Skip to main content

ಗದಗದ ಹುಡುಗ

ಉಜಿರೆಯಿಂದ ಬಸ್ಸಿನಲ್ಲಿ ಹೊರಟಿದ್ದೆ ದಾರಿಯ ಅರ್ಧಕ್ಕೆ ಬಹಳಷ್ಟು ಜನ ನಿಂತಿದ್ದರು. ತುಂಬಾ ಕತ್ತಲಾಗಿತ್ತು. ಸುಮಾರು ಇಪ್ಪತ್ತೈದು ಜನ ಬಸ್ಸಿಗೆ ತಮ್ಮ ಕೈ ಅಡ್ಡಹಿಡಿದರು. "ಓ ಯಾವುದೊ ಬಸ್ಸ ಕೆಟ್ಟು ನಿಂತಿದೆ" ಎಂದು ಅರ್ಥಾಯ್ತು. ಬಸ್ ನಿಲ್ತಿದ್ದಂತೆ ಜನರ ಗುಂಪೊಂದು ವೇಗವಾಗಿ ಬಸ್ ಏರಿತು. ಸಿಟಿಗಾಗಿ ತಡಕಾಡಿ ಒಮ್ಮಿಂದೊಮ್ಮೆಲೆ ನುಗ್ಗಿ ಅಲ್ಲಿ ಇಲ್ಲಿ ಜಾಗ ಸಿಕ್ಕಿದಲ್ಲೆಲ್ಲ ಕೂತು ಬಿಟ್ಟರು. 

ನನ್ನ ಪಕ್ಕದ ಸೀಟೊಂದು ಖಾಲಿ ಇತ್ತು ಆದರೆ ನಾನು ನನ್ನ ಬ್ಯಾಗ್ ಒಂದನ್ನು ಅರ್ಧ ಸೀಟಿನ ಮೇಲೆ ಇಟ್ಟ ಕಾರಣ ಯಾರು‌ ಕೂರಲು ಇಷ್ಟ ಪಡಲಿಲ್ಲ. ಕೊನೆಗೆ ಎಲ್ಲಾ ಸೀಟು ಸಂಪೂರ್ಣ ತುಂಬಿ ಹೋದಾಗ ಮದುಮಗನ ರೀತಿ ರೆಡಿಯಾಗಿದ್ದ ಒಬ್ಬ ಹುಡುಗ ಬಂದು "ನಾನು ಕೂರ್ಬಹುದಾ"? ಎಂದು ಕೇಳಿದ. ಅವನ ಮುಖ ನೋಡಿದರೆ ಅತ್ತಂತಿತ್ತು. "ಹಾ ಬನ್ನಿ" ಅಂತ ಬ್ಯಾಗ್ ಸರಿಸಿದೆ. ಕೂತ ಮೊಬೈಲ್ ಕವರ್ ಹಿಂದುಗಡೆ ಇದ್ದ ಒಂದಷ್ಟು ಟಿಕೆಟ್‌ಗಳನ್ನು ಹರಿದು ಬಿಸಾಡಿದ. ಗ್ಯಾಲರಿ ಓಪನ್ ಮಾಡಿ ಅದ್ಯಾರದೋ ಒಂದಿಷ್ಟು ಪೋಟೋ ನೋಡಲು ಆರಂಭಿಸಿದ. 


ತುಂಬಾ ಕತ್ತಲಿತ್ತು ಬಸ್ ಒಳಗಡೆ ಇದ್ದ ಲೈಟ್ ಕೂಡಾ ಬಂದ್ ಮಾಡಿದ್ದರು. ಆ ಕಾರಣದಿಂದಾಗೇ ಅವನ ಮೊಬೈಲ್ ಬೆಳಕು ನನ್ನ ಕಣ್ಣಿಗೆ ಸ್ವಲ್ಪ ಹೆಚ್ಚೇ ತಾಕಿ ಬೇಡ ಬೇಡವೆಂದರು ಅವನ ಗ್ಯಾಲರಿ ನನ್ನ ಕಣ್ಣಿಗೆ ಬಿತ್ತು ಆದರೂ ನಾನಷ್ಟು ಲಕ್ಷ ಹಾಕಲಿಲ್ಲ. ಅವನು ಅಳುವ ಸದ್ದು ಕೇಳುತ್ತಿದ್ದರು ವಿಷಯ ಏನು ಎಂದು ಕೇಳಲು ನಾನು ಮುಂದಾಗಲಿಲ್ಲ. ಅವನ ಪಾಡಿಗವನೆ ಸಮಾಧನ ಮಾಡಿಕೊಂಡು ಸ್ವಲ್ಪ ಸಮಯದ ಬಳಿಕ. "ನಿಮ್ ಊರು " ಅಂತ ಕೇಳ್ದ ಯಲ್ಲಾಪುರ ಅಂದೆ ಅದಾಗ್ಲೆ ಅರಬೈಲು ಗಟ್ಟ ಹತ್ತಿದ್ದೆವು. ನಾನು ಅಪರಚಿತರೊಬ್ಬರಲ್ಲಿ ಹೇಳಲೇ ಬೇಕಾದ ನನ್ನ ಕತೆಯನ್ನು ಈಗ ನಿಮಗೆ ಹೇಳಲೇ ಬೇಕು ನೀವು ಕೇಳುವುದಾದರೆ ಕೇಳಿ ಇಲ್ಲವಾದರೆ ಬಿಡಿ ನನ್ನ ಸಮಾಧನ ನನಗೆ ಮುಖ್ಯ ಎಂದ. ಅರೆ! ಇವನಿಗೇನು ಮರ್ಲ? ಅಂತ ನಂಗನಿಸಿದರು ಅವನ ಕಥೆ ಮಾತ್ರ ಇಂಟ್ರೆಸ್ಟಿಂಗ್ ಆಗಿತ್ತು. 

ಇಪ್ಪತ್ತೊಂದು ವರ್ಷದ ಹುಡುಗ ಅವನು ಯಾವುದೋ ೧೮ ವರ್ಷದ ಹುಡುಗಿಯನ್ನು ಪ್ರೀತಿಸಿ ಮನೆಯಿಂದ ಕರ್ಕೊಂಡು ಬಂದಿದಾನೆ. ನಾಲ್ಕು ವರ್ಷಗಳಿಂದ ಅವಳನ್ನೇ ಪ್ರೀತಿಸಿ ಇವನು ಈಗ ಬೇರೆ ಊರಲ್ಲಿ ತನ್ನ ಓದು ಮುಂದುವರಿಸಿದ್ದ. ಇವನಿಗೆ ಅವಳ ಮದುವೆ ನಿಶ್ಚಯವಾಗಿದೆ ಎಂದು ಅವಳು ಪೋನು ಮಾಡಿ ಹೇಳಿ ಅತ್ತಿದ್ದಾಳೆ. ಅದನ್ನು ಕೇಳಿ ಅವಳ ಮದುವೆಗೆ ಒಂದು ವಾರವಿರುವಾಗ ಇವನು ಗಾಬರಿಯಿಂದ ಅವಳನ್ನು ತನ್ನ ಊರಿಗೆ ಕರೆದುಕೊಂಡು ಹೋಗಿ ಚಿಕ್ಕಪ್ಪನ ಬಳಿ ಹೇಳಿ ಮದುವೆಯ ಸಿದ್ದತೆ ಮಾಡಿಸಿದ್ದಾನೆ. 

ಆದರೆ ಇವರು ಅರ್ಧ ದಾರಿ ತಲುಪಿದಾಗ ಅವಳ ಅಣ್ಣಂದಿರಿಗೆ ವಿಷಯ ಗೊತ್ತಾಗಿ. ಇವರನ್ನು ಟ್ರಾಕ್ ಮಾಡಿ ಅವಳನ್ನು ವಾಪಸ್ ಕರೆದೊಯ್ದಿದ್ದಾರೆ. ಅದೇ ಬೇಜಾರಿನಲ್ಲಿ ಇವನು ಅವಳ ಜೊತೆ ಕಳೆದ ದಿನವನ್ನು ನೆನೆಯುತ್ತಾ. ಬೆಳಿಗ್ಗೆ ಎಷ್ಟು ಸುಖದಿಂದ ಆರಂಭ ಆಗಿತ್ತೊ ಅದಕ್ಕೂ ಹೆಚ್ಚಿನ ದುಃಖದಲ್ಲಿ ಮುಗಿತಿದೆ. ಎಂದು ಕೊರಗಿದ. ಅವಳ ಪೋಟೋ ತೋರಿಸಿದ ನನಗೊಂಚೂರು ಭಯ ಪೋಲಿಸ್ ಕೇಸ್ ಬೇರೆ ಆಗಿದೆ ಅಂತಿದ್ದ. 

ನಾನು..ನೀನು ಏನ್ ಕಲಿತಿದಿಯಾ ಅಂದಾಗ ಡಿಪ್ಲೊಮಾ ಅಂದ. ನಿನ್ನ ಕಾಲೇಜು ಪೀಸ್ ಯಾರು ಕಟ್ಟತಾರೆ ಅಂತ ಕೇಳ್ದೆ ಅಪ್ಪ ಅಂದ. ನೀನ್ ಅವಳನ್ನ ಹೇಗ್ ಸಾಕ್ತಿದ್ದೆ ಅಂತ ಕೇಳ್ದಾಗ. ಸುಮ್ನಾದ. ಎರಡ್ ನಿಮ್ಶದ್ ನಂತ್ರ. ನಾನ್ ಕಲ್ತು ಮುಗ್ಸತೀನಿ ನಂದೆ ದುಡ್ಡಲ್ಲಿ ನನ್ ಹೆಣ್ತಿ ಕೊರ್ಳಿಗ್ ತಾಳಿ ಮಾಡಿ ಹಾಕಿ ಸೆಲ್ಪಿ ಕಳಸ್ತೀನಿ ಪೇಸ್ಬುಕ್ ಇದ್ಯಾ ಅಂತ ಕೇಳ್ದ.? 

ನಾನ್ ಇಳಿಯೋ ಜಾಗ ಹತ್ರ ಬಂದಿತ್ತು. ಇಷ್ಟೊತ್ತಾದ್ರು ಒಬ್ರಿಗೊಬ್ರು ಹೆಸ್ರು ಕೇಳ್ಕೊಂಡಿರ್ಲಿಲ್ಲ. ಬಸ್ ಇಂದ ಇಳಿತಿದ್ದಾಗೆ. ಟಾಟಾ ಮತ್ತೆ ಸಿಗೋಣ ನನ್ನ ಹೆಸ್ರು ಬಸವರಾಜು. ಗದಗ ನಮ್ಮೂರು. ನಿಮ್ಮೆಸ್ರ ಏನ್ರೀ ಅಂತ ದೊಡ್ದಾಗಿ ಕೂಗ್ದ. ನಾನ್ ಹೇಳ್ದೆ ಸುಮಾ..ಅದಾಗ್ಲೆ ಬಸ್ ಹೊರ್ಟಿತ್ತು. ಅಳ್ತಿದ್ದ ಆಸಾಮಿ ಮುಖದಲ್ಲಿ ಒಂದ್ ನಗುವಿತ್ತು. 

ಸುಮಾ.ಕಂಚೀಪಾಲ್


Comments

  1. ಅವನು ಫೋಟೊ ಕಳಿಸೇ ಕಳಿಸ್ತಾನೆ, ಆಗ ಅವನು ಗೆದ್ದ ಕಥೆಯನ್ನೊಮ್ಮೆ ಕೇಳಿ.
    ಸಾಧ್ಯವಾದರೆ ಆಗ ಅದನ್ನೂ ಬರೆಯಿರಿ.

    ����ಅಕ್ಕಾ ����

    ReplyDelete
  2. ಬಸವರಾಜುವಿನ fb a/c ಸಿಕ್ತಾ..!?✌

    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...