Skip to main content

ಕವಿತೆ

ಪುಟದ ತಿರುವು.

ಪದ್ಯಬರೆಯಲು ಪುಟ ತಿರುವುತ್ತೇನೆ
ಹೊತ್ತು ಗೊತ್ತಿಲ್ಲದ ವೇಳೆಯಲಿ
ನಡೆವ ದೃಶ್ಯಗಳನ್ನು ನಿಮಗೆ
ಬಿಂಬಿಸುವಂತೆ.

ಅದೂ ರಾತ್ರಿ ಗೂಡಿನಲ್ಲಿ
ಬಾಲ ಮುದುರಿ ಮಲಗಿದ್ದ
ನಾಯಿಯ
ಪಾಡಿನಂತ ಕವಿತೆ.

ಹಗಲು ಇರುಳು ಕಂಡು
ಕಾಣದ ಜೇನಿನ ಕಾರ್ಯದಂತೆ
ನಿರಂತರವಾಗಿ ಶ್ರಮಿಸುವಂತ ಕವಿತೆ.

ಸಾವಿರ ಬೆಂಕಿಯ ಉಂಡೆಗಳು
ಉರಿದು ನವಿಲ ಗರಿಯಾಗಿ
ಕುಣಿದ ಕವಿತೆ.

ನಾಲ್ಕು ಸಾಲು ಬರೆದರಾಯ್ತು
ಅದೇ ಕವಿತೆ ಎಂದವನು ಸಹ
ಮತ್ತೆ ಓದಬೇಕೆಂಬ ಕವಿತೆ.

ಸುಮಾ.ಕಂಚೀಪಾಲ್

Comments

Post a Comment