ಮದುವೆ ದಿನ ರಾತ್ರಿ ರಾಧಾ ಒಂದೇ ಸಮ ವದ್ರತಾ ಕೂತಿದ್ದು. ಇನ್ನು ಆ ಸೀರೆ, ಮೈಮೆಲಿದ್ ಬಂಗಾರ, ತಲೆ ಒಜ್ಜೆ ಅಪ್ಪಷ್ಟು ಸೂಡ್ಸಿದ್ ಹೂಗು ಎಲ್ಲ ಹಂಗಂಗೆ ಇದ್ದು. ಈ ಬದಿಗೆ ರಾಜೇಶ ತನ್ ಹೆಣ್ತಿನೇ ನೋಡ್ತಾ ಕುಂತಿದ್ದ. ಅವ ಎಷ್ಟ್ ಸಮಾಧಾನ ಮಾಡ ಹೇಳ್ ಅನ್ಕಂಡ್ರುವ ಅದ್ಕೆ ಸಮಾಧಾನನೆ ಅವ್ತಾ ಇಲ್ಲೆ. ಎಂತಕಂದ್ರೆ ಅದ್ರ ಅಪ್ನ ಮನೆ ಬದಿ ಜನ ಒಬ್ಬ ಅಂದ್ರೆ ಒಬ್ನು ಇಲ್ಲದಂಗೆ ಎಲ್ಲವ್ವೂ ಮದ್ವೆ ದಿನ ರಾತ್ರಿನೆ ದಿಬ್ಬಾಣ್ ಗಾಡಿಗೆ ವಾಪಸ್ ಮನೆಗ್ ನೆಡ್ದಿಕಿದೋ. ಹೋಗಕಾರ್ ಸುಮ್ಮಂಗೋದ್ವಾ ಇಲ್ಲೆ. ನಮ್ಮನೆಗ್ ಬಾ ಹಾ ಗಂಡ್ನ ತಕಂಡು ಹೇಳಿ ಹೇಳಿಕ್ ಹೋದೋ. ಎಲ್ಲರ ಆಯಾಮದಲ್ಲಿ ಅದು ಸರಿನೆಯ ಆದ್ರೆ ರಾಧಾ ಆ ಮಾತಿಗೆ ಕುಸಿದು ಹೋಯ್ದು ಬೆಳಿಗ್ಗೆವರಿಗೆ ಅದು ನಂದೆ ಮನೆ ಆಯ್ತು. ಈಗ ನೋಡಿರ್ ಎಲ್ಲವ್ವೂ ನನ್ನ ಅತಿಥಿಹಂಗೆ "ನಮ್ಮನ್ಗ್ ಬಾ ಹಾ" ಹೇಳ್ತಿದ್ದೊ ಹೇಳಿ ಅದ್ಕೆ ದುಃಖ ಆತು. ಅದನ್ನೇ ರಾಜೇಶ್ನತ್ರ ಹೇಳಿ ಅಳ್ತಾ ಇದ್ರೆ ಅತ್ಲಾಗೆ ಅವಂಗೆ ಅಳವ, ನಗವ ಗೊತ್ತಾವ್ತಾ ಇಲ್ಲೆ. ಯಾಕಂದ್ರೆ ಅದು ಅಷ್ಟೊಂದು ಗಂಭೀರವಾದ ವಿಷಯ ಹೇಳಿ ಅವಂಗೆ ಅನ್ಸಿದ್ದೇ ಇಲ್ಲೆ. ಇನ್ನು ಮದುವೆಯ ಗರ್ದಿ ಎಲ್ಲ ಮುಗತ್ತು ಹಂಗೆ ಮರ್‌ಬಾರಿನೂ ಮುಗ್ದು ಸಾಕಷ್ಟು ಸಲ ಅತ್ತು ಅಂತು ಇಂತು ಗಂಡನ ಮನೆ ಸೇರಿದ ರಾಧಾ ಒಂದೊಂದೇ ಸಂದರ್ಭವನ್ನ ಅವಲೋಕನ ಮಾಡ್ತಾ ಇದ್ದು. ಅದ್ರ ಮಾವ್ನೋರ್ ನೋಡಿರೆ ಮಾತೇ ಆಡ್ತರಿಲ್ಲೆ. ಇದು ಜಗ್ಲಿಗ್ ಬಂದು ಕುಂತು ಮಾತ್ರ ಮೊಬೈಲ್ ಹಿ...