Skip to main content

ಗಣಪತಿ ಕಂಚೀಪಾಲ್ ಅವರ ಅನುಭವ ಸಂದರ್ಶನ

ಬದುಕನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ನಿವೃತ್ತಿ ಇಲ್ಲ : ಗಣಪತಿ ಗಾಂವ್ಕರ್

ಮೂವತ್ತಾರು ವರ್ಷಗಳ ಕಾಲ ಸರ್ವೋದಯ ಪ್ರೌಢ ಶಾಲಾ  ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಗಣಪತಿ ಗಾಂವ್ಕರ್. ಈಗ ನಿವೃತ್ತರಾದ ಅವರ ಶೈಕ್ಷಣಿಕ ಬದುಕಿನ ಅನುಭವ ಮತ್ತು ಅವರ ನಿತ್ಯದ ಹಾದಿಯನ್ನು ಈ ಸಂದರ್ಶನದ ಮುಲಕ ನಿಮಗಾಗಿ ತೆರೆದಿಡುತ್ತಿದ್ದೇವೆ.

ಪ್ರಶ್ನೆ : ಚಿತ್ರಕಲಾ ಶಿಕ್ಷಕರಾಗಿ  ನೀವು ನಿವೃತ್ತಿ ಹೊಂದಿದ್ದೀರಿ,  ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿನಗಳು ಮತ್ತು ಶಾಲೆಯ ಕುರಿತಾಗಿ ನಿಮ್ಮ ಮಾತುಗಳೇನು?

ಉತ್ತರ : ನಾನು ಶಿಕ್ಷಕನಾಗಿ ಸೇವೆ ಸಲ್ಲಿಸಿದ ಕುರಿತು ಒಂದು ವಿಷೇಶವಿದೆ. ನಾನು ಕಲಿತದ್ದು ಸರ್ವೋದಯ ಪ್ರೌಢ ಶಾಲೆ ವಜ್ರಳ್ಳಿಯಲ್ಲಿ  ನನ್ನ ಇಬ್ಬರು ಮಕ್ಕಳು ಕಲಿತದ್ದು ಇದೇ ಶಾಲೆಯಲ್ಲಿ. ನನ್ನ ವಿದ್ಯಾರ್ಥಿಯೂ ಇಲ್ಲೇ ಕಲಿತು ಈಗ ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದಾನೆ. ನನ್ನ ಮೂವತ್ತಾರು ವರ್ಷದ ಎಂಟುತಿಂಗಳ ಶಿಕ್ಷಕ ವೃತ್ತಿಯನ್ನು ನಾನು ಕೇವಲ ಇದೊಂದೇ ಶಾಲೆಯಲ್ಲಿ ಕಳೆದಿದ್ದೇನೆ ಆದ್ದರಿಂದ ಇದು ಕೇವಲ ಶಾಲೆಯಲ್ಲ ನನ್ನದು ನಮ್ಮ ಮನೆ ಎಂಬ ಭಾವನೆ ಇದೆ.


ಪ್ರಶ್ನೆ : ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ದಿನಗಳಿಗೂ ಮತ್ತು ನಿವೃತ್ತಿ ಬದುಕಿಗೂ ಏನು ವ್ಯತ್ಯಾಸವಿದೆ ಮತ್ತು ಈಗಿನ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?
ಉತ್ತರ : ಶಾಲಾ ದಿನಗಳಲ್ಲಿ ದಿನನಿತ್ಯವೂ ಮಕ್ಕಳೊಟ್ಟಿಗೆ ಒಡನಾಟವಿರುತ್ತಿತ್ತು. ಸಹ ಶಿಕ್ಷಕರ ಗೆಳೆತನವಿತ್ತು. ದಿನ ನಿತ್ಯವು ಶಿಸ್ತಿನ ಬದುಕು ಮತ್ತು ಸಮಯಪಾಲನೆಗೆ ಪ್ರಾಮುಖ್ಯತೆ ಇರುತ್ತಿತ್ತು. ಈಗ ಆ ನಿಟ್ಟಿನಲ್ಲಿ ಕೊಂಚ ಬೇಸರ ಎನಿಸುತ್ತದೆ. ಈಗಿನ ದಿನವೆಂದರೆ ಶಿಸ್ತು ಸಮಯಪಾಲನೆ ಬದಲಾಗಿದೆ ಆದರೂ ನಿವೃತ್ತಿ ಇಲ್ಲ ಬೇರೆ ಬೇರೆ ಕೃಷಿ, ಸಾಹಿತ್ಯ, ಕಲೆ ಇವುಗಳಲ್ಲಿ ನನ್ನನ್ನು ಹೆಚ್ಚು ತೊಡಗಿಸಿಕೊಂಡಿದ್ದೇನೆ ಬಿಡುವಿಲ್ಲದ ವೇಳೆಗಳನ್ನು ಕಳೆಯುತ್ತಿದ್ದೇನೆ.



ಪ್ರಶ್ನೆ : ನಿಮ್ಮ ಪ್ರಕಾರ ವಿದ್ಯಾರ್ಥಿಗಳ ಬದುಕಿನಲ್ಲಿ ಒಬ್ಬ ಶಿಕ್ಷಕನ‌ಪಾತ್ರ ಎಷ್ಟು ಮುಖ್ಯ ಮತ್ತು ಶಿಕ್ಷಕ ತನ್ನನ್ನು ತಾನು ಹೇಗೆ ರೂಪಿಸಿಕೊಳ್ಳಬೇಕು?

ಉತ್ತರ : ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕ ಒಬ್ಬ ತಂದೆಯ ಪಾತ್ರ, ಮಾರ್ಗದರ್ಶಕನ ಪಾತ್ರ ಮತ್ತು ಒಂದು ಒಳ್ಳೆಯ ಸ್ನೇಹಿತನ ಪಾತ್ರವನ್ನು ನಿರ್ವಹಿಸುತ್ತಾನೆ. ಚಿತ್ರಕಲಾ ಶಿಕ್ಷಕನಾದ ನಾನು ಚಿತ್ರಕಲೆಯೊಟ್ಟಿಗೆ ಜೀವನ ಕೌಶಲ್ಯಗಳನ್ನು ಕಲಿಸುತ್ತಿದ್ದೆ. ಯೋಗ, ಧ್ಯಾನ , ಪ್ರಾಣಾಯಾಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರನ್ನು ಹುರಿದುಂಬಿಸುತ್ತಿದ್ದೆ. ಹೀಗೆ ಪ್ರತಿಯೊಬ್ಬ ಶಿಕ್ಷಕನು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಮಕ್ಕಳಿಗೆ ಹಿಡಿಸುವಂತ ಚಟುವಟಿಕೆಗಳ ಮುಲಕ ಅವರ ಸಾಧನೆಗೆ ಸಹಕಾರಿಯಾಗಬೇಕು.

ಪ್ರಶ್ನೆ : ವೃತ್ತಿ ಜೀವನದಲ್ಲಿ ನಿಮಗೆ ಖುಷಿ ತಂದುಕೊಟ್ಟ ವಿಷಯಗಳೇನು?
ಉತ್ತರ : ಅತೀ ಹೆಚ್ಚು ಖುಷಿ ನೀಡುವ ವಿಚಾರಗಳೆಂದರೆ ಮಕ್ಕಳ ಸಾಧನೆ. ಪ್ರತಿಭಾ ಕಾರಂಜಿ ಮತ್ತು ಕೆಲವು ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಜಿಲ್ಲಾ ಮಟ್ಟ ರಾಜ್ಯ ಮಟ್ಟಗಳಲ್ಲಿ ಪ್ರಥಮ ಬಹುಮಾನಗಳು ದೊರೆತಿದ್ದವು‌. ಕೆಲವೊಮ್ಮೆ ಚಿತ್ರಕಲೆ ಹಲವುಬಾರಿ ನಾಟಕ ಸ್ಪರ್ಧೆ ಇವುಗಳು ನನಗೆ ಸದಾ ನೆನಪಿನಲ್ಲಿ ಉಳಿಯುವ ದಿನಗಳು. ಮತ್ತು ಮಕ್ಕಳು ಏನಾದರು ಕೇಳಿದಾಗ ಅವರಿಗೆ ಅದನ್ನು ಕೊಡಿಸಿದಾಗ ತೃಪ್ತಿ ಸಿಗುತ್ತಿತ್ತು ಅದು ಒಂದು ಚಿಕ್ಕ ಚಾಕಲೇಟ್ ಇಲ್ಲ ಪಾಯಸದ ಊಟ ಹೀಗೆ ಅವರ ಸಣ್ಣ ಸಣ್ಣ ಬೇಡಿಕೆಗಳನ್ನು ಪೂರೈಸಿ ಖುಷಿ ಎಂದಿಗೂ ಹಸಿರು.

ಇತ್ತೀಚಿನ ವಿದ್ಯಾರ್ಥಿಗಳಿಗಿಂತ ಹಳೆಯ ವಿದ್ಯಾರ್ಥಿಗಳೊಂದಿಗಿನ ನೆನಪು ಹೆಚ್ಚು ಕಾಡುತ್ತದೆ. ಅವರನ್ನು ಹೆಚ್ಚು ಆತ್ಮೀಯತೆಯಿಂದ ಕಂಡಿರುತ್ತೇವೆ. ಒಡನಾಟಗಳು ಕಡಿಮೆ ಇದ್ದರೂ ಸಹ ಬಾಂಧವ್ಯ ಹೆಚ್ಚಿರುತ್ತದೆ.



ಪ್ರಶ್ನೆ : ನೀವೂ ಸಹ ಶಿಕ್ಷಕರಾಗುವ ಮೊದಲು ಒಬ್ಬ ವಿದ್ಯಾರ್ಥಿಯಾಗಿರುತ್ತೀರಿ ಆಗ ಬೆಳೆಸಿಕೊಳ್ಳುವ ಹವ್ಯಾಸ ಮುಂದಿನ ಜೀವನಕ್ಕೆ ಎಷ್ಟು ಸಹಾಯಕವಾಗಿರುತ್ತದೆ?

ಉತ್ತರ: ನಾನು ವಿದ್ಯಾರ್ಥಿಯಾಗಿದ್ದ ಕಾಲಮಾನ ಹಳೆಯದಿತ್ತು ಅಂದಿಗಿಂತ ಇಂದು ಹವ್ಯಾಸಗಳು ಬಹಳ ಮುಖ್ಯವಾಗುತ್ತವೆ. ವೃತ್ತಿ ಜೀವನದೊಟ್ಟಿಗೆ ಹವ್ಯಾಸಗಳು ನಮ್ಮ ಕೈ ಹಿಡಿಯುತ್ತವೆ. ನಾನು ಶಿಕ್ಷಕ‌ನಾಗಿರುವಾಗಲೂ ಸಹ ನನ್ನ ಕೆಲವು ಹವ್ಯಾಸಗಳನ್ನು ಉಳಿಸಿಕೊಂಡಿದ್ದೆ. ದ್ಯೇಯನಿಷ್ಟ ಪತ್ರಕರ್ತ ಎನ್ನುವ ಪತ್ರಿಕೆಯಲ್ಲಿ ವರದಿಗಾರನಾಗಿ ಸುದ್ದಿ, ಲೇಖನ ಮತ್ತು ವ್ಯಂಗ್ಯ ಚಿತ್ರರಚನಾಕಾರನಾಗಿ ಕೆಲಸ ಮಾಡಿದ್ದೆ. ಕಲಾ ಪ್ರದರ್ಶನಗಳು, ಬರವಣಿಗೆ, ನಾಟಕ, ಯೊಗ ತರಬೇತಿ ಹೀಗೆ ಹಲವು ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದ್ದವು ಅದೇ ನನ್ನ ಕೈ ಹಿಡಿದಿದೆ.

ಪ್ರಶ್ನೆ : ನಿಮ್ಮ ನಿವೃತ್ತಿ ಜೀವನದ ದಿನಗಳನ್ನು ಹೇಗೆ ಕಳೆಯಲು ಬಯಸುತ್ತಿದ್ದೀರಿ?

ಉತ್ತರ:  ನಾನು ನನ್ನ ಹೆಚ್ಚಿನ ಸಮಯವನ್ನು ಕೃಷಿ ಮತ್ತು ಸಾಹಿತ್ಯದಲ್ಲಿ ಕಳೆಯಲು ಬಯಸುತ್ತೇನೆ.‌ ಆದರೆ ಕೃಷಿಯಲ್ಲೇ ಹೆಚ್ಚಿನ ಸಮಯ ವ್ಯಯವಾಗುತ್ತಿದ್ದು ಸಾಹಿತ್ಯದ ಕಡೆಗೆ ಗಮನಹರಿಸಲು ಸಮಯ ಸಾಲುತ್ತಿಲ್ಲ. ಈಗಾಗಲೇ ಒಂದು ಮಕ್ಕಳ ಕತೆಗಳ ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ. ಒಮದು ಕತಾ ಸಂಕಲನ , ಕವನ ಸಂಕಲನ ಮತ್ತು ಚಿತ್ರಕಲಾ ಪುಸ್ತಕವನ್ನು ಬಿಡುಗಡೆಮಾಡುವ ಹಂಬಲವಿದೆ.

ಇವರು
ಅಖಿಲ ಭಾರತ ಕನ್ನಡ ಪರಿಷತ್ತಿನ ಜವಾಬ್ದಾರಿ ಹೊತ್ತಿದ್ದಾರೆ. ಅದಕ್ಕಾಗಿ ಕೆಲವು ಆನ್ ಲೈನ್ ಕಾರ್ಯಕ್ರಮ ಮಾಡುತ್ತಿದ್ದಾರೆ.  ಮೈತ್ರಿ ಕಲಾ ಬಳಗ ಎಂಬ ಕಲಾ ವೇದಿಕೆಯನ್ನು ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಅದರ ಸಹಯೋಗದಲ್ಲಿ  ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿಧಿ ಸ್ಥಾಪಿಸಿದ್ದು‌ ಪ್ರತೀ ವರ್ಷ ಎಂಟರಿಂದ ಹತ್ತನೆ ತರಗತಿಯ ಮೂರು ವಿದ್ಯಾರ್ಥಿಗ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡುತ್ತಿದ್ದಾರೆ. "ಕಾಗದ ಪತ್ರ ಮತ್ತು ಕಡತಗಳಲ್ಲಿ ನಿವೃತ್ತಿ ಹೊಂದಿದ್ದೇನೆ ಹೊರತಾಗಿ ಕೆಲಸಗಳಿಂದಲ್ಲ". ಎಂಬುದು ಅವರ ಮಾತು

ಸುಮಾ.ಕಂಚೀಪಾಲ್


Comments

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...