ನಾನು ಇವನು ಹೈದರಾಬಾದ್‌ಗೆ ಹೋಗೋದು ಅಂತ ನಿರ್ಧಾರ ಮಾಡಿ ಮನೆಯಲ್ಲೇ ಊಟ ಮುಗಿಸಿ ಹೊರಟೆವು. ಕುವೆಂಪು ಮೆಟ್ರೋ ಸ್ಟೇಷನ್‌ನಿಂದ ಸೀದಾ ಬಂದು ಇಳಿದದ್ದು ಮೆಜೆಸ್ಟಿಕ್‌ಗೆ. ನಾನು ಸ್ವಲ್ಪ ಕತ್ತಲಾಗಿ ಬೀದಿ ದೀಪಗಳು ಉರಿಯಲು ಶುರುವಾದರೆ ಸಾಕು ಹೆದರಿ ಸಾಯುತ್ತೇನೆ. ನನ್ನನ್ನು ಸಮಾಧಾನ ಮಾಡಿ ಬ್ಯಾಗಿನ ಜೊತೆ ಕೈ ಹಿಡಿದು ಬೇರೆ ಊರು ತಲುಪುವುದು ಎಂದರೆ ಇವನಿಗೆಷ್ಟು ಕಷ್ಟ ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಆದರೂ ನಮಗೇನಾದ್ರೂ ಆದ್ರೆ? ಕಳ್ಳ ಬಂದ್ರೆ? ನಾನು ಕಳೆದೇ ಹೋದ್ರೆ ಎಂದು ಏನೇನೋ ಮಳ್ಳು ಹಲುಬುತ್ತ ಸಾಗುತ್ತೇನೆ. ಇವನಿಗೆ ಇರುವಷ್ಟು ಸಹನೆ ಯಾರಿಗೂ ಇಲ್ಲ, ಅದಂತೂ ನಿಜ ಎಂದು ನನಗೆ ನಾನೇ ಹಲುಬಿಕೊಂಡು ಅವನ ಹಿಂದೆ ಸಾಗುತ್ತೇನೆ. ಚಿತ್ರ: ಮೆಜೆಸ್ಟಿಕ್ ಪ್ಲಾಟ್‌ಫಾ ರ್ಮ್ ನಂಬರ್ 16 ಕೆಂಪು, ಬಿಳಿ, ನೀಲಿ ಬಸ್ಸುಗಳ ಸಾಲು. ಏ ಇಲ್ ನೋಡೇ, ಹಿಂದಿನ ಸಲ ನಾವು ಬಸ್ ಹತ್ತಿದ್ದು ಇಲ್ಲೆಯ ನೆನಪಿದ್ದಾ ನಿನಗೆ? ಎಂದು ಉಮೇದಿಯಿಂದ ಇವ ಒಂಚೂರು ನನ್ನ ಕೈ ಬಿಟ್ಟು ಮುಂದೆ ಸಾಗಿದರೆ ನಾನು ನಿಂತಲ್ಲೇ ಬಾಕಿ. ಯಾಕೆಂದು ನನಗೂ ಗೊತ್ತಿಲ್ಲ. ಆಮೇಲೆ ನನ್ನಿಂದ ಉತ್ತರ ಬರದೇ ಇದ್ದಾಗ ಅವ ಮತ್ತೆ ತಲೆಮೇಲೆ ಕೈ ಹೊತ್ತು ನಾನಿದ್ದಲ್ಲಿ ಬರುತ್ತಾನೆ. ಅವನಿಗೆ ಎಲ್ಲ ಜನರನ್ನು, ಎಲ್ಲ ಊರುಗಳ ಹೆಸರನ್ನು ಹಾಗೇ ಕೆ. ಆರ್ ಮಾರ್ಕೇಟಿಗೆ ಹೋಗಲು ಬಂದಿಳಿದ ಫ್ರೆಷ್ ಪುದಿನಾ ಎಲೆಗಳ ಗಂಟನ್ನೂ; ಎಲ್ಲವನ್ನೂ ಮಾತಾಡಿಸಬೇಕು. ನನಗೆ ಜನರನ್ನ...
Comments
Post a Comment