ಎಲ್ಲರೂ ಕಲಿತಾರಲ್ಲ ಅದಿಕ್ಕೆ ನಾನೂ ಕಲಿತಿದ್ದೆ. ಅಪ್ಪ ಅಮ್ಮನ ಮನಸ್ಸಿನ ಸಮಾಧಾನಕ್ಕೆ ಸ್ನೇಹಿತರಿಗಿಂತ ನಾನೇನು ಕಡಿಮೆ ಅಂತ ಪ್ರತಿದಿನ ಕಾಲೇಜಿಗೆ ಹೋಗಿದ್ದೆ. ಅಂಕಗಳಿಸಲು ಅಷ್ಟೇನು ಆಸೆ ಇರಲಿಲ್ಲ. ಅಂಥ ಉಸಾಬರಿಗೆ ನಾನು ಹೋಗಿಯೂ ಇರಲಿಲ್ಲ. ಆದರೂ ಅಂಕಗಳೆನೋ ಚೆನ್ನಾಗಿಯೇ ಬಂದಿದ್ದವು ಪಕ್ಕದಮನೆಯಲ್ಲಿ ಒಬ್ಬ ನನ್ನ ವಯಸ್ಸಿನ ಹುಡುಗ ಇದ್ದ. ಪಾಪ ಇಡೀ ದಿನ ಅವನು ಓದೋದನ್ನು ನೋಡಿ ನನ್ನಮ್ಮನಿಗೆ ಆಗಾಗ ದಿನ ತಲೆಕೆಡುತ್ತಿತ್ತು. ಹಾಗನಿಸಿದ ದಿನ ಅಮ್ಮನ ವೇದಘೋಶ ಜೋರಾಗಿಯೇ ಇರುತ್ತಿತ್ತು. ಆ ಪಕ್ಕದ ಮನೆ ಅಜ್ಜಿಗೋ ಮಾಡೊಕೆ ಬೇರೆ ಕೆಲಸ ಇಲ್ಲ ನಮ್ಮ ಮನೆಗೆ ಬಂದು ಮೊಮ್ಮಗನನ್ನು ಹೊಗಳೋದೇ ಕೆಲಸವಾಗಿಬಿಟ್ಟಿತ್ತು. ನಾನು ಪಿ.ಯು ಮುಗಿಸಿ ಕಾಲೇಜು ಬಿಟ್ಟೆ , ಮನೆಯಲ್ಲಿ ಮೂರು ತಲೆಮಾರಿನವರು ಕೂತು ತಿನ್ನೋವಷ್ಟು ಆಸ್ತಿ ಇತ್ತು. ಕಿರಿಯವನು ನಾನು. ಅಣ್ಣ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಊರಿನ ಜನರ ಕಣ್ಣಿಗೆ ದೊಡ್ಡ ಮನಷ್ಯ ಅನ್ನಿಸ್ಕೊಂಡು ಎರಡು ವರ್ಷ ಆಯ್ತು, ನಾನು ಒಮ್ಮೆ ಬೆಂಗಳೂರಿಗೆ ಹೋಗಿ ಅಣ್ಣನ ದೊಡ್ಡಸ್ತಿಕ ನೋಡಿ ಬಂದೆ. ಮನೆಯೊಂದು ಮೂರು ಬಾಗಿಲು , ಎರಡು ಕಿಟಕಿ ; ಅದರಲ್ಲೊಂದು ತೆಗೆಯಲು ಬರುವುದಿಲ್ಲ . ಒಂದು ಹೆಜ್ಜೆ ಬಲಕ್ಕಿಟ್ಟರೆ ಊಟದ ಕೋಣೆ, ಎಡಕಿಟ್ಟರೆ ಮಲಗುವ ಕೋಣೆ , ಅದಕ್ಕಂಟಿಕೊಂಡೇ ಬಾತ್ ರೂಂ ಇತ್ಯಾದಿ , ದಿನವಿಡೀ ಹೊಗೆ, ಧೂಳು , ನೀರಿಗೂ ಹಣ ಕೊಡಬೇಕು. ಪಕ್ಕದ ಮನೆಯವರು ಹೊಡೆದಾಡಿ ಸತ್ತರೂ, ಕೂಗಿದರೂ, ಡಿಕ್ಕಿ ಹೊಡೆದರೂ ಅವರ್ಯಾರೆಂದು ಇವರಿಗೆ ಅರಿವಾಗುವುದಿಲ್ಲ. ಮಾತಾಡುವುದಕ್ಕಾಗಲಿ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕಾಗಲಿ ಅವರಿಗೆ ಪರಸೊತ್ತೇ ಇರುವುದಿಲ್ಲ. ಮನೆಗೆ ಬಂದವರನ್ನು ಮಾತಾಡಿಸುವುದು ಬೇಡ ಬಿಡಿ, ಮುಚ್ಚಿದ ಕದ ತೆಗೆದರೂ ಸಾಕಿತ್ತು. ಆದರೆ ಇವರು ಹಾಗಲ್ಲ ಒಳಗಿನಿಂದಲೇ ಯಾರು ಬೇಕಿತ್ತು ? ಎಂದರೆ ಮುಗಿದೇ ಹೊಯ್ತು. ಒಂದು ವಾರ ಇದ್ದು ಬರಲೆಂದು ಹೋಗಿ ಮೂರೇ ದಿನಕ್ಕೆ ವಾಪಸ್ಸು ಬಂದು ಬಿಟ್ಟೆ. ಊರಿಗೆ ಬಂದಿಳಿದ ಕೂಡಲೇ “ ಏನೋ ಗಣೇಶ ಇಷ್ಟು ಬೇಗ ಬಂದು ಬಿಟ್ಟೆ ? ಹುಷಾರಿಲ್ವಾ ? " ಅಂದ್ರು , “ ಹು ಹೌದು ಇನ್ನೊಮ್ಮೆ ಹೋದಾಗ ಉಳಿದು ಬರ್ತೀನಿ " ಎಂದೆ. ಮನದಲ್ಲೇ ಒಂತರಾ ನಗು ನನಗೆ, ಕಷ್ಟಪಟ್ಟು ಹಗಲು ರಾತ್ರಿ ಓದಿ ಹುಷಾರಿ ಎನಿಸಿಕೊಂಡ ನನ್ನ ಅಣ್ಣನ ಮರ್ಯಾದೆ ಯಾಕೆ ಕಳೆಯೋದು ಅಂತ ಹಾಗಂದೆ, ಹೆಚ್ಚೇನೂ ಕಷ್ಟಪಡದೆ ಜನರಾಡೋ ಚುಚ್ಚು ಮತುಗಳನ್ನು ಸಹಿಸಿಕೊಂಡು ಅಣ್ಣನಿಗಿಂತ ನೂರುಪಟ್ಟು ಚೆನ್ನಾಗಿ ಜೀವನ ನಡೆಸುತ್ತಿದ್ದೇನೆ ಅನ್ನೋ ಸಮಧಾನ ಆಯ್ತು. ಕೊನೆ ಕೊಯ್ಲಿನಲ್ಲಿ ಒಂದಿಷ್ಟು ಕಷ್ಟಪಟ್ಟು ಕೊನೆ ಹೊತ್ತರಾಯ್ತು. ಅಡಿಕೆ ಸುಲಿಯೋಕೆ ಜನ ಬರ್ತಾರೆ. ಅಜ್ಜನಿಗೆ ನಾನೆಂದರೆ ಪ್ರೀತಿ ನಾನು ಕಷ್ಟಪಟ್ಟು ಸಂಪಾದಿಸಿದ್ದು ನಿಮಗಾಗಿ. ನೀನೊಬ್ಬನಾದರೂ ಅನುಭವಿಸು ಎಂದು ಆಗಾಗ ಹೇಳಿ ನನ್ನ ತಲೆಸವರುತ್ತಿರುತ್ತಾರೆ. ಮನೆತುಂಬಾ ತಿರುಗಾಡಿಕೊಂಡು ಚಿಕ್ಕ ಚಿಕ್ಕ ಕೀಟಲೆ ಮಾಡಿ ಎಲ್ಲರನ್ನು ನಗಿಸುತ್ತಿರುತ್ತೇನೆ. ಎಲ್ಲರಿಗೂ ನಾನೆಂದರೆ ತುಂಬಾ ಇಷ್ಟ . ಆದರೂ ಹೊರಗಿನಿಂದ ಅಣ್ಣನನ್ನು ನೋಡಿ ಕಲಿ ಅಂತ ಹೆಳುತ್ತಿರುತ್ತಾರೆ. ಆದ್ರೂ ಒಂದು ದೊಡ್ಡ ಸಮಸ್ಯೆ ಇದೆ. ಮನೆಯಲ್ಲಿರೋ ಹುಡುಗರಿಗೆ ಹೆಣ್ಣು ಕೊಡುವುದಿಲ್ಲ. ಅಪ್ಪ ಅಮ್ಮ ಒಪ್ಪಿದರೂ ಹುಡುಗಿಯರು ಒಪ್ಪೋಲ್ಲ. ಅವರಿಗೂ ಕೆಲವೊಮ್ಮೆ ಬೆಂಗಳೂರಿನ ವ್ಯಾಮೋಹ.ಆದರೆ ಹಳ್ಳಿಯ ನೆಲ ನೀರು , ಮಣ್ಣಿನ ಕಂಪು , ಸಂಪ್ರದಾಯದ ಬೆಲೆ ಅರಿತವರಾರೂ ಈ ತರದ ಕನಸ ಕಟ್ಟುವುದಿಲ್ಲ .
ನಾನು ಇವನು ಹೈದರಾಬಾದ್‌ಗೆ ಹೋಗೋದು ಅಂತ ನಿರ್ಧಾರ ಮಾಡಿ ಮನೆಯಲ್ಲೇ ಊಟ ಮುಗಿಸಿ ಹೊರಟೆವು. ಕುವೆಂಪು ಮೆಟ್ರೋ ಸ್ಟೇಷನ್‌ನಿಂದ ಸೀದಾ ಬಂದು ಇಳಿದದ್ದು ಮೆಜೆಸ್ಟಿಕ್‌ಗೆ. ನಾನು ಸ್ವಲ್ಪ ಕತ್ತಲಾಗಿ ಬೀದಿ ದೀಪಗಳು ಉರಿಯಲು ಶುರುವಾದರೆ ಸಾಕು ಹೆದರಿ ಸಾಯುತ್ತೇನೆ. ನನ್ನನ್ನು ಸಮಾಧಾನ ಮಾಡಿ ಬ್ಯಾಗಿನ ಜೊತೆ ಕೈ ಹಿಡಿದು ಬೇರೆ ಊರು ತಲುಪುವುದು ಎಂದರೆ ಇವನಿಗೆಷ್ಟು ಕಷ್ಟ ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಆದರೂ ನಮಗೇನಾದ್ರೂ ಆದ್ರೆ? ಕಳ್ಳ ಬಂದ್ರೆ? ನಾನು ಕಳೆದೇ ಹೋದ್ರೆ ಎಂದು ಏನೇನೋ ಮಳ್ಳು ಹಲುಬುತ್ತ ಸಾಗುತ್ತೇನೆ. ಇವನಿಗೆ ಇರುವಷ್ಟು ಸಹನೆ ಯಾರಿಗೂ ಇಲ್ಲ, ಅದಂತೂ ನಿಜ ಎಂದು ನನಗೆ ನಾನೇ ಹಲುಬಿಕೊಂಡು ಅವನ ಹಿಂದೆ ಸಾಗುತ್ತೇನೆ. ಚಿತ್ರ: ಮೆಜೆಸ್ಟಿಕ್ ಪ್ಲಾಟ್‌ಫಾ ರ್ಮ್ ನಂಬರ್ 16 ಕೆಂಪು, ಬಿಳಿ, ನೀಲಿ ಬಸ್ಸುಗಳ ಸಾಲು. ಏ ಇಲ್ ನೋಡೇ, ಹಿಂದಿನ ಸಲ ನಾವು ಬಸ್ ಹತ್ತಿದ್ದು ಇಲ್ಲೆಯ ನೆನಪಿದ್ದಾ ನಿನಗೆ? ಎಂದು ಉಮೇದಿಯಿಂದ ಇವ ಒಂಚೂರು ನನ್ನ ಕೈ ಬಿಟ್ಟು ಮುಂದೆ ಸಾಗಿದರೆ ನಾನು ನಿಂತಲ್ಲೇ ಬಾಕಿ. ಯಾಕೆಂದು ನನಗೂ ಗೊತ್ತಿಲ್ಲ. ಆಮೇಲೆ ನನ್ನಿಂದ ಉತ್ತರ ಬರದೇ ಇದ್ದಾಗ ಅವ ಮತ್ತೆ ತಲೆಮೇಲೆ ಕೈ ಹೊತ್ತು ನಾನಿದ್ದಲ್ಲಿ ಬರುತ್ತಾನೆ. ಅವನಿಗೆ ಎಲ್ಲ ಜನರನ್ನು, ಎಲ್ಲ ಊರುಗಳ ಹೆಸರನ್ನು ಹಾಗೇ ಕೆ. ಆರ್ ಮಾರ್ಕೇಟಿಗೆ ಹೋಗಲು ಬಂದಿಳಿದ ಫ್ರೆಷ್ ಪುದಿನಾ ಎಲೆಗಳ ಗಂಟನ್ನೂ; ಎಲ್ಲವನ್ನೂ ಮಾತಾಡಿಸಬೇಕು. ನನಗೆ ಜನರನ್ನ...
Comments
Post a Comment