Skip to main content

ಒಂದು ಪಯಣ

ಐದು ತಿಂಗಳಿಂದ ಮನೆಯಲ್ಲೇ ಉಳಿದು ಒಂದೊಮ್ಮೆಲೆ ದೂರದ ಊರಿಗೆ ಹೊರಡಲು ಸ್ವಲ್ಪ ಬೇಸರ ಎನಿಸಿದರೂ ಅದು ಅನಿವಾರ್ಯವಾಗಿತ್ತು. ಬೆಳಿಗ್ಗೆ ಆರು ಗಂಟೆಗೆ ಎದ್ದು ಹೊರಟರೆ ಸಂಜೆ ಆರುಗಂಟೆ ಸಮೀಪಿಸುತ್ತಿದ್ದಂತೆ ಊರು ತಲುಪಿದವಳು ನಾನು‌. ದಾರಿಯಲ್ಲಿ ಹತ್ತಾರು ಅನುಭವ ಎಷ್ಟೆಲ್ಲ ನೆನಪು, ಒಂಟಿ ಪ್ರಯಾಣ ಬೇರೆ.

ಸರಕಾರಿ ಬಸ್ ಹತ್ತಿ ಕೂತವಳಿಗೆ ಧರ್ಮಸ್ಥಳ ಎಂದು ಟಿಕೆಟ್ ಮಾಡಿಸಿ  ಬಸ್ ಕಿಟಕಿಯಿಂದ ಅಪ್ಪನ ಮುಖವನ್ನೊಮ್ಮೆ ಕಿಟಕಿಯಿಂದ ಇಣುಕಿ ನೋಡಿ, ದಾವಂತದಲ್ಲೂ ತುಸು ನಗುವಷ್ಟರಲ್ಲಿ ಬಸ್ ಹೊರಟಿತು. ಪ್ರತಿಯೊಂದು ಬಸ್ ತಂಗುದಾಣದಲ್ಲೂ ಏಳೇಂಟು ನಿಮಿಷ ನಿಲ್ಲುತ್ತಾ ಉಡುಪಿಯಲ್ಲಿ ಕಾಲು ಗಂಟೆ ಊಟಕ್ಕೆಂದು ನಿಲ್ಲಿಸಿದರು.

ದಾರಿ ಸಮಯ ಎರಡೂ ಸಾಗುತ್ತದೆ.

ನನ್ನ ಜೊತೆಗೆ ಪ್ರಯಾಣಿಸುವವರು ಯಾರೂ ಇಲ್ಲದ ಕಾರಣ ನನ್ನ ಎರಡು  ಬ್ಯಾಗ್ ಬಿಟ್ಟು ಇಳಿದು ಹೋಗಲು ಮನಸಾಗದೆ‌. ದೈಹಿಕ ಬಾದೆಗಳನ್ನೆಲ್ಲ ತಡೆ ಹಿಡಿದು ಕೂತೆ ಇದ್ದೆ‌. ಆಗಾಗ ನಿದ್ದೆ ಕಣ್ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ನನ್ನ ಕೈಗಡಿಯಾರದಲ್ಲಿ ಒಂದೊಂದು ತಾಸು ಮುಳ್ಳು ಮುಂದೆ ತಿರುಗಿರುತ್ತಿತ್ತು. ಹಾದಿ ಕರ್ಚಿಗೆ ಪುಸ್ತಕ ಇಟ್ಟುಕೊಳ್ಳುವ ರೂಢಿ ಇದೆ ನನಗೆ. ಆದರೆ ಈ ಬಾರಿ ಅದನ್ನು ಮರೆತೆ.

ಪೋನ್ ನೋಡಿಕೊಂಡು ಕಾಲ ಕಳೆಯಲು ಭಯ. ಚಾರ್ಜ್ ಕಾಲಿಯಾದರೆ ಬಸ್ ಇಳಿದನಂತರ ನನ್ನನ್ನು ಕರೆದುಕೊಂಡು ಹೋಗಲು ಬನ್ನಿ ಎಂದು ಸ್ನೇಹಿತರಿಗೆ ಸುದ್ದಿ ಮುಟ್ಟಿಸುವುದಕ್ಕೂ ಸಾಧ್ಯವಾಗದ ಸ್ಥಿತಿ ಎದುರಾದರೆ ಎಂದು ಹಾಗೇ ಖಾಲಿ ಕೂತಿದ್ದೆ. ನನ್ನೊಳಗಿನ ಅಂತರ್ಮುಖಿ ಸಂವಹನಕ್ಕೆ ಅಷ್ಟು ದೀರ್ಘ ಸಮಯ ಸಿಕ್ಕಿದ್ದು ಬಹಳ ಅಪರೂಪ.

ಬಂದು ಸೇರುವ ಜಾಗ.

ಕೆಲವೊಮ್ಮೆ ಅಂತು ಅನಿಸುತ್ತಿತ್ತು. ಇದೇನಿದು ಊರೆ ಬರುತ್ತಿಲ್ಲ ಅಮೇರಿಕವಾದರೂ ಉಜಿರೆಗಿಂತ ಸಮೀಪವಿದ್ದಿರ ಬಹುದು ಎಂದು ತಮಾಷೆ ಅನಿಸುತ್ತಿತ್ತು. ಈ ಒಂಟಿ ಪಯಣಗಳು ಒಂದು ತರದ ಖುಷಿ ಕೊಡುವುದಂತೂ ಹೌದು. ಅಕ್ಕ ಪಕ್ಕದಲ್ಲಿ ಅದೆಷ್ಟೋ ಜನ ಬಂದು ಕೂತು ಎದ್ದು ಹೋಗುತ್ತಿದ್ದರು. ಹಾಗೆ ನಮ್ಮ ಬಸ್ಸು ಅದೆಷ್ಟೋ ಊರಿನ ದಾರಿಗಳನ್ನು ತುಳಿದು ಸಾಗುತ್ತಿತ್ತು. ನಾವೂ ಹಾಗೆ ಬದುಕಿನ ಎಷ್ಟೋ ಅಧ್ಯಾಯಗಳನ್ನು ದಾಟಿ ಸಾಗುತ್ತಿದ್ದೇವೆ.

ಸುಮಾ.ಕಂಚೀಪಾಲ್

Comments

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...