Skip to main content

ಪರಮಾತ್ಮ

1975ರಲ್ಲಿ ಕನ್ನಡ ನಾಡಿನ ಖ್ಯಾತ ನಟ ರಾಜಕುಮಾರ ಮತ್ತು ಪಾರ್ವತಮ್ಮ ಅವರ ಮಡಿಲಲ್ಲಿ ಅವರ ಮೂರನೆ  ಕೂಸೊಂದು ಅಳುತ್ತಿತ್ತು. ಅವರೇ ಪುನೀತ್ ರಾಜಕುಮಾರ. ಅವರ ಮೊದಲ ಹೆಸರು ಲೋಹಿತ್ ಇವರು ತಮ್ಮ ಬಾಲ್ಯದಿಂದಲೇ ಸಿನಿಮಾಗಳಲ್ಲಿ ನಟನೆ ಆರಂಭಿಸಿ ಎಲ್ಲರ ಅಚ್ಚು ಮೆಚ್ಚಿನ ಅಪ್ಪುವಾಗಿ ಅಭಿಮಾನಿಗಳ ಮನಸಲ್ಲಿ ಬೆರೆತವರು.

ಬಲವಾಗಿ ನಾಡಿನ ಜನತೆಯಲ್ಲ ನೊಂದಿದೆ. ಕನ್ನಡ ರಾಜೋತ್ಸವದ ಉತ್ಸಾಹಕೂಡ ಈಗ ಯಾರಲ್ಲೂ ಇಲ್ಲ.  ಸಂಜೆಯಾಗಿದೆ. ಯಾರೂ ಊಹಿಸದ ಕರಾಳ ಘಟನೆಗಳು ಆಗಾಗ ನಡೆಯುತ್ತಿರುವುದು ಈಗ ಜನರಿಗೂ ರೂಢಿಯಾಗಿದೆ. ಅದೆಷ್ಟೋ ಜನರ ಮನೆಯಲ್ಲಿ ಮಧ್ಯಾಹ್ನ ಹನ್ನೊಂದುಗಂಟೆಯಿಂದ ಟಿ.ವಿಯಲ್ಲಿ ನಿವ್ಸ್ ಚಾನೆಲ್ಗಳೇ ಹಚ್ಚಿಕೊಂಡಿವೆ. ಉಣ್ಣಲು ಹಸಿವಿಲ್ಲದ ಕೆಲಸ ಮಾಡಲೂ ಮನಸ್ಸಾಗದ ಎಷ್ಟೋ ಕೆಲಸ ನಿಲ್ಲಿಸಿ ಒದ್ದೆ ಕಣ್ಣಿನಲ್ಲಿ ಕೂತಿದ್ದಾರೆ. ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವನ್ನೊಪ್ಪಿದ ಸುದ್ದಿಯೂ ಕಿವಿಗೆ ಬೀಳುತ್ತಿದೆ. ಅವರೇ ನೋಡಿಕೊಳ್ಳುತ್ತಿದ್ದ ವೃದ್ದಾಶೃಮದ ಅದೆಷ್ಟೋ ಅಪ್ಪ ಅಮ್ಮಂದಿರು ಮತ್ತೆ ಅನಾಥರಾದ ಭಾವನೆ ಮೂಡುತ್ತಿದೆ.‌


ಬೆಟ್ಟದ ಹೂವು ಇವರು ನಟಿಸಿರುವ ನಾಲ್ಕನೆ ಚಿತ್ರ. ಆದರೆ ಬೆಟ್ಟದ ಹೂವು ಎಂದಾಕ್ಷಣ ನೆನಪಾಗುವ ಅವರ ಮುಗ್ಧತೆ ಮತ್ತು ನಗು ಆ ವಯಸ್ಸಿಗೆ ಅವರಿಗಿದ್ದ ನಟನಾ ಶಕ್ತಿ ಅಪಾರವಾದದ್ದು. ಪ್ರೇಮದ ಕಾಣಿಕೆ, ಭಾಗ್ಯವಂತರು, ಎರಡು ನಕ್ಷತ್ರಗಳು, ಚಲಿಸುವ ಮೋಡಗಳು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ, ಯಾರಿವನು, ಭಕ್ತ ಪ್ರಹ್ಲಾದ, ವಸಂತಗೀತ ಇಷ್ಟೂ ಚಿತ್ರದಲ್ಲಿ ಇವರು ಬಾಲ ನಟನಾಗಿ ನಟಿಸಿದ್ದಾರೆ.

1999 ಅಲ್ಲಿ ಇವರು ಅಶ್ವಿನಿ ರೇವಂತ್ ಅವರನ್ನು ತಮ್ಮ ಜೀವನ ಸಂಗಾತಿಯಾಗಿಸಿಕೊಂಡು ಸುಖಿ ದಾಂಪತ್ಯದೊಟ್ಟಿಗೆ ಅವರ ಪತ್ನಿಯೂ ಚಿತ್ರಗಳಿಗೆ ಇನ್ನೂ ಹೆಚ್ಚಿನ ಬೆಂಬಲವಾಗಿ ನಿಂತರು. ಇಪ್ಪತ್ತಾರಕ್ಕೂ ಹೆಚ್ಚು ನಾಯಕ ನಟನಾಗಿ ಬೇರೆ ಬೇರೆ ಚಿತ್ರಗಳಲ್ಲಿ ನಟಿಸಿ ಖ್ಯಾತರಾಗಿರುವ ಸಂಗತಿ ನಮಗೆಲ್ಲ ತಿಳಿದೇ ಇದೆ. ಪರಮಾತ್ಮ ಮತ್ತು ಅಣ್ಣಾಬಾಂಡ, ಪವರ್ ಸ್ಟಾರ್, ದೊಡ್ಮನೆಹುಡುಗ, ಯುವರತ್ನ, ವಂಶಿ,ಅಂಜನಿ ಪುತ್ರ, ನಟ ಸಾರ್ವಭೌಮ, ಈ ಚಿತ್ರಗಳ ಬಗ್ಗೆ ಕನ್ನಡಿಗರೆಲ್ಲರಿಗೂ ಸಂಭಾಷಣೆ ಮತ್ತು ಹಾಡುಗಳು ಕಂಠಪಾಠವಾಗುವಷ್ಟುಬಾರಿ ನೋಡಿರುತ್ತಾರೆ.


ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿ ಮತ್ತು ಪ್ಯಾಮಿಲಿಪರ್, ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಇವರು. PRK ಪ್ರೊಡಕ್ಷನ್ ಹೌಸ್ ನಡೆಸುತ್ತಾ ಹೊಸ ಕಲಾವಿದರಿಗೆ ಚಿತ್ರೀಕರಣದಲ್ಲಿ ಆಸಕ್ತಿ ಇರುವವರಿಗೆ ಸ್ಪೂರ್ತಿ ಚೇತನರಾಗಿದ್ದವರು ಇವರು. ಸರಳ ಜೀವನ ನಡೆಸುತ್ತಿದ್ದ ಇವರು ಹಲವಾರು ಪುಣ್ಯದ ಕಾರ್ಯದಲ್ಲಿ ಭಾಗಿಯಾಗಿದ್ದರು.
26 ಅನಾಥಶ್ರಮ, 46 ಉಚಿತ ಶಾಲೆ, 16 ವೃದ್ದಾಶ್ರಮ, 19 ಗೋಶಾಲೆ,  1800 ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ, ಮೈಸೂರಿನಲ್ಲಿ ಶಕ್ತಿಧಾಮ ಎನ್ನುವ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ ಕರುಣಾಮಯಿ. ಇಂದಿರುವವರು ನಾಳೆ ಇರುವುದಿಲ್ಲ ಎನ್ನುವ ಮಾತು ಎಷ್ಟು ನಿಜ ಎಂಬುದು ಪದೆ ಪದೆ ಅರಿವಿಗೆ ಬರುತ್ತಿದೆ.

ಎಷ್ಟೋ ಅಭಿಮಾನಿಗಳು ಅವರನ್ನು ಹತ್ತಿರದಿಂದ ಭೇಟಿಯಾಗಿದ್ದಾರೆ‌. ಇನ್ನು ಕೆಲವರು ಅವರನ್ನು ಭೇಟಿ ಮಾಡಲು ಕಾಲ ಕೂಡದೆ ಕಾಯುತ್ತಿರುವವರಿದ್ದರು. ಆದರೆ ಅವರ ಜೀವನದ ಕೊನೆ ಉಸಿರಿನ ಏರಿಳಿತ ಇಷ್ಟು ಬೇಗ ಸ್ಥಗಿತಗೊಳ್ಳುವ ಅರಿವು ಯಾರಿಗೂ ಇರಲಿಲ್ಲ. 

ಸುಮಾ.ಕಂಚೀಪಾಲ್


Comments

Popular posts from this blog

ಮೆಜೆಸ್ಟಿಕ್

ನಾನು ಇವನು ಹೈದರಾಬಾದ್‌ಗೆ ಹೋಗೋದು ಅಂತ ನಿರ್ಧಾರ ಮಾಡಿ ಮನೆಯಲ್ಲೇ ಊಟ ಮುಗಿಸಿ ಹೊರಟೆವು. ಕುವೆಂಪು ಮೆಟ್ರೋ ಸ್ಟೇಷನ್‌ನಿಂದ ಸೀದಾ ಬಂದು ಇಳಿದದ್ದು ಮೆಜೆಸ್ಟಿಕ್‌ಗೆ. ನಾನು ಸ್ವಲ್ಪ ಕತ್ತಲಾಗಿ ಬೀದಿ ದೀಪಗಳು ಉರಿಯಲು ಶುರುವಾದರೆ ಸಾಕು ಹೆದರಿ ಸಾಯುತ್ತೇನೆ. ನನ್ನನ್ನು ಸಮಾಧಾನ ಮಾಡಿ ಬ್ಯಾಗಿನ ಜೊತೆ ಕೈ ಹಿಡಿದು ಬೇರೆ ಊರು ತಲುಪುವುದು ಎಂದರೆ ಇವನಿಗೆಷ್ಟು ಕಷ್ಟ ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಆದರೂ ನಮಗೇನಾದ್ರೂ ಆದ್ರೆ? ಕಳ್ಳ ಬಂದ್ರೆ? ನಾನು ಕಳೆದೇ ಹೋದ್ರೆ ಎಂದು ಏನೇನೋ ಮಳ್ಳು ಹಲುಬುತ್ತ ಸಾಗುತ್ತೇನೆ. ಇವನಿಗೆ ಇರುವಷ್ಟು ಸಹನೆ ಯಾರಿಗೂ ಇಲ್ಲ, ಅದಂತೂ ನಿಜ ಎಂದು ನನಗೆ ನಾನೇ ಹಲುಬಿಕೊಂಡು ಅವನ ಹಿಂದೆ ಸಾಗುತ್ತೇನೆ.  ಚಿತ್ರ: ಮೆಜೆಸ್ಟಿಕ್ ಪ್ಲಾಟ್‌ಫಾ ರ್ಮ್ ನಂಬರ್ 16 ಕೆಂಪು, ಬಿಳಿ, ನೀಲಿ ಬಸ್ಸುಗಳ ಸಾಲು. ಏ ಇಲ್ ನೋಡೇ, ಹಿಂದಿನ ಸಲ ನಾವು ಬಸ್ ಹತ್ತಿದ್ದು ಇಲ್ಲೆಯ ನೆನಪಿದ್ದಾ ನಿನಗೆ? ಎಂದು ಉಮೇದಿಯಿಂದ ಇವ ಒಂಚೂರು ನನ್ನ ಕೈ ಬಿಟ್ಟು ಮುಂದೆ ಸಾಗಿದರೆ ನಾನು ನಿಂತಲ್ಲೇ ಬಾಕಿ. ಯಾಕೆಂದು ನನಗೂ ಗೊತ್ತಿಲ್ಲ. ಆಮೇಲೆ ನನ್ನಿಂದ ಉತ್ತರ ಬರದೇ ಇದ್ದಾಗ ಅವ ಮತ್ತೆ ತಲೆಮೇಲೆ ಕೈ ಹೊತ್ತು ನಾನಿದ್ದಲ್ಲಿ ಬರುತ್ತಾನೆ.  ಅವನಿಗೆ ಎಲ್ಲ ಜನರನ್ನು, ಎಲ್ಲ ಊರುಗಳ ಹೆಸರನ್ನು ಹಾಗೇ ಕೆ. ಆರ್ ಮಾರ್ಕೇಟಿಗೆ ಹೋಗಲು ಬಂದಿಳಿದ ಫ್ರೆಷ್ ಪುದಿನಾ ಎಲೆಗಳ ಗಂಟನ್ನೂ; ಎಲ್ಲವನ್ನೂ ಮಾತಾಡಿಸಬೇಕು. ನನಗೆ ಜನರನ್ನ...

ಎಲ್ಲರಲ್ಲೂ ಒಬ್ಬ ಕಳ್ಳ ಇದ್ದಾನೆ

ಎಲ್ಲರೊಳಗೂ ಒಬ್ಬ ಕಳ್ಳ ಇದ್ದಾನೆ ಒಂದು ಸಿನೆಮಾ ನೋಡುತ್ತೇವೆ ಎಂದಾದರೆ ಅದರ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡೇ ಹೋಗುತ್ತೇವೆ. ಅದು ಇದು ಮಾತಾಡಿಕೊಂಡು ನಾವೇ ಒಂದು ನಿರ್ಧಾರ ಮಾಡಿಕೊಂಡು ಹಾ, ಈ ಸಿನಿಮಾ ಹೀಗಿರಬಹುದು ಎಂದು ಊಹಿಸಿಕೊಳ್ಳುತ್ತೇವೆ. ಆ ಪೂರ್ವಾಗ್ರಹವನ್ನು ಬದಲಿಸಿಬಿಡುವಂತಹ ಒಂದು ಸಿನಿಮಾಕ್ಕೆ ಇನ್ನೊಂದು ಹೆಸರೇ 'ಕೋಟಿ'. ಕೆಲವರು ಡಾಲಿ ಧನಂಜಯ್, ಇನ್ನು ಕೆಲವರು ಪರಂ  ಹೆಸರು ಕೇಳಿಯೇ ಈ ಸಿನಿಮಾ ನೋಡಲು‌ ನಿಶ್ಚಯಿಸಲು ನಿರ್ಧರಿಸಿರಬಹುದು. ಹಾಗೆ ಹೋಗುವುದು ಕೂಡ ಒಂದು ಮಟ್ಟಿಗೆ ಸರಿಯೇ. ನಾನಂತೂ ಕೋಟಿ ಸಿನಿಮಾವನ್ನು ಥಿಯೇಟರ್‌‌ನಲ್ಲೇ ನೋಡಲು ನಮ್ಮೂರಿನವರೇ ಆದ ಪರಮೇಶ್ವರ್​ ಗುಂಡ್ಕಲ್ ನಿರ್ದೇಶನವೇ ಕಾರಣ ಅನ್ನೋದು ಮುಚ್ಚುಮರೆ ಇಲ್ಲದ ಸತ್ಯ. ಈಗಂತೂ ಹಲವರು "ಬಿಡು, ಓಟಿಟಿಗೆ ಬಂದ ಮೇಲೆ ನೋಡಿದರಾಯ್ತು" ಎಂದು ಸುಮ್ಮನಾಗುತ್ತಾರೆ. ಕೆಲವು ಸಿನಿಮಾಗಳನ್ನು ನಾನು ಕೂಡ ಓಟಿಟಿಗೆ ಎಂದೇ ಮೀಸಲಿಡುತ್ತೇನೆ. ಆದರೆ ಈ ಚಿತ್ರ ನನಗೆ ಚೂರು ವಿಶೇಷವಾಗಿತ್ತು. ಚೂರು ಅಂದ್ರೇ ಚೂರೇ, ಹೆಚ್ಚೇನೂ ಇಲ್ಲ. ಹೌದು, ಆಮೇಲೆ ನಾನು ಇದನ್ನು ಅವರಿಗಾಗಿ ಅವರನ್ನು ಹೊಗಳುವುದಕ್ಕಾಗಿ ಬರೆಯುತ್ತಾ ಇದ್ದೇನೆ ಎಂದು ನೀವು ಅಂದುಕೊಳ್ಳಬಹುದು. ಆ ಅನಿವಾರ್ಯತೆಗಳೇನೂ ಸದ್ಯಕ್ಕಿಲ್ಲ. ಸಿನಿಮಾ ನೋಡುವ ಮುನ್ನ ಕೆಲವರ ಬಾಯಲ್ಲಿ ಒಂದು ವಿಷಯವನ್ನು ಕೇಳಿ ಹೌದಾಗಿರಬಹುದು ಎಂದುಕೊಂಡಿದ್ದೆ. 'ಸಿನಿಮಾ ಸುಮಾರಾಗೇ ಇದೆ. ಆದ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...