ಅದು ಹುಣ್ಣಿಮೆ ರಾತ್ರಿ. ಗೋಪಾಲಯ್ಯ ತನ್ನ ಹೆಂಡತಿಯೊಟ್ಟಿಗೆ ಮಲಗಿದ್ದವರು ಹಾಗೆ ಒಮ್ಮೆ ಕಿಟಕಿತ್ತ ನೋಡಿದರು. ತೆಂಗಿನ ಮರದ ಎಲೆಗಳು ಅಲ್ಲಾಡುತ್ತಿದ್ದವು. ಒಂಥರಾ ಆತಂಕ ಇದುವರೆಗೆ ಎಂದೂ ಆ ರೀತಿ ಆಗಿರಲೇ ಇಲ್ಲ ಅನ್ನೋತರ! ಕಣ್ಮುಚ್ಚಿದ್ರು ಕಣ್ಣುತೆರೆದ್ರೂ ಈಶ್ವರನ ಲಿಂಗವೇ ಕಾಣುತ್ತಿದ್ದವು. ಯಾಕೋ ನಿದ್ದೆನೇ ಬರ್ತಾ ಇಲ್ವಲ್ಲ ಅಂತ ಮನಸ್ಸಿನಲ್ಲಿ ಅಂದ್ಕೊಂಡು ಮತ್ತೆ ಆ ಕಡೆ ಈ ಕಡೆ ಹೊರಳಾಡಿ ಕಣ್ಮುಚ್ಚಿದರು. ಕಣ್ಮುಚ್ಚಿದ್ರೂ ಕೂಡ ತಾನು ಪೂಜೆ ಮಾಡ್ತಾ ಇದ್ದ ದೇವಸ್ಥಾನದ ಈಶ್ವರ ಲಿಂಗವೇ ಕಾಣುತ್ತಿತ್ತು. ನಿದ್ರೆಯಲ್ಲಿ, ಕನಸಿನಲ್ಲೂ ಕೂಡ ಅದೇ ದೇವಸ್ಥಾನ! ಅವರಿಗೆ ಆಶ್ಚರ್ಯ ಆಗುತ್ತೆ. ಏನಿದು? ಎರಡು ಮೂರು ದಿನದಿಂದ ಒಂದೇ ಕನಸು ಪದೇ ಪದೇ ಬೀಳ್ತಾ ಇದೆಯಲ್ಲ, ಏನಿದರ ಅರ್ಥ ಅಂತ ಯಾವಾಗಲೂ ಯೋಚನೆ ಗೋಪಾಲಯ್ಯರದು.
(ನಾನು ಎಷ್ಟುದ್ದದ ಕಥೆಯನ್ನು ಬರೆಯಬಲ್ಲೆ ಎಂದು ನೋಡುವ ಸಲುವಾಗಿ ಇದನ್ನು ಬರೆದೆ. ಹಾಗೆಯೇ ಈ ಕಥೆಗೆ ಸಂಬಂಧಿಸಿದ ಫೋಟೊ ನನ್ನಲ್ಲಿಲ್ಲದ ಕಾರಣ ಗ್ಯಾಲರಿಯಲ್ಲಿರುವುದನ್ನೇ ಬಳಸಿದ್ದೇವೆ)
ಆ ಊರಲ್ಲಿ ಗೋಪಾಲಯ್ಯ ಪೂಜೆ ಮಾಡುತ್ತಿದ್ದ ದೇವಸ್ಥಾನಕ್ಕೆ ಸಂಬಂಧಪಟ್ಟ ನಿಧಿಯಿದೆ ಎಂಬುದನ್ನು ಅರಿತಿದ್ದ ಕೆಲವರು ಆ ಊರಿಗೆ ಆಗಮಿಸಿದ್ದರು. ಅವರು ಬಂದ ವಿಚಾರ ಮಾತ್ರ ಗೌಪ್ಯವಾಗಿತ್ತು. ಕೇವಲ ಪ್ರವಾಸಕ್ಕೆ ಬಂದವರಂತಹ ನಟನೆ ಅವರದ್ದಾಗಿತ್ತು. ಗೋಪಾಲಯ್ಯನವರ ಬಳಿ ಬಂದು ದೇವಸ್ಥಾನದ ವಾಸ್ತುಶಿಲ್ಪ ತುಂಬಾ ಚೆನ್ನಾಗಿದೆ. ನೀವು ನಮಗೆ ಸಂಪೂರ್ಣವಾಗಿ ದೇವಾಲಯವನ್ನು ಮೂಲೆ ಮೂಲೆಯನ್ನೂ ಬಿಡದೆ ವಿವರಿಸಿದರೆ ಚೆನ್ನಾಗಿರ್ತಾ ಇತ್ತು ಎಂದು ಹೇಳಿದ್ದರು.
****
ಗೋಪಾಲಯ್ಯ ಪೂಜೆ ಮಾಡುತ್ತಿದ್ದ ಈಶ್ವರ ದೇವಸ್ಥಾನದಲ್ಲಿ ಪ್ರದಕ್ಷಿಣಾಕಾರವಾಗಿ ಹೋಗುವಾಗ ಹಿಂಭಾಗದಲ್ಲಿ ಒಂದು ಸ್ಟೋರ್ ರೂಮ್ ಇತ್ತು. ಅದು ದೇವರಿಗೆ ಬೇಕಾಗುವ ಆಭರಣ, ಹಾಗೆಯೇ ಇನ್ನಿತರ ಪೂಜಾ ಸಾಮಗ್ರಿಗಳನ್ನ ಇಡುವ ಕೋಣೆಯಾಗಿತ್ತು. ಆದರೆ ಅದರೊಳಗೆ ಇನ್ನೊಂದು ಬಾಗಿಲು ಇತ್ತು. ಅದನ್ನು ಇವರು ನೋಡುತ್ತಿದ್ದರಷ್ಟೇ, ಹೊರತಾಗಿ ಎಂದೂ ಓಪನ್ ಮಾಡಿರ್ಲಿಲ್ಲ. ಪೂಜಾರಿಗೆ ಮಾತ್ರ ಅದನ್ನು ಓಪನ್ ಮಾಡುವ ಅಧಿಕಾರ ಇತ್ತು. ಹೀಗಿರುವಾಗ ಪದೇ ಪದೇ ಕನಸು ಬೀಳ್ತಾ ಇದೆ ಒಮ್ಮೆ ಆ ಬಾಗಿಲನ್ನು ತೆಗೆದು ನೋಡೇ ಬಿಡೋಣ ಅಂತ ಓಪನ್ ಮಾಡಿದ್ರು ಗೋಪಾಲಯ್ಯ. ಮುಂದೆ ತುಂಬಾ ಕತ್ತಲು ಇದ್ದ ಕಾರಣ ಅವರು ಆವತ್ತು ಆ ಗುಹೆ ಒಳಗಡೆ ಹೋಗಲಿಲ್ಲ. ಮನೆಗೆ ಬಂದು ಹೆಂಡತಿಯ ಬಳಿ ಈ ವಿಷಯವನ್ನು ಇದೇ ಮೊದಲ ಬಾರಿಗೆ ಚರ್ಚೆ ಮಾಡುತ್ತಾರೆ. ನನಗೆ ಮೂರು ದಿನದಿಂದ ಈ ರೀತಿ ಕನಸು ಬೀಳ್ತಾ ಇದೆ. ದೇವಸ್ಥಾನದ ಹಿಂದಿರುವ ಕೋಣೆಯ ಬಾಗಿಲನ್ನು ತೆಗೆದೆ, ಅದರಲ್ಲಿ ಇನ್ನೊಂದು ಬಾಗಿಲು ಇರುವುದನ್ನು ಯಾವಾಗಲೂ ನೋಡ್ತಾ ಇದ್ದೆ. ನೀನೂ ನನ್ನ ಜೊತೆ ಬಾ, ಇಬ್ಬರೂ ಒಮ್ಮೆ ಆ ಬಾಗಿಲ ಹಿಂದೆ ಏನಿದೆ ಅನ್ನೋದನ್ನ ನೋಡಿ ಬರೋಣ ಎನ್ನುತ್ತಾರೆ. ಅದಕ್ಕೆ ಇವತ್ತು ನನಗೆ ಪುರುಸೊತ್ತಿಲ್ಲ. ಇನ್ನೊಂದಿನ ಯಾವಾಗ್ಲಾದ್ರೂ ನೋಡೋಣ ಏನಂತೀರಾ? ಎಂದು ಅವರ ಹೆಂಡತಿ ಕೇಳ್ತಾಳೆ. ಆಯ್ತು ಸರಿ ಅಂತ ಅವತ್ತು ರಾತ್ರಿ ಕೂಡ ಮಲಗ್ತಾರೆ. ಗೋಪಾಲಯ್ಯಗೆ ಆ ರಾತ್ರಿನೂ ಅದೇ ಕನಸು.
*****
ಮರುದಿನ ಬೆಳಿಗ್ಗೆ 5:00 ಗಂಟೆಗೆ ಹೆಂಡತಿಯನ್ನು ಎಬ್ಬಿಸಿಕೊಂಡು ಅವರು ಆ ದೇವಸ್ಥಾನದ ಕೊಠಡಿಯ ಬಾಗಿಲನ್ನು ತೆಗೆದು ಹೋಗ್ತಾರೆ. ಇಬ್ಬರು ಕೂಡ ಕೈಯಲ್ಲಿ ಟಾರ್ಚ್ ಹಿಡಿದು ಕೊಂಡಿರುತ್ತಾರೆ. ಒಂದು ಗದ್ದೆಬೈಲು ಇರುವ ಜಾಗಕ್ಕೆ ಆ ಗುಹೆ ಅಂತ್ಯವಾಗುತ್ತದೆ. ಇದೇನಿದು ಏನೋ ಇದೆ ಅಂತ ಕುತೂಹಲದಿಂದ ಬಂದ್ರೆ ಗದ್ದೆ ಬಯಲು ಕಾಣಿಸ್ತಾ ಇದೆಯಲ್ಲ ಅಂತ ಗೋಪಾಲಯ್ಯ ಮನದಲ್ಲೇ ಅಂದುಕೊಳ್ಳುತ್ತಾರೆ. ಅವರ ಹೆಂಡ್ತಿ ಹೇಳ್ತಾಳೆ, ಬನ್ನಿ ಇದ್ಯಾವುದೋ ಬೇರೆ ಊರಿಗೆ ಬಂದಿರೋ ಹಾಗಿದೆ.ವಾಪಸ್ ಹೋಗಿ ಬಿಡೋಣ ಈಗಾಗಲೇ ತುಂಬಾ ಸಮಯ ಆಗಿದೆ ಎಂದು ಹೇಳ್ತಾಳೆ. ಒಂದು ಎರಡು ಮೂರು ಕಿಲೋಮೀಟರ್ ಇರುತ್ತೆ ಆ ಗುಹೆ.
ಮರಳಿ ಬಂದು ದೇವಸ್ಥಾನದ ಬಾಗಿಲನ್ನು ಹಾಕಿ ಮತ್ತೆ ಮನೆಗೆ ಹೋಗಿ ಮಲ್ಕೊಳ್ತಾರೆ. ಅವತ್ತು ರಾತ್ರಿ ಅವರಿಗೆ ಆ ಕನಸು ಕಾಣುವುದಿಲ್ಲ. ಹೀಗೆ ಒಂದೆರಡು ತಿಂಗಳು ಕಳೆಯುತ್ತೆ. ಆಮೇಲೆ ಮತ್ತೆ ಅದೇ ಕನಸು ಆರಂಭ ಆಗುತ್ತೆ. ಮುಂದುವರೆದ ಭಾಗವಾಗಿ ಒಂದು ನಿಧಿ ಇರೋದನ್ನ ಸಾಕ್ಷಾತ್ ದೇವರೇ ಬಂದು ಇವನಿಗೆ ಹೇಳಿದ ಹಾಗೆ ಕಾಣಿಸುತ್ತೆ. ಆಶ್ಚರ್ಯ ಆಗಿ ಒಮ್ಮೆ ಬೆಚ್ಚಿಬಿದ್ದು ಅಷ್ಟೇ ಖುಷಿಯಲ್ಲಿ ಗೋಪಾಲಯ್ಯ ಎದ್ದು ಕುಳಿತುಕೊಳ್ಳುತ್ತಾರೆ. ಈ ಬಾರಿ ಹೆಂಡತಿಗೂ ಹೇಳೋದು ಬೇಡ, ನಾನೊಬ್ಬನೇ ಹೋಗಿ ಬರ್ತೀನಿ ಅಂತ ಹೇಳಿ. ಮನೆಯಲ್ಲಿ ಹೆಂಡತಿಗೆ, ಇವತ್ತು ನಾನು ಬರೋದು ಸ್ವಲ್ಪ ಲೇಟ್ ಆಗುತ್ತೆ ನೀನು ಕಾಯ್ಬೇಡ ಎಂದು ಹೇಳಿ ಹೋಗುತ್ತಾರೆ.
**********
ಎರಡು ಮೂರು ಕಿಲೋಮೀಟರ್
ನಡೆದುಕೊಂಡು ಹೋಗಿ ಆ ಗದ್ದೆ ಬಯಲನ್ನು ಸೇರ್ತಾರೆ. ಅಲ್ಲಿ ಒಬ್ಬ ವೃದ್ಧ ಇವರಿಗೆ ಕಾಣುತ್ತಾರೆ. ತುಂಬಾ ವಯಸ್ಸಾದವರು ಅವರು ಏನಿಲ್ಲ ಅಂದ್ರು ಒಂದು 93 ವಯಸ್ಸಿನವರಾಗಿರಬಹುದು. ಅವರು ಒಂದು ಪಾಳು ಬಿದ್ದಿರುವ ಮನೆಯ ಒಳಗಡೆ ಹೋಗ್ತಾ ಇರೋದು ಇವರಿಗೆ ಕಾಣಿಸುತ್ತೆ. ಅವರು ನಡ್ಕೊಂಡ್ ಹೋಗ್ತಾಯಿರುವಾಗ ಇವರನ್ನ ಮಾತಾಡಿಸೋಣ ಅಂತ ಗೋಪಾಲಯ್ಯ ಅಂದುಕೊಳ್ಳುತ್ತಾರೆ. ಆದರೆ ಅವರ ಹತ್ತಿರ ಹೋಗ್ತಾ ಅವರು ಇನ್ನೂ ದೂರವಾಗ್ತಾ ಇರೋ ತರ ಗೋಪಾಲಯ್ಯನಿಗೆ ಅನಿಸ್ತಾ ಇರುತ್ತೆ. ಅದು ನಿಜ ಕೂಡ ಆಗಿರುತ್ತೆ. ಅವರು ಮನುಷ್ಯರೇ ಅಲ್ಲ, ಅವರಿಗೆ ಯಾವುದು ಒಂದು ದೈವ ಶಕ್ತಿ ಇರುತ್ತದೆ. ಅವರು ಹೋಗ್ತಾ ಇದ್ದ ಹಾಗೆ ಅವರ ಕಾಲು ಕಾಣದ ಹಾಗೆ ಆಗುತ್ತೆ, ನಂತರ ಅವರ ಸೊಂಟದ ಭಾಗ ಕಾಣದ ಹಾಗೆ ಆಗುತ್ತೆ, ಆನಂತರ ಅವರ ಬೆನ್ನೇ ಕಾಣದ ಹಾಗೆ ಕಾಣದ ಹಾಗೆ ಆಗುತ್ತೆ. ನಂತರ ಅವರ ತಲೆ ಭಾಗವೂ ಮಾಯ!!
ಇಷ್ಟೆಲ್ಲಾ ಆದಾಗ ಗೋಪಾಲಯ್ಯಗೆ ತುಂಬಾ ಭಯ ಆಗುತ್ತದೆ. ಇಲ್ಲೇನೋ ನಿಗೂಢ ಇದೆ ಅನ್ನೋದು ಅವರಿಗೆ ಅರಿವಾಗುತ್ತೆ.
*******
ಹಿಂತಿರುಗಿದರೆ ಆ ಗದ್ದೆಯಲ್ಲಿ ಸುಮಾರು ಜನ ಇರ್ತಾರೆ. ಏನಿಲ್ಲ ಅಂದ್ರೂ ಒಂದು 12 ರಿಂದ 13 ಜನ ಅಲ್ಲಿ ನಾಟಿ ಮಾಡ್ತಾ ಇರೋ ತರ ಕಾಣಿಸುತ್ತೆ. ಹಾಗಿರುವಾಗ ಅಲ್ಲಿ ಒಂದು ದೊಡ್ಡ ನಾಯಿ ನಿಂತುಕೊಂಡಿರುತ್ತೆ. ಅದು ಇವರನ್ನೇ ಅಟ್ಟಿಸಿಕೊಂಡು ಬರೋ ತರ ನೋಡ್ತಾ ನಿಂತಿರುತ್ತೆ. ಇವರಿಗೆ ತುಂಬಾ ಭಯವಾಗುತ್ತೆ. ಇವರು ನಿಂತಲ್ಲೇ ನಿಂತುಕೊಂಡು ಯಾರಾದರೂ ಬನ್ನಿ ಈ ನಾಯಿಯನ್ನು ಸಾಕಿರೋರು ಯಾರಿದಿರಿ? ಅಂತ ಕಿರುಚುತ್ತಾ ಕೇಳುತ್ತಾರೆ. ಆ ಮಾತು ಕೇಳ್ತಾ ಇದ್ದಾಗೆ ನಾಯಿ ಓಡಿ ಬಂದು ಇವರ ಮೈಮೇಲೆ ಬೀಳುತ್ತೆ. ಆಗ ಒಬ್ಬ ಬಂದು ಅವರ ಮೇಲೆ ಬಿದ್ದ ನಾಯಿನ ತಪ್ಪಿಸ್ತಾನೇ. ಆ ನಾಯಿ ತಪ್ಪಿಸಿದವನ ಮುಖ ಅಲ್ಲಿ ಕಂಡ 93 ವರ್ಷದ ವೃದ್ಧನ ತರಾನೇ ಇರುತ್ತೆ. ಇವರಿಗೆ ತುಂಬಾ ಭಯ ಆಗುತ್ತೆ. ಏನು ಮಾಡೋದು ಇವಾಗ? ನಾನು ಎಲ್ಲಿ ಬಂದು ಸಿಕ್ಕಾಕೊಂಡೆ? ಅಂತ ಒದ್ದಾಡ್ತಾ ಇರ್ತಾರೆ. ವಾಪಸ್ ಹೋಗೋಣ ಅಂದ್ರೆ ಗುಹೆಯ ದಾರಿ ಕೂಡ ಇವರಿಗೆ ಕಾಣುತ್ತಾ ಇರುವುದಿಲ್ಲ. ಹೊರಗೆ ಬಂದೋರು ಯಾರು ಒಳಗಡೆ ಹೋಗಿಲ್ಲ ನೀನು ಅಷ್ಟೇ ಅಂತ ದೊಡ್ಡದಾಗಿ ನಗಾಡ್ತಾನೆ ಆ ವೃದ್ದ. ಇವನಿಗೆ ತನ್ನ ಹೆಂಡತಿಯ ನೆನಪಾಗುತ್ತೆ, ತನ್ನ ಊರು ನೆನಪಾಗುತ್ತೆ.
ಯಾವುದೋ ಆಸೆಗೆ ನಾನು ಇಲ್ಲಿ ಬಂದು ಸಿಕ್ಕಾಕೊಂಡೆ ಅಂತ ಅನಿಸೋಕೆ ಶುರುವಾಗುತ್ತೆ. ಆದರೂ ಧೈರ್ಯ ತಂದುಕೊಂಡು ಈಶ್ವರನಿದ್ದಾನೆ ಈಶ್ವರನಿದ್ದಾನೆ ಎಂದು ದೊಡ್ಡದಾಗಿ ಹೇಳುತ್ತಾನೆ. ಆನಂತರ ಆ ವೃದ್ಧ ಮಾಯವಾಗಿ ಹೋಗ್ತಾನೆ. ಆಗ ಗೋಪಾಲಯ್ಯನಿಗೆ ಅರ್ಥವಾಗುತ್ತೆ. ಈಶ್ವರನ ಧ್ಯಾನ ಮಾಡಿ ಅವನ ಹೆಸರನ್ನು ಘೋಷಣೆ ಮಾಡಿದ್ರೆ ಎಲ್ಲಾ ಕಷ್ಟಗಳು ಕಳೆದು ಹೋಗುತ್ತೆ ಅಂತ. ಅವನು ಅದನ್ನೇ ಪಾಲಿಸ್ತಾನೆ. ಆ ನಾಯಿ ಓಡಿ ಓಡಿ ಹೋಗ್ತಾ ಇರುತ್ತೆ. ಹಿಂದೆ ತಿರುಗಿ ಒಮ್ಮೊಮ್ಮೆ ಬೊಗಳುತ್ತದೆ. ಅದನ್ನೇ ಹಿಂಬಾಲಿಸಿದ್ರೆ ನನಗೆ ನಿಧಿ ಸಿಗಬಹುದು. ಇದು ಅದರ ಸೂಚನೆ ಇರಬಹುದು ಅಂತ ಗೋಪಾಲಯ್ಯ ಅಂದುಕೊಂಡು ಆ ನಾಯಿಯನ್ನು ಹಿಂಬಾಲಿಸುತ್ತಾನೆ. ಆ ನಾಯಿ ಒಂದು ಪಾಳು ಬಿದ್ದಿರುವ ಮನೆಗೆ ಹೋಗುತ್ತೆ. ಹೋಗ್ತಾ ಹೋಗ್ತಾ ಆ ವೃದ್ಧ ಹೇಗೆ ಮಾಯವಾಗಿ ಹೋದ್ನೋ ಏನೋ.. ಈ ನಾಯಿನೂ ಅದೇ ರೀತಿ ಮಾಯವಾಗಿ ಹೋಗುತ್ತೆ. ಇವನು ಒಳಗಡೆ ತುಂಬಾ ಭಯದಿಂದ ಕಾಲಿಟ್ಟ ಹೋಗ್ತಾನೆ, ಕಾಲಡಿಯಲ್ಲಿ ಇವನಿಗೆ ಇಲಿಗಳು ಸಿಗುತ್ತೆ. ಯಾರೋ, ಬಾರೋ ಬಾ ಅನ್ನೋ ರೀತಿ ಕರೆದ ಹಾಗೆ ಶಬ್ದ ಕೇಳಿಸ್ತಾ ಇರುತ್ತೆ. ಒಳಗೆ ಹೋಗ್ತಾ ಇದ್ದ ಹಾಗೆ ತುಂಬಾ ಕತ್ತಲೆ ಇರುತ್ತೆ ಅಂತ ಇವನು ಭಾವಿಸಿದ್ರೆ ಅಲ್ಲಿ ತುಂಬಾ ಬೆಳಕಿರುತ್ತೆ. ಹೊರಗಡೆ ಅಷ್ಟೇ ಭಯಾನಕ ಒಳಗಡೆ ಹೋಗ್ತಾ ಇದ್ದ ಹಾಗೆ ಅದೊಂದು ಬಂಗಲೆಯಾಕಾರದಲ್ಲಿ ಇರುತ್ತೆ. ಅಲ್ಲಿ ಬರ್ತಾ ಇರುವ ಬೆಳಕು ಮತ್ಯಾವುದರದ್ದೂ ಅಲ್ಲ. ಅಲ್ಲಿ ತುಂಬಿಕೊಂಡಿರುವಂತಹ ವಜ್ರ ಆಭರಣ ನಿಧಿಗಳ ಸಂಗ್ರಹದ್ದಾಗಿರುತ್ತದೆ. ಅಲ್ಲಿ ಒಂದು ಕಾಲುವೆ ನಿರ್ಮಾಣ ಆಗಿರುತ್ತೆ. ಆ ಕಾಲುವೆಯ ತುಂಬಾ ನಾಯಿಗಳಿರುತ್ತವೆ. ಆ ಶ್ವಾನಗಳ ಉಸಿರು ಇವನಿಗೆ ಕೇಳಿ ತುಂಬಾ ಭಯ ಆಗುತ್ತದೆ. ಎಲ್ಲಾ ಕಡೆ ನಿಧಿ ಇರುವಲ್ಲಿ ಹಾವುಗಳಾದರೆ ಇಲ್ಲೇನು ನಾಯಿಗಳಿದೆ!?
ನಾನು ಕೇಳಿದ ಕಥೆಗಳೆಲ್ಲ ಇಲ್ಲಿ ಸುಳ್ಳಾಗಿ ಹೋದ್ವಲ್ಲ. ಅಂತ ಅವನು ಅಂದುಕೊಳ್ಳುತ್ತಾನೆ. ನಂತರ ಅವನು ಪೂಜೆ ಮಾಡುತ್ತಿದ್ದ ಮಹಾಲಿಂಗ ಹೇಗಿರುತ್ತೋ ಅದೇ ರೀತಿಯ ಒಂದು ಲಿಂಗ ಅಲ್ಲಿರುತ್ತೆ. ಆದರೆ ಎದುರುಗಡೆ ಕೂತು ಇವನು ಪ್ರಾರ್ಥನೆ ಮಾಡುತ್ತಾನೆ. ನನಗೆ ಏನು ಆಗದೆ ಇರಲಿ ಎಲ್ಲಾ ಒಳಿತಾಗಲಿ. ನಿಧಿ ನನ್ನ ಪಾಲಾಗಲಿ ಎಂದು ಭಕ್ತಿಯಿಂದ ಬೇಡಿಕೊಳ್ಳುತ್ತಾನೆ. ಆಗ ಅವನಿಗೆ ಒಂದು ಅಶರೀರವಾಣಿ ಕೇಳಿಸುತ್ತೆ. ಅದರಂತೆ ಈ ಬಂಗಲೆ ಹಿಂದುಗಡೆ ಒಂದು ಕೆರೆ ಇದೆ. ಆ ಕೆರೆಯಲ್ಲಿ ಈಶ್ವರ ಲಿಂಗವನ್ನು ಕೂರಿಸಿ ಮೆರವಣಿಗೆ ಮಾಡುತ್ತಿದ್ದ ಚಿನ್ನದ ರಥ ಇದೆ. ಅದನ್ನ ನೀನು ತೆಗೆದುಕೊಂಡು ದೇವಸ್ಥಾನಕ್ಕೆ ಮರಳಬೇಕು. ಅಷ್ಟಾದರೆ ನಿನ್ನ ಬಾಳಲ್ಲಿ ಎಲ್ಲಾದು ಒಳಿತೇ ಆಗುತ್ತೆ ಎಂದಿರುತ್ತೆ. ಅದನ್ನ ಕೇಳಿದ ತಕ್ಷಣ ಗೋಪಾಲಯ್ಯನಿಗೆ ತುಂಬಾ ಖುಷಿಯಾಗುತ್ತೆ. ತಾನು ಇಲ್ಲಿಂದ ಬದುಕಿ ಮರಳಿ ನನ್ನ ಹೆಂಡತಿ ಇದ್ದಲ್ಲಿ ಹೋಗುವ ಅವಕಾಶವೊಂದು ಉಳಿದುಕೊಂಡಿದೆ ಎಂದು ಅವನು ಅಂದುಕೊಳ್ಳುತ್ತಾನೆ. ನಂತರ ಇವನು ಅಲ್ಲಿರುವ ನಿಧಿಗೆ ಆಸೆ ಪಡ್ತಾನೆ. ಅಶರೀರವಾಣಿಯಲ್ಲಿ ಕೇಳಿದ್ದನ್ನಷ್ಟೇ ಇವನು ತಲೆಯಲ್ಲಿಟ್ಟುಕೊಳ್ಳದೆ ಬೇರೆ ಒಂದು ಚಿನ್ನದ ಆವರಣವನ್ನು ಮುಟ್ಟಿಬಿಡುತ್ತಾನೆ. ಆಗ ಒಂದು ಹಾವು ಆಭರಣಗಳ ಮಧ್ಯದಿಂದ ಎದ್ದು ಇವನ ಕೈಗೆ ಕಡಿಯುತ್ತೆ. ಇವನು ತಡ ಮಾಡದೆ ಮತ್ಯಾವ ಆಭರಣವನ್ನು ಮುಟ್ಟದೆ ತನ್ನ ಹಲ್ಲುಗಳಲ್ಲಿ ತನ್ನ ಕೈಯನ್ನು ಕಡಿದುಕೊಂಡು ರಕ್ತವನ್ನು ಚಿಮ್ಮಿಸಿ ಅದರಲ್ಲಿದ್ದ ವಿಷವನ್ನು ಹೊರ ಹಾಕುತ್ತಾನೆ. ತಾನು ಕೂಡ ಬಾಯನ್ನ ಚೆನ್ನಾಗಿ ತನ್ನ ವಸ್ತ್ರದಿಂದ ಉಜ್ಜಿಕೊಂಡು ಯಾವುದಕ್ಕೂ ಆಸೆ ಪಡದೆ ಈಶ್ವರನನ್ನೇ ಸ್ಮರಿಸುತ್ತ ಹೊರಗಡೆ ಹೋಗುತ್ತಾನೆ. ಅಲ್ಲಿ ಒಂದು ಕೆರೆ ಕಾಣುತ್ತೆ ನಂತರ ಆ ಕೆರೆಯಲ್ಲಿ ಇವನು ಇಳಿಯುತ್ತಾನೆ. ಇವನು ಇಳಿದಂತೆ ಅಲ್ಲಿ ನೀರು ಮಾಯವಾಗಿ ಹೋಗುತ್ತದೆ. ನಂತರ ಕೆರೆಯೊಳಗಡೆ ಒಂದು ಚಿನ್ನದ ರಥ ಕಾಣಿಸುತ್ತೆ. ರಥವನ್ನು ಕೈಯಲ್ಲಿ ಹಿಡಿದುಕೊಂಡು ಮೇಲೆತ್ತಿಕೊಂಡು ಬರುತ್ತಾನೆ. ಅದು ಇವನ ದೇವಸ್ಥಾನದಲ್ಲಿರುವ ಈಶ್ವರ ಲಿಂಗಕ್ಕೆ ಎಷ್ಟು ಬೇಕೋ ಅದೇ ರೀತಿ ಇರುತ್ತೆ. ಅದನ್ನು ನೋಡಿ ಇವನು ಭಕ್ತಿ ಪರವಶನಾಗ್ತಾನೆ. ಕಣ್ಣು ಮುಚ್ಚಿಕೊಂಡು ಶಿವ ಶಿವ ಎಂದು ರಥವನ್ನು ಎಳೆದು ಮುಂದೆ ಸಾಗುತ್ತಿದ್ದ ಹಾಗೆ ಗುಹೆಯ ಬಾಗಿಲು ಕಾಣಿಸುತ್ತೆ. ಗುಹೆ ಬಾಗಿಲು ಕಂಡ ಕ್ಷಣ ಇವನಿಗೆ ತುಂಬಾ ಸಂತೋಷವಾಗುತ್ತದೆ. ಅವನು ಕತ್ತಲಿನಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. ಮತ್ತೆ ಒಂದು ದೊಡ್ಡ ಆಕೃತಿ ಎದುರಾಗುತ್ತೆ. ಅದನ್ನ ನೋಡಿ ಗೋಪಾಲಯ್ಯಗೆ ಭಯ ಆಗುತ್ತೆ.
******
ಆ ದೊಡ್ಡ ಆಕೃತಿ ಸಣ್ಣದಾಗುತ್ತಾ ಬರುತ್ತದೆ. ಅದು ಒಂದು ಸ್ಪಟಿಕದ ಚಿಕ್ಕ ಲಿಂಗವಾಗಿ ಮಾರ್ಪಾಡಾಗುತ್ತದೆ. ಅದನ್ನು ಕೈಯಲ್ಲಿ ಹಿಡಿದು ರಥದ ಮೇಲೆ ಇರಿಸಿ ದೇವಸ್ಥಾನಕ್ಕೆ ಬರುತ್ತಾನೆ. ಯಾರಿಗೂ ಇದು ತಿಳಿಯದಂತೆ ಬಾಗಿಲು ಹಾಕಿ ಹೆಂಡತಿ ಇದ್ದಲ್ಲಿ ಹೋಗಿ ಎಲ್ಲಾ ವಿಷಯ ಹೇಳುತ್ತಾನೆ. ಯಾರಿಗೂ ಇದನ್ನು ಹೇಳುವುದು ಬೇಡ. ಆ ಚಿನ್ನದ ರಥ ತನ್ನಿಂದ ತಾನೇ ಪ್ರತ್ಯಕ್ಷವಾಗಿದೆ. ದೇವರ ಪವಾಡ ಎಂದು ಹೇಳಿಬಿಡಿ ಇಲ್ಲವಾದರೆ ಎಲ್ಲರೂ ಆ ನಿಧಿಯ ಹಿಂದೆ ಬೀಳುತ್ತಾರೆ ಎಂದು ಆಕೆ ಹೇಳುತ್ತಾಳೆ. ಇವನು ಅದಕ್ಕೊಪ್ಪಿ ಹಾಗೇ ಮಾಡುತ್ತಾನೆ. ಅ ದಿನದಿಂದ ಮೂರು ದಿನಕ್ಕೆ ಜಾತ್ರೆ ಇರುತ್ತದೆ. ಆಗ ಗೋಪಾಲಯ್ಯ ರಾತ್ರೋ ರಾತ್ರಿ ಹೋಗಿ ಲಿಂಗದ ಎದುರು ರಥ ಇಟ್ಟು ಬಾಗಿಲು ಹಾಕಿ ಬರುತ್ತಾನೆ.
ಬೆಳಿಗ್ಗೆ ಊರವರೆಲ್ಲರ ಎದುರು ಜಾತ್ರೆಯ ದಿನ ಬಾಗಿಲು ತೆಗೆದಾಗ ರಥ ಸಿಗುತ್ತದೆ.!
ಆದರೆ ಅಲ್ಲಿಗೆ ಬಂದವರೆಲ್ಲ ಹೇಳ್ತಾರೆ ಇದೇನಿದು ಇಷ್ಟೊಂದು ಪವಾಡನ? ನನಗೆ ಯಾಕೋ ಅನುಮಾನ ಬರುತ್ತಿದೆ. ಇದರಲ್ಲಿ ಯಾರದು ಕರಾಮತ್ ಇದೆ ಎಂದು ಅವರು ಅಂದುಕೊಳ್ಳುತ್ತಾರೆ. ಹೀಗಿರುವಾಗ ನಿಧಿ ಹುಡುಕಾಟಕ್ಕೆ ಎಂದೇ ಬಂದ ತಜ್ಞರ ತಂಡ ಇದೆಲ್ಲವನ್ನ ಗಮನಿಸುತ್ತೆ. ಕೊನೆಗೂ ಈ ಪೂಜಾರಿ ನಮಗೆ ಮೋಸ ಮಾಡೇಬಿಟ್ಟ ಎಂದು ಅವರು ಅಂದುಕೊಳ್ಳುತ್ತಾರೆ. ನಂತರ ಈ ಪೂಜಾರಿ ಇದ್ದಲ್ಲಿಗೆ ಬಂದು ನೀವು ಅವತ್ತು ದೇವಸ್ಥಾನದ ಪೂರ್ತಿ ಭಾಗವನ್ನ ನಮಗೆ ತೋರಿಸಿಲ್ಲ ಈಗ ನಮಗೆ ನಿಮ್ಮ ಮೇಲೆ ಯಾಕೋ ಅನುಮಾನ ಬರ್ತಾ ಇದೆ. ನಾವು ಸರ್ಕಾರದ ಪರ್ಮಿಷನ್ ತಗೊಂಡು ಇಲ್ಲಿಗೆ ಬಂದಿದ್ದೇವೆ. ನೀವು ಈ ಎಲ್ಲ ವಿಚಾರವನ್ನು ನಮಗೆ ಹೇಳಲೇಬೇಕು. ಈ ದೇವಸ್ಥಾನದ ಪ್ರತಿಯೊಂದು ಮೂಲೆ ಮೂಲೆಯನ್ನು ನಮಗೆ ಪರಿಚಯಿಸಲೇಬೇಕು ಎಂದು ಜಾತ್ರೆಯ ಮರುದಿನ ಇವರ ಮನೆಗೆ ಬಂದು ಕೂರುತ್ತಾರೆ. ಆಗ ಇವರ ಪತ್ನಿಗೆ ತುಂಬಾ ಭಯವಾಗುತ್ತೆ ಏನಾದರೂ ಮಾಡಲೇಬೇಕು ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಆದರೆ ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಅಂತ ಅವಳಿಗೆ ಗೊತ್ತಾಗುವುದಿಲ್ಲ. ಗೋಪಾಲಯ್ಯ ತಜ್ಞರನ್ನೆಲ್ಲ ಸಮಾಧಾನ ಮಾಡಿ ಹಾಗೆಲ್ಲ ಏನೂ ಇಲ್ಲ ಬೇಕಿದ್ರೆ ನಾನು ನಿಮಗೆ ನಾಳೆ ಎಲ್ಲವನ್ನ ತೋರಿಸ್ತೀನಿ ಎಂದು ಹೇಳಿ ಹೋಗಿ ಮಲಗಿರುತ್ತಾರೆ. ಅಂದು ರಾತ್ರಿ ಆ ತಜ್ಞರೆಲ್ಲ ಇವರ ಮನೆಯಲ್ಲಿ ಮಲಗಿರುತ್ತಾರೆ. ಇವನು ತನ್ನ ಹೆಂಡತಿಗೆ ಈ ಎಲ್ಲ ವಿಚಾರವನ್ನು ಹೇಳುತ್ತಾನೆ. ಇವರಿಂದ ನಾವು ಹೇಗೆ ತಪ್ಪಿಸಿಕೊಳ್ಳುವುದು ಅದು ದೇವರ ಆಜ್ಞೆ ಆಗಿತ್ತು. ಅದನ್ನ ಮೀರಿದರೆ ನಮಗೆ ದೇವರು ಮಾಡುತ್ತಾನೆ ಅದು ಅಲ್ಲದೆ ನಾನು ಇನ್ನೊಂದೇ ಒಂದು ಆಭರಣಕ್ಕೆ ಆಸೆಪಟ್ಟು ಹಾವಿನ ಬಳಿ ಕಚ್ಚಿಸಿಕೊಂಡಿದ್ದೇನೆ. ಅದೆಲ್ಲ ಇವರಿಗೆ ಹೇಗೆ ತಿಳಿಯುತ್ತೆ ನಾನು ಕಷ್ಟಪಟ್ಟು ತಂದಿರೋ ರಥ ಅದು ಎಂದು ಹೇಳ್ತಾ ಇರ್ತಾನೆ. ಆದರೆ ಆ ಇತಿಹಾಸ ತಜ್ಞರ ಲಕ್ಷವೆಲ್ಲ ರಾತ್ರಿ ಇಡೀ ಇವರ ಕೋಣೆಯ ಬಳಿಗೆ ಇರುತ್ತೆ. ಇವರು ಏನು ಮಾತಾಡ್ತಾರೆ ಅನ್ನೋದನ್ನ ಅವರು ಕದ್ದು ಕೇಳಿಸಿಕೊಳ್ಳುತ್ತಾ ಇರುತ್ತಾರೆ. ಕೊನೆಗೂ ಈ ಗೋಪಾಲಯ್ಯ ಏನು ಮಾಡಿದ್ದಾನೆ ಅನ್ನೋದು ಅವರೆಲ್ಲರಿಗೂ ಅರ್ಥವಾಗುತ್ತೆ. ಇಷ್ಟು ವಿಷಯ ತಿಳಿದ ಮೇಲೆಂತು ಇತಿಹಾಸ ತಜ್ಞರು ಅದನ್ನ ಬಿಟ್ಟು ಕದಲೋ ಮಾತೆ ಇಲ್ಲ ಕೊನೆಗೂ ಆ ನಿಧಿಯನ್ನು ನಾವು ಹುಡುಕಿಯೇ ಹೊರಡೋದು ಅನ್ನೋ ನಿರ್ಧಾರಕ್ಕೆ ಅವರೆಲ್ಲರೂ ಬಂದಿರುತ್ತಾರೆ. ಮರುದಿನ ಬೆಳಗಾಗ್ತಾ ಇದ್ದಹಾಗೆ ಅವರ ಮನೆಯಲ್ಲಿ ಇವರು ತಿಂಡಿಯನ್ನ ಮುಗಿಸಿ ಗೋಪಾಲಯ್ಯನ ಜೊತೆ ನಾವು ದೇವಸ್ಥಾನಕ್ಕೆ ಬರ್ತೀವಿ ಒಮ್ಮೆ ದೇವರನ್ನ ಕಂಡುಬರೋಣ ಎಂದು ಹೇಳಿ ಅವರ ಜೊತೆಗೆ ಹೋಗ್ತಾರೆ. ಹೋದವರೆ ಗೋಪಾಲಯ್ಯನವರ ಕತ್ತನ್ನು ಹಿಸುಕಿ ನಿಜ ಹೇಳಿ ನೀನು ಆ ನಿಧಿ ಇದ್ದಲ್ಲಿಗೆ ಹೋಗಿದ್ದೆ ತಾನೆ? ಆ ದಾರಿನ ನಾವು ಕೇಳಿದರೆ ಯಾಕೆ ಹೇಳ್ತಾ ಇಲ್ಲ ನೀನು ಎಂದು ಕೇಳುತ್ತಾರೆ. ಆಗ ಗೋಪಾಲಯ್ಯ ತನ್ನ ಪ್ರಾಣ ಹೋದರೂ ಅಡ್ಡಿ ಇಲ್ಲ.ನಾನು ಇವರಿಗೆ ನಿಜ ಮಾತ್ರ ಹೇಳಬಾರದು ಎಂದು ಅಂದುಕೊಳ್ಳುತ್ತಾರೆ. ಇದು ದೇವರ ಆಜ್ಞೆ, ನಾನ್ ಇದನ್ನು ಮೀರಿ ನಡೆದರೆ ನನಗೆ ಒಳಿತಾಗುವುದಿಲ್ಲ. ಅದನ್ನ ನಾನು ಒಮ್ಮೆ ಕಣ್ಣಾರೆ ಕಂಡಿದ್ದೇನೆ.ಅದರ ಮೇಲು ನಾನು ಮತ್ತೆ ತಪ್ಪು ಮಾಡಿದರೆ ಕೇವಲ ನಾನು ಮಾತ್ರವಲ್ಲ ನನ್ನ ಹೆಂಡತಿ ಕೂಡ ಸಾಯುತ್ತಾಳೆ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾರೆ. ಇಲ್ಲ ನಾನು ನಿಮಗೆ ನಿಜ ಹೇಳ್ತೀನಿ, ನನ್ನನ್ನ ಬಿಟ್ಟುಬಿಡಿ ಎಂದು ಕೇಳಿಕೊಳ್ಳುತ್ತಾರೆ. ಆ ಮಾತನ್ನು ನಂಬಿ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಅವರನ್ನ ಬಿಡ್ತಾರೆ. ಈ ನಿಧಿ ಶೋಧದ ಕಾರ್ಯದಲ್ಲಿ ಸರ್ಕಾರಕ್ಕೆ ಒಂದಿಷ್ಟನ್ನ ಕೊಟ್ಟರು ನಮ್ಮ ಪಾಲಿಗೆ ಬಂದಿಷ್ಟು ಉಳಿಯುತ್ತೆ ಅನ್ನೋ ನಂಬಿಕೆ ತಜ್ಞರದ್ದಾಗಿರುತ್ತೆ. ಆ ಕಾರಣಕ್ಕಾಗಿ ಅವರು ಅಷ್ಟು ಫೋರ್ಸ್ ಮಾಡ್ತಾ ಇರ್ತಾರೆ. ಇನ್ನು ಇವರಿಗೆ ಬೇರೆ ಯಾವುದಾದರೂ ದಾರಿ ತೋರಿಸಿ ಇವರನ್ನು ಯಾಮಾರಿಸಿ ಬಿಡಬೇಕು ಅಂತ ಗೋಪಾಲಯ್ಯ ಅಂದುಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಅವರ ತಲೆಯಲ್ಲಿ ಒಂದು ಉಪಾಯ ಬರುತ್ತೆ. ಆ ಉಪಾಯದಂತೆ ಅವರು ನಡೆದುಕೊಳ್ಳಲು ಯತ್ನಿಸ್ತಾರೆ ಅವರು ದೇವಾಲಯದ ಒಳಗಡೆ ಇರುವಂತಹ ಶೋರೂಮ್‍ಗೆ ಇವರನ್ನೆಲ್ಲ ಕರೆದುಕೊಂಡು ಹೋಗ್ತಾರೆ. ಹೋದವರೇ ಅಲ್ಲಿ ಇರುವ ಗೋಡೆಯ ಮೇಲೆ ನಕ್ಷೆ ಕಾಣಿಸುತ್ತದೆ. ಆ ನಕ್ಷೆಯನ್ನು ಇತಿಹಾಸ ತಜ್ಞರು ಓದೋದಕ್ಕೆ ಆರಂಭ ಮಾಡುತ್ತಾರೆ. ಅವರ ಕಣ್ಣುಗಳಲ್ಲಿ ಮಿಂಚಿನ ಸಂಚಲನೆ ಇರುತ್ತೆ.ನಾವು ನಿಧಿಯನ್ನು ಹುಡುಕೆ ಬಿಟ್ವಿ ಅನ್ನೋ ಒಂದು ರೋಮಾಂಚಕತೆ ಇರುತ್ತೆ. ಆದರೆ ಮುಂದೆ ಏನಾಗುತ್ತೆ ಅನ್ನೋ ಕುತೂಹಲ ಮಾತ್ರ ಎಲ್ಲರಲ್ಲಿ ಮನೆ ಮಾಡಿರುತ್ತೆ.
*******
ಆ ಇತಿಹಾಸ ತಜ್ಞರದ್ದು ಐದು ಜನರ ತಂಡವಾಗಿರುತ್ತೆ. ಐದು ಜನರಲ್ಲಿ ಮೂರು ಜನ ಮಾತ್ರ ಒಂದು ಯೋಚನೆಯನ್ನು ಮಾಡ್ತಾ ಇದ್ರೆ ಇನ್ನುಳಿದ ಇಬ್ಬರು ಬೇರೆ ಯೋಚನೆ ಮಾಡ್ತಾ ಇರ್ತಾರೆ. ಹಾಗಾಗಿ ಅವರಲ್ಲೇ ಒಗ್ಗಟ್ಟು ಇರುವುದಿಲ್ಲ.ಇವರಲ್ಲೇ ಏನಾದರೂ ಆಗಿ ಒಬ್ಬರಿಂದ ಒಬ್ಬರಿಗೆ ಜಗಳ ಆಗಿ ಆ ನಿಧಿ ಯಾರ ಪಾಲು ಆಗದ ಹಾಗೆ ಕಾಣುತ್ತೆ ಅಂತ ಗೋಪಾಲಯ್ಯ ಮನಸ್ಸಿನಲ್ಲೆ ಅಂದುಕೊಂಡಿರುತ್ತಾರೆ. ನಂತರ ಈ ಬಾಗಿಲನ್ನು ಓಪನ್ ಮಾಡಿ ಕೊಡಿ ನಾವು ಈ ಗುಹೆ ಒಳಗೆ ಹೋಗಬೇಕು ಅಂತ ಒಬ್ಬರು ಹೇಳ್ತಾರೆ. ಅದಕ್ಕೆ ಸಮ್ಮತಿಸಿದ ಎಲ್ಲರೂ ಕೂಡ ತಲೆ ಆಡಿಸುತ್ತಾರೆ ಗೋಪಾಲರಿಗೆ ನೆನಪಾಗುತ್ತೆ ಗದ್ದೆಬೈಲಿಗೆ ಹೋದ ತಕ್ಷಣ ಗುಹೆ ಬಾಗಿಲು ಮುಚ್ಚಿ ಬಿಡುತ್ತೆ. ಆನಂತರ ಬರೋದಿಕ್ಕೆ ಆಗೋದಿಲ್ಲ ಅನ್ನೋ ಸತ್ಯ ಅವರಿಗೆ ಗೊತ್ತಿರುತ್ತೆ.
********
ಸರಿ ಬಿಡಿ ಸ್ವಲ್ಪ ಪಕ್ಕಕ್ಕೆ ಬನ್ನಿ ಎಂದು ಗೋಪಾಲಯ್ಯ ಹೇಳ್ತಾರೆ. ನಂತರ ಅವರೆಲ್ಲರೂ ಸರಿದು ನಿಂತರೆ ಗುಹೆಯ ಬಾಗಿಲು ಓಪನ್ ಆಗುತ್ತೆ. ನಂತರ ನಾ ಮುಂದೆ ತಾ ಮುಂದೆ ಎಂಬಂತೆ ಎಲ್ಲರೂ ಆತುರ ಆತುರವಾಗಿ ಗುಹೆಯ ಬಾಗಿಲನ್ನ ಹೊಕ್ಕುತ್ತಾರೆ. ಆದರೆ ಗೋಪಾಲಯ್ಯ ಮಾತ್ರ ಇಲ್ಲಿಗೆ ಉಳಿದುಕೊಂಡು ಗುಹೆಯ ಬಾಗಿಲನ್ನು ಹಾಕಿಬಿಡುತ್ತಾರೆ. ನಂತರ ಒಳಗಡೆ ಆ ತಜ್ಞರು ಹೋಗ್ತಾರೆ. ಅವರಿಗೆ ಹಿಂದೆ ಏನಾಗ್ತಿದೆ ಅನ್ನೋದರ ಪರಿವೆಯು ಇಲ್ಲ ನಾವು ವಾಪಸ್ ಬರ್ತೀವ ಇಲ್ವಾ ಅನ್ನೋದು ಅವರಿಗೆ ಬೇಕಾಗಿಲ್ಲ. ನಿಧಿಯ ಆಸೆಯನ್ನು ಕೊಟ್ಟು ಅವರೆಲ್ಲರೂ ಆ ಗುಹೆಯಲ್ಲಿ ಮುಂದೆ ಮುಂದೆ ಸಾಗ್ತಾರೆ. ಅವರ್ಯಾರ ಬಳಿಯೂ ಒಂದು ಚೂರು ಬೆಳಕು ಇರುವುದಿಲ್ಲ ಯಾಕೆಂದರೆ, ಅವರು ಯಾವ ಮುಂಜಾಗ್ರತೆ ಕ್ರಮವನ್ನು ವಹಿಸಿ ಅಲ್ಲಿಗೆ ಬಂದಿರುವುದಿಲ್ಲ. ಅವರಿಗೆ ಬೇಕಾದ ಸಲಕರಣೆಗಳೆಲ್ಲ ಗೋಪಾಲಯ್ಯನ ಮನೆಯಲ್ಲಿ ಬಿದ್ದುಕೊಂಡಿರುತ್ತದೆ. ಮುಂದೆ ಮುಂದೆ ಹೋಗ್ತಾ ಇದ್ದ ಹಾಗೆ ಇವರಿಗೆ ಭಯ ಆಗೋಕೆ ಸ್ಟಾರ್ಟ್ ಆಗುತ್ತೆ. ಯಾಕೆಂದ್ರೆ ಗೋಪಾಲಯ್ಯನವರಿಗಾದರೆ ಈಶ್ವರನ ಅನುಗ್ರಹ ಇರುತ್ತೆ. ಅವರಿಗೆ ಯಾವುದೇ ತೊಂದರೆ ಆಗೋದಿಲ್ಲ ಯಾಕೆಂದರೆ ಅದು ಸಾಕ್ಷಾತ್ ಶಿವನೇ ಕರೆಸಿಕೊಂಡದ್ದಾಗಿರುತ್ತದೆ. ಇವರಿಗೆ ಹಾಗಲ್ಲ ಇವರು ಮೋಸ ಮಾಡಲೆಂದೆ ಬಂದಿದ್ದಾರೆ ಎಂಬುದು ಆ ದೇವರಿಗೂ ಗೊತ್ತಿರುತ್ತೆ. ಹಾಗಾಗಿ ದಾರಿ ಮಧ್ಯದಲ್ಲಿ ಇವರಿಗೆ ನಾನಾ ರೀತಿಯ ಭಯಾನಕ ಸನ್ನಿವೇಶಗಳು ಎದುರಾಗುತ್ತೆ. ಆ ಸನ್ನಿವೇಶಗಳು ಎಷ್ಟು ಭಯಾನಕವಾಗಿರುತ್ತೆ. ಅಂದ್ರೆ ಒಂದೊಂದು ಕ್ಷಣವೂ ಕೂಡ ಅವರು ಸತ್ತು ಸತ್ತು ಬದುಕುತ್ತಾ ಇರುತ್ತಾರೆ. ಮೇಲಿನಿಂದ ಯಾವುದೂ ಸತ್ತ ಮನುಷ್ಯನ ತಲೆ ಬುರುಡೆಗಳು ಉರುಳಿ ಉರುಳಿ ಬೀಳ್ತಾ ಇರುತ್ತೆ. ಅದನ್ನ ನೋಡಿ ಇವರಿಗೆ ತುಂಬಾ ಭಯ ಆಗುತ್ತೆ. ಅವುಗಳ ಉಗುರುತಾಗಿ ಇವರಿಗೆಲ್ಲ ಗಾಯ ಆಗುತ್ತದೆ. ಮುಂದೆ ಮುಂದೆ ಹೋಗುತ್ತಾ ಇದ್ದಹಾಗೆ ದೊಡ್ಡ ದೊಡ್ಡ ಇಲಿಗಳು ಕಾಲಡಿಯಲ್ಲಿ ಸಿಕ್ಕಿ ಕಚ್ಚುತ್ತಾ ಇರುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳಲು ಸಹ ಇವರು ಹರಸಾಹಸ ಪಡುತ್ತಾರೆ. ಯಾಕಾದರೂ ನಾವು ಇಲ್ಲಿಗೆ ಬಂದವೋ ಎಂದು ಒಬ್ಬನಿಗೆ ಅನಿಸುತ್ತದೆ. ಅವನು ಆ ಮಾತನ್ನು ದೊಡ್ಡದಾಗಿ ಹೇಳ್ತಾ ಇದ್ದ ಹಾಗೆ ಅವನ ಮಾತು ನಿಂತು ಹೋಗುತ್ತದೆ. ಅವನು ಕೂಗುತ್ತಾ ಇದ್ದರು. ಸಹ ಯಾರಿಗೂ ಕೇಳಿಸುವುದಿಲ್ಲ. ಧ್ವನಿ ಹೊರಗೆ ಬಂದರು ಇನ್ನೊಬ್ಬರಿಗೆ ಕೇಳುವುದಿಲ್ಲ. ಈ ರೀತಿ ನಾನಾ ರೀತಿಯ ತೊಂದರೆಗಳು ಅವರಿಗೆ ಆಗುತ್ತಾ ಹೋಗುತ್ತದೆ. ದುರುದ್ದೇಶ ಇಟ್ಟುಕೊಂಡು ಬಂದವರಿಗೆ ಯಾವತ್ತೂ ಒಳ್ಳೆಯದಾಗುವುದಿಲ್ಲ ಎಂದು ಆ 93 ವರ್ಷದ ವೃದ್ಧ ಹೇಳಿದ ಧ್ವನಿ ಇವರಿಗೆ ಕೇಳುತ್ತದೆ.
*****
ಇದೇನಿದು ಯಾಕೆ ಈ ರೀತಿ ಧ್ವನಿ ಕೇಳ್ತಾ ಇದೆ? ಅಂತ ಎಲ್ಲರೂ ಕಂಕಳಾಗಿ ಹೋಗ್ತಾರೆ. ಐದು ಜನರಲ್ಲಿ ಒಬ್ಬರ ಮುಖ ಒಬ್ಬರಿಗೆ ಕಾಣಿಸ್ತ ಇರೋದಿಲ್ಲ. ಅಂತೂ ಚೂರು ಬೆಳಕು ಕಾಣಿಸುತ್ತಾ ಬರುತ್ತೆ. ಇವರಿಗೆಲ್ಲ ಜೀವ ಬಂದಷ್ಟು ಖುಷಿಯಾಗುತ್ತೆ. ಬೆಳಕು ಯಾವ ಕಡೆ ಬರುತ್ತಾ ಇದೆಯೋ ಅದೇ ಕಡೆಯವರು ಸಾಗಿ ಹೋಗುತ್ತಾರೆ. ಅಲ್ಲಿ ನೋಡಿದರೆ ಒಂದು ದೊಡ್ಡ ಗದ್ದೆ ಇವರಿಗೆ ಕಾಣಿಸುತ್ತೆ. ಇವರು ಖುಷಿಯಿಂದ ಹೋಗುತ್ತಾರೆ. ಆದರೆ ನಿಧಿ ಇರುವ ಜಾಗ ಯಾವುದು ಅಂತ ಇವರಿಗೆ ಗೊತ್ತಾಗುವುದಿಲ್ಲ. ಅದು ಎಷ್ಟು ವಿಶಾಲವಾಗಿರುತ್ತೆ ಅಂದ್ರೆ ನೋಡಿದಷ್ಟು ಹಸಿರು ಕಾಣ್ತಾ ಇರುತ್ತೆ. ಎಲ್ಲಿಯೂ ಕೂಡ ಬೇರೇನು ಕಾಣುವುದಿಲ್ಲ. ಇದರಿಂದ ಮತ್ತೊಮ್ಮೆ ಜ್ಞಾಪಕ ಮಾಡಿಕೊಳ್ಳುತ್ತಾರೆ. ಆ ಮ್ಯಾಪ್‍ನಲ್ಲಿ ಇದ್ದ ವಿಷಯ ಏನು ನಾವು ಯಾವ ದಿಕ್ಕಿಗೆ ಪ್ರಯಾಣ ಮಾಡಬೇಕು ಎಂದು ಒಮ್ಮೆ ಥಿಂಕ್ ಮಾಡುತ್ತಾರೆ. ಆಗ ಅವರಿಗೆ ನೆನಪಾಗುತ್ತೆ, ಒಂದು ನಾಯಿಯ ಮುಖ ಗೋಡೆಯ ಮೇಲೆ ಬಂದು ದೊಡ್ಡದಾದ ನಾಯಿ ಆಕೃತಿ ಬರೆದುಕೊಂಡಿರುತ್ತೆ. ಆದ್ದರಿಂದ ನಮಗೆ ನಿಧಿಯ ಸೂಚನೆ ಬಂದು ನಾಯಿ ಎಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಎಷ್ಟು ಹುಡುಕಿದರೂ ಅಲ್ಲಿ ಯಾವ ನಾಯಿಯೂ ಕಾಣೋದಿಲ್ಲ.
ಅದರಲ್ಲಿ ನಾಯಿಯ ಕಾಲಿನ ಗುರುತು ಕಾಣುತ್ತದೆ, ಆ ಕಾರನ್ನ ಹಿಂಬಾಲಿಸಿಕೊಂಡು ಇವರು ಹೋಗ್ತಾ ಇರ್ತಾರೆ. ಆಗ ಮಧ್ಯದಲ್ಲಿ ಯಾರೂ ಒಬ್ಬಳು ಹೆಂಗಸು ಸಿಕ್ತಾಳೆ. ಅವಳು ಇವರನ್ನ ಮಾತಾಡಿಸ್ತಾಳೆ. ನೀವು ನನ್ನ ಜೊತೆಗೆ ನಮ್ಮ ಮನೆಗೆ ಬನ್ನಿ ನಾನು ನಿಧಿ ಇರುವ ಜಾಗಕ್ಕೆ ನಿಮ್ಮನ್ನ ಕರೆದುಕೊಂಡು ಹೋಗ್ತೀನಿ ಎಂದು ಹೇಳುತ್ತಾಳೆ. ಆಗ ಮೂರು ಜನ ಇಲ್ಲ ನಾವು ಬರುವುದಿಲ್ಲ ಎಂದು ಹೇಳುತ್ತಾರೆ. ಇನ್ನುಳಿದ ಇಬ್ಬರು ಖಂಡಿತ ನಾವು ಬರ್ತೀವಿ ಎಂದು ಹೇಳಿಬಿಡುತ್ತಾರೆ. ಯುವತಿಯ ಜೊತೆ ಹೋದ ಎರಡು ಜನ ಸ್ವಲ್ಪ ದೂರ ಹೋಗುವುದರಲ್ಲಿ ದೊಡ್ಡದಾಗಿ ಕೂಗಿಕೊಳ್ಳುತ್ತಾರೆ. ಅವರಿಗೆ ಏನಾಯ್ತು ಎಂದು ಅವರು ಗಾಬರಿಯಿಂದ ನೋಡಿದರೆ ಆ ಕಡೆಯಿಂದ ಇವರಿಬ್ಬರು ಕೂಡಿಕೊಂಡು ಓಡಿ ಬರ್ತಾ ಇರ್ತಾರೆ. ಇವರಿದ್ದಲ್ಲೇ ಬರುತ್ತಾ ಇರುತ್ತಾರೆ.ಹೆಂಗಸು ಮಾಯವಾಗಿ ಹೋದ್ಲು ಮಾರಾಯ ಕರೆದುಕೊಂಡು ಹೋಗಿದ್ದೆ ಆಮೇಲೆ ಅವಳು ಏನಾದಳು ಅಂತಾನೇ ಗೊತ್ತಿಲ್ಲ ಎಂದು ಹೇಳುತ್ತಾರೆ.
ಅಯ್ಯೋ ಹೌದಾ? ಅದಕ್ಕೆ ನಾವು ಅಂದುಕೊಂಡು ಏನಾದರೂ ಇರಬೇಕು ಅಂತ ಯಾರಾದರೂ ಅಷ್ಟು ಸುಲಭಕ್ಕೆ ನಿಧಿ ನಾನು ಕಾಣಿಸ್ತೀನಿ ಅಂತ ಹೇಳ್ತಾರೆ. ಅದಕ್ಕೆ ನಾವು ಬಂದಿಲ್ಲ ನೀವು ಮೂರ್ಖರ ತರ ಆಡೋದಾದರೆ ಎಲ್ಲಾದರೂ ಹೋಗಿ ಸಾಯಿರಿ ಎಂದು ಹೇಳುತ್ತಾರೆ. ಅದಕ್ಕೆ ನೋಡಿದವರು ತಲೆತಗ್ಗಿಸಿಕೊಂಡು ತಮ್ಮ ತಪ್ಪನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಂತರ ಇವರು ಹೋದ ಜಾಗವನ್ನೇ ಅವರು ಹಿಂಬಾಲಿಸಿಕೊಂಡು ಬರ್ತಾ ಇರ್ತಾರೆ. ನಾಯಿಯ ಹೆಜ್ಜೆ ಗುರುತು ಅಲ್ಲಿಗೆ ಎಂಡ್ ಆಗುತ್ತೆ. ಅಲ್ಲಿ ಅವಳು ಬಿದ್ದ ಮನೆಯವರಿಗೆ ಕಾಣುತ್ತೆ. ತುಂಬಾ ಕತ್ತಲು ಇರುತ್ತೆ. ಅದನ್ನ ನೋಡಿ ಇವರಿಗೆ ಭಯ ಆಗುತ್ತೆ. ಆಮೇಲೆ ನಿಧಿ ಇರುವ ಜಾಗ ಕಾಣಿಸುತ್ತೆ. ಗೋಪಾಲಯ್ಯನಿಗೆ ಕಂಡ ರೀತಿಯಲ್ಲಿ ಬೆದರಿಕೆ ಹಾಕುವವರಿಗೆ ಕಾಣೋದಿಲ್ಲ. ತುಂಬಾ ಸುಲಭವಾಗಿ ಇವರು ಎತ್ತಿಕೊಡುತ್ತಾರೆ. ಆದರೆ ಎಲ್ಲೂ ಕೂಡ ಗುಹೆಯ ಬಾಗಿಲು ಕಾಣಿಸುವುದೇ ಇಲ್ಲ. ಕೊನೆಗೆ ಮರಳಿ ವಾಸ್ತವದ ಜಗತ್ತಿಗೆ ಹೋಗಲು ಆಗದೆ ಹಲವಾರು ದಿನ ಅಲ್ಲೇ ಹಸಿವಿನಿಂದ ನೀರೂ ಸಿಗದೆ ನರಳಾಡಿ ಹೋಗ್ತಾರೆ. ಅಲ್ಲೆ ಅವರು ಸತ್ತು ಹೋಗಿರಬಹುದು. ಅಂತಿಮವಾಗಿ ನಿಧಿ ಯಾರ ಪಾಲೂ ಆಗುವುದಿಲ್ಲ. ಆದರೆ ದೇವರಿಗೆ ಮೀಸಲಿಟ್ಟ ಚಿನ್ನದ ರಥ ಮಾತ್ರ ದೇವಸ್ಥಾನಕ್ಕೆ ಸೇರುತ್ತದೆ.
ಸುಮಾ.ಕಂಚೀಪಾಲ್
ಯಲ್ಲಾಪುರ

ಕಥೆಯು ತುಂಬಾ ಚೆನ್ನಾಗಿದೆ 😍😍👌
ReplyDeleteಧನ್ಯವಾದ
ReplyDelete