ಬರ್ರಪ್ಪಾ ಎಲ್ರೂ ಡಾನ್ಸ ಮಾಡಿ. ಒಂದಾದ ಮೇಲೊಂದು ಮಾಡೋಣ. ಅಯ್ಯೋ ಗಲಾಟೆ ಮಾಡ್ಬೇಡಿ ಎಂದು ಒಂದಿಬ್ರು ಕೂಗಿದರೆ ಮತ್ತೊಂದಷ್ಟು ಜನ ಗುಂಪುಗುಂಪಲ್ಲಿ ಪ್ರಾಕ್ಟೀಸ್ ನಿರತರಾಗಿರ್ತಾರೆ. ಅದರದೇ ಚರ್ಚೆ ಅದರದ್ದೇ ಗಲಾಟೆ ಒಟ್ಟಿನಲ್ಲಿ ಎಲ್ಲಾ ಕಪ್ಪೆಗಳನ್ನು ಒಂದೇ ಕೊಳಗದಲ್ಲಿ ಕುರಿಸೋಕೆ ಸಾಧ್ಯಾನೆ ಆಗ್ತಿರಲಿಲ್ಲ. ಆದರು ಕದನಗಳ ನಂತರ ಒಂದು ಒಗ್ಗಟ್ಟು ಬಂತು ನಮ್ಮ ಕ್ಲಾಸಿನ ಜನಕ್ಕೆ. ಹುಡುಗರಿಗೆಲ್ಲ ಕುಣಿತದ ಉಮೇದಿ ಇದೆ ಆದ್ರೆ ಅವರು ಹೇಳಿದ ಹಾಗೆ ಅವರ ಕೈ ಕಾಲು ಆಡೋಲ್ಲ ಅನ್ನೋದೆ ಅವರ ಸಮಸ್ಯೆ. ಕೊನೆಗೆ ಕೈ ಕಾಲು ಆಡಿದ ತರವೇ ಅವರು ಕೇಳಿಕೊಂಡು ತೊಂಡೆಕಾಯಿ ಬೆಂಡೆಕಾಯಿ ನಿತ್ಯ ಹಸಿರಾದ ಮಕ್ಕಳ ಹಾಡಿಗೆ ಸ್ಟೆಪ್ ಹಾಕೇ ಬಿಟ್ರು. ಇನ್ನು ಒಂದು ಮಾನವನ ನಿರಂತರ ಜೀವನ ಚಕ್ರದ ಕುರಿತು ನೃತ್ಯ ರೂಪಕದ ಮೂಲಕ ಸಾಬೀತು ಪಡಿಸುವ ಇಚ್ಚೆ ನಮಗಿತ್ತು ಅದರಂತೆ ನಾವೊಂದಿಷ್ಟು ಜನ ಸೇರಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಾಯ್ತು. ಬಾಲ್ಯ, ಯವ್ವನ, ಗ್ರಹಸ್ತಾಶ್ರಮ - ಪಂಚೇಂದ್ರಿಯಗಳ ನಿಗ್ರಹ, ವಾನಪ್ರಸ್ತ, ಹೀಗೆ ಎಲ್ಲ ಸನ್ನಿವೇಶಗಳನ್ನು ಒಂದೊಂದಾಗಿ ಜೋಡಿಸಿ ಹೆಣೆದ ಸುಂದರ ಜಡೆಯಾಯ್ತು ನಮ್ಮ ರೂಪಕ. ಇನ್ನೇದು ವೇದಿಕೆ ಹತ್ತೋಕೆ ಅರ್ಧ ಗಂಟೆ ಇದೆ ಎನ್ನುವಾಗ ನಮ್ಮ ಹೊಟ್ಟೆಯೊಳಗೆಲ್ಲ ಪಾತರಗಿತ್ತಿಗಳ ಸಂಚಲನ ಪ್ರೋಪರ್ಟಿ ಸೆಟ್ಟಪ್ ಮಾಡುವ ಗಡಿಬಿಡಿ ಆರಂಭವಾಗಿಬಿಟ್ಟಿತ್ತು. ಎಲ್ಲರೂ ಹೊಸ ಉಡುಪು ಹಾ...