Skip to main content

Posts

ಮಳೆ

ಅವಧಿ ಮಳೆ - ಇಳೆ ಜೋರಾಗಿ ಬೀಸುವ ಗಾಳಿ ಮರಗಿಡಗಳ ನಲುಗಿಸಿತು ಹಸಿರು ಹಾಸಿದ ಇಳೆಯ ನಡುಗಿಸಿತು ಗುಡುಗು ಮೊಳಕೆಯೊಡೆದು ಮಿಂಚ ಹೂ ಬಿಟ್ಟಿತು ಬಾನಿಂದ ಭುವಿಯಗಲ ಎಲ್ಲ ಬೆಳಗಿಸಿತು. ಹಾಸಿ ಹಬ್ಬಿದ ಹಸಿರು ಕಣ್ಮನ ಸೆಳೆದು ಫಲ ತಂತು ಅಬ್ಬರಿಸದಿರು ಮಳೆಯೇ ಸ್ವಲ್ಪ ನಿಧಾನಿಸಿ ಸುರಿದು ಬಿಡು ಈ ಇಳೆಯ ದಾಹ ತಣಿದಿದೆ ಮತ್ತೆ ಭೂರಮೆ ಕಾಯ್ವುದು‌. ಹೀಗೆ ಸುರಿದು ಬಿಡು ಮುಂದೊಮ್ಮೆ ನನ್ನ ಮಕ್ಕಳ ಮಕ್ಕಳು ನಿನ್ನ ನೋಡಲಿ ಸುಮಾ.ಕಂಚೀಪಾಲ್

ಆಟಿ

ಆಟಿ ತುಳುನಾಡಿನ ಸಂಸ್ಕೃತಿಯ ಪರಿಚಯ ಮಾಡಿಸುವುದಕ್ಕಾಗಿ ಮತ್ತು ಹಬ್ಬದ ಆಚರಣೆ ಖುಷಿಯನ್ನು, ಊಟದ ರುಚಿಯನ್ನೂ ಅರಿಯುವುದಕ್ಕಾಗಿ ಈ ಆಟಿ  ಹಬ್ಬವನ್ನು ಎಸ್.ಡಿ. ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿತ್ತು. ಹುಡುಗ ಹುಡುಗಿಯರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು, ಹೆಣ್ಣು ಮಕ್ಕಳೆಲ್ಲ ಸೀರೆ, ಹುಡುಗರು ಪಂಚೆ ಉಟ್ಟು ರತ್ನಮಾನಸ ಎಂಬ ವಸತಿನಿಲಯದಲ್ಲಿ ಹಾಜರಿದ್ದರು.‌ ಕಣ್ಣಿಗಂತು ಹಬ್ಬ ಚಂದ ಚಂದದ ಬಣ್ಣ, ಬಣ್ಣದ ಲೋಕ ಅಲ್ಲಿ ಸೃಷ್ಟಿಯಾಗಿತ್ತು. ತೀರಾ ಸಾಂಪ್ರದಾಯಿಕ ಎನಿಸುವ ಹಳೆಯ ಕಾಲದ ಕಟ್ಟಡ, ಅಲ್ಲಿದ್ದ ಮರದ ವಸ್ತುಗಳು, ಹೊರಜಗುಲಿ, ಪಾಠಶಾಲೆ, ಒಳಾಂಗಣ ವಿನ್ಯಾಸ ಎಲ್ಲವೂ ಗುತ್ತು ಮನೆಯ ಶೈಲಿಯಲ್ಲಿತ್ತು. ನನಗೆ ಇದು ಹೊಸತರ ಎನಿಸಿತ್ತು.  ರತ್ನಮಾನಸ ಬಾಳೆಲೆ ಊಟ ಮನೆಯ ಮೆತ್ತು ಹತ್ತಿದಂತೆ ಮೇಲ್ಗಡೆ ಮೆಟ್ಟಿಲೇರಿ ಹೋದಾಗ ಅಲ್ಲಿ ಪುಟ್ಟದೊಂದು ವೇದಿಕೆ ಸಿದ್ಧವಾಗಿತ್ತು. ಅಲ್ಲಿ ಕಹಿ ಔಷದಿಯ ಹಾಲೆ ಮರದ ಚಕ್ಕೆಯ ಕಷಾಯ ಮಾಡುವ ವಿಧಾನದ ಬಗ್ಗೆ ಮತ್ತು ಈ ಆಟಿ ಮಾಸದಲ್ಲಿ ಹೊಸ ಪೈರು ಇಲ್ಲದೆ ಹಳೆ ಪೈರುಗಳು ಸಹ ಖಾಲಿಯಾಗಿ ಮನೆಯವರು ಮಳೆಗಾಲದಲ್ಲಿ ಕಂಗಾಲಾಗುವ ದಿನದ ಕಥನವಿತ್ತು.ಅದರಲ್ಲಿ ಕುತೂಹಲಕಾರಿಯಾದ ವಿಷಯವೆಂದರೆ  ಮನೆಯ ಗಂಡಸರೊಬ್ಬರು ಮರದ ಹತ್ತಿರ ಹಿಂದಿನ ದಿನ ಹೋಗಿ ನಾಳೆ ಬರುತ್ತೇನೆ ನಿನ್ನಲ್ಲಿಯ ಔಷದೀಯ ಗುಣಗಳು ಹೆಚ್ಚಿರಲಿ ಎಂದು ಬೇಡಿಕೆ ಸಲ್ಲಿಸಿ ಬರುವುದು. ಬಂದು ಮರುದಿನ ಬೆತ...

one day in SDM

Beauty is still alive in dead plants and raindrops ( beauty ) Even though there is nothing, there is a sense of peace ( peace )  Eyes that saw only food ( Wonder ) Don't worry about tomorrow and smile today. ( happy ) Subject :  ಸುಮಾ.ಕಂಚೀಪಾಲ್ 

ಬಾವಲಿಗಳು ಪರಿಸರಕ್ಕೆ ಪೂರಕ

ಅಳಿವಿನಂಚಿನಲ್ಲಿರುವ ಬಾವಲಿಗಳು ಅಪಶಕುನವೆಂದು ನಿರಾಕರಣೆಗೊಳ್ಳುತ್ತವೆ. ಆದರೆ  ಬಾವಲಿಗಳು ಪರಿಸರಕ್ಕೆ ಅತೀ ಅವಶ್ಯಕ. ಸದಾ ಗುಂಪಿನಲ್ಲಿ ವಾಸಿಸುವ  ಬಾವಲಿಗಳು ಗುಹೆ,  ಪಾಳುಬಿದ್ದ ಮನೆ, ಹಳೆಯ ಕೊಟೆ, ಹೀಗೆ ನಿರ್ಜನ ಪ್ರದೇಶದಲ್ಲಿ ವಾಸಿಸುತ್ತವೆ. ಆದರೆ ಉಜಿರೆಯ ಅಜ್ಜರ ಕಲ್ಲು ಮೈದಾನದ ಸುತ್ತಲಿನ ಪ್ರದೇಶದಲ್ಲಿ ಜನ ಸಂಚಾರ ಹಾಗೂ ವಾಹನಗಳ ಶಬ್ಧಗಳ ನಡುವೆಯು ಪ್ಲೇಯಿಂಗ್ ಪಾಕ್ಸ ಎಂಬ ಪ್ರಬೇಧದ ಬಾವಲಿಗಳು  ವಾಸಿಸುತ್ತಿವೆ. ಸಂಜೆಯಾಗುತ್ತಿದ್ದಂತೆ ಆಹಾರ ಹುಡುಕಾಟಕ್ಕೆ ತೆರಳುವ ಈ ನಿಶಾಚರಿ ಬಾವಲಿಗಳು ರಾತ್ರಿ ತಮ್ಮ ಕಾರ್ಯಮುಗಿಸಿ ಬೆಳಕು ಹರಿಯುವ ಮುನ್ನ  ತಮ್ಮ ವಾಸಸ್ಥಾನಕ್ಕೆ ಮರಳುತ್ತವೆ. ಈ ದೊಡ್ಡ ಬಾವಲಿಗಳು ಹಣ್ಣು ಹಾಗೂ ಹೂವಲ್ಲಿನ ಮಕರಂದ ಹೀರಿ ಜೀವಿಸುತ್ತವೆ. ದೊಡ್ಡ ಬಾವಲಿಗಳು 40 ರಿಂದ 150 ಗ್ರಾಂ ತೂಕವಿದ್ದು, ಒಂದೇ ಹಾರುತ್ತಿರುವಾಗ ಹದ್ದಿನಂತೆ ಕಾಣುತ್ತದೆ.ಕ ಕತ್ತಲಾಗುತ್ತಿದ್ದಂತೆ ಐದು ನಿಮಿಷ ಆಕಾಶದ ಕಡೆ ಮುಖಮಾಡಿದರೆ ಸಾಕು, ಆಹಾರ ಅರಸಿ ಹೋಗುವ ಬಾವಲಿಗಳ ಹಿಂಡು ಕಾಣುತ್ತದೆ. ಪಕ್ಷಿಗಳಂತೆ ಸ್ವತಂತ್ರವಾಗಿ ಹಾರಾಡುವ ಸಾಮರ್ಥ್ಯವುಳ್ಳ ಏಕೈಕ ಸಸ್ತನಿ ಎಂದರೆ ಅದು ಬಾವಲಿಮಾತ್ರ. ಶಬ್ದ ತರಂಗಗಳ ಮೂಲಕ ಧ್ವನಿ ಗ್ರಹಿಸುವ ವಿಶೇಷ ಸಾಮರ್ಥ್ಯವನ್ನು ಬಾವಲಿಗಳು ಹೊಂದಿವೆ. ಬಾವಲಿಗಳಲ್ಲಿ ಇತರ ಪ್ರಾಣಿಗಳಂತೆ ಗಡಿ ಸಮಸ್ಯೆಯೂ ಇರುತ್ತದೆ, ಇದಕ್ಕಾಗಿ ಕೆಲ ಸಂಧರ್ಭದಲ್ಲಿ ಇವುಗಳ ನಡುವೆ ಕಾದಾ...

sukamclicks

ಕೊಳದಲಿ ಅರಳಿದ ಕಮಲ ಕುಸುಮ ಬಂಗಾರ ಬದುಕು ಹವಳ ಗಲ ಗುಡುವ ಗಾಜಿನ ಬಳೆ ನಕ್ಷತ್ರಿಕೆ ಸುಮಾ.ಕಂಚೀಪಾಲ್

ಅಳು

ಸುಕಂ ಅಳು ಚಿಕ್ಕ ಮಗುವಿಗೆ ಹಸಿವಿನ ಅಳು ಅಮ್ಮನಿಗೆ ಕಂದನ ಅಳು ಯಜಮಾನನಿಗೆ ಹಣದ ಅಳು  ಮಗಳಿಗೆ ಅಪ್ಪನ ಬೈಗುಳದ ಅಳು ಮಗನಿಗೆ ಬಿದ್ದು ಪೆಟ್ಟಾದ ಗಾಯದ ಅಳು ಮನೆಯ ಹಿರಿಯನಿಗೆ ವೃದ್ಧಾಪ್ಯದ ಅಳು ಮದುವೆಯಾಗದೆ ಉಳಿದವಳಿಗೆ  ಬದುಕಿನ ಅಳು. ವಿಧವೆಗೆ ಗಂಡನಿಲ್ಲವೆಂಬ ಅಳು  ಕೈ ಕಾಲುಗಳಿಗೆ ಸ್ವಯ ಇಲ್ಲದವರಿವೆ  ಅಂತರಂಗದ ಅಳು ಕೆಲಸ ಸಿಗದವನಿಗೆ ಕೀಳರಿಮೆಯ ಅಳು.  ಹಾ!! ಸಾಕು ಇಂತಹ ಸಾವಿರಾರು  ಅಳು ಅಳುಕಿಲ್ಲದೆ ಇದೆ.  ಸುಮಾ.ಕಂಚೀಪಾಲ್

ಮಳೆ ಮತ್ತು ಮ್ಯಾಗಿ

ಮಳೆ ಮತ್ತು ಮ್ಯಾಗಿ ಈ ಎರಡು ಪದಗಳನ್ನು ಓದಿದ ತಕ್ಷಣ ನಿಮ್ಮೆಲ್ಲರ ಮನಸಿನಲ್ಲಿ‌ ಒಂದು ರುಚಿಯಾದ ಕಲ್ಪನೆ ಬರುವುದಂತು ಸತ್ಯ. ಮಳೆಯಲ್ಲಿ ನೆನೆದ ತಣ್ಣಗಿನ‌ ಮೈಗೊಂಚೂರು ಬಿಸಿ ತಾಕಿದರೆ ಸಾಕು ಅದೊಂದು ತರದ ರೋಮಾಂಚನ. ಆದರೆ ಅದೇ ಬಿಸಿ ಮ್ಯಾಗಿಯ ರೂಪದಲ್ಲಿ ಮೈಯೊಳಗಿಳಿದರೆ ಅದೊಂದು ಅನುಭೂತಿ. ಈ ಮ್ಯಾಗಿಗೆ  ಸ್ಪೂರ್ತಿ ಗೆಳತಿ , ಸ್ಪೂರ್ತಿ ಎರಡೇ ನಿಮಿಷದಲ್ಲಿ ತಯಾರಿಸಬಹುದು ಎಂದು ಬರೆದಿದ್ದರೂ, ಐದು ನಿಮಿಷಗಳವರೆಗೆ ನಮ್ಮನ್ನು ಕಾಯಿಸಿ‌ ಬೇಯುವ ಈ ಮ್ಯಾಗಿ ಎಳೆಗಳು ಅದರ ಮಸಾಲೆಯ ಪರಿಮಳ ಆಹಾ! ಮಳೆ ಬಂದಾಗ ಅಂಗಡಿಯಲ್ಲೂ ಕೊಂಡು ತಿಂದ ಮ್ಯಾಗಿ ಸುಲಭವಾಗಿ ದಕ್ಕುವ ಸರಳ ಬೆಲೆಯ ಮ್ಯಾಗಿ ಎಷ್ಟೋ ಜನರ ಪ್ರೀತಿಯ ತಿಂಡಿ. ಅದರಲ್ಲೂ ಹಾಸ್ಟೆಲ್ ಹುಡುಗಿಯರ ಸುಲಭ ಸಾಧನ ಇಸ್ತ್ರಿ ಪೆಟ್ಟಿಗೆಯಲ್ಲಿ ಬೇಕಾದರೂ ಬೇಯಿಸಿ ತಿನ್ನಬಹುದಾದ ತಿಂಡಿ ಇದು. ಹೀಗೆ ಬೇಯಿಸಿ ತಿನ್ನುವ ಕಲೆ ತಿಳಿದಿರುವುದು ಹಾಸ್ಟೆಲ್ ಅಲ್ಲಿ  ಹಸಿವನ್ನು  ಕಂಡವರಿಗೆ ಮಾತ್ರ ಗೊತ್ತು.‌  ಚೀಸ್ ಮತ್ತು ಕಾರ್ನ ಮ್ಯಾಗಿ ಪದೆ ಪದೆ ಅಪ್ಪನಿಂದ ಬಯಿಸಿಕೊಳ್ಳುವ ಮ್ಯಾಗಿ ಮಳ್ಳು ಬಿಡುವುದಾದರು ಯಾವಾಗ?  ಈ ಮ್ಯಾಗಿಯನ್ನೇ ಕೇಳಬೇಕು.. ನೀನು ನನ್ನ ಬಿಡುವುದು ಯಾವಾಗ ಎಂದು. ನನ್ನಂತೆ ನಿಮಗೂ ಇಷ್ಟವಿರಬಹುದು ಇದೇ ಮ್ಯಾಗಿ.  ಅಜ್ಜನ ಮನೆಯ ಕಿಡಕಿಯಲ್ಲೂ ಕಾಡಿದ ಮ್ಯಾಗಿ  ಸುಕಂ