ಚೌತಿಗೆ ಊರಿನ ಬಸ್ಸು ಹತ್ತಿ,
ಇಡೀ ಬೆಂಗಳೂರನ್ನು ಸುತ್ತಿ.
ಊರಿಗೆ ಹತ್ತಿರವಾಗುತ್ತಿರಲು,
ಕಂಡಿದ್ದು ಹಲವು ನೋಟಗಳು...
ಒಂದು ಗುಡಿಸಲು, ಇನ್ನೊಂದು ಮಹಲು,
ಅಗಲವಾದ ರಸ್ತೆ, ಅದರಲ್ಲಿ ಚಿಕ್ಕ ಬೈಕು.
ಅಂದು ತಿಂಡಿ ತಿಂದ ಹೊಟೇಲು,
ಓಡುವ ಕಾರು, ನಿಂತಲ್ಲೇ ನಿಂತು ಇತರರನ್ನು ತೂರಿಸುವ ಬಾರು.
ಉದ್ದುದ್ದದ ಫ್ಲೈಓವರು,
ಐಷಾರಾಮಿ ಹೊಟೇಲನಂತೆ ಕಾಣುವ ಆಸ್ಪತ್ರೆಗಳು.
ಒಂದಾದ ಮೇಲೊಂದು ಸಿಗ್ನಲ್ಲು,
ರಾಮೇಶ್ವರಂ ಕೆಫೆಯಲ್ಲಿ ತುಂಬಿ ನಿಂತ ಜನರು,
ಮಾಲ್‍ಗಳ ಮುಂದಿರುವ ಹೊಳಪಿನ ಬೋರ್ಡು.
ಮರ-ಮರವನ್ನು ಮೆರುಗುಗೊಳಿಸುವ ಬಣ್ಣದ ಬಲ್ಬು,
ಸುತ್ತಿ ಸುತ್ತಿ ತಿರುಗಿಸುವ ಗೂಗಲ್ ಮ್ಯಾಪಿನ ಸಿಗ್ನಲ್ಲು.
ಕಾಲ ತುದಿಯಲ್ಲೇ ಇಟ್ಟುಕೊಂಡ ಬ್ಯಾಗು,
ಒಂದೇ ಕೈಯಲ್ಲಿ ತೆರೆಯಲು ಒದ್ದಾಡಬೇಕಾದ ಕಿಟಕಿ ಗ್ಲಾಸು.
ಸೆಕೆ, ಉರಿ, ತ್ರಾಸು...
ನಿದ್ರೆ ಬಂದರೆ ಅದೇ ಲೇಸು
ಸುಮಾ. ಕಂಚಿಪಾಲ್
Comments
Post a Comment