Skip to main content

ಪುರದ ಪುಣ್ಯ ಪುರುಷ

ಪುರದ ಪುಣ್ಯ ಪುರುಷ

ಅಂದು ದಕ್ಷಿಣ ಕನ್ನಡ ಜಿಲ್ಲೆಯ ತುಂಬ ಏನೋ ಒಂದು ಇಂಗಿತ ಆವರಿಸಿತ್ತು.  ಉಜಿರೆಯ ಅಂಗಡಿಗಳೆಲ್ಲ ಕದ ಹಾಕಿ ಕುಳಿತಿತ್ತು. ಎಲ್ಲರ ಮನಸಿನಲ್ಲೂ ಏನೋ ಒಂದು ಆತಂಕ. ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಯುತ ಡಾ. ಯಶೋವರ್ಮ ಅವರು ನಿಧನರಾಗಿದ್ದರು. ಅವರ ಅಂತಿಮ ದರ್ಶನಕ್ಕಾಗಿ ಕಾದು ಕುಳಿತ ಜನರು ಅದರಲ್ಲಿ ನಾನು ಒಬ್ಬಳು. ಅವರ ಪುಣ್ಯ ದೇಹ ಕಂಡೊಡನೆ ನನ್ನ ಮನದಲ್ಲಿ ಪ್ರತಿಧ್ವನಿಸುತ್ತಿದ್ದದ್ದು ಒಂದೇ ವಾಕ್ಯ.



ಪುರದ ಪುಣ್ಯ ಪುರುಷ ರೂಪಿಂದೆ ಪೋಗುತಿಹುದು.

ನಾನು ಎಂದೂ ಯಶೋವರ್ಮ ಅವರನ್ನು ಭೇಟಿಯಾಗಿ ಮಾತನಾಡಿದವಳಲ್ಲ. ಆದರೂ ಕೆಲವು ಕಾರ್ಯಕ್ರಮಗಳಲ್ಲಿ ಅವರಾಡಿದ ಮಾತುಗಳನ್ನು ಕೇಳಿದ್ದೇನಷ್ಟೇ. ಕೊನೆಗೆ ಅವರ ಅಂತಿಮ ಯಾತ್ರೆಗೆ ಸೇರಿದ ಜನ ಸಾಗರವನ್ನು ನೋಡಿ ನಾನು ಅವರ ಹಿರಿಮೆಯ ಕುರಿತು ಅರಿತುಕೊಂಡೆ. ಯಾರಿಗೂ ಒತ್ತಾಯ ಪೂರ್ವಕವಾಗಿ ಅವರ ಅಂತಿಮ‌ ದರ್ಶನಕ್ಕೆ ಕಳುಹಿಸಿಕೊಡಲಿಲ್ಲ. ಆದರೂ ಸ್ವ ಪ್ರೇರಣೆಯಿಂದ ಅವರನ್ನು ಹತ್ತಿರದಿಂದ ಬೀಳ್ಕೊಡಬೇಕೆಂದು ಸೇರಿದ ಎಷ್ಟೋ ಜನರು ಅವರ ಬಗ್ಗೆ ಹತ್ತಾರು ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು‌. ನನಗೆ ಅವರ ಹಲವು ಆಯಾಮಗಳು ಅವರು ಸಹಕರಿಸಿದ ರೀತಿ, ಸಹಾಯಹಸ್ತ, ಸಾಂತ್ವನಗಳ ಮಾತು ಮತ್ತವರ ತಾಳ್ಮೆಯ ಕುರಿತು ಅರಿವು ಮೂಡಿಸಿತ್ತು.

ಹಾಗಾದರೆ ಎಂದು ಅವರನ್ನೂ ಭೇಟಿಯಾಗದ ನಾನ್ಯಾಕೆ ಅಷ್ಟು ಅವರಮೇಲೇ ಅಭಿಮಾನ ಇಟ್ಟು ಅಲ್ಲಿ ತೆರಳಿದ್ದೆ ಎಂದು ನನಗೆ ನಾನೆ ಪ್ರಶ್ನಿಸಿಕೊಂಡರೆ, ನಾನು ಅವರ ಜೀವನದ ಕೆಲವು ಅಂಶಗಳಿಂದ ಪ್ರಭಾವಿತಳಾಗಿದ್ದೆ. ಅವರ ಶಿಸ್ತು, ವೃತ್ತಿಪರ ಆಸಕ್ತಿ, ನಿಷ್ಠೆ, ಅವರು ಇನ್ನೊಬ್ಬರಿಗೆ ಕೊಡುವ ಪ್ರೋತ್ಸಾಹ, ಅರ್ಥೈಸುವ ರೀತಿ, ತಿದ್ದಿ ಬುದ್ದಿ ಹೇಳುವ ಪರಿ ಮತ್ತು ಅವರ ಅಧ್ಬುತ ಆಯ್ಕೆಯ ಕುರಿತು ಕೇಳಿ ತಿಳಿದು ನಾನು ಅವರಿ ಗೌರವಾರ್ಥವಾಗಿ ಪುಷ್ಪ ನಮನ ಮಾಡಲು ಹೊರಟು ನಿಂತಿದ್ದೆ.

( ನಮ್ಮ ತರಗತಿ )

ಮಧ್ಯಾಹ್ನದ ಉರಿ ಬಿಸಿಲ ಹೊತ್ತಲ್ಲೂ ಒಂದಿಷ್ಟು ಬೇಸರಪಡದೆ ನಿಂತ ಸಾವಿರೋಪಾದಿಯ ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಕಾರ್ಯ ಸಿಬ್ಬಂದಿಗಳ ಬೆವರ ಹನಿಗಳೇ ಅವರ ಮೇಲಿಟ್ಟ ಪ್ರೀತಿಯನ್ನು ಸಾರುತ್ತಿತ್ತು. ಅದರೊಟ್ಟಿಗೆ ಉಜಿರೆಯ ಗ್ರಾಮಸ್ಥರು ಸಹ ಪಾಲ್ಗೊಂಡಿದ್ದರು. ಕೇವಲ‌ ಪಠ್ಯ ಚಟುವಟಿಗಷ್ಟೇ ಅಲ್ಲದೇ ಪ್ರಾಯೋಗಿಕ ಚಟುವಟಿಕೆಗಳಿಗೂ ಸಹ ಆದ್ಯತೆ ನಿಡುತ್ತಿದ್ದ ಇವರು. ಸ್ಪೋರ್ಟ್ಸ್, ಕಲಾಕೇಂದ್ರ, ಜರ್ನಲಿಸಮ್ ಸ್ಟುಡಿಯೋ, ಎನ್ ಸಿ ಸಿ, ಎನ್ ಎಸ್ ಎಸ್, ಆರ್ಬೋರೇಟಮ್, ಸ್ಕೌಟ್ ಗಾಯ್ಡಸ್ ಹೀಗೆ ಎಲ್ಲೆಡೆಯೂ ಅಭಿವೃದ್ಧಿ ಬಯಸಿ ಸಹಕರಿಸಿದವರು.

ಇನ್ನು ಮಕ್ಕಳ ವಸತಿ ಗೃಹ ಮತ್ತು ಸ್ವಚ್ಚತೆಯ ಬಗ್ಗೆಯೂ ಇವರು ತುಂಬಾ ನಿಗಾ ವಹಿಸುತ್ತಿದ್ದರು. ಅವರ ನಿಧನ ವಾರ್ತೆ ಬಂದ ದಿನ ಶೃದ್ಧಾಂಜಲಿಯಲ್ಲಿ ಅವರು ಒಮ್ಮೆ ಮೈಸೂರಿಗೆ ತೆರಳಿದ್ದಾಗ ಅಲ್ಲಿನ ಸಾಂಬಾರ್ ಇಷ್ಟಪಟ್ಟು ಅದನ್ನೇ ವಸತಿ ಗೃಹದ ವಿದ್ಯಾರ್ಥಿಗಳಿಗೂ ಪರಿಚಯಿಸ ಬೇಕು ಎಂದು. ಮೈಸೂರಿನಿಂದ ಸಾಂಬಾರು ಪುಡಿ ತರಿಸಿ ಪರೀಕ್ಷೆ ಮಾಡಿಸಿ ಪ್ರತಿ‌ ಮಂಗಳವಾರ ಇಡ್ಲಿಯ ಜೊತೆ ಅದೇ ಸಾಂಬಾರ್ ಮಾಡುವಂತೆ ಸಲಹೆ ನೀಡಿ ಅದು ಇಂದಿಗೂ ಅನ್ವಯವಾಗಿದೆ ಎಂಬುದು ಆಗ ತಿಳಿದು ಬಂತು.

ಅವರನ್ನು ಪ್ರತ್ಯಕ್ಷವಾಗಿ ಕಂಡಿದ್ದಕ್ಕಿಂತ ಪರೋಕ್ಷವಾಗಿ ಆಲಿಸಿದ್ದೇ ಹೆಚ್ಚು. ಅವರು ಹಚ್ಚಿಟ್ಟ ಹಣತೆಯ ಬೆಳಕು ಎಂದು ಆರದಂತೆ ತೈಲ ತುಂಬಿ, ಬತ್ತಿ ಉರಿಸಿ ಆ ಬೆಳಕಲ್ಲೇ ನಮ್ಮ‌ ಶೈಕ್ಷಣಿಕ ಜೀವನ ಮುಂದಿನ ದಾರಿ ಕಾಣೋಣ.

ಪ್ರಣಾಮ. 

- ಸುಮಾ.ಕಂಚೀಪಾಲ್

Comments

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...