ಸುಕಂ
ಚಿಕ್ಕ ಮಗುವಿಗೆ ಹಸಿವಿನ ಅಳು
ಅಳು
ಅಮ್ಮನಿಗೆ ಕಂದನ ಅಳು
ಯಜಮಾನನಿಗೆ ಹಣದ ಅಳು
ಮಗಳಿಗೆ ಅಪ್ಪನ ಬೈಗುಳದ ಅಳು
ಮಗನಿಗೆ ಬಿದ್ದು ಪೆಟ್ಟಾದ ಗಾಯದ ಅಳು
ಮನೆಯ ಹಿರಿಯನಿಗೆ ವೃದ್ಧಾಪ್ಯದ ಅಳು
ಮದುವೆಯಾಗದೆ ಉಳಿದವಳಿಗೆ
ಬದುಕಿನ ಅಳು.
ವಿಧವೆಗೆ ಗಂಡನಿಲ್ಲವೆಂಬ ಅಳು
ಕೈ ಕಾಲುಗಳಿಗೆ ಸ್ವಯ ಇಲ್ಲದವರಿವೆ
ಅಂತರಂಗದ ಅಳು
ಕೆಲಸ ಸಿಗದವನಿಗೆ ಕೀಳರಿಮೆಯ ಅಳು.
ಹಾ!! ಸಾಕು ಇಂತಹ ಸಾವಿರಾರು
ಅಳು ಅಳುಕಿಲ್ಲದೆ ಇದೆ.
ಸುಮಾ.ಕಂಚೀಪಾಲ್
The journey of tears
ReplyDeleteYeah
Deleteಜೀವನ ಶುರುವಾಗುವುದು, ನಡೆಯುವುದು ಅಂತ್ಯವಾಗುವುದು ಅಳುವಿಂದ.
ReplyDeleteಅದ್ಯಾರೋ ದೊಡ್ಡ ಮನುಷ್ಯ ಹೇಳಿದಾರಂತೆ "ಜೀವನದ ತುಂಬಾ ದುಃಖ ಅಳುಗಳೇ ಇರೋದು, ಖುಷಿ ಅನ್ನೋದು ಕ್ಷಣದಲ್ಲಿ ಕಿಟ್ಟನೆ ಹತ್ತಿ ಮಾಯವಾಗೋ ಕಿಡಿ ಥರ "ಅಂತ