Skip to main content

ರಾಧಾಳ ಮನದಳಲು

ಮದುವೆ ದಿನ ರಾತ್ರಿ ರಾಧಾ ಒಂದೇ ಸಮ ವದ್ರತಾ ಕೂತಿದ್ದು. ಇನ್ನು ಆ ಸೀರೆ, ಮೈಮೆಲಿದ್‌ ಬಂಗಾರ, ತಲೆ ಒಜ್ಜೆ ಅಪ್ಪಷ್ಟು ಸೂಡ್ಸಿದ್‌ ಹೂಗು ಎಲ್ಲ ಹಂಗಂಗೆ ಇದ್ದು. ಈ ಬದಿಗೆ ರಾಜೇಶ ತನ್‌ ಹೆಣ್ತಿನೇ ನೋಡ್ತಾ ಕುಂತಿದ್ದ. ಅವ ಎಷ್ಟ್‌ ಸಮಾಧಾನ ಮಾಡ ಹೇಳ್‌ ಅನ್ಕಂಡ್ರುವ ಅದ್ಕೆ ಸಮಾಧಾನನೆ ಅವ್ತಾ ಇಲ್ಲೆ. ಎಂತಕಂದ್ರೆ ಅದ್ರ ಅಪ್ನ ಮನೆ ಬದಿ ಜನ ಒಬ್ಬ ಅಂದ್ರೆ ಒಬ್ನು ಇಲ್ಲದಂಗೆ ಎಲ್ಲವ್ವೂ ಮದ್ವೆ ದಿನ ರಾತ್ರಿನೆ ದಿಬ್ಬಾಣ್‌ ಗಾಡಿಗೆ ವಾಪಸ್‌ ಮನೆಗ್‌ ನೆಡ್ದಿಕಿದೋ. ಹೋಗಕಾರ್‌ ಸುಮ್ಮಂಗೋದ್ವಾ ಇಲ್ಲೆ. ನಮ್ಮನೆಗ್‌ ಬಾ ಹಾ ಗಂಡ್ನ ತಕಂಡು ಹೇಳಿ ಹೇಳಿಕ್‌ ಹೋದೋ. ಎಲ್ಲರ ಆಯಾಮದಲ್ಲಿ ಅದು ಸರಿನೆಯ ಆದ್ರೆ ರಾಧಾ ಆ ಮಾತಿಗೆ ಕುಸಿದು ಹೋಯ್ದು ಬೆಳಿಗ್ಗೆವರಿಗೆ ಅದು ನಂದೆ ಮನೆ ಆಯ್ತು. ಈಗ ನೋಡಿರ್‌ ಎಲ್ಲವ್ವೂ ನನ್ನ ಅತಿಥಿಹಂಗೆ "ನಮ್ಮನ್ಗ್‌ ಬಾ ಹಾ" ಹೇಳ್ತಿದ್ದೊ ಹೇಳಿ ಅದ್ಕೆ ದುಃಖ ಆತು. ಅದನ್ನೇ ರಾಜೇಶ್ನತ್ರ ಹೇಳಿ ಅಳ್ತಾ ಇದ್ರೆ ಅತ್ಲಾಗೆ ಅವಂಗೆ ಅಳವ, ನಗವ ಗೊತ್ತಾವ್ತಾ ಇಲ್ಲೆ. ಯಾಕಂದ್ರೆ ಅದು ಅಷ್ಟೊಂದು ಗಂಭೀರವಾದ ವಿಷಯ ಹೇಳಿ ಅವಂಗೆ ಅನ್ಸಿದ್ದೇ ಇಲ್ಲೆ. ಇನ್ನು ಮದುವೆಯ ಗರ್ದಿ ಎಲ್ಲ ಮುಗತ್ತು ಹಂಗೆ ಮರ್‌ಬಾರಿನೂ ಮುಗ್ದು ಸಾಕಷ್ಟು ಸಲ ಅತ್ತು ಅಂತು ಇಂತು ಗಂಡನ ಮನೆ ಸೇರಿದ ರಾಧಾ ಒಂದೊಂದೇ ಸಂದರ್ಭವನ್ನ ಅವಲೋಕನ ಮಾಡ್ತಾ ಇದ್ದು. ಅದ್ರ ಮಾವ್ನೋರ್‌ ನೋಡಿರೆ ಮಾತೇ ಆಡ್ತರಿಲ್ಲೆ. ಇದು ಜಗ್ಲಿಗ್‌ ಬಂದು ಕುಂತು ಮಾತ್ರ ಮೊಬೈಲ್‌ ಹಿಡದ್ರೆ ಸಾಕು ಏನಾರು ಇಲ್ಲ ಸಲ್ಲದ ಕೆಲಸ ಹುಡುಕಿ ಹೇಳುದು. ಒಟ್ನಲ್ಲಿ ಸೊಸೆ ಬಂದು ಜಗ್ಲಿಗ್‌ ಕೂದ್ಕಂಬ್ಲೆ ಇಲ್ಲೆ. ಇನ್ನು ಊಟಕ್‌ ಕುಂತಾಗ ಸಣ್‌ ಲೋಟ ಅಥವಾ ದೊಡ್ಡ ಲೋಟ ಕುಟ್ಟುದು. ಬಾಯಲ್‌ ಹೇಳುದಿಲ್ಲೆ. ಸಣ್‌ ಲೋಟ ಕುಟ್ಟಿರೆ ನೀರು, ದೊಡ್‌ ಲೋಟ ಕುಟ್ಟಿರೆ ಮಜ್ಗೆ ಹೇಳಿ ಅದೇ ಅರ್ಥ ಮಾಡ್ಕಳ ಹೇಳುದು ಅವ್ರ ಮನಸ್ಥಿತಿ. ಗಂಡು ಅಂದ್ರೆ ಒಂಥರಾ ದರ್ಪ ಹೇಳಿ ಅದ್ಕೆ ಪದೇ ಪದೇ ಅನ್ಸವಂತ ಸಾಕಷ್ಟು ಘಟನೆ ಅಲ್‌ ನಡಿತಾ ಇದಿತ್ತು. ಅಪ್ನ ಮನೆಯಲ್ಲಿ ಮುದ್ದಿನ ಮಗಳಾಗಿ, ಮನೆ ಒಂದೇ ಅಲ್ಲ ಹೊರ್ಬದಿಗೂ ಹೋಯ್‌ ದುಡ್ಕಂಡು ಬದ್ಕಿದ್‌ ರಾಧಾ ಈಗ ಒನಮ್ನಿ ಹೇಳಲಾಗದ ಕಷ್ಟದಲ್‌ ಬಿದ್ಕಂಡಿದ್ದು. ಇನ್ನು ಹಬ್ಬ ಹರಿದಿನ ಬಿಡಿ ಆಗಂತು ಮೀಯಕಾತು, ಯಾವಾಗ್‌ ನೋಡಿರು ತಲೆಯಿಂದನೇ ಮೀಯೋ ನೀನು ಹೇಳುವ ಕಟ್ಟುಪಾಡು. ಅದ್ರಲ್ಲೂ ಅತಿಯಾದ ಮಡಿ.. ತೊಳ್ದಿಟ್ಟ ಸೀರೆ ಉಡುದು ಮಾಮೂಲಿ ಆದ್ರೆ ತೊಳದಿಟ್ಟ ಸೀರೆನಾ ಎಲ್ಲ ಒಣಗಿಸಿದ್ವೋ ಅಲ್ಲೇ ಹೋಗಿ ಉಟ್ಕಳೆ. ಅಲ್ಲಿವರಿಗೆ ಒದ್ದೇ ಬಟ್ಟೆಲೆ ಹೋಗೆ ಇಲದ್ರೆ ಅದು ಮೈಲ್ಗೆ ಅವ್ತು ಹೇಳು ಜನ. ಯಾವತ್ತೂ ಅಬ್ಬಿಕುಳಿಯಿಂದ ಅರೆ ನಗ್ನವಾಗಿ ಬರದ ರಾಧಾ ಇದರಲ್ಲೂ ಸೋತೋತು. ಇನ್ನು ರೂಮಿಂಗ್‌ ಹೋಯಿ ಸೀರೆ ಉಡ್ವ ಅಂತ ಹೋದ್ರೆ "ರೂಮು ಮೈಲ್ಗೆ ಅಲ್ಲಲ ಉಡಡ" ಎಂಬ ಮಾತು ಬೇರೆ. ಅಷ್ಟೇ ಅಲ್ಲ ಹೊಸ ಸೊಸೆ ಹೇಳಿ ಬಂದ್‌ ಬಂದವ್ವೆಲ್ಲ ಮಾತಾಡ್ಸವ್ವೆಯ. ರಾಧಾನು ಖುಷಿಯಿಂದ ಎಲ್ಲರತ್ರನು ಮಾತಾಡ್ತಾ ಇದಿತ್ತು. ರಾಧಂಗೆ ಎಂತ ಇಷ್ಟ ಎಂತ ಇಷ್ಟ ಇಲ್ಲೆ ಹೇಳಿ ಕೇಳವ್‌ ಯಾರೂ ಇಲ್ಲೆ. ರಾಜೇಶಂಗೆ ಇಷ್ಟವಾದ ಎಲ್ಲ ಪದಾರ್ಥನೂ ಮಾಡು ಹೇಳುದು, ರಾಜೇಶ್ನ ಚೊಲೊ ನೋಡ್ಕ ಹೇಳವ್ರ ಸಂಖ್ಯೆನೆ ಹೆಚ್ಚಾಯೋತು. ಆಗ ರಾಧಂಗೆ ಅನ್ಸಿದ್‌ ಒಂದೆ ನಾನು ಸಂಪ್ರದಾಯ ಶಾಸ್ತ್ರ ಹೇಳಿ ಮನೆಲೆ ಇರಕೈತ್ತು ಹೊರ್ಗಡೆಯಲ ಹೋಗಿ ಕಲ್ತು ಮಾಡಕೈತ್ತೇ ಇಲ್ಲೆ. ಎಷ್ಟೋ ದಿನ ಕಷ್ಟ ಆದ್ರು ಎದ್ದು ಮುಟ್ಟು ಮೈಲ್ಗೆ ನೋಡದ್ದೆಯ ಹೈಯರ್‌ ಎಜುಕೇಷನ್‌ ಮಾಡ್ದೆ ಹೇಳಲ ಜಾನ್ಸಲ್‌ತಾಗಿತ್ತು. ಅದಾದ ನಂತರ ಇನ್ನು ರಾಜೇಶಂಗೆ ಯಾರು ಎಂತದೂ ಹೇಳವ್ವೇ ಇಲ್ಲ. ಅವ ಉಣ್ಣಕಾರ್‌ ದರ್ಸತ್ನಿಲ್ಲೆ. ದಿನಾ ಜಪಾನು ಮಾಡ್ತನಿಲ್ಲೆ. ಸೊಸೆಗ್‌ ಮಾತ್ರ ಸಿಕ್ಕಾಪಟೆ ಶಾಸ್ತ್ರ ಹೇಳವ್ವು ಈಗೆಂತ ಮಾಡ್ತಾ ಇದ್ದೋ ಹೇಳುದೆ ರಾಧಾನ್‌ ಪ್ರಶ್ನೆ. ಇದ್ಕೆ ನಿಂಗ ಏನಾರು ಉತ್ರ ಕೊಡತ್ರಾ?

Comments

Popular posts from this blog

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...

ಹೂಗಳಿಂದ ತುಂಬಿದ ಬೆಂಗಳೂರು ಬೀದಿಗಳು

ಪ್ರತಿದಿನ ಬೆಳಗ್ಗೆ ರೆಡಿಯಾಗಿ ಆಫೀಸಿಗೆ ಹೊರಡುವಾಗ ತಡವಾಯ್ತು ಎಂಬ ಗಾಬರಿಯೊಟ್ಟಿಗೆ ಹೊರಡುವುದು. ಆದರೆ ಮನೆ ಬಿಟ್ಟು ರಸ್ತೆಗೆ ಕಾಲಿಟ್ಟ ತಕ್ಷಣ ಹಳದಿ ಹೂಗಳ ಹಾಸಿಗೆ ಕಂಡು ಮನ ಕುಣಿಯುತ್ತದೆ. ಸಿಕ್ಕ ಸಿಕ್ಕದ್ದನ್ನೆಲ್ಲಾ ಫೋಟೋ ತೆಗೆಯುತ್ತಾ ಇನ್ನಷ್ಟು ತಡವಾಗಿಬಿಡುತ್ತದೆ. ನನ್ನ ಪಾಲಿಗೆ ಆ ರಸ್ತೆ ಬರಿ ಡಾಂಬರು ರಸ್ತೆಯಲ್ಲ, ಅದು ಹೂವುಗಳ ಹಳದಿ ಹೊದಿಕೆ ಹೊದ್ದ ರಾಜಮಾರ್ಗ.  ಆ ಹಳದಿ ಹೂಗಳನ್ನು ಕಂಡ ತಕ್ಷಣ ನನ್ನ ಕೈ ತಾನಾಗಿಯೇ ಬ್ಯಾಗ್ ಒಳಗೆ ಹೋಗಿ ಮೊಬೈಲ್ ಹುಡುಕುತ್ತದೆ. ಮೊಬೈಲ್‌ನಲ್ಲಿ ಚಾರ್ಜ್ ಎಷ್ಟಿದೆ? ಸ್ಟೋರೇಜ್ ಫುಲ್ ಆಗಿದೆಯೇ? ಆಫೀಸಿಗೆ ತಡವಾಗುತ್ತಿದೆಯೇ? ಯಾವುದರ ಚಿಂತೆಯೂ ಇಲ್ಲ. ನನ್ನ ಗಡಿಬಿಡಿಯೇನಿದ್ದರೂ ಆ ಹೂವುಗಳನ್ನು ನನ್ನ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯುವುದರಲ್ಲೇ ಇರುತ್ತದೆ.   ಹಾಗೆ ನಾಲ್ಕು ಹೆಜ್ಜೆ ಮುಂದೆ ನಡೆದರೆ ಸಾಕು, ಅಲ್ಲಿ ಮತ್ತೊಂದು ವಿಸ್ಮಯ. ಹಳದಿ ಹೂಗಳ ನಡುವೆ ಅಲ್ಲಲ್ಲಿ ನೀಲಿ ಮಿಶ್ರಿತ ಬಿಳಿ ಮೊಗ್ಗಿನ ರೀತಿಯ ಹೂಗಳು ಕಣ್ಣು ಮಿಟುಕಿಸುತ್ತಾ ನನ್ನನ್ನು ಕರೆಯುತ್ತಿರುತ್ತವೆ. ಅವುಗಳ ಆ ಮುಗ್ಧ ನೋಟಕ್ಕೆ ಮನಸೋತು ಮತ್ತೆ ಅಲ್ಲಿ ಎರಡು ನಿಮಿಷ ನಿಲ್ಲಲೇಬೇಕು. ನಡೆಯುವುದು, ಹೂವು ನೋಡಿ ನಿಲ್ಲುವುದು, ಫೋಟೋ ತೆಗೆಯುವುದು—ಇದೇ ಆಯಿತು ನನ್ನ ನಿತ್ಯದ ಕಾಯಕ. ಆಫೀಸಿಗೆ ಮುಟ್ಟುವುದು ತಡವಾದರೂ ನನ್ನ ಮನಸ್ಸು ಮಾತ್ರ ಆ ಹೂವುಗಳ ಬಣ್ಣದಲ್ಲೇ ಮಿಂದೆದ್ದು ಫ್ರೆಶ...