Skip to main content

ಒಂದು ಪಯಣ

ಐದು ತಿಂಗಳಿಂದ ಮನೆಯಲ್ಲೇ ಉಳಿದು ಒಂದೊಮ್ಮೆಲೆ ದೂರದ ಊರಿಗೆ ಹೊರಡಲು ಸ್ವಲ್ಪ ಬೇಸರ ಎನಿಸಿದರೂ ಅದು ಅನಿವಾರ್ಯವಾಗಿತ್ತು. ಬೆಳಿಗ್ಗೆ ಆರು ಗಂಟೆಗೆ ಎದ್ದು ಹೊರಟರೆ ಸಂಜೆ ಆರುಗಂಟೆ ಸಮೀಪಿಸುತ್ತಿದ್ದಂತೆ ಊರು ತಲುಪಿದವಳು ನಾನು‌. ದಾರಿಯಲ್ಲಿ ಹತ್ತಾರು ಅನುಭವ ಎಷ್ಟೆಲ್ಲ ನೆನಪು, ಒಂಟಿ ಪ್ರಯಾಣ ಬೇರೆ.

ಸರಕಾರಿ ಬಸ್ ಹತ್ತಿ ಕೂತವಳಿಗೆ ಧರ್ಮಸ್ಥಳ ಎಂದು ಟಿಕೆಟ್ ಮಾಡಿಸಿ  ಬಸ್ ಕಿಟಕಿಯಿಂದ ಅಪ್ಪನ ಮುಖವನ್ನೊಮ್ಮೆ ಕಿಟಕಿಯಿಂದ ಇಣುಕಿ ನೋಡಿ, ದಾವಂತದಲ್ಲೂ ತುಸು ನಗುವಷ್ಟರಲ್ಲಿ ಬಸ್ ಹೊರಟಿತು. ಪ್ರತಿಯೊಂದು ಬಸ್ ತಂಗುದಾಣದಲ್ಲೂ ಏಳೇಂಟು ನಿಮಿಷ ನಿಲ್ಲುತ್ತಾ ಉಡುಪಿಯಲ್ಲಿ ಕಾಲು ಗಂಟೆ ಊಟಕ್ಕೆಂದು ನಿಲ್ಲಿಸಿದರು.

ದಾರಿ ಸಮಯ ಎರಡೂ ಸಾಗುತ್ತದೆ.

ನನ್ನ ಜೊತೆಗೆ ಪ್ರಯಾಣಿಸುವವರು ಯಾರೂ ಇಲ್ಲದ ಕಾರಣ ನನ್ನ ಎರಡು  ಬ್ಯಾಗ್ ಬಿಟ್ಟು ಇಳಿದು ಹೋಗಲು ಮನಸಾಗದೆ‌. ದೈಹಿಕ ಬಾದೆಗಳನ್ನೆಲ್ಲ ತಡೆ ಹಿಡಿದು ಕೂತೆ ಇದ್ದೆ‌. ಆಗಾಗ ನಿದ್ದೆ ಕಣ್ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ನನ್ನ ಕೈಗಡಿಯಾರದಲ್ಲಿ ಒಂದೊಂದು ತಾಸು ಮುಳ್ಳು ಮುಂದೆ ತಿರುಗಿರುತ್ತಿತ್ತು. ಹಾದಿ ಕರ್ಚಿಗೆ ಪುಸ್ತಕ ಇಟ್ಟುಕೊಳ್ಳುವ ರೂಢಿ ಇದೆ ನನಗೆ. ಆದರೆ ಈ ಬಾರಿ ಅದನ್ನು ಮರೆತೆ.

ಪೋನ್ ನೋಡಿಕೊಂಡು ಕಾಲ ಕಳೆಯಲು ಭಯ. ಚಾರ್ಜ್ ಕಾಲಿಯಾದರೆ ಬಸ್ ಇಳಿದನಂತರ ನನ್ನನ್ನು ಕರೆದುಕೊಂಡು ಹೋಗಲು ಬನ್ನಿ ಎಂದು ಸ್ನೇಹಿತರಿಗೆ ಸುದ್ದಿ ಮುಟ್ಟಿಸುವುದಕ್ಕೂ ಸಾಧ್ಯವಾಗದ ಸ್ಥಿತಿ ಎದುರಾದರೆ ಎಂದು ಹಾಗೇ ಖಾಲಿ ಕೂತಿದ್ದೆ. ನನ್ನೊಳಗಿನ ಅಂತರ್ಮುಖಿ ಸಂವಹನಕ್ಕೆ ಅಷ್ಟು ದೀರ್ಘ ಸಮಯ ಸಿಕ್ಕಿದ್ದು ಬಹಳ ಅಪರೂಪ.

ಬಂದು ಸೇರುವ ಜಾಗ.

ಕೆಲವೊಮ್ಮೆ ಅಂತು ಅನಿಸುತ್ತಿತ್ತು. ಇದೇನಿದು ಊರೆ ಬರುತ್ತಿಲ್ಲ ಅಮೇರಿಕವಾದರೂ ಉಜಿರೆಗಿಂತ ಸಮೀಪವಿದ್ದಿರ ಬಹುದು ಎಂದು ತಮಾಷೆ ಅನಿಸುತ್ತಿತ್ತು. ಈ ಒಂಟಿ ಪಯಣಗಳು ಒಂದು ತರದ ಖುಷಿ ಕೊಡುವುದಂತೂ ಹೌದು. ಅಕ್ಕ ಪಕ್ಕದಲ್ಲಿ ಅದೆಷ್ಟೋ ಜನ ಬಂದು ಕೂತು ಎದ್ದು ಹೋಗುತ್ತಿದ್ದರು. ಹಾಗೆ ನಮ್ಮ ಬಸ್ಸು ಅದೆಷ್ಟೋ ಊರಿನ ದಾರಿಗಳನ್ನು ತುಳಿದು ಸಾಗುತ್ತಿತ್ತು. ನಾವೂ ಹಾಗೆ ಬದುಕಿನ ಎಷ್ಟೋ ಅಧ್ಯಾಯಗಳನ್ನು ದಾಟಿ ಸಾಗುತ್ತಿದ್ದೇವೆ.

ಸುಮಾ.ಕಂಚೀಪಾಲ್

Comments

Post a Comment

Popular posts from this blog

ಮೆಜೆಸ್ಟಿಕ್

ನಾನು ಇವನು ಹೈದರಾಬಾದ್‌ಗೆ ಹೋಗೋದು ಅಂತ ನಿರ್ಧಾರ ಮಾಡಿ ಮನೆಯಲ್ಲೇ ಊಟ ಮುಗಿಸಿ ಹೊರಟೆವು. ಕುವೆಂಪು ಮೆಟ್ರೋ ಸ್ಟೇಷನ್‌ನಿಂದ ಸೀದಾ ಬಂದು ಇಳಿದದ್ದು ಮೆಜೆಸ್ಟಿಕ್‌ಗೆ. ನಾನು ಸ್ವಲ್ಪ ಕತ್ತಲಾಗಿ ಬೀದಿ ದೀಪಗಳು ಉರಿಯಲು ಶುರುವಾದರೆ ಸಾಕು ಹೆದರಿ ಸಾಯುತ್ತೇನೆ. ನನ್ನನ್ನು ಸಮಾಧಾನ ಮಾಡಿ ಬ್ಯಾಗಿನ ಜೊತೆ ಕೈ ಹಿಡಿದು ಬೇರೆ ಊರು ತಲುಪುವುದು ಎಂದರೆ ಇವನಿಗೆಷ್ಟು ಕಷ್ಟ ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಆದರೂ ನಮಗೇನಾದ್ರೂ ಆದ್ರೆ? ಕಳ್ಳ ಬಂದ್ರೆ? ನಾನು ಕಳೆದೇ ಹೋದ್ರೆ ಎಂದು ಏನೇನೋ ಮಳ್ಳು ಹಲುಬುತ್ತ ಸಾಗುತ್ತೇನೆ. ಇವನಿಗೆ ಇರುವಷ್ಟು ಸಹನೆ ಯಾರಿಗೂ ಇಲ್ಲ, ಅದಂತೂ ನಿಜ ಎಂದು ನನಗೆ ನಾನೇ ಹಲುಬಿಕೊಂಡು ಅವನ ಹಿಂದೆ ಸಾಗುತ್ತೇನೆ.  ಚಿತ್ರ: ಮೆಜೆಸ್ಟಿಕ್ ಪ್ಲಾಟ್‌ಫಾ ರ್ಮ್ ನಂಬರ್ 16 ಕೆಂಪು, ಬಿಳಿ, ನೀಲಿ ಬಸ್ಸುಗಳ ಸಾಲು. ಏ ಇಲ್ ನೋಡೇ, ಹಿಂದಿನ ಸಲ ನಾವು ಬಸ್ ಹತ್ತಿದ್ದು ಇಲ್ಲೆಯ ನೆನಪಿದ್ದಾ ನಿನಗೆ? ಎಂದು ಉಮೇದಿಯಿಂದ ಇವ ಒಂಚೂರು ನನ್ನ ಕೈ ಬಿಟ್ಟು ಮುಂದೆ ಸಾಗಿದರೆ ನಾನು ನಿಂತಲ್ಲೇ ಬಾಕಿ. ಯಾಕೆಂದು ನನಗೂ ಗೊತ್ತಿಲ್ಲ. ಆಮೇಲೆ ನನ್ನಿಂದ ಉತ್ತರ ಬರದೇ ಇದ್ದಾಗ ಅವ ಮತ್ತೆ ತಲೆಮೇಲೆ ಕೈ ಹೊತ್ತು ನಾನಿದ್ದಲ್ಲಿ ಬರುತ್ತಾನೆ.  ಅವನಿಗೆ ಎಲ್ಲ ಜನರನ್ನು, ಎಲ್ಲ ಊರುಗಳ ಹೆಸರನ್ನು ಹಾಗೇ ಕೆ. ಆರ್ ಮಾರ್ಕೇಟಿಗೆ ಹೋಗಲು ಬಂದಿಳಿದ ಫ್ರೆಷ್ ಪುದಿನಾ ಎಲೆಗಳ ಗಂಟನ್ನೂ; ಎಲ್ಲವನ್ನೂ ಮಾತಾಡಿಸಬೇಕು. ನನಗೆ ಜನರನ್ನ...

ಎಲ್ಲರಲ್ಲೂ ಒಬ್ಬ ಕಳ್ಳ ಇದ್ದಾನೆ

ಎಲ್ಲರೊಳಗೂ ಒಬ್ಬ ಕಳ್ಳ ಇದ್ದಾನೆ ಒಂದು ಸಿನೆಮಾ ನೋಡುತ್ತೇವೆ ಎಂದಾದರೆ ಅದರ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡೇ ಹೋಗುತ್ತೇವೆ. ಅದು ಇದು ಮಾತಾಡಿಕೊಂಡು ನಾವೇ ಒಂದು ನಿರ್ಧಾರ ಮಾಡಿಕೊಂಡು ಹಾ, ಈ ಸಿನಿಮಾ ಹೀಗಿರಬಹುದು ಎಂದು ಊಹಿಸಿಕೊಳ್ಳುತ್ತೇವೆ. ಆ ಪೂರ್ವಾಗ್ರಹವನ್ನು ಬದಲಿಸಿಬಿಡುವಂತಹ ಒಂದು ಸಿನಿಮಾಕ್ಕೆ ಇನ್ನೊಂದು ಹೆಸರೇ 'ಕೋಟಿ'. ಕೆಲವರು ಡಾಲಿ ಧನಂಜಯ್, ಇನ್ನು ಕೆಲವರು ಪರಂ  ಹೆಸರು ಕೇಳಿಯೇ ಈ ಸಿನಿಮಾ ನೋಡಲು‌ ನಿಶ್ಚಯಿಸಲು ನಿರ್ಧರಿಸಿರಬಹುದು. ಹಾಗೆ ಹೋಗುವುದು ಕೂಡ ಒಂದು ಮಟ್ಟಿಗೆ ಸರಿಯೇ. ನಾನಂತೂ ಕೋಟಿ ಸಿನಿಮಾವನ್ನು ಥಿಯೇಟರ್‌‌ನಲ್ಲೇ ನೋಡಲು ನಮ್ಮೂರಿನವರೇ ಆದ ಪರಮೇಶ್ವರ್​ ಗುಂಡ್ಕಲ್ ನಿರ್ದೇಶನವೇ ಕಾರಣ ಅನ್ನೋದು ಮುಚ್ಚುಮರೆ ಇಲ್ಲದ ಸತ್ಯ. ಈಗಂತೂ ಹಲವರು "ಬಿಡು, ಓಟಿಟಿಗೆ ಬಂದ ಮೇಲೆ ನೋಡಿದರಾಯ್ತು" ಎಂದು ಸುಮ್ಮನಾಗುತ್ತಾರೆ. ಕೆಲವು ಸಿನಿಮಾಗಳನ್ನು ನಾನು ಕೂಡ ಓಟಿಟಿಗೆ ಎಂದೇ ಮೀಸಲಿಡುತ್ತೇನೆ. ಆದರೆ ಈ ಚಿತ್ರ ನನಗೆ ಚೂರು ವಿಶೇಷವಾಗಿತ್ತು. ಚೂರು ಅಂದ್ರೇ ಚೂರೇ, ಹೆಚ್ಚೇನೂ ಇಲ್ಲ. ಹೌದು, ಆಮೇಲೆ ನಾನು ಇದನ್ನು ಅವರಿಗಾಗಿ ಅವರನ್ನು ಹೊಗಳುವುದಕ್ಕಾಗಿ ಬರೆಯುತ್ತಾ ಇದ್ದೇನೆ ಎಂದು ನೀವು ಅಂದುಕೊಳ್ಳಬಹುದು. ಆ ಅನಿವಾರ್ಯತೆಗಳೇನೂ ಸದ್ಯಕ್ಕಿಲ್ಲ. ಸಿನಿಮಾ ನೋಡುವ ಮುನ್ನ ಕೆಲವರ ಬಾಯಲ್ಲಿ ಒಂದು ವಿಷಯವನ್ನು ಕೇಳಿ ಹೌದಾಗಿರಬಹುದು ಎಂದುಕೊಂಡಿದ್ದೆ. 'ಸಿನಿಮಾ ಸುಮಾರಾಗೇ ಇದೆ. ಆದ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...