ಜಗತ್ತಿನಲ್ಲಿ ಉದ್ದುದ್ದದ ಕೆಲವು ಪ್ರಾಣಿಗಳಿವೆ. ಈ ವಾಕ್ಯವನ್ನು ಓದಿದಾಕ್ಷಣ ನಿಮ್ಮ ಮನಸಿನಲ್ಲಿ ಒಂಟೆ, ಜಿರಾಫೆಯ ಚಿತ್ರಣ ಮೂಡಿರಬಹುದು. ಹೀಗೆ ಮನುಷ್ಯರಲ್ಲೂ ಕೆಲವರು ಉದ್ದುದ್ದದ ಜೀವಿಗಳಿರುತ್ತಾರೆ.ಉಷ್ಟ್ರಪಕ್ಷಿಗಳಂತವರು ನಾನು ಇದನ್ನು ತಮಾಷೆಗಾಗಿ ಬರೆಯುತ್ತಿದ್ದರು ನಾನು ಗಮನಿಸಿದ ಕೆಲವು ಸತ್ಯ ಅಂಶಗಳನ್ನು ನೀವಿಲ್ಲಿ ಗಮನಿಸಲೇ ಬೇಕು.
ಶಾಲೆಯಲ್ಲಿ ಪಾಠ ಕೇಳಲು ಕುಳಿತರೆ ಅವರಿಗೆ ಕಾಲು ಬಿಡಿಸಿಕೊಳ್ಳಲು ಜಾಗ ಸಾಲುವುದಿಲ್ಲ. ಮುಂದಿನ ಬೆಂಚ್ ನಲ್ಲಿ ಕೂರುವ ತಾಪತ್ರಯ ಅವರಿಗೆ ಎಂದೂ ಬರಲ್ಲ. ಇನ್ನು ದೂರದ ಊರಿಗೆ ಪುಟ್ಟ ಕಾರು ಅಥವಾ ಬಸ್ಸಿನ ಪ್ರಯಾಣವಂತು ಸುಲಭ ಅಲ್ಲವೇ ಅಲ್ಲ. ಕಾಲು ಎಷ್ಟು ಮಡಚಿ ಕೂತರು ಊರು ಸೇರುವಷ್ಟರಲ್ಲಿ ಸೋತು ಹೋಗಿರುತ್ತಾರೆ. ಇನ್ನು ಎಷ್ಟೆತ್ತರದಲ್ಲಿ ವಸ್ತುಗಳನ್ನಿಟ್ಟರು ಇವರಿಗೆ ಸುಲಭವಾಗಿ ಕೈಗೆಟಕುತ್ತದೆ ಎನ್ನುವ ಕಾರಣಕ್ಕಾಗಿ ಅಂತಹ ಕೆಲಸಗಳಿಗೆ ಇವರನ್ನೇ ಕೂಗುವುದು ಜಾಸ್ತಿ.
ನಮ್ಮ ಮನೆಯದೇ ಒಂದು ಉದಾಹರಣೆ ಕೊಡಬೇಕೆಂದರೆ. ಸ್ಟಾಂಡಿನ ಮೇಲಿಟ್ಟ ಡಬ್ಬಿ, ಹಪ್ಪಳ, ಉಪ್ಪಿನಕಾಯಿ, ಬೆಲ್ಲ ಮತ್ತು ಎಣ್ಣೆ ಇಷ್ಟನ್ನು ಸದಾ ಅಮ್ಮನಿಗೆ ಇಳಿಸಿಕೊಡುವವನೆ ನನಗಿಂತ ಲಂಬು ಆಗಿರುವ ನನ್ನ ತಮ್ಮ. ಇನ್ನೂ ಕಾಲೇಜಿನ ದಿನಗಳಲ್ಲಿ ಕೆಲವರು ಹುಡುಗಿಯರು ಮತ್ತು ಕೆಲವರು ಹುಡುಗರು ಇದೇ ಸಾಲಿಗೆ ಸೇರಿದವರಿದ್ದಾರೆ.ನಮ್ಮಂತವರು ಅವರನ್ನು ಹಾರಿಮರ, ಒಂಟೆ, ಜಿರಾಫೆಗಳು ಎಂದೇ ಕರೆಯುತ್ತೇವೆ.
ನನ್ನ ದಿನಗಳಲ್ಲಿ ನೆನಪುಳಿಯಬಲ್ಲ ಕೆಲವು ಹೆಸರೆಂದರೆ ಕಟ್ಟಿ ಸರ್, ಯಮುನಕ್ಕ, ವೆಂಕಟೇಶ್ ಪ್ರಸಾದ, ಶೀಥಲ್, ಆಕರ್ಷ, ವಿನಯ್, ಸಂಪತ್, ಶ್ರೀರಕ್ಷ, ಪ್ರದೀಪ ಅಣ್ಣ. ಇನ್ನು ನಿಮ್ಮ ಮನೆಯಲ್ಲೂ ಇಂತವರು ಹಲವರಿರಬಹುದು ಅವರ ಹೆಸರನ್ನೂ ಇದರೊಟ್ಟಿಗೆ ಸೇರಿಸಿ ಓದಿಕೊಂಡು ಬಿಡಿ. ಒಂದು ಸಾಮಾನ್ಯ ಹಳೆ ಕಾಲದ ಮನೆಯ ಬಾಗಿಲ ಒಳಹೋಗಬೇಕೆಂದರೂ ಇವರು ಬಾಗಿಲ ಪಟ್ಟಿಯನ್ನು ಹಣೆಗೆ ಎಟಕಿಸಿಕೊಂಡೆ ನಡೆಯುತ್ತಾರೆ.
ಇನ್ನೊಂದು ಮುಖ್ಯ ವಿಷಯವೆಂದರೆ ಇಂತವರಿಗೆ ಹಾಸಲು ಹೊದಿಯಲು ಇರುವ ಬಟ್ಟೆಗಳು ಕಾಲು ಮುಚ್ಚಿದರೆ ತಲೆ ಮುಚ್ಚುವುದಿಲ್ಲ. ತಲೆ ಮುಚ್ಚಿದರೆ ಕಾಲಿಗಿಲ್ಲ. ಉದ್ದಿರುವವರಿ ಇತ್ತೀಚೆಗೆ ಪ್ರಸಿದ್ಧವಾದ ಸಾರ್ವತ್ರಿಕ ಹೆಸರೊಂದಿದೆ 'ಸೆಲ್ಪಿಸ್ಟಿಕ್'.
ಮೊನ್ನೆ ಮೊನ್ನೆ ಎತ್ತರದೊಂದು ಕೋಲಿಗೆ ಬಟ್ಟೆ ಒಣಗಿಸಲು ನಾನು ಹರಸಾಹಪಡುತ್ತಿದ್ದಾಗ ಇಂತದೇ ಒಂದು ಒಂಟೆಯಂತ ಪ್ರಾಣಿರೂಪದ ಹುಡುಗಿ ಶ್ರೀರಕ್ಷ ಬಟ್ಟೆ ಒಣಗಿಸಿಕೊಟ್ಟು ನಗುತ್ತಿದ್ದಳು. ಅದನ್ನು ನೆನಪಿಸಿಕೊಂಡು ಈ ತಮಾಷೆಯ ಬರಹ ಬರೆಯುವ ಮನಸಾಯಿತು.
ಸುಮಾ.ಕಂಚೀಪಾಲ್
ಮಾರಾಯತಿ ಎನ್ನ ಹೆಸರೊಂದು ಬರಿದ್ಲೆ
ReplyDeleteಇನ್ನು ಹಲವಾರು ಹೆಸರು ಬರಿಲ್ ಅವ್ತಿಪು
Delete