Skip to main content

ಆರಂಭ

ಪ್ರಿಯ ಓದುಗರೆ,

ಐದು ವರ್ಷಗಳಿಂದ ಅಣುಗಾತ್ರದ ಹೆಜ್ಜೆ ಇಟ್ಟು ಬರೆಯುತ್ತಾ ಬಂದವಳು ನಾನು.
ನನ್ನ ಕಿರುಗತೆ ಮತ್ತು ಕೆಲವು ಕವನಗಳನ್ನು ಓದಿ ಪ್ರೋತ್ಸಾಹಿಸಿದವರು ನೀವು. 

ಹೀಗೆ ನನ್ನ ಪ್ರಕಟಿತ ಬರಹಗಳನ್ನು ಓದಿ ಹುರಿದುಂಬಿಸಿದ ನಿಮ್ನೆಲ್ಲರ ಪ್ರೀತಿಯಿಂದ ನಾನು ಈ ಬ್ಲಾಗ್ ಆರಂಭಿಸುತ್ತಿದ್ದೇನೆ. ನನ್ನ ಕೆಲವು ಪ್ರಕಟಿತ ಬರಹಗಳು ಇಲ್ಲಿ ಮರುಕಳಿಸಬಹುದು. ಅದನ್ನೂ ನೀವು ಪ್ರೋತ್ಸಾಹಿಸುತ್ತೀರಿ ಎಂಬ ನಂಬಿಕೆ ನನ್ನಿಲ್ಲಿದೆ. 
ಬ್ಲಾಗ್ ಆರಂಭಿಸುವ ವಿಚಾರ ನನ್ನಲ್ಲಿದ್ದರೂ ಅದಕ್ಕೆ ರೂಪ ಕೊಡುವ ಕೆಲಸ ನನ್ನಿಂದಾಗಿರಲಿಲ್ಲ. ಯಲ್ಲಾಪುರ, ಶಿರಸಿ,ದಕ್ಷಿಣ ಕನ್ನಡ,  ನಾನಾ ಭಾಗದ ಓದುಗರು ಮತ್ತು ಬರಹಗಾರು ನನ್ನೊಟ್ಟಿಗಿದ್ದು ಅವರ ಕೆಲವು ನುಡಿಗಳು ನನಗೆ ಸ್ಪೂರ್ತಿ ತಂದಿದೆ. ನನ್ನೆಲ್ಲಾ ಸ್ನೇಹಿತರು ಬರಹಗಳನ್ನು ಓದಿ ಹುರಿದುಂಬಿಸಿದಕ್ಕಾಗಿ ನನ್ನ ಲೇಖನಿಗಳು ಹರ್ಷಪಡುತ್ತಿವೆ.
ವೈದ್ಯಕೀಯ ವೃತ್ತಿಯಲ್ಲಿದ್ದ ನನ್ನ ಅಕ್ಕ ಪುಟ್ಟ ಮಗುವನ್ನು ಪೋಷಿಸುತ್ತಾ. ನನ್ನೊಟ್ಟಿಗೆ ಈ ವಿಷಯ ಪ್ರಸ್ತಾಪಮಾಡಿದಾಗ. ಬರೆಯಲು ಸಮಯವಿಲ್ಲ ಎಂದುತ್ತರಿಸಿದ ನನಗೆ. ಅವಳ ದಿನದ ಕಾಯಕಗಳೇ ಸ್ಪೂರ್ತಿ. ಒಬ್ಬ ತಾಯಿಯಾಗಿ, ಮಡದಿಯಾಗಿ, ವೈದ್ಯೆಯಾಗಿ, ಕೆಲವೆಡೆ ಇನ್ನೂ ಕಲಿಕೆಯಲ್ಲಿ ನಿರತಳಾಗಿ, ಗೃಹಿಣಿಯೂ ಆಗಿ ಅವಳ ಸಮಯ ಪರಿಪೂರ್ಣ. ಕೇವಲ ವಿದ್ಯಾರ್ಥಿಯಾದ ನನಗೆ ಸಮಯವಿಲ್ಲ ಎಂಬ ಮಾತು.......?!

ಇನ್ನು ನನ್ನ ಪ್ರತಿಯೊಂದು ಬರಹಳನ್ನು ವೈಯಕ್ತಿಕವಾಗಿ ಓದಿ ವಿಮರ್ಶೆಮಾಡಿ ನನ್ನ ಕತೆಗಳಷ್ಟು ಉದ್ದದ ಪ್ರತ್ಯುತ್ತರ ನೀಡುತ್ತಿದ್ದ ಸುಜಾತಾ ಭಟ್ ಬಾಸಲ್ ಇವರನ್ನು ಸ್ಮರಿಸುತ್ತಾ, ಹಾಗೆ ಅವರೊಮ್ಮೆ ಒಂದು ಪೋಸ್ಟ ಕಳಿಸಿದ್ದರು ವಿದೇಶಿಗರೊಬ್ಬರ  ಬ್ಲಾಗ್ ಆರಂಭಿಸಿ ಮೂರ್ನಾಲ್ಕು ವರ್ಷಗಳೇ ಕಳೆದರು ಓದುಗರಿಲ್ಲ ಎಂದು ಅವರಿಗನಿಸಿ ಅವರು ಬರೆಯುವುದನ್ನು ನಿಲ್ಲಿಸಿ ಬಿಡುತ್ತಾರೆ. ಆಗ ಜನರು ಅವರ ಬರಹಗಳಿಗಾಗಿ ಕಾದು ಅವರಿಗೆ ಸಾವಿರಾರು ಸಂದೇಶಗಳು ತಲುಪಿದಾಗ ನಿಜವಾದ ಓದುಗರ ಸಂಖ್ಯೆ ಅರಿವಾಗುತ್ತದೆ. ಎನ್ನುವ ವಿಚಾರವೂ ನನಗೆ ಆಗಾಗ ನೆನಪಾಗುತ್ತಿತ್ತು. ಹಾಗೆ ಜನಮನ್ನಣೆ ದೊರಕದೇ ಹೋದರು ಒಂದಷ್ಟು ಆಸಕ್ತ ಮನಸ್ಸುಗಳು ನನ್ನೊಟ್ಟಿಗಿರುತ್ತಾರೆ ಎಂದು ನಂಬಿ ಮತ್ತು ಬರಹಗಳ ಸದಾ ಉಳಿವಿನ ಸಾಕ್ಷಿ ದಾಖಲೆ ಯಾಗಿಡಬಹುದು ಎಂಬ ಆಶಯದೊಂದಿಗೆ ಆರಂಭಿಸುತ್ತಿದ್ದೇನೆ.

ತಪ್ಪು ತಿದ್ದುಪಡಿಗಳಿಗೆ ಓಗುಡುತ್ತಾ. ಒಪ್ಪಿಗೆ ಮೆಚ್ಚುಗೆಗಳನ್ನು ಸ್ವೀಕರಿಸುತ್ತಾ. ಮುನ್ನುಡಿಯ ಅಲ್ಪವಿರಾಮದೊಟ್ಟಿಗೆ...
ಪೂರ್ಣವಿರಾಮದವರೆಗೂ ನಿಮ್ಮ ಸಹಕಾರ ಬಯಸುತ್ತೇನೆ.


                      ಇಂತಿ, 
                     ನಿಮ್ಮ ಸುಮಾ.ಕಂಚೀಪಾಲ್

ಪ್ರತಿಕ್ರಿಯೆಗಾಗಿ
sumagaonkar22@gmail.com

Comments

  1. ನಿಮ್ಮ ಬರಹವು ಉತ್ತಮವಾಗಿ ಮೂಡಿಬಂದಿದೆ ಮುಂದೆಯು ಬರುತ್ತದೆ ಎಂಬ ಭರವಸೆ ಇದೆ. ಒಳ್ಳೆಯದಾಗಲಿ.All the best suma👍

    ReplyDelete
  2. All the bestooooo Suma.........

    ReplyDelete
  3. ತುಂಬಾ ಚೆನ್ನಾಗಿದೆ ಹೀಗೆಯೇ ಸುದೀರ್ಘವಾಗಿ ಮುಂದುವರಿಸಿ

    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...