ಅಜ್ಜಿಮನೆಯೆಂಬ ಅರಮನೆಯ ಸುತ್ತ.
ಮೂರು ಬದಿ ನೀರು ಒಂದು ಬದಿ ಬೆಟ್ಟ ಅದರ ಮಧ್ಯ ಒಂದೂರು.ಏನಿದು ಪರ್ಯಾಯ ದ್ವೀಪದ ಕುರಿತಾದ ಕತೆಯೋ ಎಂದು ಯೋಚಿಸಬೇಡಿ. ಇದು ನನ್ನ ಅಜ್ಜಿ ಮನೆಯ ಜಾಗದ ಚಿತ್ರಣ. ಆಗ ಅಜ್ಜಿ ಮನೆಗೆ ಹೋಗುವ ಖುಷಿ ಈಗ ಬಂಗಾರದ ಸರ ಕೊಡಿಸಿದರು ಸಿಗುವುದಿಲ್ಲ.

ಅಜ್ಜಿ ಮನೆಗೆ ಹೋಗುವ ಹಿಂದಿನ ದಿನ ರಾತ್ರಿ ಮಲಗಿದಾಗ ಎಷ್ಟು ಹೊತ್ತಿಗೆ ಬೆಳಗಾಗತ್ತೊ ಎಂದು ಯೋಚಿಸುವ ಹೊತ್ತಿಗೆ ಅರ್ಧ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಏಕೆಂದರೆ ಅಜ್ಜಿಯ ಮನೆಗೆ ಹೋಗುವ ದಿನ ಬೆಳಿಗ್ಗೆ ಅಜ್ಜ ಕೊಡಿಸಿದ ಬೆಳ್ಳಿ ಗೆಜ್ಜೆ ತೊಡಿಸುತ್ತಿದ್ದಳು ಅಮ್ಮ. ಅದರ ಸದ್ದು ಮಾಡುತ್ತಾ ಮನೆತುಂಬ ಕುಣಿದು ಮನೆಯವರಿಗೆಲ್ಲಾ ನಾನು ಅಜ್ಜನ ಮನೆಗೆ ಹೋಗಿ ಬರ್ತೆನೆ ಎಂದು ಡಂಗುರ ಸಾರುವ ಖುಷಿ ಮೊದಲ ಹಂತದ್ದು.
ಇನ್ನು ಮರುದಿನ ಬೆಳಗಾದರೆ ಬೇಗನೆ ಎದ್ದು ಸಕಲ ತಯಾರಿಗಳೊಂದಿಗೆ ಮಧ್ಯಾಹ್ನದ ಊಟವನ್ನು ಬುತ್ತಿಕಟ್ಟಿ ಘಟ್ಟಗಳನ್ನು ಕಾಲ್ನಡಿಗೆಯಲ್ಲಿ ಇಳಿಯ ಹೊರಟರೆ ಅಜ್ಜಿ ಮನೆ ಕಾಣುವಷ್ಟರಲ್ಲಿ ಕಾಲೆಲ್ಲಾ ನೋವು ಇನ್ನು ಮಾತ್ರ ಮರಳಿ ಅಜ್ಜನ ಮನೆಗೆ ಬರುವುದಿಲ್ಲ ಎಂದು ಪ್ರತೀ ಬಾರಿಯೂ ವಟ ಗುಡುತ್ತಾ ಮನೆ ತಲುಪುವುದು. ಮರದ ಸಂಕ ಚಪ್ಪಲಿಯನ್ನು ಕೈಯಲ್ಲಿ ಹಿಡಿದು, ಕೈಬಳ್ಳಿ ಹಿಡಿದು ಸಾಗಿದಬೇಕು. ದೊಡ್ಡದೊಂದು ಮಣ್ಣಿನ ಮನೆ ಮನೆ ತುಂಬಾ ಜನ. ಈಗಿನ ಹಾಗೆ ನಾಕು ಎಂಟು ಜನರಲ್ಲ. ಮೂವತ್ತು ಮೂವ್ತತ್ತಾರು ಜನ.
ಅಜ್ಜ, ಗಂಗಜ್ಜ, ಮಾಧವಜ್ಜ, ತಮ್ಮಣಜ್ಜ, ರಾಜಜ್ಜ, ಗಜಾನಜ್ಜ, ಅಬ್ಬೆ, ಸಣ್ಣಬ್ಬೆ,ದೊಡ್ಡಬ್ಬೆ, ಮಾವಂದಿರು, ಚಿಕ್ಕಮ್ಮಂದಿರು, ಮುದೀಯದೊಂದು ಹಣ್ಣಜ್ಜಿ. ಹೀಗೆಲ್ಲಾ ದಿನ ನಿತ್ಯವೂ ಮದುವೆಮನೆಯಂತೆ ಕಾಣುತ್ತಿದ್ದುದು ನನ್ನ ಅಜ್ಜಿಮನೆ.
ದೀಪಾವಳಿ ಬಂದರಂತೂ ತಪ್ಪದೆಯೇ ಅಜ್ಜಿಯಮನೆ ದಾರಿ ಹಿಡಿಯುತ್ತಿದ್ದೆವು.
ಆದರೆ ಈಗ ಅಷ್ಟೆಲ್ಲಾ ಸಂಭ್ರಮ ಉಳಿದಿಲ್ಲ ನಾವು ದೊಡ್ಡವರಾಗಿದ್ದೇವೆ. ಅಲ್ಲಿಯೂ ವಿಭಕ್ತ ಕುಟುಂಬಗಳಾಗಿವೆ. ಒಂದೇ ಮನೆಯ ತುಂಬಿ ತುಳುಕುವ ಜನರಿಲ್ಲ. ಆದರೆ ಹತ್ತಾರು ಅಜ್ಜಿ ಮನೆಗಳು ಹುಟ್ಟಿಕೊಂಡಿವೆ.
ಸುಮಾ.ಕಂಚೀಪಾಲ್.

Good memories ❤️
ReplyDelete😊😊ಹೌದು
DeleteSuper ❤️❤️
ReplyDeleteTq uu
Deleteಅದೊಂದು ಸ್ವರ್ಗ
ReplyDeleteನಿಜ
ReplyDeleteಚೆನ್ನಾಗಿದೆ..
ReplyDeleteಧನ್ಯವಾದ ಒದ್ತಾಇರಿ
Delete👌👌
ReplyDeleteಧನ್ಯವಾದ
ReplyDeleteChennagide... 👍🏻👍🏻
ReplyDelete