ನೆರಿಗೆ ಗೆರೆಗಳ ಸರಿಪಡಿಸಿ
ಒಂದೊಂದೆ ಪದರ ಬಿಡಿಸಿ
ಉಟ್ಟಿದ್ದಾಳೆ ಭೂಮಿ ತನ್ನ ಸೀರೆ.
ಸಿಕ್ಕು ಕೂದಲು ಬಿಡಿಸಿ
ತನ್ನದಲ್ಲದ ವೇಷ ಧರಿಸಿ
ಸಿದ್ದವಾಗಿದ್ದಾಳೆ ಭೂಮಿ ನಾಟ್ಯಕ್ಕೆ
ಹೆಜ್ಜೆ ಹೆಜ್ಜೆಗು ಗೆಜ್ಜೆ ಧ್ವನಿಸಿ
ಮೈಯೊಳಗೆ ಪುಳಕ ಹರಿಸಿ
ಕಿವಿತುಂಬಿ ಕೊಂಡಿದ್ದಾಳೆ ವಾದ್ಯ ಸಿರಿ
ಮೈಮರೆಸಿ ತಾಮರೆತು
ನಾಟ್ಯವಾಡುತ್ತಾಳೆ ಮಯೂರಿ
ತನ್ನ ಒಡಲು ತಣಿವರೆಗೆ
ಸುಮಾ.ಕಂಚೀಪಾಲ್
Comments
Post a Comment