Skip to main content

ಮಕ್ಕಳ ಪ್ರೀತಿಯ ಚಿಕ್ಕಪ್ಪ

ಮಕ್ಕಳ ಪ್ರೀತಿಯ ಚಿಕ್ಕಪ್ಪ.

ಪ್ರಸಾದ ಮಾವನ ಬಾಲ್ಯ ಅಮ್ಮಾಜಿಯ ನೆಚ್ಚಿನಲ್ಲಿತ್ತು ಮನೆಯ ಬುಡದಲ್ಲೇ ಇರುವ ಹಳ್ಳ ಒಂದಕ್ಕೆ ದಿನವೂ ಹೋಗಬೇಕೆಂಬ ಹಠ. ಅದಕ್ಕೆಂದೇ ಮುದುಕಾದ ಅಮ್ಮಾಜಿ ನಿಧಾನಕ್ಕೆ ನಡೆದು ಬಂದು ಮನೆ ಮುಂದಣ ಹಳ್ಳದಂಚಲ್ಲಿ ಇವನನ್ನು ಕಾಯುತ್ತಾ ಕುಳಿತಿರುತ್ತಿದ್ದರಂತೆ. ಇವನ ಹಳ್ಳದ ಆಸೆ ತೀರಿಸಿದ ಅಮ್ಮಾಜಿಯ ಹಾಗೆ ಇವನು ಉಳಿದ ಮಕ್ಕಳಿಗೆ ಹಳ್ಳದ ಆಸೆ ತೀರಿಸುವ ಪ್ರೀತಿಯ ಚಿಕ್ಕಪ್ಪ.

ಇವನಿಗೆ ಮನೆಯ ಅಣ್ಣನ ಮಕ್ಕಳೆಂದರೆ ಬಲು ಪ್ರೀತಿ ಪ್ರಸಾದ ಚಿಕ್ಕಪ್ಪ ಎಂದರೆ ಅಷ್ಟೂ ಮಕ್ಕಳಿಗೆ ಜೀವಂತ ಆಟದ ಖುಷಿಯ ಸ್ವತ್ತು.. ಎಲ್ಲರನ್ನು ಹೆಗಲ ಮೆಲೆ ಹೊತ್ತು ಕುಣಿಸಿ ಮಾತಾಡಿಸಿ, ಕೆಲವೊಮ್ಮೆ ಗದರಿ ಮಾತಾಡಿಸಿ ಅವರ ತಪ್ಪು ತಿದ್ದುತ್ತಿದ್ದ. ಕರೆದರೆ ಓಗುಡುವ ಪಾಠವಂತು ಇವನಿಂದಲೇ ಎಲ್ಲರು ಕಲಿಯುತ್ತಿದ್ದರು.  ಶಾಮ, ಅಹನಾ, ಮೇಧಿನಿ, ಅದಿತಿ, ಗೌತಮ, ಅದ್ವೈತ, ಇನ್ನು ಅವನ ಮಾವನ ಮಕ್ಕಳಾದ ಭುವನ, ಮಿತ್ರ ಇಷ್ಟು ಪುಟ್ಟ ಮಕ್ಕಳು ನಾಲ್ಕು ವರ್ಷದ ಒಳಗಿನವರು. ಪ್ರಗತಿ, ಪ್ರಥಮ, ಸತೀಶ, ಪ್ರಸನ್ನ ನಾವು ಸಲ್ಪ ದೊಡ್ಡವರು.


ಅವರ ಅಪ್ಪ ಅಮ್ಮಂದಿರಿಗೆ ಮಕ್ಕಳು ಪ್ರಸಾದನೊಟ್ಟಿಗೆ ಇದ್ದಾರೆ ಎಂದರೆ ಯಾವ ಚಿಂತೆಯೂ ಇಲ್ಲ. ಅಷ್ಟು ವಿಶ್ವಾಸದಿಂದ ಇವನೊಟ್ಟಿಗೆ ಕಳಿಸಿ ಕೊಡುತ್ತಿದ್ದರು. ಇವನ ಜೊತೆ ಅವರೆಲ್ಲ ಓಡೋಡಿ ಬರಲು ಕಾರಣವೆಂದರೆ ಹಳ್ಳಕ್ಕೆ ಈಜು ಹೊಡೆಯಲು ಕರೆದುಕೊಂಡು ಹೋಗುತ್ತಾನೆ ಎಂಬುದು. ಅವರನ್ನೆಲ್ಲಾ ಬೆನ್ನ ಮೇಲೆ ಕುರಿಸಿಕೊಂಡು ನೀರಾಟವಾಡಿಸುತ್ತಿದ್ದ. ಮಕ್ಕಳಿಗೆ ನೀರಿಗಿಂತ ಹರ್ಷಕೊಡುವ ಸಂಗತಿ ಮತ್ತೊಂದಿಲ್ಲ. ಹಾಗೆ ಚಿಕ್ಕಪ್ಪನಷ್ಟು ಮೋಜು ಕಲಿಸುವವರು ಮತ್ಯಾರಿಲ್ಲ. ಮಕ್ಕಳನ್ನು ಕಂಡರೆ ಅವನ ಕಣ್ಣು ಬಟ್ಟಲುಗಳು ಅರಳುತ್ತಿದ್ದವು. ಮುತ್ತಿಟ್ಟು ಅವರನ್ನು ಕಾಡುತ್ತಾ, ಕೆಣಕುತ್ತಾ, ರೇಗುತ್ತಾ, ಕೂಗುತ್ತಾ ಅವರ ನೆಚ್ಚಿನ ಚಿಕ್ಕಪ್ಪನಾಗಿದ್ದ.
ಅವರೆಲ್ಲರನ್ನು ಸದಾ ಪ್ರೀತಿಯಿಂದ ಮಾತನಾಡಿಸಿ ಮಕ್ಕಳೊಡನೆ ಮಕ್ಕಳಾಗಿ ಆಡಿ ಸಮಯ ಕಳೆದವ ಅವನು.

ಇದು ನಮ್ಮ ಬಾಲ್ಯ

ನಾನು ಮತ್ತು ಅವನು ಚಿಕ್ಕವರಿರುವಾಗ ಒಂದು ಮರದ ಏಣಿಯಮೇಲೆ ಕೂತು ಬೈಕು,ಕಾರು,ಬಸ್ಸು ವಿಮಾನ‌ ಓಡಿಸುವ ಆಟ ಆಡುತ್ತಿದ್ದೆವು. ನನ್ನ ಮೊದಲ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಅವನ ಹೆಸರಿನಲ್ಲಿ ಅಜ್ಜ ಕೊಡಿಸಿದ ಸಣ್ಣ ಕೂರ್ಚೆ ಇನ್ನು ಹಾಗೇ ಇದೆ. ಮೊನ್ನೆ ಬಂದವನು ನಾನು ಇದರಲ್ಲೊಮ್ಮೆ ಕುಳಿತು ಕೊಳ್ಳುತ್ತೇನೆ ಎಂದ ಇಲ್ಲ ಇದು ನಿನ್ನ ಭಾರ ತಡಿಯೋದಿಲ್ಲ ಎಂದು ಕಸಿದು ಕೊಂಡಿದ್ದೆ.


ನಮ್ಮ ಮನೆಗೆ ಯಾವ ಸಣ್ಣ ಮಕ್ಕಳು ಬಂದರೂ ಅದರಲ್ಲಿ ಕುಳಿತುಕೊಳ್ಳುತ್ತಾರೆ. ಇಪ್ಪತ್ತೆರಡು ವರ್ಷಗಳಿಂದ ನಾನು ಅದನ್ನು ಜೋಪಾನ ಮಾಡಿಕೊಂಡು ಬಂದಿದ್ದೇನೆ ಮತ್ತೆ ಯಾರಾದರೂ ಕುಳಿತು ಬಿಡಬಹುದು ನಾನು ಮನೆಯಲ್ಲಿ ಇರದಾಗ ಎಂಬ ಕಾರಣಕ್ಕೆ ಮೆತ್ತಿನ ನನ್ನ ಕೋಣೆಯಲ್ಲಿ ಯಾರಿಗೂ ಸುಲಭಕ್ಕೆ ಸಿಗದ ಹಾಗೆ ಇಟ್ಟಿದ್ದೇನೆ.  ಇನ್ನು ನಾನು ಅವನು ಕೂಡಿ ಹಳ್ಳದ ಬದಿಯಲ್ಲಿ ಕಲ್ಲು ಹೆಕ್ಕುವುದು ಆಟಕ್ಕೆಂದು ದುಪ್ಪಟದಲ್ಲಿ ಮೀನ, ಮಂಡೂಕ ಹಿಡಿಯುವುದು. ಮನೆಯ ಬುಡದ ಮರದ ಚುಂಚಿಹಣ್ಣು ಕೊಯ್ದು ತಿನ್ನುವುದು ಇವೆಲ್ಲವೂ ಸದಾ ಕಾಲಕ್ಕೂ ಪ್ರಿಯವಾದ ಕಾರ್ಯವಾಗಿತ್ತು.

ನಾನು ಹೊಸದೊಂದು ವಾಚು ಕರೀದಿಸಿ ತೊಟ್ಟಿದ್ದೆ. ಅದು ವಾಟರ್ ಪ್ರೂಪ್ ಎಂದು ನಾನು ಹೇಳಿದ್ದೆ. ಅದು ನಿಜವೋ? ಸುಳ್ಳೋ!! ನೋಡಲು ಅವನು ಹಳ್ಳದಲ್ಲಿ ಐದಾರು ನಿಮಿಷ ಮುಳಿಗಿಸಿ ಇಟ್ಟು ತೆಗೆಯುವಷ್ಟರಲ್ಲಿ ಅದರಲ್ಲಿ ಇಬ್ಬನಿ ಕಟ್ಟಿ ವಾಚು ನಿಂತಿತ್ತು. ಮನೆಯಲ್ಲಿ ಹೇಳಿದರೆ ಬೈತಾರೆ ಅಂತ ಇಬ್ಬರು ಸೇರಿ ಬಿಸಿಲಿಗೆ ಒಣಗಿಸಿ ಎರಡು ಸಲ ತಲೆ ಮೇಲೆ ಬಡಿದಾಗ ಮುಳ್ಳು ತಿರುಗಲಾರಂಭಿಸಿತ್ತು. ಅದೇ ಘಟನೆಯನ್ನು ಹಲವಾರು ಸಾರಿ ಅವನು ನೆನಪು ಮಾಡಿ ನಗುತ್ತಿದ್ದ.ನಾನು ಕೋಪಿಸಿಕೊಳ್ಳುತ್ತಿದೆ.


ಎಷ್ಟು ಹೇಳಿದರು ಮುಗಿಯದ ಕತೆಗಳು ನನ್ನಲ್ಲಿವೆ. ಆಗಾಗ ಅವನನ್ನು ನನ್ನ ಬರಹದಲ್ಲಿ ಜೀವಂತ ಇಡಲು ಬಯಸುತ್ತೇನೆ. ಬರೆದಿಲ್ಲ ಇನ್ನು ಕೆಲವೇ ದಿನಗಳಲ್ಲಿ ಆ ಘಟನೆಗಳು ಮರೆತೇ ಹೋಗುತ್ತದೆ ಎಂಬ ವಿಷಯಗಳಂತು ಇಲ್ಲವೇ ಇಲ್ಲ. ಸದಾ ನನ್ನ ಬರಹಗಳಲ್ಲಿ ನಾನು ಅವನನ್ನು ಜೀವಂತವಾಗಿಡುತ್ತೇನೆ. ನೀವು ಅವನನ್ನು ಈ ಮೂಲಕ ತಲುಪಬಹುದು.

ಸುಮಾ.ಕಂಚೀಪಾಲ್
sumagaonkar22@gmail.com
 

Comments

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...