1975ರಲ್ಲಿ ಕನ್ನಡ ನಾಡಿನ ಖ್ಯಾತ ನಟ ರಾಜಕುಮಾರ ಮತ್ತು ಪಾರ್ವತಮ್ಮ ಅವರ ಮಡಿಲಲ್ಲಿ ಅವರ ಮೂರನೆ ಕೂಸೊಂದು ಅಳುತ್ತಿತ್ತು. ಅವರೇ ಪುನೀತ್ ರಾಜಕುಮಾರ. ಅವರ ಮೊದಲ ಹೆಸರು ಲೋಹಿತ್ ಇವರು ತಮ್ಮ ಬಾಲ್ಯದಿಂದಲೇ ಸಿನಿಮಾಗಳಲ್ಲಿ ನಟನೆ ಆರಂಭಿಸಿ ಎಲ್ಲರ ಅಚ್ಚು ಮೆಚ್ಚಿನ ಅಪ್ಪುವಾಗಿ ಅಭಿಮಾನಿಗಳ ಮನಸಲ್ಲಿ ಬೆರೆತವರು. ಬಲವಾಗಿ ನಾಡಿನ ಜನತೆಯಲ್ಲ ನೊಂದಿದೆ. ಕನ್ನಡ ರಾಜೋತ್ಸವದ ಉತ್ಸಾಹಕೂಡ ಈಗ ಯಾರಲ್ಲೂ ಇಲ್ಲ. ಸಂಜೆಯಾಗಿದೆ. ಯಾರೂ ಊಹಿಸದ ಕರಾಳ ಘಟನೆಗಳು ಆಗಾಗ ನಡೆಯುತ್ತಿರುವುದು ಈಗ ಜನರಿಗೂ ರೂಢಿಯಾಗಿದೆ. ಅದೆಷ್ಟೋ ಜನರ ಮನೆಯಲ್ಲಿ ಮಧ್ಯಾಹ್ನ ಹನ್ನೊಂದುಗಂಟೆಯಿಂದ ಟಿ.ವಿಯಲ್ಲಿ ನಿವ್ಸ್ ಚಾನೆಲ್ಗಳೇ ಹಚ್ಚಿಕೊಂಡಿವೆ. ಉಣ್ಣಲು ಹಸಿವಿಲ್ಲದ ಕೆಲಸ ಮಾಡಲೂ ಮನಸ್ಸಾಗದ ಎಷ್ಟೋ ಕೆಲಸ ನಿಲ್ಲಿಸಿ ಒದ್ದೆ ಕಣ್ಣಿನಲ್ಲಿ ಕೂತಿದ್ದಾರೆ. ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವನ್ನೊಪ್ಪಿದ ಸುದ್ದಿಯೂ ಕಿವಿಗೆ ಬೀಳುತ್ತಿದೆ. ಅವರೇ ನೋಡಿಕೊಳ್ಳುತ್ತಿದ್ದ ವೃದ್ದಾಶೃಮದ ಅದೆಷ್ಟೋ ಅಪ್ಪ ಅಮ್ಮಂದಿರು ಮತ್ತೆ ಅನಾಥರಾದ ಭಾವನೆ ಮೂಡುತ್ತಿದೆ. ಬೆಟ್ಟದ ಹೂವು ಇವರು ನಟಿಸಿರುವ ನಾಲ್ಕನೆ ಚಿತ್ರ. ಆದರೆ ಬೆಟ್ಟದ ಹೂವು ಎಂದಾಕ್ಷಣ ನೆನಪಾಗುವ ಅವರ ಮುಗ್ಧತೆ ಮತ್ತು ನಗು ಆ ವಯಸ್ಸಿಗೆ ಅವರಿಗಿದ್ದ ನಟನಾ ಶಕ್ತಿ ಅಪಾರವಾದದ್ದು. ಪ್ರೇಮದ ಕಾಣಿಕೆ, ಭಾಗ್ಯವಂತರು, ಎರಡು ನಕ್ಷತ್ರಗಳು, ಚಲಿಸುವ ಮೋಡಗಳು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ, ಯಾರಿವನು, ...