"ಅಮ್ಮಾ ಅಂಟಂಟೂ ಬೇಡ ಎಣ್ಣೆ ಸ್ನಾನ ಚಳಿ ಅದೂ ಇಷ್ಟು ಬೆಳಿಗ್ಗೆ " ಎನ್ನುತ್ತಾ ದೊಡ್ಡ ಮಣ್ಣಿನ ಮನೆಯ ಸುತ್ತ ಅಮ್ಮ ಬಿಚ್ಚಿದ ಅಂಗಿ ಕೈಯಲ್ಲಿ ಹಿಡಿದು ಅರೆ ಬೆತ್ತಲಾಗಿ ಓಡುತ್ತಿದ್ದೆ. ದೀಪಾವಳಿಯ ಎಣ್ಣೆ ಸ್ನಾನಕ್ಕೆ ನನ್ನ ಬಾಲ್ಯದಲ್ಲಿ ಪ್ರತಿಸಲವೂ ಅಜ್ಜಿಯ ಮನೆಗೇ ಹೋಗುತ್ತಿದ್ದೆವು. ಅದು ಕೂಡುಕುಟುಂಬ ಮೂವತ್ತೆರಡು ಜನ. ಅಲ್ಲಿ ನಿತ್ಯವೂ ಹಬ್ಬವೇ ದೀಪಾವಳಿಗಂತೂ ಎಲ್ಲರ ನೆಂಟರೂ ಒಟ್ಟುಗೂಡಿ ಒಂದು ಮದುವೆ ಮನೆಯ ಅದ್ದೂರಿ ಅಲ್ಲಿ ಕಾಣುತ್ತಿತ್ತು.
ಎಲ್ಲರೂ ಸಾಲಾಗಿ ಶೇಡಿಯಿಂದ ಬರೆದ ಚಿತ್ರಗಳೆದರು ಚಾಪೆಯಮೇಲೆ ಕೂತು ಎಣ್ಣೆ ಹಚ್ಚಿಸಿಕೊಳ್ಳುವ ಮಜ ನೋಡಲು ಬಹಳ ಚಂದವಿತ್ತು. ಅದೇ ಶೇಡಿಯಲ್ಲಿ ಪುಟ್ಟ ಮಕ್ಕಳ ಕಾಲನ್ನು ನೆನೆಸಿ ಮರದ ಕಂಬಗಳ ಮೇಲೇ ಅಚ್ಚು ಹಾಕುತ್ತಿದ್ದರು ನನ್ನ ಪುಟ್ಟ ಕಾಲನ್ನು ನೋಡಿ ನಾನು ಈಗಲೂ ಖುಷಿಪಡುತ್ತಿದ್ದೆ. ಆದರೆ ಇತ್ತೀಚೆಗೆ ಹೊಸಮನೆ ಕಟ್ಟಿಸಿ ಎಲ್ಲರೂ ಬೇರೆ ಬೇರೆಯಾಗಿರುವುದು ಬೇಸರದ ಸಂಗತಿಯಾದರೂ ದೀಪಾವಳಿ ಹಬ್ಬದ ಸಂಭ್ರಮಕ್ಕೇನು ಕೊರತೆಇಲ್ಲ
ಯಾಕೆಂದರೆ ಮೂಲ ದೇವರಿರುವ ಮನೆಯಲ್ಲಿ ಪ್ರತೀ ದೀಪಾವಳಿಗೂ ಲಕ್ಷ್ಮಿ ಪೂಜೆ ಮಾಡುತ್ತಾರೆ ಅದಕ್ಕೆ ನಾವೆಲ್ಲ ತಪ್ಪದೆ ಹೋಗುತ್ತೇವೆ. ತುಪ್ಪದ ಅವಲಕ್ಕಿ ಹಬ್ಬದ ವಿಶೇಷ ತಿನಿಸು. ಸಿಹಿ ಎದ್ದು ಹೊಡೆಯುವ ಹಾಗೆ ಕರಿಯ ಬಣ್ಣದ ಹಳ್ಳಿ ಬೆಲ್ಲ ಆಕಳ ತುಪ್ಪವನ್ನು ಅವಲಕ್ಕಿಗೆ ಸೇರಿಸಿ ಕಲೆಸಿ ಕೈ ತುತ್ತು ಕೊಡುತ್ತಾರೆ. ಅದ್ನು ತಿನ್ನುತ್ತಿದ್ದಂತೆ ಹಬ್ಬದ ಅಮಲೇರುವುದು. ನೋಡಿ ನಾನೀಗ ಬರೆಯುತ್ತಾ ಅದನ್ನು ನೆನಪಿಸಿಕೊಂಡೆನಲ್ಲ ನನಗೆ ಈಗಲೂ ಬಾಯಲ್ಲಿ ನೀರೂರುತ್ತಿದೆ. ನೀವು ಒಮ್ಮೆ ಹಬ್ಬದ ಆಚರಣೆಗೆ ನನ್ನೂರಿಗೆ ಬಂದು ನೋಡಿ.
ದೀಪಾವಳಿಯ ಮೂರು ದಿನದಲ್ಲಿ ಒಂದು ದಿನ ನಮ್ಮ ಊರಲ್ಲಿ ಹುಲಿಯಪ್ಪನ ಪೂಜೆ ಇರುತ್ತಿತ್ತು ನಾವು ಚಿಕ್ಕವರೆಲ್ಲಾ ಸೇರಿ ಸಾಲುಗಟ್ಟಿ ಕಾಡುದಾರಿಯಿಂದ ಹುಲಿಯಪ್ಪನ ಮೂರ್ತಿ ಇದ್ದಲ್ಲಿಗೆ ಹೋಗುವುದು ಒಂದು ಹರ್ಷ ಹಿಂದಿನ ದಿನ ರಾತ್ರಿ ನಾಳಿನ ಖುಷಿಯಲ್ಲಿ ನಿದ್ದೆ ಬರುತ್ತಿರಲಿಲ್ಲ. ಅಲ್ಲಿ ಹೋಗಿ ಮಾಡುವ ಮುಖ್ಯ ಕೆಲಸವೆಂದರೆ ದೇವರಿಗೆ ಒಡೆದ ಕಾಯಿಯ ನೀರನ್ನು ಕ್ಯಾನುಗಳಲ್ಲಿ ಹಿಡಿದಿಟ್ಟು ಜನರಿಗೆ ಹಂಚುತ್ತಿದ್ದರು. ಆ ಉರಿಬಿಸಿಲ ಬಯಲಲ್ಲಿ ಕಾಯಿ ನೀರು ಹೀರುವುದಿದೆಯಲ್ಲ ಆಹಾ!! ಅದರ ರುಚಿ ಹುಲಿಯಪ್ಪನ ಎದುರೆ ಬೇರೆಯದು ನಾವು ಮನೆಗೆ ಬಂದು ಕಾಯಿ ನೀರು ಕುಡಿದರೆ ಅದರಲ್ಲಿ ಆ ರುಚಿ ಸಿಗುತ್ತಿರಲಿಲ್ಲ.
ಈಗೆಲ್ಲಾ ಹಾಗಿಲ್ಲ ಕಾಲೇಜು ದೂರದ ಊರು ಮನೆಗೆ ಬಂದ ದಣಿವು ನಿದ್ದೆ ಮನೆಯಲ್ಲೇ ಹಬ್ಬದ ಊಟ ಬೂದೆ ಕಳುವು ಸಿಂಪಲ್ ಎಣ್ಣೆ ಸ್ನಾನ ಅದು ಮನೆಯಲ್ಲೆ ಅಜ್ಜಿ ಮನೆಯ ಮಜ ಈಗಿಲ್ಲಾ.

ಸುಮಾ.ಕಂಚೀಪಾಲ್
Comments
Post a Comment