Skip to main content

ಸಂದರ್ಶನ

ಅವಧಿ
ಸಾಮಾನ್ಯವಾಗಿ ಕ್ಯಾಮರಾ ಮ್ಯಾನ್ ಎನ್ನುವ ಪದವನ್ನು ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ.  ಛಾಯಾಗ್ರಹಣ ಕ್ಷೇತ್ರದಲ್ಲಿ ಮಹಿಳೆಯರ ಹೆಸರು ಕೇಳುವುದು ವಿರಳ. ಆದರೆ ಶಕ್ತಿಮಾನ್, ಇಂಡಿಯನ್ ಐಡೆಲ್, ಆರ್ಯಮಾನ್, ಸ.ರಿ.ಗ.ಮ.ಪ, ಪಿಯರ್ ಪೈಲ್ಸ, ಲವ್ ಮಿ ಇಂಡಿಯಾ, ಅರವತ್ತಕ್ಕೂ ಹೆಚ್ಚು ಚಿತ್ರಕಥೆಗಳಿಗೆ ಇವರು ಕ್ಯಾಮರಾವುಮನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಾನು ಈ ಸಂದರ್ಶನದಲ್ಲಿ ನಿಮಗೆ  ಪರಿಚಯಿಸಲು ಹೊರಟಿರುವುದು ಛಾಯಾಗ್ರಾಹಕಿ ವಿದ್ಯಾ ಗೌಡ ಅವರನ್ನು. ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಛಾಯಾಚಿತ್ರ ಲೋಕಕ್ಕೆ ಪಾದಾರ್ಪಣೆ ಮಾಡಿ ಸೈ ಎನಿಸಿಕೊಂಡವರು ಇವರು.


ಪ್ರಶ್ನೆ: ಒಬ್ಬ ಮಹಿಳೆಯಾಗಿ ನೀವು ಛಾಯಾಗ್ರಹಣವನ್ನು ನಿಮ್ಮ ವೃತ್ತಿಯಾಗಿ ಆಯ್ದು ಕೊಳ್ಳಲು ಕಾರಣವೇನು ? 

ವಿದ್ಯಾ ಗೌಡ: ನಾನು ಚಿಕ್ಕಂದಿನಿಂದಲೂ ನಮ್ಮ ತಂದೆಯೊಂಟ್ಟಿಗೆ ಅವರನ್ನು ಅನುಕರಿಸಿಯೇ ಬೆಳೆದವಳು.ನನ್ನ‌ 16 ನೇ ವಯಸ್ಸಿನಲ್ಲಿ ನಾನು ಓ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ.‌ ನನ್ನ ತಂದೆ ಸುರೇಶ ಚೆನ್ನಪ್ಪ ಗೌಡ ಅವರೂ ಸಹ ಸಿನಿಮಾಟೊಗ್ರಾಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕೆಲಸಕ್ಕೆ ಹೋಗುವಾಗ ನಾನೂ ಕೆಲವೊಮ್ಮೆ ಅವರೊಟ್ಟಿಗೆ ಹೋಗುತ್ತಿದೆ. ಅವರು ಕೆಲಸ ಮಾಡುವ ವಿಧಾನವನ್ನು ನೋಡುತ್ತಿದ್ದೆ‌. ಅವರಿಂದಾಗಿಯೇ ನಾನು  ಇಪ್ಪತ್ತಾರು ವರ್ಷಗಳ ಹಿಂದೇ ಬೆಲೆಬಾಳುವ ಕ್ಯಾಮರಾಗಳನ್ನು ಮುಟ್ಟಿದ್ದೆ. ನಾನು ಈ ಕೆಲಸ ಆರಂಭಿಸುವಾಗ ಕ್ಯಾಮರಾ ಹಿಡಿಯುವ ಯಾವ ಮಹಿಳೆಯರೂ ಸಹ ನನಗೆ ಗೊತ್ತಿರಲಿಲ್ಲ. ಆದರೆ ತಂದೆಯಂತೆ ನಾನು ಇದೇ ಕೆಲಸವನ್ನೇ ಮಾಡಬೇಕೆಂಬ ಮನಸ್ಸಾಗಿದ್ದರಿಂದ ಈ ಕ್ಷೇತ್ರದಲ್ಲಿ ಮುಂದುವರೆದೆ. ಕೆಲವು ಸವಾಲುಗಳನ್ನು ಎದುರಿಸಬೇಕಾದ ಪ್ರಸಂಗಗಳು ಆಗಗಾ ಎದುರಾಗಿದ್ದವು. 
ಪ್ರಶ್ನೆ: ನೀವು ಕೆಲಸ ಮಾಡುವಾಗ ಸವಾಲುಗಳು  ಎದುರಾದವು ಎಂದಿರಿ ಆ ಸವಾಲುಗಳನ್ನು ನೀವು ಹೇಗೆ ನಿಭಾಯಿಸಿದ್ದೀರಿ? 

ವಿದ್ಯಾ ಗೌಡ: ಪುರುಷ ಪ್ರಾಧಾನ್ಯತೆಯ ಸಮಾಜದಲ್ಲಿ ಎಲ್ಲೆಡೆಯೂ ಮಹಿಳೆಗೆ ಒಂದಿಲ್ಲಾ ಒಂದು ರೀತಿಯಲ್ಲಿ ಸಣ್ಣದೊಂದು ತೊಡುಕು ಖಂಡಿತ ಎದುರಾಗುತ್ತದೆ. ಅದೇ ರೀತಿ ನನಗೂ ಎದುರಾಗಿತ್ತು. ಕೆಲಸಮಾಡುವ ಲೈಟ್ ಮ್ಯಾನ್ ಗಳು‌ ಕೂಡ ನನ್ನು ನೋಡಿ ಇವಳಿಂದೇನಾಗುತ್ತದೆ ಎಂದು ನನ್ನೆದುರೇ ನಗುತ್ತಿದ್ದರು. ಎಲ್ಲಿ‌ ಕೆಲಸ ಕೇಳಿದರು ಸಹ ಈ ಕ್ಷೇತ್ರಕ್ಕೆ ಮಹಿಳೆಯರು ಬೇಡ ಎಂಬ ಪ್ರತ್ಯುತ್ತರಗಳೇ ನನಗೆ ಸಿಕ್ಕಿದ್ದು. ಇಂದು ನಾನು ಹಲವು ಹಿರಿತೆರೆ ಮತ್ತು ಕಿರಿತೆರೆಗಳಿಗೆ ಛಾಯಾಗ್ರಹಣದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಮೊದಲಿಗೆ ನಾನು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿ ಬೆಳೆದಿದ್ದೇನೆ, ಬೆಳಕು ನಿರ್ವಹಣೆ, ಪೋಕಸ್ ಪುಲರ್, ಸಹಾಯಕ ಛಾಯಾಗ್ರಾಹಕಿ ಹೀಗೆ ಹಂತ ಹಂತವಾಗಿ ಹಾದಿಸವೆಸಿದ್ದೇನೆ. ಇಪ್ಪತ್ತು ವರ್ಷಗಳ ಕಾಲ ನಾನು ಈ ಕ್ಷೇತ್ರದಲ್ಲಿ ಜೀವಿಸಿದ್ದೇನೆ. ಇನ್ನು ಮುಂದೆಯೂ ಇದೇ ಕ್ಷೇತ್ರದಲ್ಲಿ ಇರಲು ಬಯಸುತ್ತೇನೆ. 

ಪ್ರಶ್ನೆ: ಒಬ್ಬ ಮಹಿಳೆಗೆ ಕೌಟುಂಬಿಕ ಸಹಕಾರ ಎಷ್ಟು ಮುಖ್ಯ ? 

ವಿದ್ಯಾ ಗೌಡ : ಖಂಡಿತವಾಗಿಯೂ ಮಹಿಳೆ ಮತ್ತು ಪುರುಷ ಇಬ್ಬರಿಗೂ ಕೌಟುಂಬಿಕ ಸಹಕಾರ ಅತಿಮುಖ್ಯವಾಗಿರುತ್ತದೆ. ಹೊಂದಾಣಿ ಮತ್ತು ಪ್ರೋತ್ಸಾಹ ಸಿಕ್ಕಿದಲ್ಲಿ ಯಾರು ಏನೇ ಅಂದರೂ ಸಹ ನಮ್ಮ ನಿಲುವಿನಲ್ಲಿ ಮುನ್ನಡೆಯಲು ಸಹಕಾರಿಯಾಗಿರುತ್ತದೆ. ನನಗೆ ನನ್ನ ತಂದೆಯ ಸಹಕಾರವೇ ನನ್ನನ್ನು ಈ ಕ್ಷೇತ್ರಕ್ಕೆ ಪರಿಚಯಿಸಿತು. 


ಪ್ರಶ್ನೆ : ನೀವು ಎಷ್ಟು ಭಾಷೆಗಳಲ್ಲಿ ಕೆಲಸ ಮಾಡಿದ್ದೀರಿ ಮತ್ತು ನಿಮಗೆ ಇಷ್ಟವೆನಿಸಿದ ಛಾಯಾಗ್ರಹಣ ಪ್ರಾಜೆಕ್ಟ್ ಯಾವುದು? 

ವಿದ್ಯಾ ಗೌಡ: ಚಿತ್ರೀಕರಣ ಮತ್ತು ನಿರ್ಮಾಣಕ್ಕೆ ಹೆಸರಾಗಿರುವ  ಮುಂಬೈನಲ್ಲೇ ಹುಟ್ಟಿ ಅಲ್ಲೇ ಬೆಳೆದವಳು ನಾನು. ಹಾಗಾಗಿ ಹಲವಾರು ಚಿತ್ರಕಥೆಗಳು ಮತ್ತು ಧಾರಾವಾಹಿಗಳಿಗೆ ಛಾಯಾಗ್ರಾಹಕಿಯಾಗಲು ಅವಕಾಶಗಳ ಕೊರತೆ ನನಗೆ ಎಂದೂ ಕಾಡಿಲ್ಲ. ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳ ಚಿತ್ರೀಕರಣಗಳನ್ನು ಮಾಡಿದ್ದೇನೆ. ಮೊದ ಮೊದಲು ಜಾಹಿರಾತು ಮತ್ತು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ನನ್ನ ಕ್ಯಾಮರಾ ಕಣ್ಣುಗಳಿಂದ ಸೆರೆಹಿಡಿದಿದ್ದೇನೆ.  ನನಗೆ ನಾನು ಮಾಡಿದ ಪ್ರತಿಯೊಂದು ಕೆಲವು ತುಂಬಾ ಪ್ರಿಯವಾದದ್ದು ಮತ್ತು ಎಲ್ಲವೂ ಸಮಾನವಾದದ್ದು. ನನಗಿಷ್ಟವಾದ ಒಂದನ್ನುಮಾತ್ರ  ಆಯ್ಕೆ ಮಾಡಲು ಸಾಧ್ಯವಿಲ್ಲ‌. 

ಪ್ರಶ್ನೆ : ಭವಿಷ್ಯದ ಛಾಯಾಗ್ರಾಹಕರಿ ನೀವು ಯಾವ ಸಲಹೆಗಳನ್ನು ನೀಡಲು ಬಯಸುತ್ತೀರಾ? 

ವಿದ್ಯಾ ಗೌಡ:  ( ಮುಗುಳು ನಗು) ಕೇವಲ ಈ ಕ್ಷೇತ್ರವೊಂದೆ ಅಲ್ಲ ಎಲ್ಲಾ ಕ್ಷೆತ್ರದವರಿಗೂ ನಾನು ಹೇಳಲು ಬಯಸುವುದೆಂದರೆ, ಹಣವೊಂದೇ ಮುಖ್ಯವಲ್ಲ ಅದರೊಟ್ಟಿಗೆ ನಿಮ್ಮ ಗುರಿ ಮತ್ತು ಆಸಕ್ತಿ ಮುಖ್ಯ ಎಂಬುದನ್ನು ಎಂದಿಗೂ ಮರೆಯದಿರಿ. 

ಈ ಕ್ಷೇತ್ರಕ್ಕೆ ಬರುವವರನ್ನು ನಾನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇನೆ. ಏಕೆಂದರೆ ಪ್ರತಿಯೊಬ್ಬರಲ್ಲೂ ಒಂದೊಂದು ಭಿನ್ನತೆ ಇರುತ್ತದೆ. ನಾನೂ ಸಹ ಅದನ್ನು ಅವರಿಂದ ಕಲಿಯುತ್ತೇನೆ. ಪೂರ್ವತಯಾರಿ ಮಾಡಿಕೊಳ್ಳಿ ಪ್ರಾಯೋಗಿಕ ಕೆಲಸಗಳಷ್ಟೆ ಸಿದ್ದಾಂತವೂ ಮುಖ್ಯ. 

"I want to do work till end of my life. Learning never ends, do hardwork and achieve your goal" 


ಸುಮಾ.ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...