Skip to main content

ಅವನೆಟ್ಟ ಗಿಡ ಹೂ ಬಿಟ್ಟ ದಿನ

ಐದು ತಿಂಗಳ ಹಿಂದೆ ನಮ್ಮೆಲ್ಲರನ್ನು ಭೌತಿಕವಾಗಿ ಅಗಲಿದ ಆ ಎಳೆ ಜೀವ ನೆಟ್ಟ ದಾಸವಾಳದ ಗಿಡ ಹೂ ಬಿಟ್ಟದೆ. ಈ ವಿಷಯ ಅವನ‌ ಚಿಕ್ಕಮ್ಮನಿಂದ ತಿಳಿದು ಖುಷಿ, ಒಟ್ಟಿಗೊಂದು ಸಹಿಸಲಾರದ ದುಃಖ ಎದೆಕಟ್ಟಿತ್ತು. ಅವನು ಆನ್ ಲೈನ್ ಕ್ಲಾಸಿಗೆಂದು ಅಜ್ಜಿಮನೆಗೆ ಹೋದಾಗ ನೆಟ್ಟ ಗಿಡಗಳ ಸಾಲಿನ ಪೋಟೊ ಒಂದು ನನ್ನ ಗ್ಯಾಲರಿಗೆ  ಬಂದು ಕೂತಿತ್ತು. ಬಹುಶಃ ಅವನು ಬದುಕಿದ್ದರೂ ಅದೇ ಪೋಟೊಗಳು ನನ್ನ ಗ್ಯಾಲರಿಯಲ್ಲಿ ಇರುತ್ತಿತ್ತು. ಸ್ವತಃ ಅವನೆ ಪೋಟೊ ಕಳಿಸುತ್ತಿದ್ದ ಈಗ ಇನ್ಯಾರೊ ಅಷ್ಟೇ ವ್ಯತ್ಯಾಸ ಆದರೂ ಈ ವ್ಯತ್ಯಾಸದ ನೋವು ಕೊಂಚ ಕಟುವಾಗಿಯೇ ಕಾಡುತ್ತಿದೆ.

ಅವನದೇ ವಯಸಿನ ಯಾರೊಬ್ಬರನ್ನು ಕಂಡರೂ ತಕ್ಷಣ ನೆನಪಾಗುತ್ತಾನೆ‌. ನಾನು ಮತ್ತೆ ಪ್ರಸಾದನ ಕುರಿತು ಬರೆಯಲು ಕೂತದ್ದು ಯಾಕೆಂದರೆ ಒಂದಷ್ಟು ಮುಖ್ಯ ಘಟನೆಗಳು ನನ್ನನ್ನು ಈ ಬರಹ ಬರೆಯಲು ಪ್ರೇರೇಪಿಸಿತು. ಅದೇನೆಂದರೆ ಇತ್ತೀಚೆಗೆ ಹದಿನೈದು ದಿನಗಳ ಒಳಗಾಗಿ ಜರುಗಿದ ಎರಡು ಬೈಕ್ ಅಪಘಾತಗಳು. ಇವನದೇ ವಯಸ್ಸಿನ ಇಬ್ಬರು ವ್ಯಕ್ತಿಗಳು ವಜ್ರಳ್ಳಿ ಗ್ರಾಮದ ಸುರೇಂದ್ರ ಮತ್ತು ಉಜಿರೆಯ ತೇಜ ಎಂಬಿಬ್ಬರ ಮರಣದ ಸುದ್ದಿ ಮತ್ತೆ ನನ್ನನ್ನು ಅವನ ಸಾವಿನ ದಿನಗಳೆಡೆಗೆ ಸೆಳೆಯಿತು. ಇಂತದೆ ಘಟನೆಗಳಿಂದ ಆಗಾಗ ಮುಳ್ಳು ಚುಚ್ಚಿ ಅಡಿಯಲ್ಲೇ ಕೀವಾಗಿ ಹೊರಬರುವಷ್ಟು ಸಂಕಟವಾಗುತ್ತಿದೆ.

ಅವನೆಟ್ಟ ದಾಸವಾಳದ ಗಿಡ

ಅವರ ನಗುಮೊಗದ ಭಾವಚಿತ್ರಗಳು ಕೂತಲ್ಲಿ ನಿಂತಿಲ್ಲಿ ಬಿಡದೇ ಕಾಣುತ್ತವೆ, ಕಾಡುತ್ತವೆ. ಎಷ್ಟು ಬಾರಿ ಅವರ ವಿಚಾರವಾಗಿ ಇನ್ನೊಬ್ಬರಲ್ಲಿ ಮಾತಿಗಿಳಿಯಬಾರದು ಎಂದಾದರೂ ಯಾವುದಾದರೊಂದು ವಿಚಾರಕ್ಕೆ ಸನ್ನಿವೇಶಕ್ಕೆ ಅವನದೇ ಉದಾಹರಣೆಗಳು ನನ್ನ ಬಾಯಿಂದ ಉಸುರುತ್ತವೆ. ಅವನ ವಿಚಾರ ಹೇಳುತ್ತಾ ನಗುತ್ತಿದ್ದಂತೆಯೇ ಕಣ್ಣುಗಳಲ್ಲಿ ಹನಿಗಟ್ಟುತ್ತವೆ. ಎಲ್ಲರೆದುರು ಉದುರಿದ ಕಣ್ಣೀರಿನ ಹನಿಗಳನ್ನು ಬಹುಶಃ ಎಣಿಸಬಹುದು‌. ಆದರೆ ಕೆಲವು ಬಾರಿ  ನಿದ್ದೆಗಣ್ಣಿನಲ್ಲಿ ಮೈಬೆಚ್ಚಿ ಎಚ್ಚರವಾದಾಗ ಕನ್ನೆಗಳ ಮೇಲಿಳಿದ ಹನಿಗಳನ್ನು ಮೇಲಿರುವ ಅವನೆ ಎಣಿಸಿರಬೇಕು‌. ಅವನು ಅಳಬೇಡ ಎಂದು ಬೈದಂತಾಗಿ ಸುಮ್ಮನೆ ಕಣ್ಣೊರೆಸಿ ನಕ್ಕು ಮಲಗುತ್ತೇನೆ. 

ಇನ್ನೂ ಅವನು ಜೀವಿಸುತ್ತಿದ್ದಾನೆ.

ಸುಮ್ಮನೆ ಖಾಲಿ ಕೂತಾಗ ಅವನೊಟ್ಟಿಗೆ ಹೇಳಬೇಕಾದ ವಿಷಯಗಳನ್ನು ಗುನುಗುತ್ತೇನೆ. ಅವನೇ ಎದುರಿಗೆ ನಿಂತಿದ್ದಾನೆ ಎಂಬಷ್ಟು ಸಹಜ ಭಾವನೆಯಿಂದ ನಗುತ್ತಾ ಮಾತಾಡುತ್ತೇನೆ. ಇದನ್ನು ನನ್ನವರು ಸಹಿಸಿಕೊಂಡು. ಅವರೂ ಅವನೊಟ್ಟಿಗೆ ಮಾತನಾಡಿ ಅವನಿರುವ ಭಾವ ಕಲ್ಪಿಸಿಕೊಟ್ಟಿದ್ದಾರೆ. ನಾನಿರುವ ಕಡೆ ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕೊರೊನಾದಿಂದ ತಮ್ಮ ಸ್ನೇಹಿತ ಕೃಷ್ಣ ಎಂಬಾತನನ್ನು ಕಳೆದುಕೊಂಡು ಪ್ರತಿ ದಿನವೂ ಮನೆಯ ಗೇಟಿನ ಬಳಿ ಹೋಗಿನಿಂತು ಒಬ್ಬರೇ ಅವನೊಟ್ಟಿಗೆ ಮಾತಾಡುತ್ತಿದ್ದರು. ಅದನ್ನು ನೋಡಿ ಚಕಿತಳಾದ ನನಗೆ ನನ್ನ ಸ್ಥಿತಿ ನೆನೆದು ನಗು ಬರುತ್ತಿದೆ.

ಏನಾದರಾಗಲಿ ಒಂದಲ್ಲ ಒಂದು ರೂಪದಲ್ಲಿ ಅವರನ್ನು ನೆನೆದು, ನಮ್ಮೊಟ್ಟಿಗೇ ಇದ್ದಾರೆ ಎಂಬ ಭಾವನೆಯಲ್ಲಿ ನಮ್ಮನ್ನು ನಾವು ಸಂತೈಸಿ ಬಾಳುವುದೇ ಮುಖ್ಯ‌. 

ಸುಮಾ.ಕಂಚೀಪಾಲ್

Comments

  1. ಅವನು ಈ ಗಿಡದಂಗೆ ಹಸಿರಾಗಿ, ಉಸಿರಲ್ಲಿ ಉಸಿರಾಗಿ ನಮ್ಮೊಂದಿಗೇ ಇದ್ದ. ಅಣ್ಣ ನನಗೆ ಫೋಟೊ ಕಳಸದ ನೋಡಿ ನನಗೆ ಅವನ ನೆನಪಿಗೆ ನೆಟ್ಟು ಹೋಗ್ಬುಟ್ನನ ಅನಸ್ತು. ಅದಕ್ಕೆ ನಿನ್ನ ನೆನಪಾಯ್ತು ನಿನಗೂ ಅವನು ಅಂದ್ರೆ ಅಷ್ಟೇ ಪ್ರೀತಿ ಅದಿಕ್ಕೆ ಕಳಸದೆ.

    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...