ನನ್ನ ಹೆಸರು ಇಷ್ಟೊಂದು ಪ್ರತಿಷ್ಠಿತ ಪ್ರಶಸ್ತಿಯ ಅಡಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಂತೂ ನನಗಿತ್ತು, ಆದರೆ ಅದು ಸಾಧ್ಯವಾಗಬಹುದೇ ಎಂಬ ಅನುಮಾನವೂ ಇತ್ತು. ಈ ವರ್ಷ ನನಗೆ ಸಿಕ್ಕ ಅತಿ ದೊಡ್ಡ ಖುಷಿಯಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ನನ್ನ ಬರವಣಿಗೆ ಮೆಚ್ಚಿ ಪ್ರೋತ್ಸಾಹಿಸಿದ ಎಲ್ಲರಿಗೂ ನಾನಿದನ್ನು ಅರ್ಪಿಸುವೆ. ನಾನು ಬರೆದದ್ದಕ್ಕಲ್ಲ ಈ ಪ್ರಶಸ್ತಿ ಬರಬಹುದಾ? ಎಂದು ಅನುಮಾನಿಸಿದಾಗ ಒತ್ತಾಯ ಮಾಡಿ "ಇದು ತಮಾಷೆ ಅಲ್ಲ, ಮೊದಲು ಇದನ್ನು ಸೀರಿಯಸ್ಆಗಿ ಆಲೋಚಿಸಿ ಈ ಬಗ್ಗೆ ಮುಂದೇನು ಮಾಡಬೇಕು ಯೋಚಿಸು, ಧ್ಯಾನದಂತೆ ಬರಿ" ಎಂದು ನನಗೆ ಗುರಿ ತೋರಿಸಿ. ಬರೆಯಲು ಕುಳಿತಾಗ ಯಾವ ಕೆಲಸವಿದ್ದರೂ ತಾನೇ ಮಾಡಿಕೊಂಡು, ಬಾಯಲ್ಲಷ್ಟೇ ಅಲ್ಲ ಕೃತಿಯಲ್ಲೂ ನನಗೆ ಪ್ರೋತ್ಸಾಹಿಸುವ ನೀನಿರುವಾಗ ನಾನು ಇನ್ನಷ್ಟು ಸಾಧಿಸಬಲ್ಲೆನು.ಇವಳೇಕೆ ವಿನ್ನಿಂಗ್ ಸ್ಪೀಚ್ ಕೊಡುತ್ತಿದ್ದಾಳೆ ಎಂದುಕೊಂಡವರಿಗೆ ಇದಕ್ಕಿಂತ ದೊಡ್ಡ ಗೆಲುವು ಇನ್ನೊಂದಿಲ್ಲ ಎಂದು ಹೇಳಲು ಬಯಸುವೆ.
ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು. ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ. ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು. ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ. ಅಬ್ಬರವ...
Comments
Post a Comment