Skip to main content

ಆಟಿ

ಆಟಿ

ತುಳುನಾಡಿನ ಸಂಸ್ಕೃತಿಯ ಪರಿಚಯ ಮಾಡಿಸುವುದಕ್ಕಾಗಿ ಮತ್ತು ಹಬ್ಬದ ಆಚರಣೆ ಖುಷಿಯನ್ನು, ಊಟದ ರುಚಿಯನ್ನೂ ಅರಿಯುವುದಕ್ಕಾಗಿ ಈ ಆಟಿ  ಹಬ್ಬವನ್ನು
ಎಸ್.ಡಿ. ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿತ್ತು.

ಹುಡುಗ ಹುಡುಗಿಯರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು,
ಹೆಣ್ಣು ಮಕ್ಕಳೆಲ್ಲ ಸೀರೆ, ಹುಡುಗರು ಪಂಚೆ ಉಟ್ಟು ರತ್ನಮಾನಸ ಎಂಬ ವಸತಿನಿಲಯದಲ್ಲಿ ಹಾಜರಿದ್ದರು.‌ ಕಣ್ಣಿಗಂತು ಹಬ್ಬ ಚಂದ ಚಂದದ ಬಣ್ಣ, ಬಣ್ಣದ ಲೋಕ ಅಲ್ಲಿ ಸೃಷ್ಟಿಯಾಗಿತ್ತು.
ತೀರಾ ಸಾಂಪ್ರದಾಯಿಕ ಎನಿಸುವ ಹಳೆಯ ಕಾಲದ ಕಟ್ಟಡ, ಅಲ್ಲಿದ್ದ ಮರದ ವಸ್ತುಗಳು, ಹೊರಜಗುಲಿ, ಪಾಠಶಾಲೆ, ಒಳಾಂಗಣ ವಿನ್ಯಾಸ ಎಲ್ಲವೂ ಗುತ್ತು ಮನೆಯ ಶೈಲಿಯಲ್ಲಿತ್ತು. ನನಗೆ ಇದು ಹೊಸತರ ಎನಿಸಿತ್ತು.

 ರತ್ನಮಾನಸ ಬಾಳೆಲೆ ಊಟ

ಮನೆಯ ಮೆತ್ತು ಹತ್ತಿದಂತೆ ಮೇಲ್ಗಡೆ ಮೆಟ್ಟಿಲೇರಿ ಹೋದಾಗ ಅಲ್ಲಿ ಪುಟ್ಟದೊಂದು ವೇದಿಕೆ ಸಿದ್ಧವಾಗಿತ್ತು. ಅಲ್ಲಿ ಕಹಿ ಔಷದಿಯ ಹಾಲೆ ಮರದ ಚಕ್ಕೆಯ ಕಷಾಯ ಮಾಡುವ ವಿಧಾನದ ಬಗ್ಗೆ ಮತ್ತು ಈ ಆಟಿ ಮಾಸದಲ್ಲಿ ಹೊಸ ಪೈರು ಇಲ್ಲದೆ ಹಳೆ ಪೈರುಗಳು ಸಹ ಖಾಲಿಯಾಗಿ ಮನೆಯವರು ಮಳೆಗಾಲದಲ್ಲಿ ಕಂಗಾಲಾಗುವ ದಿನದ ಕಥನವಿತ್ತು.ಅದರಲ್ಲಿ ಕುತೂಹಲಕಾರಿಯಾದ ವಿಷಯವೆಂದರೆ  ಮನೆಯ ಗಂಡಸರೊಬ್ಬರು ಮರದ ಹತ್ತಿರ ಹಿಂದಿನ ದಿನ ಹೋಗಿ ನಾಳೆ ಬರುತ್ತೇನೆ ನಿನ್ನಲ್ಲಿಯ ಔಷದೀಯ ಗುಣಗಳು ಹೆಚ್ಚಿರಲಿ ಎಂದು ಬೇಡಿಕೆ ಸಲ್ಲಿಸಿ ಬರುವುದು. ಬಂದು ಮರುದಿನ ಬೆತ್ತಲಾಗಿ ಹೋಗಿ ಯಾವುದೇ ಲೋಹದ ತುಂಡನ್ನೂ ಬಳಸದೇ ಚಕ್ಕೆ ಕಿತ್ತು ತರುವ ವಿಚಾರ. ಇಂದಿನ ದಿನಗಳಲ್ಲಿ ಯಾರಾದರು ಹೀಗೆ ಮಾಡಿದರೆ ಹುಚ್ಚರೆಂದಾರು ಎಂದು ನನಗೆ ಅನಿಸಿತ್ತು.
ಹೊರಾಂಗಣ ನೋಟ

ನಂತರ ಈ ಪದ್ದತಿಯ ಹಿಂದೆ ಕಾರಣ ಏನಿರಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ತವಕ ಆರಂಭವಾಯ್ತು. ( ಆದರೆ ಇನ್ನೂ ಉತ್ತರ ಸಿಕ್ಕಿಲ್ಲ)

ಇಷ್ಟೆಲ್ಲ ಆದ ಮೇಲೆ ಹಾಡು ನೃತ್ಯ ನಾಟಕ ಇತ್ಯಾದಿ.

 ಅದಾದಮೇಲೆ ಭರ್ಜರಿ ಭೋಜನ ಎಲೆಯ ತುಂಬ ಎಡೆ ಶೃಂಗಾರ ಅನ್ನಕ್ಕಲ್ಲಿ ಜಾಗವೇ ಇಲ್ಲ‌. ಕೆಸುವಿನ ಸೊಪ್ಪು,
 ಹಲಸಿನಕಾಯಿ ಇದೆರಡನ್ನೇ ಉಪಯೋಗಿಸಿ ಹಲವು ರೀತಿಯ ಖಾದ್ಯಗಳನ್ನು ತಯಾರಿಸಿದ್ದರು. 
ಎಡೆ ಶೃಂಗಾರ

ಒಂದಕ್ಕಿಂತ ಒಂದು ವಿಭಿನ್ನ. ಹಾಸ್ಟೆಲ್ ಗೆ ಬಂದಮೇಲೆ ನೆಲಕ್ಕೆ ಕೂತು ಊಟಮಾಡದೆ ತಿಂಗಳೇ ಕಳೆದಿತ್ತು ಈ ಹೆಸರಿನಲ್ಲಿ ನೆಲಕ್ಕೆ ಕೂತು ಉಣ್ಣುವ ಭಾಗ್ಯ ದೊರಕಿತ್ತು. ಊಟಮಾಡುವಾಗ ಗೌಜಿ, ಹರಟೆ, ಬಿಡಿಯ


ಊಟ ಮುಗಿದ ಮೇಲೆ ಒಂದು ಅಲ್ಪವಿರಾಮ‌. ಆಗ ಆಟಿ ಗಮ್ಮತ್ತು ನೆನಪಿನ ಹಾಳೆಯಲ್ಲಿ ಮುದ್ರೆಯೊತ್ತಲು ಬೇಕಾದ ಚಂದ ಚಂದದ ಪಟಗಳು. ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದದ್ದೆ ಹಿಡಿದದ್ದು ಒಬ್ಬರದ್ದೆ ಹತ್ತಾರು ಪೋಟೋ ಒತ್ತಿದ್ದೇ ಒತ್ತಿದ್ದು. ಕರಿ ಕೂಲಿಂಗ್ ಗ್ಲಾಸ್, ಬಿಳಿ ಅಂಗಿ, ಹಳೇಸೀರೆ, ಹೊಸ ಹುಡ್ಗಿ, ಹ್ಯಾಂಡ್ಸಂ ಹುಡುಗ, ಚೂರು ನಡುಕಾಣಲೇ ಬೇಕೆಂದು ಸರಿಸಿಕೊಳ್ಳುವ ನೆರಿಗೆಗಳು, ಅಯ್ಯೊ ಪಂಚೆ ಹಾರ್ತಿದೆ ಅಂತ ನಾಚುವ ಹೊಸಕಾಲದ ಹುಡುಗರು. ಅಂತೂ ಮಜವಿತ್ತು.



ಅದಾದ ನಂತರ ಸೀರೆ ಪಂಚೆಯ ಬದಿಗಿಟ್ಟು ಪ್ಯಾಂಟ್ ಶರ್ಟತೊಟ್ಟು ಕೆಸರುಗದ್ದೆಗಿಳಿದು ಹಗ್ಗ ಜಗ್ಗಾಟ, ನಮ್ಮನಮ್ಮಲ್ಲೇ ಭಲ ಪ್ರದರ್ಶನ, ಕೆಸರುಗದ್ದೆ ಓಟ, ಹಾಡಿಗೆ ನೃತ್ಯ. ನಾನು ಸುಮಾರು ಹೊತ್ತು ಗದ್ದೆಗಿಳಿಯದೆ ದಡದಲ್ಲೆ ನಿಂತೆ ಆದರೆ ಕೊನೆಗೊಂದು ಸಂಚಿನಲ್ಲಿ ನನನ್ನು ಕೆಸರಿಗೆ ನೂಕಲಾಯ್ತು‌. ಜೊತೆಗಿದ್ದ ನನ್ನ ಗೆಳತಿಯನ್ನು. 
ನನ್ನಷ್ಟೇ ತೆಳ್ಳಗಿನ ಹುಡುಗಿಯೊಬ್ಬಳನ್ನು ಎರಡೇ ಕೈಯಲ್ಲಿ ಎತ್ತಿ ಕೆಸರಿನಲ್ಲಿ ಪದೆ ಪದೆ ಮುಳುಗಿಸಿ ಗೋಳು ಕೊಡುತ್ತಿದ್ದ ಜನರನ್ನು ನೋಡಿ ಭಯವಾಗಿ ನಾನು ಇಳಿದಿರಲಿಲ್ಲ.
ಕೊನೆಗೂ ಮೈ ಕೆಸರಾಯ್ತು ಆಗ ಬೇರೆತರದ ಖುಷಿ ಪ್ರಾಪ್ತವಾಯ್ತು.
ಮರುದಿನದ ಕಥೆ ಬೇರೆ ಇದೆ
ಸ್ನಾನದ ಪಜೀತಿ
ಕಾಲು ನೋವು
ಗೀರು ಗಾಯ
ನಿದ್ದೆಗಣ್ಣು
ತ್ರಾಣ ಕಳೆದ ದೇಹ
ತರಗತಿ
ಕಣ್ಣು, ಕಿವಿಯೊಳಗಿನ ಮಣ್ಣು
ಅಬ್ಬಬ್ಬಾ!

ಮತ್ತೆ ಹೇಳ್ತೇನೆ ಈ ಕುರಿತು.

ಸುಮಾ.ಕಂಚೀಪಾಲ್

Comments

Post a Comment

Popular posts from this blog

ನಮ್ಮ ಕೇರಿ

ಊರು ಕೇರಿಯವರು ಅಡಿಕೆ ಕೊಯ್ಲು ಬಂದರೆ ತುಂಬಾ ಬ್ಯೂಸಿ ಆಗಿ ಬಿಡುತ್ತಾರೆ. ಹೀಗೇ ಉಳಿದ ದಿನಗಳಲ್ಲಿ ಬಿಡುವಿದೆ ಎಂಬ ಅರ್ಥ ಈ ಮಾತಿನದ್ದಲ್ಲ. ಅವರು ಯಾವಾಗಲೂ ಪುರುಸೊತ್ತಿಲ್ಲದ ಜೇನಿನಂತೆ ಕೆಲಸ ಮಾಡುವ ಜನ. ಚಳಿ ಆರಂಭ ಆಗ್ತಾ ಇದ್ಹಾಗೆ ಅಡಿಕೆ ಕೊಯ್ಲು ಶುರುವಾಗಿ ಬಿಡುತ್ತೆ. ಆಗ ಹೆಂಗಸರಿಗೂ, ಗಂಡಸರಿಗೂ ಬಿಡುವಿಲ್ಲದ ಕೆಲಸ.  ನಮ್ಮಲ್ಲಿ ಗಂಡು ಮೇಲೋ ಹೆಣ್ಣು ಮೇಲೋ ಎಂಬ ಮಾತೇ ಬರೋದಿಲ್ಲ. ಎಲ್ಲ ಕೆಲಸಗಳನ್ನು ಎಲ್ಲರೂ ಸಮನಾಗಿ ಮಾಡುತ್ತಾರೆ. ಅಡಿಕೆ ಕುಯ್ಯುವ ಆ ದಿನವನ್ನು ಗಂಡಸರು ನಿಭಾಯಿಸಿದರೆ, ಆಳುಗಳಿಗೆ ಮಜ್ಜಿಗೆ ಬೆಲ್ಲವನ್ನೋ, ಚಹಾವನ್ನು ಮಾಡಿ, ತೆರಿ ಅಡಿಕೆ ಹೆಕ್ಕಿ ಅದೂ ಇದೂ ಅಂತ ಲೆಕ್ಕಕ್ಕೇ ಸಿಗದ ನೂರು ಕೆಲಸವನ್ನು ಹೆಂಗಸರೇ ಮಾಡುತ್ತಾರೆ. ಅಷ್ಟೇ ಯಾಕೆ ಅಡಿಕೆ ಹೋರಲು ಜನ ಸಿಗಲಿಲ್ಲ ಎಂದರೆ ಇವರು ಅದಕ್ಕೂ ಸೈ.  ಇನ್ನು ಸಂಜೆಯಾಗುತ್ತಿದ್ದಂತೆ ಊಟಕ್ಕೆ ತಯಾರಿ ಆಗೇ ಬಿಡಬೇಕು. ಯಾಕೆಂದರೆ ಮುರಿಯಾಳಿನ ಪ್ರಕಾರ ಒಬ್ಬರ ಮನೆ ಅಡಿಕೆಯನ್ನು ಇನ್ನೊಬ್ಬರು ಸುಲಿಯಬೇಕಲ್ಲ. ಅದೇ ಹಿಂದಿನಿಂದಲೂ ಬಂದ ಪದ್ದತಿ. ಹಾಗೆನ್ನುವುದಕ್ಕಿಂತ ನಮ್ಮ ಕೇರಿಯ ಒಗ್ಗಟ್ಟು ಎನ್ನಬಹುದು. ಏನೇ ಕಾರ್ಯಕ್ರಮ ಇರಲಿ ಅಥವಾ ಹತ್ತು ಜನ ಕೂಡುವ ಶುಭಕಾರ್ಯ ಇರಲಿ ಚಪ್ಪರ ಹಾಕುವುದರಿಂದ ಬಾಳೆಲೆಕೊಯ್ದು, ಬಂದವರಿಗೆ ಬಡಿಸುವವರೆಗೂ ಕೇರಿಯವರೇ ನೋಡಿಕೊಳ್ಳುತ್ತಾರೆ.  ಕೇರಿಯ ಪ್ರೀತಿಯ ಚಿಕ್ಕಪ್ಪ, ಚಿಕ್ಕಮ್ಮಂದಿರು ಎಲ್ಲಾ ಮಕ್ಕಳಿ

ಮೆಜೆಸ್ಟಿಕ್

ನಾನು ಇವನು ಹೈದರಾಬಾದ್‌ಗೆ ಹೋಗೋದು ಅಂತ ನಿರ್ಧಾರ ಮಾಡಿ ಮನೆಯಲ್ಲೇ ಊಟ ಮುಗಿಸಿ ಹೊರಟೆವು. ಕುವೆಂಪು ಮೆಟ್ರೋ ಸ್ಟೇಷನ್‌ನಿಂದ ಸೀದಾ ಬಂದು ಇಳಿದದ್ದು ಮೆಜೆಸ್ಟಿಕ್‌ಗೆ. ನಾನು ಸ್ವಲ್ಪ ಕತ್ತಲಾಗಿ ಬೀದಿ ದೀಪಗಳು ಉರಿಯಲು ಶುರುವಾದರೆ ಸಾಕು ಹೆದರಿ ಸಾಯುತ್ತೇನೆ. ನನ್ನನ್ನು ಸಮಾಧಾನ ಮಾಡಿ ಬ್ಯಾಗಿನ ಜೊತೆ ಕೈ ಹಿಡಿದು ಬೇರೆ ಊರು ತಲುಪುವುದು ಎಂದರೆ ಇವನಿಗೆಷ್ಟು ಕಷ್ಟ ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಆದರೂ ನಮಗೇನಾದ್ರೂ ಆದ್ರೆ? ಕಳ್ಳ ಬಂದ್ರೆ? ನಾನು ಕಳೆದೇ ಹೋದ್ರೆ ಎಂದು ಏನೇನೋ ಮಳ್ಳು ಹಲುಬುತ್ತ ಸಾಗುತ್ತೇನೆ. ಇವನಿಗೆ ಇರುವಷ್ಟು ಸಹನೆ ಯಾರಿಗೂ ಇಲ್ಲ, ಅದಂತೂ ನಿಜ ಎಂದು ನನಗೆ ನಾನೇ ಹಲುಬಿಕೊಂಡು ಅವನ ಹಿಂದೆ ಸಾಗುತ್ತೇನೆ.  ಚಿತ್ರ: ಮೆಜೆಸ್ಟಿಕ್ ಪ್ಲಾಟ್‌ಫಾ ರ್ಮ್ ನಂಬರ್ 16 ಕೆಂಪು, ಬಿಳಿ, ನೀಲಿ ಬಸ್ಸುಗಳ ಸಾಲು. ಏ ಇಲ್ ನೋಡೇ, ಹಿಂದಿನ ಸಲ ನಾವು ಬಸ್ ಹತ್ತಿದ್ದು ಇಲ್ಲೆಯ ನೆನಪಿದ್ದಾ ನಿನಗೆ? ಎಂದು ಉಮೇದಿಯಿಂದ ಇವ ಒಂಚೂರು ನನ್ನ ಕೈ ಬಿಟ್ಟು ಮುಂದೆ ಸಾಗಿದರೆ ನಾನು ನಿಂತಲ್ಲೇ ಬಾಕಿ. ಯಾಕೆಂದು ನನಗೂ ಗೊತ್ತಿಲ್ಲ. ಆಮೇಲೆ ನನ್ನಿಂದ ಉತ್ತರ ಬರದೇ ಇದ್ದಾಗ ಅವ ಮತ್ತೆ ತಲೆಮೇಲೆ ಕೈ ಹೊತ್ತು ನಾನಿದ್ದಲ್ಲಿ ಬರುತ್ತಾನೆ.  ಅವನಿಗೆ ಎಲ್ಲ ಜನರನ್ನು, ಎಲ್ಲ ಊರುಗಳ ಹೆಸರನ್ನು ಹಾಗೇ ಕೆ. ಆರ್ ಮಾರ್ಕೇಟಿಗೆ ಹೋಗಲು ಬಂದಿಳಿದ ಫ್ರೆಷ್ ಪುದಿನಾ ಎಲೆಗಳ ಗಂಟನ್ನೂ; ಎಲ್ಲವನ್ನೂ ಮಾತಾಡಿಸಬೇಕು. ನನಗೆ ಜನರನ್ನು ಕಂಡೇ ಭಯ

ಎಲ್ಲರಲ್ಲೂ ಒಬ್ಬ ಕಳ್ಳ ಇದ್ದಾನೆ

ಎಲ್ಲರೊಳಗೂ ಒಬ್ಬ ಕಳ್ಳ ಇದ್ದಾನೆ ಒಂದು ಸಿನೆಮಾ ನೋಡುತ್ತೇವೆ ಎಂದಾದರೆ ಅದರ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡೇ ಹೋಗುತ್ತೇವೆ. ಅದು ಇದು ಮಾತಾಡಿಕೊಂಡು ನಾವೇ ಒಂದು ನಿರ್ಧಾರ ಮಾಡಿಕೊಂಡು ಹಾ, ಈ ಸಿನಿಮಾ ಹೀಗಿರಬಹುದು ಎಂದು ಊಹಿಸಿಕೊಳ್ಳುತ್ತೇವೆ. ಆ ಪೂರ್ವಾಗ್ರಹವನ್ನು ಬದಲಿಸಿಬಿಡುವಂತಹ ಒಂದು ಸಿನಿಮಾಕ್ಕೆ ಇನ್ನೊಂದು ಹೆಸರೇ 'ಕೋಟಿ'. ಕೆಲವರು ಡಾಲಿ ಧನಂಜಯ್, ಇನ್ನು ಕೆಲವರು ಪರಂ  ಹೆಸರು ಕೇಳಿಯೇ ಈ ಸಿನಿಮಾ ನೋಡಲು‌ ನಿಶ್ಚಯಿಸಲು ನಿರ್ಧರಿಸಿರಬಹುದು. ಹಾಗೆ ಹೋಗುವುದು ಕೂಡ ಒಂದು ಮಟ್ಟಿಗೆ ಸರಿಯೇ. ನಾನಂತೂ ಕೋಟಿ ಸಿನಿಮಾವನ್ನು ಥಿಯೇಟರ್‌‌ನಲ್ಲೇ ನೋಡಲು ನಮ್ಮೂರಿನವರೇ ಆದ ಪರಮೇಶ್ವರ್​ ಗುಂಡ್ಕಲ್ ನಿರ್ದೇಶನವೇ ಕಾರಣ ಅನ್ನೋದು ಮುಚ್ಚುಮರೆ ಇಲ್ಲದ ಸತ್ಯ. ಈಗಂತೂ ಹಲವರು "ಬಿಡು, ಓಟಿಟಿಗೆ ಬಂದ ಮೇಲೆ ನೋಡಿದರಾಯ್ತು" ಎಂದು ಸುಮ್ಮನಾಗುತ್ತಾರೆ. ಕೆಲವು ಸಿನಿಮಾಗಳನ್ನು ನಾನು ಕೂಡ ಓಟಿಟಿಗೆ ಎಂದೇ ಮೀಸಲಿಡುತ್ತೇನೆ. ಆದರೆ ಈ ಚಿತ್ರ ನನಗೆ ಚೂರು ವಿಶೇಷವಾಗಿತ್ತು. ಚೂರು ಅಂದ್ರೇ ಚೂರೇ, ಹೆಚ್ಚೇನೂ ಇಲ್ಲ. ಹೌದು, ಆಮೇಲೆ ನಾನು ಇದನ್ನು ಅವರಿಗಾಗಿ ಅವರನ್ನು ಹೊಗಳುವುದಕ್ಕಾಗಿ ಬರೆಯುತ್ತಾ ಇದ್ದೇನೆ ಎಂದು ನೀವು ಅಂದುಕೊಳ್ಳಬಹುದು. ಆ ಅನಿವಾರ್ಯತೆಗಳೇನೂ ಸದ್ಯಕ್ಕಿಲ್ಲ. ಸಿನಿಮಾ ನೋಡುವ ಮುನ್ನ ಕೆಲವರ ಬಾಯಲ್ಲಿ ಒಂದು ವಿಷಯವನ್ನು ಕೇಳಿ ಹೌದಾಗಿರಬಹುದು ಎಂದುಕೊಂಡಿದ್ದೆ. 'ಸಿನಿಮಾ ಸುಮಾರಾಗೇ ಇದೆ. ಆದ