Skip to main content

ಮೌಢ್ಯ

ಮೌಢ್ಯಗಳಿಂದ ಹೊರಬನ್ನಿ

ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ   ಕೊರೊನಾ ತಡೆಗಟ್ಟಲು ಕೆಲ ಹಳ್ಳಿಗಳಲ್ಲಿ ಮತ್ತು ಬೆಂಗಳೂರಿನಂತಹ ಭಾರಿ ನಗರಗಳಲ್ಲಿಯೂ ಮೂಢನಂಬಿಕೆಗಳನ್ನು  ಜನರು ನಂಬುತ್ತಿದ್ದಾರೆ. ಈ ಹಿಂದೆಯೂ ಪ್ಲೇಗ್ ಎಂಬ ಸಾಂಕ್ರಾಮಿಕ ಕಾಯಿಲೆ ಬಂದಾಗ ಪ್ಲೇಗಮ್ಮ ಎಂದು ಅದಕ್ಕೆ ಸ್ತ್ರೀ ರೂಪ ನೀಡಿ ದೇವಿಯ ರೂಪದಲ್ಲಿ ಆರಾಧಿಸುವ ಮೂಲಕ ಹೇಗೆ ಅವೈಜ್ಞಾನಿಕ ತಳಹದಿಯ ಮೇಲೆ ನಿಂತಿದ್ದರೊ ಹಾಗೇ ಈಗಲೂ ಪುನರಾವರ್ತನೆಯಾಗುತ್ತಿದೆ.

ಮದ್ದೂರು ಪಟ್ಟಣದಲ್ಲಿ ಯುವಕ ಮತ್ತು ಯುವತಿಯರು ಸೇರಿ ಕೋರೊನಾ ಮಾರಮ್ಮನ ಹೆಸರಿನಲ್ಲಿ ಹಬ್ಬವನ್ನೇ ಆಚರಿಸಿದರು.ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ವೇಷಧರಿಸಿ  ತಲೆ ಮೇಲೆಹೊತ್ತುಕೊಂಡು ಊರಿನ ಕೆಲ ಭಾಗಗಳಲ್ಲಿ ಮೆರವಣಿಗೆ ಸಾಗಿದ ಘಟನೆಯು ಜರುಗಿದೆ.
ಇವುಗಳಿಂದಾಗಿ ಸೊಂಕು ಹರಡುವ ಪ್ರಮಾಣ ಹೆಚ್ಚುತ್ತಿದೆ ಹೊರತಾಗಿ ರೋಗದ ಮುಕ್ತಿಗಾಗಿ ಅವರ ಬೇಡಿಕೆ ಇಡೇರುತ್ತಿಲ್ಲ. ಇದರೊಟ್ಟಿಗೆ ಶಿಂಷಾ ನದಿಯ ತೀರದಲ್ಲಿ ಮೂರ್ತಿಯನ್ನು ಮುಳುಗಿಸಿ, ಮೊಸರಿನಿಂದ ಪೂಜೆಮಾಡಿ ನೀರನ್ನು ಸಿಂಪಡಣೆ ಮಾಡಿದ್ದಾರೆ.

ನದಿಗಳಲ್ಲಿ ನಿಂಬೆಹಣ್ಣು ತೇಲಿಬಿಡುವುದು. ಮಾಹಾಪೂಜೆ , ಯಾಗಗಳ ಹೆಸರಿನಲ್ಲಿ ಅನ್ನದ ಆಹುತಿ ಬಲಿಯ ಹೆಸರಿನಲ್ಲಿ ಬಂಡಿತುಂಬ ಅನ್ನವನ್ನು ಊರಿನ‌ ಹೊರವಲಯದಲ್ಲಿ ಬೀರುವ ಆಚರಣೆಗಳು ಖಂಡಿಸುವಂತದ್ದು. ಸಾಮಾಜಿಕ ಪರಿಕಲ್ಪನೆಯನ್ನೂ ಹೊರತುಪಡಿಸಿ ಇಂತಹ ಆಚರಣೆಗಳು ಇಂದಿನ ಆಧುನಿಕ ಕಾಲದಲ್ಲಿ ಕಾಣಿಸುತ್ತಿದೆ.

ಬೆಂಗಳೂರಿನ ರಸ್ತೆಯಲ್ಲಿ ಮೂರುಕಲ್ಲಿನ ಚೂರುಗಳನ್ನು ಒಂದೆಡೆ ಇಟ್ಟು ಅದಕ್ಕೆ ಅರಶಿನ ಕುಂಕುಮ ಬಳಿದು ಪೂಜೆಮಾಡಿ ಕೊರೋನಾದಿಂದ ರಕ್ಷಿಸುವಂತೆ ಪ್ರಾರ್ಥನೆ ಮಾಡಿದ್ದಾರೆ. ಇನ್ನು ಇಂತಹ ಕಾರ್ಯದಲ್ಲಿ ವಿದ್ಯಾವಂತರು ತಮ್ಮ ನಿಲುವನ್ನು ತೋರಿಸುತ್ತಾ, ಮೂಕ ಪ್ರಾಣಿಗಳನ್ನು ಬಲಿಕೊಡುತ್ತಿರುವ ಸಂಗತಿಯೂ ನಡೆಯುತ್ತಿದೆ. ಮಣ್ಣಿನ ಮೂರ್ತಿ ಮಾಡಿ ನದಿಗಳಲ್ಲಿ ತೇಲಿಬಿಡಲಾಗುತ್ತಿದೆ.

ಚಿಕ್ಕನಾಯಕನಹಳ್ಳಿಯಲ್ಲಿ  ಎಂ.ಎಸ್.ಡಬ್ಲ್ಯೂ ಪದವಿದರನೊಬ್ಬ ಕೊರೊನಾ ದೇವಿ ದೇವಸ್ಥಾನದ ಅರ್ಚಕನಾಗಿ ಕೋರೊನಾ ಮಾರಮ್ಮನ ಭಕ್ತನಾಗಿದ್ದೇನೆ ಇದರಿಂದ ಜನರಿಗೆ ಒಳಿತಾಗುತ್ತದೆ ಎಂದು ಮಾಧ್ಯಮಗಳ ಎದುರಲ್ಲಿ ನೀಡಿದ ಉತ್ತರ ಇಂದಿನ ಸಮಾಜದ ವಿದ್ಯಾವಂತರ ಸ್ಥಾನವನ್ನು ತೋರ್ಪಡಿಸುತ್ತಿದೆ.

ಮೂಢನಂಬಿಕೆ ಅಲ್ಲ ಇದು ಮೂಲ ನಂಬಿಕೆ ಎಂಬ ವಿಚಾರಗಳು ಆಚರಣೆ ಮಾಡುವವರ ತಲೆಯಲ್ಲಿದೆ. ಕೊರೊನಾ ವ್ಯಾಕ್ಸಿನೇಷನ್‌ ಮಾಡಿಸಿಕೊಳ್ಳಿ ಎಂದರೆ, ನಮಗೆ ಯಾವ ಖಾಯಿಲೆಯೂ ಇಲ್ಲ ಎಂದು ವ್ಯಾಕ್ಸಿನೇಷನ್‌ ನಿಂದ ದೂರ ಉಳಿದಿದ್ದಾರೆ.

ಕೆಲವೆಡೆ ಸಗಣಿ ನೀರಿನಿಂದ ಸ್ನಾನಮಾಡಿ ಕೊವಿಡ್ ಓಡಿಸುವ ಯತ್ನಗಳೂ ನಡೆದಿವೆ. ಏನೇ ಆದರೂ ಮೂಢ ನಂಬಿಕೆಗಳಿಗಳಿಂದ ಕೊವಿಡ್ ಸೋಂಕನ್ನು ದೂರಮಾಡಲು ಸಾಧ್ಯವಿಲ್ಲ ಎಂಬುದಂತೂ ಸ್ಪಷ್ಟ. ಇಂತಹ ಮೌಢ್ಯಗಳಿಂದ ದೂರವುಳಿಯವುದು ಸಹ ಕೊವಿಡ್ ಪಿಡುಗನ್ನು ಇಲ್ಲವಾಗಿಸುವ ಒಂದು ವಿಧಾನವೇ ಸರಿ.

ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗ ಹಬ್ಬುತ್ತಿರುವ  ಈ ಸಂಧರ್ಭದಲ್ಲಿ ಎಲ್ಲರೂ ತಪ್ಪದೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಲಸಿಕೆ ಪಡೆದುಕೊಳ್ಳಬೇಕೆ ಹೊರತು ಮೂಢನಂಬಿಕೆ ಆಚರಣೆ ಸಲ್ಲದು.

ಸುಮಾ.ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...