ಮದುಮಗಳು
ಮೂರುದಿನಕಳೆದರೆ ಮದುವೆ ಆಕೆಗೆ
ಮನೆಮುಂದೆ ಚಪ್ಪರ ತೋರಣದ ತಯಾರಿ
ಮನೆಮಂದಿ ಕೆಲಸದಲಿ ತೊಡಗಿರಲು
ಮನದಲ್ಲೆ ಮಾಡಿಹಳುಮದುವೆಯ ಕನಸ ಕುಸುರಿ
ಮದರಂಗಿ ರಂಗಲ್ಲೆ ಪ್ರೀತಿಯ ತೂಕ
ಹೊಸ ಸೀರೆಯ ಉಡುವಂತ ಕೌತುಕ
ಮನೆ ಬಿಟ್ಟು ಮನೆ ಸೇರುವ ಆತಂಕ.
ಮನೆತನಗಳಾ ನಡುವೆ ಮೂಡುವುದು ಒಲವ ಸಂಕ
ಒಡವೆಗಳಿಗೆ ಜವಳಿಗೆ ಕೊಡಬೇಕು ಸುಂಕ.
ಅವನೊಡನೆ ಮಾತಲ್ಲಿ ಒಂಚೂರು ಬಿಂಕ.
ಕುಡಿ ಕುಡಿದು ಸವಿಯಾದ ಪಾನಕ
ಕೇಳಿದರೂ ಕಿರಿಮಗಳ ಜಾತಕ
- ಸುಮಾ.ಕಂಚೀಪಾಲ್
😄😄
ReplyDelete