Skip to main content

ಗೋಡೆಗೆ ಅಂಟಿದ ಮುಖ

ಅವಧಿ

ಗೋಡೆಗೆ ಅಂಟಿದ ಮುಖ

ಸದಾ ನಗುಮೊಗ ತಾನು ತನ್ನದು ಎಂದು ಅವನ ಪಾಡಿಗೆ ಅವನು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ಸೂರ್ಯನಾರಾಯಣ. ಅವನದು ಪುಟ್ಟ ಮನೆ ಮನೆತುಂಬಾ ಬಟ್ಟೆ ಮತ್ಯಾರೂ ಇಲ್ಲ ಇವನೊಬ್ಬನೆ. ಯಾಕೆ ಗೊತ್ತಾ? ಇವನು ಊರು ಬಿಟ್ಟು ಪಟ್ಟಣಕ್ಕೆ ಬಂದುಳಿದು ಹಲವು ವರ್ಷಗಳೇ ಕಳೆದಿವೆ. ಇವನು ಹೊಲಿಗೆ ಮಾಡುವ ಒಬ್ಬ ಸಾಮಾನ್ಯ ವ್ಯಕ್ತಿ. ಅಗತ್ಯಕ್ಕಿಂತ ಹೆಚ್ಚಿನದನ್ನು ಎಂದಿಗೂ ಬಯಸದ ಸದ್ಗುಣಿ. ಅವನ ಬಾಳ ಸಂಗಾತಿ ಹೊಲಿಗೆ ಯಂತ್ರವೇ ಆಗಿಹೋಗಿದೆ. ಆದರೆ ನಮ್ಮ ನಾಣಿಗೀಗ ಮದುವೆ ವಯಸ್ಸು ಬಂದಿದೆ.

" ನಿಮ್ಮಲ್ಲಿ ಯಾರಾದರೂ ಒಳ್ಳೆಯ ಹೆಣ್ಣಿದ್ದರೆ ತಿಳಿಸಿ" ಎಂದು ಹೇಳುವುದಕ್ಕೂ ಅವನ ಜನರು ಅಲ್ಲಿಲ್ಲಾ. ಇವನೇ ಹಾಗೆ ಹೇಳಿಕೊಳ್ಳೊಕೆ ಆಗೋದಿಲ್ಲಾ. ವರ್ಷಕೊಮ್ಮೆ ಬಂದು ತನ್ನ ತಾಯಿಗೆ ಸೀರೆಕೊಟ್ಟು, ಸ್ವಲ್ಪ ಮಟ್ಟಿನ ಹಣ ಕೊಟ್ಟು ಹೋಗುವುದು ಅವನ ರೂಡಿ ದೂರದಿಂದ ಬಂದರೂ ಮನೆಯಿಂದ ಅಣ್ಣ ಹೊರಹಾಕಿದ್ದ ಎನ್ನುವ ಕಾರಣಕ್ಕಾಗಿ ಈತ  ಮನೆಗೇ..ಬಂದರು ಅಂಗಳದಲ್ಲಿಯೇ ಕುಳಿತು ಒಂದು ಗುಟುಕು ನೀರನ್ನೂ ಕುಡಿಯದೆ ಹೊರಗಿನಿಂದ ಹೊರಗೇ ತಾಯಿಯನ್ನು ಮಾತನಾಡಿಸಿ ಹೋಗುತ್ತಿದ್ದ. ಇದು ಹೀಗೆ ನಡೆಯಲು ಪ್ರಾರಂಭವಾಗಿ ಏಳೆಂಟು ವರ್ಷಗಳೇ ಕಳೆದು ಹೋಗಿದೆ.



ಅತ್ತಿಗೆಗೆ ಮೈದುನನ್ನು ಕಂಡು ಕನಿಕರ ಗಂಡನಿಗೆ ಕಾಣದ ಹಾಗೆ ಹಲಸಿನ ಹಪ್ಪಳ, ಸಂಡಿಗೆ , ಚಕ್ಕುಲಿ ಇಂತವನ್ನು ಡಬ್ಬಿಯಲ್ಲಿ ತುಂಬಿ ಗಂಡನ ಕಣ್ಣಿಗೆ ಕಾಣದಂತೆ ಅವನ ಗಾಡಿಗೆ ಮುಟ್ಟಿಸುತ್ತಿದ್ದಳು. ತಾಯಿಯಂತೂ ಇಂತ ಪರಿಸ್ಥಿತಿ ನೋಡಲಾರದೇ ಪ್ರತೀ ಬಾರಿಯೂ ಅಳುವುದೆ ಅವಳ ಕೆಲಸ. ಇತ್ತೀಚಿಗೆ ನಾಣಿ ವರ್ಷಕ್ಕೊಮ್ಮೆ ಬರುವವನು ವಾರ ವಾರ ಪೋನಿಸಿ ಮೂರು ತಿಂಗಳಿಗೊಮ್ಮೆ ಮನೆಕಡೆ ಬರಲು ಆರಂಭಿಸಿದ್ದ . ಪಾಪ ಅವನ ಮನಸ್ಸಿನಲ್ಲಿ ಏನು ತಳಮಳವಿತ್ತೊ ತಿಳಿಯದು ಸುಮ್ಮನೆ ಕಣ್ಣಂಚು ತೇವವಾಗುತ್ತಿತ್ತು. ತಾಯಿಯನ್ನು ಕರೆದುಕೊಂಡೇ ಹೋಗಬೇಕೆಂದು ನಿರ್ಧರಿಸಿ ಬಂದವನು ಅವನಾಗಿದ್ದ.



ಆದರೆ ಇತ್ತೀಚಿಗೆ ಅವನು ಬಹಳಸಲ ಮನೆಕಡೆ ಬಂದುದರಿಂದ ಅಣ್ಣ ಸ್ವಲ್ಪ ಗರಂ ಆಗಿದ್ದ. ಇವನು ಆಸ್ತಿಯಲ್ಲಿ ಪಾಲು ಕೇಳಲೆಂದೇ ಬರುತ್ತಿದ್ದಾನೆ ಎಂಬ ಸಣ್ಣ ಸಂಶಯವೂ ಅವನಲ್ಲಿತ್ತು. ಮನೆಬಿಟ್ಟು ಹೋದವನು ಪದೆ ಪದೆ ಮನೆಕಡೆ ಬರೊದ್ಯಾಕೆ ಅಂತ ದಬಾಯಿಸಿ ಕಳಿಸಿದ್ದ ಆದರೂ ಧೈರ್ಯ ಮಾಡಿ ಅಣ್ಣನೊಡನೆ ಗಟ್ಟಿಯಾದ ಒಂದೆರಡು ಮಾತನಾಡಿ ತಾಯಿಯನ್ನು ಕರೆದುಕೊಂಡು ಪಟ್ಟಣಕ್ಕೆ ಬಂದ. ಹೊಲಿಗೆಯನ್ನು ಸ್ವಲ್ಪದಿನದ ಮಟ್ಟಿಗೆ ನಿಲ್ಲಿಸಿ ಕಲಿತು ಪೋಲಿಸ್ ಡಿಪಾರ್ಟ್ಮೆಂಟ್ ಅಲ್ಲಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡ. ಅದೇ ಸಂತೋಷದಲ್ಲಿ ಅವನ ತಾಯಿ ಇವನೀಗ ತನ್ನ ದುಡಿಮೆಯಿಂದ ಮನೆತೂಗಿಸಿಕೊಂಡು ಹೋಗಬಲ್ಲ ಇವನಿಗೆ ಮದುವೆ ಮಾಡಬೇಕು ಎಂಬ ಬಯಕೆ ಹೊಂದಿದಳು. ಆದರೆ ಅಣ್ಣ ಇವನ ಮದುವೆ ಮಾಡಿಸುವುದಿಲ್ಲ ಎಂಬುದು ತಿಳಿದಿತ್ತು. ನೀನೆ ಯಾರನ್ನಾದರೂ ಪ್ರೀತಿಸಿ ಮದುವೆಯಾಗು ಎಂದು ಹೇಳಿ ಮನೆಗೆ ವಾಪಸ್ ಬಂದಿದ್ದಳು .ಇದಾದ ಆರೆ ತಿಂಗಳಲ್ಲಿ ಒಂದು ಕೆಟ್ಟಘಟನೆ ನಡೆದೇ ಹೋಯಿತು.

ಒಮ್ಮೆ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ದ ನೀರು ಬೇಕಾ? ಏನಾಯಿತು ಎಂದು ವಿಚಾರಿಸುವುದಕ್ಕೂ ಹತ್ತಿರ ಯಾರೂ ಇರಲಿಲ್ಲ. ತಾನು ಪ್ರಜ್ನೆ ತಪ್ಪಿ ಬಿದ್ದಿದ್ದೇನೆ ಎಂಬ ಅರಿವು ಅವನಿಗಿಲ್ಲ. ಒಲೆಯಮೇಲೆ ಕಾಯಿಸಲಿಟ್ಟ ಸಾಂಬಾರು ಅಲ್ಲೆ ಕತ್ತಿಹೋಗಿತ್ತು. ಪ್ರಜ್ನೆಬಂತು ಆದರೆ ತನಗೇನಾಗಿತ್ತು? ಪ್ರಜ್ನೆತಪ್ಪಿ ಎಷ್ಟು ಸಮಯವಾಗಿತ್ತು? ಎಂದು ಅವನಿಗೆ ಹೊಳೆಯಲಿಲ್ಲ. ಆ ಬಾರಿ ಅವನು ಅದನ್ನು ನಿರ್ಲಕ್ಷ್ಯ ಮಾಡಿದ. ಇನ್ನೊಮ್ಮೆ ಹೀಗೆ ಆಯಿತು ಆ ಸಾರಿ ಬಿದ್ದಾಗ ನೆತ್ತರಹೆಪ್ಪುಗಟ್ಟಿ ಮುಖದಮೇಲೆ ಕರಿಕಲೆಯಾಗಿತ್ತು ಎಲ್ಲರೂ ಏನಾಯಿತು ಎಂದುಕೇಳುವವರೆ.

ಹಾಗೆ ಸ್ವಲ್ಪ‌ ಕಾಲು ಜಾರಿ ಬಿದ್ದೆ ಎಂಬ ಉತ್ತರವನ್ನೆ ಎಲ್ಲರಿಗೂ ನೀಡುತ್ತಿದ್ದ. ಒಮ್ಮೆ ಸ್ಟೇಷನ್ ಅಲ್ಲೆ ಹೀಗೆ ಬಿದ್ದಾಗ ಆಸ್ಪತ್ರೆಗೆ ಸೇರಿಸಿದ್ದರು ಆಗ ತಿಳಿದುಬಂದು ಮೆದುಳಿನಲ್ಲಿ ನರಗಳಲ್ಲಿ ರಕ್ತಹೆಪ್ಪುಗಟ್ಟುತ್ತಿದೆ ಎಂದು. ಹೆಚ್ಚೆಂದರೆ ಒಂದು ತಿಂಗಳು ಬದುಕಬಹುದು ಎಂಬ ಕಠು ಸತ್ಯವನ್ನು ತಿಳಿಸಲಿಕ್ಕೂ ಕುಟುಂಬದ ಮತ್ಯಾರು ಜೊತೆಗಿಲ್ಲ. ಈತ ಆ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟ ಆದರೆ ತುಂಬಾ ಕಾಯಿಲೆ ಹೆಚ್ಚಾಗಿ ಊಟಮಾಡಲು ಆಗದೇ ಇರುವಾಗ ಆಚೀಚೆ ಮನೆಯವರೇ ಒತ್ತಾಯ ಮಾಡಿ ಮನೆಗೆ ತಾವಾಗಿ ಪೋನಿಸಿ ವಿಷಯ ತಿಳಿಸಿದರು.

ಅಣ್ಣ ಕೊನೆಗಳಿಗೆಯಲ್ಲಿ ಅಲ್ಲಿಗೆ ಬಂದು ನಿನ್ನ ಜೊತೆ ನಾವಿದ್ದೇವೆ ಏನೂಹೆದರಬೇಡ ಎನ್ನುವಾಗ. ಇವನ ಕಣ್ಣಾಲಿಗಳು ತೇವ ಗೊಂಡವು ಅಣ್ಣನನ್ನು ತಬ್ಬಿಕೊಂಡು ಅತ್ತು ಬಿಟ್ಟ. ಹೇಗಾದರು ನನ್ನನು ಉಳಿಸಿಕೊಳ್ಳಿ ನನಗೆ ಬದುಕುವ ಹಂಬಲವಿದೆ ಎನ್ನುತಿರುವಾಗಲೇ ಮತ್ತೆ ಪ್ರಜ್ನೆ ತಪ್ಪಿತ್ತು ಮತ್ತೆ ಅವನು ಕಣ್ಣು ತೇವಗಕಂಡಿತು. ಅಲ್ಲಿಂದ ಊರಿಗೆ ಕರೆದತಂದರು. ಅವನ ಸ್ವಂತ ಊರಿನಲ್ಲಿ ತನ್ನ ಹಳೆಯ ಕೋಣೆಯಲ್ಲಿ ಮಲಗಿದ್ದ ಪಕ್ಕದಲ್ಲಿ ಅಣ್ಣ ಅತ್ತಿಗೆ ತಾಯಿ ಇದ್ದರು ಇದನ್ನು ಅವನಿಂದ ನಂಬಲಾಗಲಿಲ್ಲ. ಅಷ್ಟೊಂದು ಸಂತೋಷವಾಗಿ ಮಾತೆ ಹೊರಡಲಿಲ್ಲ. ಸಾಯುವುದಕ್ಕು ಮೊದಲು. ನಾನು ಬದುಕಿದ್ದು ಇದೇ ಘಳಿಗೆಗಾಗಿ ಈಗ ನಾನು ಸತ್ತರೂ ಚಿಂತೆಯಿಲ್ಲ ಎಂಬ ಮಾತನ್ನು ಆಡಿದ್ದ. ಈಗ ಆ ಗೋಡೆಗೆ ಪೋಟೋ ತೂಗಿಹಾಕಿ ಎರಡು ವರ್ಷ ಆಯಿತು. !

ಸುಮಾ.‌ಕಂಚೀಪಾಲ್
Sumagaonkar22@gmail.com.

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...