ಅವಧಿ
ಮಳೆ - ಇಳೆ
ಜೋರಾಗಿ ಬೀಸುವ ಗಾಳಿ
ಮರಗಿಡಗಳ ನಲುಗಿಸಿತು
ಹಸಿರು ಹಾಸಿದ
ಇಳೆಯ ನಡುಗಿಸಿತು
ಗುಡುಗು ಮೊಳಕೆಯೊಡೆದು
ಮಿಂಚ ಹೂ ಬಿಟ್ಟಿತು
ಬಾನಿಂದ ಭುವಿಯಗಲ
ಎಲ್ಲ ಬೆಳಗಿಸಿತು.
ಹಾಸಿ ಹಬ್ಬಿದ ಹಸಿರು
ಕಣ್ಮನ ಸೆಳೆದು ಫಲ ತಂತು
ಅಬ್ಬರಿಸದಿರು ಮಳೆಯೇ
ಸ್ವಲ್ಪ ನಿಧಾನಿಸಿ ಸುರಿದು ಬಿಡು
ಈ ಇಳೆಯ ದಾಹ ತಣಿದಿದೆ
ಮತ್ತೆ ಭೂರಮೆ ಕಾಯ್ವುದು.
ಹೀಗೆ ಸುರಿದು ಬಿಡು ಮುಂದೊಮ್ಮೆ
ನನ್ನ ಮಕ್ಕಳ ಮಕ್ಕಳು ನಿನ್ನ ನೋಡಲಿ
ಸುಮಾ.ಕಂಚೀಪಾಲ್
😍
ReplyDelete