Skip to main content

ನೃತ್ಯ ನಿರಂತರ

ಬರ್ರಪ್ಪಾ ಎಲ್ರೂ ಡಾನ್ಸ ಮಾಡಿ. 
ಒಂದಾದ ಮೇಲೊಂದು ಮಾಡೋಣ.
 ಅಯ್ಯೋ ಗಲಾಟೆ ಮಾಡ್ಬೇಡಿ 
ಎಂದು ಒಂದಿಬ್ರು ಕೂಗಿದರೆ ಮತ್ತೊಂದಷ್ಟು ಜನ ಗುಂಪುಗುಂಪಲ್ಲಿ ಪ್ರಾಕ್ಟೀಸ್ ನಿರತರಾಗಿರ್ತಾರೆ. ಅದರದೇ ಚರ್ಚೆ ಅದರದ್ದೇ ಗಲಾಟೆ ಒಟ್ಟಿನಲ್ಲಿ ಎಲ್ಲಾ ಕಪ್ಪೆಗಳನ್ನು ಒಂದೇ ಕೊಳಗದಲ್ಲಿ ಕುರಿಸೋಕೆ ಸಾಧ್ಯಾನೆ ಆಗ್ತಿರಲಿಲ್ಲ. ಆದರು ಕದನಗಳ ನಂತರ ಒಂದು ಒಗ್ಗಟ್ಟು ಬಂತು ನಮ್ಮ ಕ್ಲಾಸಿನ ಜನಕ್ಕೆ. 
ಹುಡುಗರಿಗೆಲ್ಲ ಕುಣಿತದ ಉಮೇದಿ ಇದೆ ಆದ್ರೆ ಅವರು ಹೇಳಿದ ಹಾಗೆ ಅವರ ಕೈ ಕಾಲು ಆಡೋಲ್ಲ ಅನ್ನೋದೆ ಅವರ ಸಮಸ್ಯೆ. ಕೊನೆಗೆ ಕೈ ಕಾಲು ಆಡಿದ ತರವೇ ಅವರು ಕೇಳಿಕೊಂಡು ತೊಂಡೆಕಾಯಿ ಬೆಂಡೆಕಾಯಿ ನಿತ್ಯ ಹಸಿರಾದ ಮಕ್ಕಳ ಹಾಡಿಗೆ ಸ್ಟೆಪ್ ಹಾಕೇ ಬಿಟ್ರು. 

ಇನ್ನು ಒಂದು ಮಾನವನ ನಿರಂತರ ಜೀವನ ಚಕ್ರದ ಕುರಿತು ನೃತ್ಯ ರೂಪಕದ ಮೂಲಕ ಸಾಬೀತು ಪಡಿಸುವ ಇಚ್ಚೆ ನಮಗಿತ್ತು ಅದರಂತೆ ನಾವೊಂದಿಷ್ಟು ಜನ ಸೇರಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಾಯ್ತು. ಬಾಲ್ಯ, ಯವ್ವನ, ಗ್ರಹಸ್ತಾಶ್ರಮ - ಪಂಚೇಂದ್ರಿಯಗಳ ನಿಗ್ರಹ, ವಾನಪ್ರಸ್ತ, ಹೀಗೆ ಎಲ್ಲ ಸನ್ನಿವೇಶಗಳನ್ನು ಒಂದೊಂದಾಗಿ ಜೋಡಿಸಿ ಹೆಣೆದ ಸುಂದರ ಜಡೆಯಾಯ್ತು ನಮ್ಮ ರೂಪಕ. 


ಇನ್ನೇದು ವೇದಿಕೆ ಹತ್ತೋಕೆ ಅರ್ಧ ಗಂಟೆ ಇದೆ ಎನ್ನುವಾಗ ನಮ್ಮ ಹೊಟ್ಟೆಯೊಳಗೆಲ್ಲ ಪಾತರಗಿತ್ತಿಗಳ ಸಂಚಲನ ಪ್ರೋಪರ್ಟಿ ಸೆಟ್ಟಪ್ ಮಾಡುವ ಗಡಿಬಿಡಿ ಆರಂಭವಾಗಿಬಿಟ್ಟಿತ್ತು. ಎಲ್ಲರೂ ಹೊಸ ಉಡುಪು ಹಾಕಿ ಲಕಲಕ ಅಂತ ಮಿನಗ್ತಾ ಇದ್ರು. ಅರೆ ! ಇದೇನಪ್ಪ ಹುಡುಗರ ವೇಷವೇ ಬದಲಾಗ್ತಿದೆಯಲ್ಲ ಅಂತ ಹುಡುಗಿಯರು ಕಣ್ಣು ಬಿಟ್ಟು ನೋಡ್ತಾ ಇದ್ದ ಹಾಗೆ ಹುಡುಗರ ಶಾಲೆಗೆ ಹೋಗುವ ಪುಟ್ಟ ಮಕ್ಕಳಂತೆ ಮತ್ತೆ ತಮ್ಮ ಬಾಲ್ಯಕ್ಕೆ ತೆರಳಿದ್ದರು. 


ಕತ್ತಿನ ಪಟ್ಟಿಯ ಗುಂಡಿ, ಅಂಗಿ ತುದಿಯ ಗುಂಡಿ, ವಕ್ರವಾದ ಸೊಂಟಪಟ್ಟಿ, ಕತ್ತಿಗೆ ಕಾಲೇಜು ಕಟ್ಟಿದ ಮಾಂಗಲ್ಯ ( ಐಡಿ.ಕಾರ್ಡ್) ಹಾಕಿ ತುಂಬಾ ಮುಗ್ಧರಾಗಿ ಪರಕಾಯ ಪ್ರವೇಶ ಮಾಡಿದ್ರು. ಡಾನ್ಸ ಚನಾಗಿಮಾಡಿದ್ರೆ ಚಾಕಲೇಟ್ ಕೊಡ್ಸತೀಯಾ ಅಂತ ಒಬ್ಬ ಕೇಳೇ  ಬಿಟ್ಟ. ನಗುವಲ್ಲೇ ಕಾಲ ಕಳೀತಾ ಇದ್ದ ಹಾಗೆ


 ನಮ್ಮ ಕತೆಗೆ ತಕ್ಕಂತೆ ರೆಡಿಯಾಗಿದ್ದ ಬಿಳಿಪಂಚೆ ಬಿಳಿ ಅಂಗಿತೊಟ್ಟ ಮದುಮಗ, ಚಂದದ ಸೀರೆಯುಟ್ಟ ಮದುಮಗಳ ಎಂಟ್ರೀ ಕೂಡ ಆಯ್ತು. ಇನ್ನು ಅವರ ವೃದ್ಧಾಪ್ಯದ ಭಾಗವಾಗಿ ಇನ್ನಿಬ್ಬರು ತಯಾರಾದ್ರು. 

ಆಯ್ತು! ಸಮಯ ಬಂದೇ ಬಿಡ್ತು ವಿವೇಕಾನಂದ ಜಯಂತಿ ಕುರಿತು ಮಾತನಾಡಿದ ಗೆಳೆಯ ಜಗದೀಶ ಪರದೆಯ ಹಿಂದೆ ನಿಂತಿದ್ದ ನನ್ನದೇ ಮೊದಲ ಪ್ರವೇಶ ಗೆಳತಿಯೊಬ್ಬಳ ಕಾಲ್ಮೇಲೆ ( ಅಮ್ಮನ ಮಡಿಲು)  ಮಲಗಿ ಅಂಬೆಗಾಲಲ್ಲಿ ಅವಳನ್ನ ಸೇರೋದು ಆಡೋದು ಇವೆಲ್ಲ ಇತ್ತು ಸದ್ಯಕ್ಕೆ ಮಂಡಿ ಒಂಚೂರು ನೋವಿದೆ. 

ನಂತರ ಶಾಲೆ. ಅದರ ನಡುವೆ ನಮ್ಮ ಮುಗ್ಧ ಹುಡುಗರ ಡಾನ್ಸ ನಂತರ ಕಾಲೇಜು
 ಬನ್ನೀ ನನ ಗೆಳೆಯರೆ,
ಬನ್ನೀ ನನ ಗೆಳತಿಯರೇ
ಎಂದು ಹಾಡುಬರುತ್ತಿದ್ದಂತೆ ಎಲ್ಲ ಸೇರಿ ಕುಣಿದು ಕುಪ್ಪಳಿಸಿದ್ರು ಇದರ ನಡುವೆ ಯಾರೂ ಚಪ್ಪಾಳೆನೆ ತಟ್ತಾ ಇಲ್ವಲ್ಲ ಅಂತ ಅನುಮಾನ ಬೇರೆ ಶುರು ನಮಗೆ. ತಲ್ಲೀನರಾಗಿದ್ದವರು ಚಪ್ಪಾಳೆ ಹೊಡೆಯೋದನ್ನು ಮರೆತಿದ್ದು ಆಮೇಲೆ ತಿಳೀತು. ಪುರೋಹಿತ ಪಾತ್ರಧಾರಿ ಪಂಚೆ ಎತ್ತಿ ಕುಣಿದ, ಅಂತರ್ಪಟಕ್ಕೆಂದು ಇಟ್ಟ ಬಿಳಿಪಂಚೆ ಎಗರಿಸಿ ಮದುವೆಯ ವ್ಯವಸ್ಥೆ ನೋಡಿಕೊಳ್ಳುವ ಮಾವ ಇನ್ನೊಬ್ಬನಾದ. ಪ್ರಾಕ್ಟೀಸ್ ಮಾಡದೇ ಬಂದವರೂ ವೇದಿಕೆ ಎರಿ ಗೆಲುವಾದ್ರು. ಒಟ್ಟಿಗೆ ಎಲ್ಲತೊಡಕುಗಳನ್ನು ಅಲ್ಲಲ್ಲೆ ನಿವಾರಿಸಿ ಸಾಗಿತು ನಮ್ಮ ಸವಾರಿ. 


ಮದುವೆಯ ಸನ್ನಿವೇಶಕ್ಕಂತು ಜನರ ಮದ್ಯವೇ ಕುಣಿತ. ನಂತರ ಭಾವಪೂರ್ಣತೆಯ ವೃದ್ಸಾಶೃಮ ಸನ್ನಿವೇಶ. ಎಲ್ಲಾ ಮುಗಿದಾಕ್ಷಣ
ಒಳಿತುಮಾಡು ಮನುಷ
ನೀ ಇರೊದು ಮೂರು ನಿಮಿಷ

ಎಂಬ ಸಂದೇಶ ಒಟ್ಟಿನಲ್ಲಿ ನಮ್ಮೆಲ್ಲರಿಗೆ ತೃಪ್ತಿ ಮತ್ತು ಸಂತೋಷ ತಂದುಕೊಟ್ಟ ದಿನ ಇದು ನಿರಂತರ ನೆನಪುಗಳೂ ನಿರಂತರ. ಚನಾಗಾಯ್ತು ಶುಭಾಶಯ ಅಂತ ನಮ್ಮ ಟೀಚರ್ಸ್ ಹೇಳಿದಮೇಲಂತು ಆತ್ಮತೃಪ್ತಿಯೇ ಸಿಕ್ಕಿದ ದಿನ ಈ ನೆನಪುಗಳೇ ನಿರಂತರ 

ಸುಮಾ.ಕಂಚೀಪಾಲ್
ಚಿತ್ರ: ಕಿಶನ್

Comments

  1. Replies
    1. ಮಸ್ತ ಬರಹ.ಅನುಭವ ಜನ್ಯ.ಎಲ್ಲಿಂದಲೋ ಬಂದು ಎಲ್ಲೋ ಒಂದ್ಕಡೆ ಕಾರ್ಯಕ್ರಮ ಈ ಲೈಫ್ ಮತ್ತೆ ಸಿಗೊಲ್ಲ.ಮುದಕರಾದ್ಮೇಲೆ ನೆನಪಷ್ಟೇ ಶಾಶ್ವತ.ಅದೂ ಅರಳು ಮರಳಲ್ಲಿ ಹಲ್ಲಿಲ್ಲದ ಬಾಯಿ ಗಿಂಜುತ್ತಾ.

      Delete
  2. 👌🏻good programme(especially Boy's dance😜) as well as nice writing.

    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...