Skip to main content

ಉದ್ದುದ್ದನೆಯವರಿಗೊಂದು ನಮನ

ಜಗತ್ತಿನಲ್ಲಿ ಉದ್ದುದ್ದದ ಕೆಲವು ಪ್ರಾಣಿಗಳಿವೆ. ಈ ವಾಕ್ಯವನ್ನು ಓದಿದಾಕ್ಷಣ ನಿಮ್ಮ ಮನಸಿನಲ್ಲಿ ಒಂಟೆ, ಜಿರಾಫೆಯ ಚಿತ್ರಣ ಮೂಡಿರಬಹುದು. ಹೀಗೆ ಮನುಷ್ಯರಲ್ಲೂ ಕೆಲವರು ಉದ್ದುದ್ದದ ಜೀವಿಗಳಿರುತ್ತಾರೆ‌.ಉಷ್ಟ್ರಪಕ್ಷಿಗಳಂತವರು ನಾನು ಇದನ್ನು ತಮಾಷೆಗಾಗಿ ಬರೆಯುತ್ತಿದ್ದರು ನಾನು ಗಮನಿಸಿದ ಕೆಲವು ಸತ್ಯ ಅಂಶಗಳನ್ನು ನೀವಿಲ್ಲಿ ಗಮನಿಸಲೇ ಬೇಕು. 

ಶಾಲೆಯಲ್ಲಿ ಪಾಠ ಕೇಳಲು ಕುಳಿತರೆ ಅವರಿಗೆ ಕಾಲು ಬಿಡಿಸಿಕೊಳ್ಳಲು ಜಾಗ ಸಾಲುವುದಿಲ್ಲ. ಮುಂದಿನ ಬೆಂಚ್ ನಲ್ಲಿ ಕೂರುವ ತಾಪತ್ರಯ ಅವರಿಗೆ ಎಂದೂ ಬರಲ್ಲ. ಇನ್ನು ದೂರದ ಊರಿಗೆ  ಪುಟ್ಟ  ಕಾರು ಅಥವಾ ಬಸ್ಸಿನ ಪ್ರಯಾಣವಂತು ಸುಲಭ ಅಲ್ಲವೇ ಅಲ್ಲ. ಕಾಲು ಎಷ್ಟು ಮಡಚಿ ಕೂತರು ಊರು ಸೇರುವಷ್ಟರಲ್ಲಿ ಸೋತು ಹೋಗಿರುತ್ತಾರೆ. ಇನ್ನು ಎಷ್ಟೆತ್ತರದಲ್ಲಿ ವಸ್ತುಗಳನ್ನಿಟ್ಟರು ಇವರಿಗೆ ಸುಲಭವಾಗಿ ಕೈಗೆಟಕುತ್ತದೆ ಎನ್ನುವ ಕಾರಣಕ್ಕಾಗಿ ಅಂತಹ ಕೆಲಸಗಳಿಗೆ ಇವರನ್ನೇ ಕೂಗುವುದು ಜಾಸ್ತಿ. 
ನಮ್ಮ ಮನೆಯದೇ ಒಂದು ಉದಾಹರಣೆ ಕೊಡಬೇಕೆಂದರೆ. ಸ್ಟಾಂಡಿನ ಮೇಲಿಟ್ಟ ಡಬ್ಬಿ, ಹಪ್ಪಳ, ಉಪ್ಪಿನಕಾಯಿ, ಬೆಲ್ಲ ಮತ್ತು ಎಣ್ಣೆ ಇಷ್ಟನ್ನು ಸದಾ ಅಮ್ಮನಿಗೆ ಇಳಿಸಿಕೊಡುವವನೆ ನನಗಿಂತ ಲಂಬು ಆಗಿರುವ ನನ್ನ ತಮ್ಮ. ಇನ್ನೂ ಕಾಲೇಜಿನ ದಿನಗಳಲ್ಲಿ ಕೆಲವರು ಹುಡುಗಿಯರು ಮತ್ತು ಕೆಲವರು ಹುಡುಗರು ಇದೇ ಸಾಲಿಗೆ ಸೇರಿದವರಿದ್ದಾರೆ.ನಮ್ಮಂತವರು ಅವರನ್ನು ಹಾರಿಮರ, ಒಂಟೆ, ಜಿರಾಫೆಗಳು ಎಂದೇ ಕರೆಯುತ್ತೇವೆ. 

ನನ್ನ ದಿನಗಳಲ್ಲಿ ನೆನಪುಳಿಯಬಲ್ಲ ಕೆಲವು ಹೆಸರೆಂದರೆ ಕಟ್ಟಿ ಸರ್, ಯಮುನಕ್ಕ, ವೆಂಕಟೇಶ್ ಪ್ರಸಾದ, ಶೀಥಲ್, ಆಕರ್ಷ,  ವಿನಯ್, ಸಂಪತ್, ಶ್ರೀರಕ್ಷ, ಪ್ರದೀಪ ಅಣ್ಣ. ಇನ್ನು ನಿಮ್ಮ ಮನೆಯಲ್ಲೂ ಇಂತವರು ಹಲವರಿರಬಹುದು ಅವರ ಹೆಸರನ್ನೂ ಇದರೊಟ್ಟಿಗೆ ಸೇರಿಸಿ ಓದಿಕೊಂಡು ಬಿಡಿ. ಒಂದು ಸಾಮಾನ್ಯ ಹಳೆ ಕಾಲದ ಮನೆಯ ಬಾಗಿಲ ಒಳಹೋಗಬೇಕೆಂದರೂ ಇವರು ಬಾಗಿಲ ಪಟ್ಟಿಯನ್ನು ಹಣೆಗೆ ಎಟಕಿಸಿಕೊಂಡೆ ನಡೆಯುತ್ತಾರೆ‌.

 

ಇನ್ನೊಂದು ಮುಖ್ಯ ವಿಷಯವೆಂದರೆ ಇಂತವರಿಗೆ ಹಾಸಲು ಹೊದಿಯಲು ಇರುವ ಬಟ್ಟೆಗಳು ಕಾಲು ಮುಚ್ಚಿದರೆ ತಲೆ ಮುಚ್ಚುವುದಿಲ್ಲ. ತಲೆ ಮುಚ್ಚಿದರೆ ಕಾಲಿಗಿಲ್ಲ. ಉದ್ದಿರುವವರಿ ಇತ್ತೀಚೆಗೆ ಪ್ರಸಿದ್ಧವಾದ ಸಾರ್ವತ್ರಿಕ ಹೆಸರೊಂದಿದೆ 'ಸೆಲ್ಪಿಸ್ಟಿಕ್'.

ಮೊನ್ನೆ ಮೊನ್ನೆ ಎತ್ತರದೊಂದು ಕೋಲಿಗೆ ಬಟ್ಟೆ ಒಣಗಿಸಲು ನಾನು ಹರಸಾಹಪಡುತ್ತಿದ್ದಾಗ ಇಂತದೇ ಒಂದು ಒಂಟೆಯಂತ ಪ್ರಾಣಿರೂಪದ ಹುಡುಗಿ ಶ್ರೀರಕ್ಷ ಬಟ್ಟೆ ಒಣಗಿಸಿಕೊಟ್ಟು ನಗುತ್ತಿದ್ದಳು. ಅದನ್ನು ನೆನಪಿಸಿಕೊಂಡು ಈ ತಮಾಷೆಯ ಬರಹ ಬರೆಯುವ ಮನಸಾಯಿತು. 

ಸುಮಾ.ಕಂಚೀಪಾಲ್

Comments

  1. ಮಾರಾಯತಿ ಎನ್ನ ಹೆಸರೊಂದು ಬರಿದ್ಲೆ

    ReplyDelete
    Replies
    1. ಇನ್ನು ಹಲವಾರು ಹೆಸರು ಬರಿಲ್ ಅವ್ತಿಪು

      Delete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...