ಪ್ರಸಂಗದ ಹೆಸರು ಮತ್ತು ಅದರ ಪಾತ್ರದ ವಿವರಣೆ ಹೊರಗೆ ನಡೆಯುತ್ತಿದ್ದರೆ, ಒಳಗೆ ಗಣಪತಿ ಪೂಜೆಯ ವಾದನ ರಂಗಸ್ಥಳದ ಎದುರು ಕೂತವರ ಕಿವಿ ನೆಟ್ಟಗಾಗಿಸುತ್ತದೆ. ಹಿರಿಯರ ಬಾಯಲ್ಲಿದ್ದ ಕವಳ ನುಗ್ಗಾಗಿ ರಸ ಉಗಿದು ಒಂದು ಹೊಸ ಕವಳದ ಪಾನು ತಯಾರಾಗುತ್ತದೆ. ಒಳಗಿನ ಚಂಡೆ ಶಬ್ದಕ್ಕೆ ಕೂರ್ಚೆಯಿಂದ ಕೆಳಬಿಟ್ಟ ಕಾಲುಗಳು ತಂತಾನೆ ಕುಣಿಯಲು ಆರಂಭಿಸುತ್ತದೆ.
ನುಡಿಜೇನು. 11/ 11/21
ಕೈಯಲ್ಲಿ ಪಾಪ್ ಕಾರ್ನ ಹಿಡಿದ, ಬೋರಾಗಿ ಕೂತ ಮಕ್ಕಳು ನಿಧಾನಕ್ಕೆ ಪ್ಲಾಸ್ಟಿಕ್ ಕೂರ್ಚೆಯ ಮೇಲೆ ಎದ್ದು ನಿಂತು ವೇದಿಕೆಯಲ್ಲಿ ಏನಾಗುತ್ತಿದೆ ಎಂದು ಬೆರಗುಗಣ್ಣಿನಿಂದ ಕಾಯುತ್ತಾರೆ. ಪೊಗಡಿ ಸುತ್ತಿದ ಹಿಮ್ಮೇಳ ವಾದಕರು, ಮೇಜು ಕೂರ್ಚಿತಂದಿಡುವ ಪರಿಚಾರಕರು, ಲೈಟ್ ಮ್ಯಾನ್ ಇವರೆಲ್ಲರ ಓಡಾಟ ಮೊದಲು ವೇದಿಕೆಯಲ್ಲಿ ಗೋಚರವಾಗುತ್ತದೆ. ಚಂಡೆಯ ಒಂದೇ ಒಂದು ಬಡಿತಕ್ಕೆ ಸ್ಪೀಕರ್ ಪಕ್ಕ ಕೂತ ಕೆಲವರು ಕೊಂಚ ದೂರ ಸರಿಯುತ್ತಾರೆ.
ವೇದಿಕೆಯ ತುಂಬೆಲ್ಲ ಹಾಸಿಕೊಂಡಿದ್ದ ಕರೆಂಟ್ ವಯರ್ ಗಳು ಕುಣಿಯುವವನ ಕಾಲಿಗೆಡವಬಾರದು ಎಂಬ ಕಾಳಜಿಯಿಂದ ಕೆಳ ಕೂತ ಕೆಲವರು ಸೂಚನೆಕೊಟ್ಟು ಅದನ್ನು ಪಕ್ಕಕ್ಕೆ ಎಳೆಯುತ್ತಾರೆ. ಹಿಮ್ಮೇಳದವರ ಹಿಂದಿನ ನೀಲಿ ಪರದೆ ನಿಧಾನಕ್ಕೆ ಅಲುಗಾಡಲು ಪ್ರಾರಂಭವಾಗುತ್ತದೆ. ಆಗ ಕೂತವರ ಕಣ್ಣುಗಳು ಪರದೆಯಂಚಿನ ತುದಿಗೆ ಹೋಗುತ್ತದೆ. ಯಾಕೆಂದರೆ ಪರದೆಹಿಂದಿನ ಕಲಾವಿದನ ಬಣ್ಣದ ವೇಷದ ಸೋಗು ಅವರನ್ನ ಕಾಡುತ್ತಿರುತ್ತದೆ. ಗೆಜ್ಜೆಯ ಶಬ್ಧ ಮೈ ಜುಮುಗುಡಿಸುತ್ತದೆ.
ಅರರೆ ನಿನ್ನಯ ಮಹಿಮೆಯನು ಪೊಗಳಲಳವಲ್ಲssss..
ಧರಣಿಯನು ಪೊತ್ತಿರ್ದ ದೇssವ ಜಗದೀಶ
ಧರೆಯೊಳು ವಿಷೇಶ
ಎಂಬ ಪದ ಕೇಳುತ್ತದೆ. ,
ಈ ಪದ್ಯ ಮುಗಿಯುತ್ತಿದ್ದಂತೆ ಪಾತ್ರವೊಂದು ಹೊರಬಿದ್ದು ಹೆಜ್ಜೆ ಹಾಕಿ ಒಂದೆರಡು ಅರ್ಥ ಉಸುರುತ್ತಿದ್ದಂತೆಯೇ. ಇತ್ತ ಮಗುವೊಂದು ಹಠ ಹಿಡಿದು ಅಳತೊಡಗುತ್ತದೆ. ಅಮ್ಮ ಮಗುವನ್ನು ಸಂತೈಸಲಾಗದೆ ತನ್ನ ಗಂಡನ ಕೈಗೆ ಮಗುವನ್ನಿತ್ತು ಮುಖ ತಿರುವುತ್ತಾಳೆ. ಅವನು ಮಗುವನ್ನು ಸಲ್ಪ ದೂರ ಕೊಂಡೊಗಿ ಸಮಾಧಾನ ಮಾಡಿ ತನ್ನ ಹೆಗಲ ಮೇಲೆ ವರಗಿಸಿ ತಂದು ಹೆಂಡತಿಯ ಮಡಿಲಲ್ಲಿ ಮಲಗಿಸುತ್ತಾನೆ. ತನ್ನ ಕೈಚೀಲದಲ್ಲಿದ್ದ ಪುಟ್ಟ ವಸ್ತ್ರ ಒಂದನ್ನು ತೆಗೆದು ಪುಟ್ಟ ಮಗುವಿನ ದೇಹ ಮುಚ್ಚುತ್ತಾಳೆ.
ಇತ್ತ ವೇದಿಕೆಯಲ್ಲಿ ಪ್ರಸಂಗ ಮುಂದುವರೆಯುತ್ತಿರುತ್ತದೆ. ಇನ್ನೇನು ಕೂತ ಮಕ್ಕಳಿಗೆಲ್ಲ ಬೋರಾಗುತ್ತಿದೆ ಎನ್ನುವ ಹೊತ್ತಿಗೆ ಹಾಸ್ಯ ಪಾತ್ರದವರ ಆಗಮನವಾಗುತ್ತದೆ. ಮಾಣಿಗಳು ಮಾಡುವ ಅತಿ ಆಧುನಿಕ ಯಕ್ಷಗಾನ ಹಾಸ್ಯಕ್ಕೆ ಕೂತವರೆಲ್ಲ ನನಗೆಗಡಲಲ್ಲಿ ತೇಲುತ್ತಾರೆ. ಇಷ್ಟಾಗಿ ಪ್ರಸಂಗದ ಮಧ್ಯ ಕರೆಂಟ್ ಹೋದರೆ ಶೀಟಿ, ಚಪ್ಪಾಳೆ, ಬ್ಯಾಟರಿ ಬೆಳಕು ಅತ್ತ ಹೆಣ್ಣು ಪಾತ್ರ ಹಾಕಿದ ಗಂಡು ಅದೇ ಸಮಯಕ್ಕೆ ಸೀರೆ ಎತ್ತಿ ಕೂರುತ್ತಾನೆ. ಆಗಲೇ ಹೊರಹೋಗಿ ಸುಟ್ಟ ಜೋಳ ಕೈಯಲ್ಲಿ ಹಿಡಿದುಬರಲು ಒಳ್ಳೆಯ ವೇಳೆ. ಪ್ರಸಂಗ ಮುಗಿಯುವ ಹೊತ್ತಿಗೆ ಅರ್ಧ ಬೆಳಗಾಗುತ್ತದೆ.
ರಂಗ ನಾಯಕ ರಾಜೀವ ಲೋಚನ
ರಮಣನೆ ಬೆಳಗಾಯಿತ್ ಏಳೆನ್ನುತ
ಎಂಬ ಪದ್ಯದಿಂದ ಪ್ರಸಂಗ ಕೊನೆಯಾಗುತ್ತದೆ.
ಸುಮಾ.ಕಂಚೀಪಾಲ್

ಬರಹ ಚೆನ್ನಾಗಿ ಮೂಡಿ ಬಂದಿದೆ.
ReplyDeleteಧನ್ಯವಾದ
Deleteಬರವಣಿಗೆ ವಾಸ್ತವಿಕತೆಯಿಂದ ಕೂಡಿದೆ.ರಂಗಸ್ಥಲದ ಹೊರ ಜಗತ್ತು ಎನೆಲ್ಲ ಕೂತೂಹಲ ದಿಂದ ಕೂಡಿದೆ..ಓದುತ್ತಿದ್ದಂತೆ ತುಟಿಗಳಲ್ಲಿ ಮಂದಹಾಸ ಮೂಡುತ್ತದೆ......
ReplyDelete