Skip to main content

ಆಟಿ

ಆಟಿ

ತುಳುನಾಡಿನ ಸಂಸ್ಕೃತಿಯ ಪರಿಚಯ ಮಾಡಿಸುವುದಕ್ಕಾಗಿ ಮತ್ತು ಹಬ್ಬದ ಆಚರಣೆ ಖುಷಿಯನ್ನು, ಊಟದ ರುಚಿಯನ್ನೂ ಅರಿಯುವುದಕ್ಕಾಗಿ ಈ ಆಟಿ  ಹಬ್ಬವನ್ನು
ಎಸ್.ಡಿ. ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿತ್ತು.

ಹುಡುಗ ಹುಡುಗಿಯರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು,
ಹೆಣ್ಣು ಮಕ್ಕಳೆಲ್ಲ ಸೀರೆ, ಹುಡುಗರು ಪಂಚೆ ಉಟ್ಟು ರತ್ನಮಾನಸ ಎಂಬ ವಸತಿನಿಲಯದಲ್ಲಿ ಹಾಜರಿದ್ದರು.‌ ಕಣ್ಣಿಗಂತು ಹಬ್ಬ ಚಂದ ಚಂದದ ಬಣ್ಣ, ಬಣ್ಣದ ಲೋಕ ಅಲ್ಲಿ ಸೃಷ್ಟಿಯಾಗಿತ್ತು.
ತೀರಾ ಸಾಂಪ್ರದಾಯಿಕ ಎನಿಸುವ ಹಳೆಯ ಕಾಲದ ಕಟ್ಟಡ, ಅಲ್ಲಿದ್ದ ಮರದ ವಸ್ತುಗಳು, ಹೊರಜಗುಲಿ, ಪಾಠಶಾಲೆ, ಒಳಾಂಗಣ ವಿನ್ಯಾಸ ಎಲ್ಲವೂ ಗುತ್ತು ಮನೆಯ ಶೈಲಿಯಲ್ಲಿತ್ತು. ನನಗೆ ಇದು ಹೊಸತರ ಎನಿಸಿತ್ತು.

 ರತ್ನಮಾನಸ ಬಾಳೆಲೆ ಊಟ

ಮನೆಯ ಮೆತ್ತು ಹತ್ತಿದಂತೆ ಮೇಲ್ಗಡೆ ಮೆಟ್ಟಿಲೇರಿ ಹೋದಾಗ ಅಲ್ಲಿ ಪುಟ್ಟದೊಂದು ವೇದಿಕೆ ಸಿದ್ಧವಾಗಿತ್ತು. ಅಲ್ಲಿ ಕಹಿ ಔಷದಿಯ ಹಾಲೆ ಮರದ ಚಕ್ಕೆಯ ಕಷಾಯ ಮಾಡುವ ವಿಧಾನದ ಬಗ್ಗೆ ಮತ್ತು ಈ ಆಟಿ ಮಾಸದಲ್ಲಿ ಹೊಸ ಪೈರು ಇಲ್ಲದೆ ಹಳೆ ಪೈರುಗಳು ಸಹ ಖಾಲಿಯಾಗಿ ಮನೆಯವರು ಮಳೆಗಾಲದಲ್ಲಿ ಕಂಗಾಲಾಗುವ ದಿನದ ಕಥನವಿತ್ತು.ಅದರಲ್ಲಿ ಕುತೂಹಲಕಾರಿಯಾದ ವಿಷಯವೆಂದರೆ  ಮನೆಯ ಗಂಡಸರೊಬ್ಬರು ಮರದ ಹತ್ತಿರ ಹಿಂದಿನ ದಿನ ಹೋಗಿ ನಾಳೆ ಬರುತ್ತೇನೆ ನಿನ್ನಲ್ಲಿಯ ಔಷದೀಯ ಗುಣಗಳು ಹೆಚ್ಚಿರಲಿ ಎಂದು ಬೇಡಿಕೆ ಸಲ್ಲಿಸಿ ಬರುವುದು. ಬಂದು ಮರುದಿನ ಬೆತ್ತಲಾಗಿ ಹೋಗಿ ಯಾವುದೇ ಲೋಹದ ತುಂಡನ್ನೂ ಬಳಸದೇ ಚಕ್ಕೆ ಕಿತ್ತು ತರುವ ವಿಚಾರ. ಇಂದಿನ ದಿನಗಳಲ್ಲಿ ಯಾರಾದರು ಹೀಗೆ ಮಾಡಿದರೆ ಹುಚ್ಚರೆಂದಾರು ಎಂದು ನನಗೆ ಅನಿಸಿತ್ತು.
ಹೊರಾಂಗಣ ನೋಟ

ನಂತರ ಈ ಪದ್ದತಿಯ ಹಿಂದೆ ಕಾರಣ ಏನಿರಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ತವಕ ಆರಂಭವಾಯ್ತು. ( ಆದರೆ ಇನ್ನೂ ಉತ್ತರ ಸಿಕ್ಕಿಲ್ಲ)

ಇಷ್ಟೆಲ್ಲ ಆದ ಮೇಲೆ ಹಾಡು ನೃತ್ಯ ನಾಟಕ ಇತ್ಯಾದಿ.

 ಅದಾದಮೇಲೆ ಭರ್ಜರಿ ಭೋಜನ ಎಲೆಯ ತುಂಬ ಎಡೆ ಶೃಂಗಾರ ಅನ್ನಕ್ಕಲ್ಲಿ ಜಾಗವೇ ಇಲ್ಲ‌. ಕೆಸುವಿನ ಸೊಪ್ಪು,
 ಹಲಸಿನಕಾಯಿ ಇದೆರಡನ್ನೇ ಉಪಯೋಗಿಸಿ ಹಲವು ರೀತಿಯ ಖಾದ್ಯಗಳನ್ನು ತಯಾರಿಸಿದ್ದರು. 
ಎಡೆ ಶೃಂಗಾರ

ಒಂದಕ್ಕಿಂತ ಒಂದು ವಿಭಿನ್ನ. ಹಾಸ್ಟೆಲ್ ಗೆ ಬಂದಮೇಲೆ ನೆಲಕ್ಕೆ ಕೂತು ಊಟಮಾಡದೆ ತಿಂಗಳೇ ಕಳೆದಿತ್ತು ಈ ಹೆಸರಿನಲ್ಲಿ ನೆಲಕ್ಕೆ ಕೂತು ಉಣ್ಣುವ ಭಾಗ್ಯ ದೊರಕಿತ್ತು. ಊಟಮಾಡುವಾಗ ಗೌಜಿ, ಹರಟೆ, ಬಿಡಿಯ


ಊಟ ಮುಗಿದ ಮೇಲೆ ಒಂದು ಅಲ್ಪವಿರಾಮ‌. ಆಗ ಆಟಿ ಗಮ್ಮತ್ತು ನೆನಪಿನ ಹಾಳೆಯಲ್ಲಿ ಮುದ್ರೆಯೊತ್ತಲು ಬೇಕಾದ ಚಂದ ಚಂದದ ಪಟಗಳು. ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದದ್ದೆ ಹಿಡಿದದ್ದು ಒಬ್ಬರದ್ದೆ ಹತ್ತಾರು ಪೋಟೋ ಒತ್ತಿದ್ದೇ ಒತ್ತಿದ್ದು. ಕರಿ ಕೂಲಿಂಗ್ ಗ್ಲಾಸ್, ಬಿಳಿ ಅಂಗಿ, ಹಳೇಸೀರೆ, ಹೊಸ ಹುಡ್ಗಿ, ಹ್ಯಾಂಡ್ಸಂ ಹುಡುಗ, ಚೂರು ನಡುಕಾಣಲೇ ಬೇಕೆಂದು ಸರಿಸಿಕೊಳ್ಳುವ ನೆರಿಗೆಗಳು, ಅಯ್ಯೊ ಪಂಚೆ ಹಾರ್ತಿದೆ ಅಂತ ನಾಚುವ ಹೊಸಕಾಲದ ಹುಡುಗರು. ಅಂತೂ ಮಜವಿತ್ತು.



ಅದಾದ ನಂತರ ಸೀರೆ ಪಂಚೆಯ ಬದಿಗಿಟ್ಟು ಪ್ಯಾಂಟ್ ಶರ್ಟತೊಟ್ಟು ಕೆಸರುಗದ್ದೆಗಿಳಿದು ಹಗ್ಗ ಜಗ್ಗಾಟ, ನಮ್ಮನಮ್ಮಲ್ಲೇ ಭಲ ಪ್ರದರ್ಶನ, ಕೆಸರುಗದ್ದೆ ಓಟ, ಹಾಡಿಗೆ ನೃತ್ಯ. ನಾನು ಸುಮಾರು ಹೊತ್ತು ಗದ್ದೆಗಿಳಿಯದೆ ದಡದಲ್ಲೆ ನಿಂತೆ ಆದರೆ ಕೊನೆಗೊಂದು ಸಂಚಿನಲ್ಲಿ ನನನ್ನು ಕೆಸರಿಗೆ ನೂಕಲಾಯ್ತು‌. ಜೊತೆಗಿದ್ದ ನನ್ನ ಗೆಳತಿಯನ್ನು. 
ನನ್ನಷ್ಟೇ ತೆಳ್ಳಗಿನ ಹುಡುಗಿಯೊಬ್ಬಳನ್ನು ಎರಡೇ ಕೈಯಲ್ಲಿ ಎತ್ತಿ ಕೆಸರಿನಲ್ಲಿ ಪದೆ ಪದೆ ಮುಳುಗಿಸಿ ಗೋಳು ಕೊಡುತ್ತಿದ್ದ ಜನರನ್ನು ನೋಡಿ ಭಯವಾಗಿ ನಾನು ಇಳಿದಿರಲಿಲ್ಲ.
ಕೊನೆಗೂ ಮೈ ಕೆಸರಾಯ್ತು ಆಗ ಬೇರೆತರದ ಖುಷಿ ಪ್ರಾಪ್ತವಾಯ್ತು.
ಮರುದಿನದ ಕಥೆ ಬೇರೆ ಇದೆ
ಸ್ನಾನದ ಪಜೀತಿ
ಕಾಲು ನೋವು
ಗೀರು ಗಾಯ
ನಿದ್ದೆಗಣ್ಣು
ತ್ರಾಣ ಕಳೆದ ದೇಹ
ತರಗತಿ
ಕಣ್ಣು, ಕಿವಿಯೊಳಗಿನ ಮಣ್ಣು
ಅಬ್ಬಬ್ಬಾ!

ಮತ್ತೆ ಹೇಳ್ತೇನೆ ಈ ಕುರಿತು.

ಸುಮಾ.ಕಂಚೀಪಾಲ್

Comments

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...