಿಣಾಮವಾಗಿ ನಾನು ಸಾಗಬಹುದು ಎಂಬ ಸಂಶಯ ನನ್ನಲ್ಲಿ ಮನೆ ಮಾಡುತ್ತಿದೆ. ನನ್ನ ಒಡಲೊಳಗಿನ ಸತ್ವವೆಲ್ಲ ಬರಿದಾಗಿ ನಾನು ಖಾಲಿಯಾಗುತ್ತಿದ್ದೇನೆ. ಸತ್ವವಿಲ್ಲದೆ ಬಸವಳಿದು ಹೋಗಿದ್ದೇನೆ. ನನ್ನ ಕಣ್ಣೀರಿನ ಪ್ರವಾಹಕ್ಕೆ ನನ್ನ ಆಭರಣಗಳಾದ ಪರ್ವತ ಶಿಖರಗಳು ಕೊಚ್ಚಿಹೋಗುತ್ತಿವೆ. ಎಷ್ಟು ಅಶಕ್ತಳಾಗಿದ್ದೇನೆ ಎಂದರೆ ನನ್ನ ಮೈಯನ್ನೇ ಭಲವಾಗಿ ಹಿಡಿದುಕೊಳ್ಳಲಾಗದೆ ಒಂದೊಂದೇ ಪಾರ್ಶ್ವಗಳನ್ನು ಕಳೆದುಕೊಂಡಿದ್ದೇನೆ. ಹೀಗೆ ಆದರೆ ನನ್ನ ಅಳಿವು ಖಚಿತ.

ಸುಮಾ.ಕಂಚೀಪಾಲ್

ವಿಶ್ವವಾಣಿ ಪ್ರಕಟಿತ ಬರಹ


Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...