Skip to main content

ಸ್ತ್ರೀವಾದ ಪುರುಷ ವಿರೋಧಿ ಅಲ್ಲ ಕೇವಲ ಸಮಾನತೆಯ ಅಡಿಪಾಯ.

ಸ್ತ್ರೀವಾದ ಪುರುಷ ವಿರೋಧಿ ಅಲ್ಲ ಕೇವಲ ಸಮಾನತೆಯ ಅಡಿಪಾಯ.

ಸ್ತ್ರೀವಾದ ಎಂಬುದು ಇಂದಿನ ದಿನಮಾನದಲ್ಲಿ ಮಹಿಳೆಯರ ಕುರಿತಾಗಿ ಕ್ರಾಂತಿಯೇ ಘಟಿಸಿದೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ . ಮಕ್ಕಳನ್ನು ನೋಡಿಕೊಳ್ಳುವುದು , ಹಿರಿಯರ ಆರೈಕೆ ಮಾಡುವ , ಪಾತ್ರೆ ತೊಳೆಯುವ . ಬಟ್ಟೆ ಒಗೆಯುವ ಆ ಕೈಗಳು ಹೆಣ್ಣಿನದ್ದೇ ಯಾಕಾಗಿರಬೇಕು ? ಇಂತಹ ಪ್ರಶ್ನೆಯು ಇಂದು ಉದ್ಭವಿಸಿದೆ. ಮಹಿಳೆ ಸ್ವಾವಲಂಬಿಯಾಗುತ್ತಿದ್ದಾಳೆ ವಿಶಾಲ ಜಗತ್ತಿನಲ್ಲಿ ತನಗೆ ಬೇಕಾದನ್ನು ಪಡೆದುಕೊಳ್ಳುವ ವೃತ್ತಿ ಕೌಶಲ್ಯ ಛಲ ಅವಳಲ್ಲಿದೆ. ಇದಕ್ಕೆಲ್ಲ ಸಹಕಾರವಾಗಿ ನಿಂತಿರುವುದು ಸ್ತ್ರೀವಾದದ ಕಲ್ಪನೆಗಳು , ಮನುಷ್ಯತ್ವ , ಎಲ್ಲವನ್ನು ಧಿಕ್ಕರಿಸುವುದು ವಿರೋಧಿಸುವುದು ಎಂಬ ಬಣ್ಣವನ್ನು ಬಳಿದುಕೊಳ್ಳುತ್ತಿದೆಯೇ ಹೊರತಾಗಿ ಇದರ ನೈಜತೆ ಬೇರೆಯೇ ಇದೆ.

ಸ್ತ್ರೀ ವಾದ   ಹುಟ್ಟಿದ್ದು ಕೇವಲ ಸಮಾನತೆಗಾಗಿ. ವರದಕ್ಷಿಣೆಯ ಪಿಡುಗಿನಿಂದ ತಪ್ಪಿಸಿಕೊಳ್ಳಲು ಹೆಣ್ಣು ಭ್ರೂಣ ಹತ್ಯೆ,  ಅತ್ಯಾಚಾರ, ಶಿಕ್ಷಣ , ಹಕ್ಕುಗಳ ಜಾಗೃತಿ ಮತ್ತು ಪುರುಷ ಜಗತ್ತಿಗೆ ಹೆಣ್ಣನ್ನು ಅರ್ಥೈಸಲು ಸ್ತ್ರೀವಾದ ನಿಂತಿರುವುದು. ಒಬ್ಬಳೇ ಹೊರಗೆ ಹೋಗಬೇಡ ಎಂದು ಕಾಳಜಿ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ನಿನ್ನಬಳಿ ಈ ಕೆಲಸವಾಗದು ಎಂದು ಹೇಳಿ ಬಲಹೀನಳನ್ನಾಗಿಸಿಬಿಟ್ಟರು. ಹಣದ ಕೆಲಸ ಬೇಡ ಜವಾಬ್ದಾರಿ ಅದನ್ನು ನಿರ್ವಹಿಸಲಾರೆ ಎಂದರು. ಇಂತಹ ಬಟ್ಟೆ ತೊಡಬೇಡ ಎಂದರು ಸಂಸ್ಕೃತಿಯ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ಪ್ರೀತಿ ನೀಡದಿದ್ದರೂ ಆವನು ನಿನ್ನ ಗಂಡ. ನಿನ್ನ ಅತ್ತೆಮಾವ ಎಂದು ಅಡಿಯಾಳಾಗಿಸಿಬಿಟ್ಟರು. ಇದ್ಯಾವುದರ ಅರಿವೂ ಹೆಣ್ಣಿಗಿರದಷ್ಟು ಕೆಳಮಟ್ಟದಲ್ಲಿ ಅವರ ಪ್ರಜ್ಞಾಸ್ಥಿತಿಯನ್ನೇ ಕೆಡಿಸಿ ಬಿಟ್ಟಿದ್ದರು. ಇದೆಲ್ಲದರಿಂದ ಹೊರಬರುವುದಕ್ಕಾಗಿಯೇ ಸ್ತ್ರೀ ವಾದವೆಂಬುವುದು ಹುಟ್ಟಿದ್ದು. ಇಂದು ಮಹಿಳೆಗೆ ಸ್ಥಾನಮಾನ ದೊರಕಿದೆ. ನಮ್ಮ ಸಂವಿಧಾನಕ್ಕೂ ಧನ್ಯವಾದ ಹೇಳಬೇಕು. ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿದೆ. ತಮ್ಮ ಸ್ವಂತ ದುಡಿಮೆಯಲ್ಲಿ ತಾವು ಬದುಕು ಸಾಗಿಸಬೇಕು ಎಂಬ ಮನೋಭಾವನೆ ಎಲ್ಲರಲ್ಲಿದೆ. ಶಿಕ್ಷಣದ ಕಿಡಿ ಹೊತ್ತಿ ಎಲ್ಲರಿಗೂ ಶಿಕ್ಷಣ ದೊರೆಯುತ್ತಿದೆ.
ಕಡಲವಾಣಿ ಪತ್ರಿಕೆ. 2019

ಅಂಕ ಗಳಿಕೆಯಲ್ಲಿ ಮುಂಚೂಣಿ. ಪ್ರತಿಯೊಂದು ಕ್ಷೇತ್ರದಲ್ಲೂ ಈ ಮುಂಚೂಣಿ. ಮೈ ನೆರೆದ ಹೆಣ್ಣುಮಕ್ಕಳನ್ನು ಶಾಲೆ ಬಿಡಿಸುವ ಪ್ರವೃತ್ತಿ, ಪುರುಷನಿಗಿಂತ ಮೇಲಿನ ಹುದ್ದೆಯಲ್ಲಿ ಮಹಿಳೆ ಇರಕೂಡದೆಂಬ ಮನೋಭಾವ, ಬಾಲ್ಯವಿವಾಹ ಅಸಮಾನತೆ  ಇಂತಹ ಪದ್ದತಿಗಳು ಇಂದು ಕಡಿಮೆಯಾಗಿವೆ. ಇದನ್ನು ಹೊರತು ಪಡಿಸಿ ಮಹಿಳೆಯರಿಗೆ ಮೀಸಲಾತಿ. ಪುರುಷ  ಪ್ರಾಧಾನ್ಯ ಸಮಾಜದಿಂದ ಮುಕ್ತಿ  ಹೊಂದುವುದು , ಸ್ವ ಉದ್ಯೋಗ ಇಂತಹ ಹೋರಾಟ ಹಂಬಲಗಳ ನಡುವೆಯೂ  ಹಳ್ಳಿ ಹಳ್ಳಿಗಳಲ್ಲಿ ಇದಾವುದರ ಗೋಜಿಗೆ  ಹೋಗದ ತಮ್ಮ ಬದುಕೇ ತಮಗೆ ಸುಖ ಎಂದು ಸಂತೋಷದಿಂದ ದಿನಮುಂದೂಡುವ ಮಹಿಳೆಯರು ಇದ್ದಾರೆ. ಸಂಬಳಕ್ಕೆಂದು ದುಡಿಯುವವರಲ್ಲ ಯಾವ ಫಲಾಪೇಕ್ಷೆ ಹೊಂದಿದವರಲ್ಲ . ತಮ್ಮ ಕುಟುಂಬ , ಮನೆ ಇವಿಷ್ಟೇ ಇವರ ಪುಟ್ಟ ಪ್ರಪಂಚ. ಅಲ್ಲ ಇದೇ ಅವರ ಸಂಪೂರ್ಣ ಪ್ರಪಂಚ ಪ್ರತಿದಿನದ ದಿನಚರಿಯೂ

ಒಂದೇ ತೆರನಾದದ್ದು , ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಕೆಲಸಗಳೇ ಆದರೆ ಹೇಳಿಕೊಳ್ಳುವಂತದ್ದು ಏನೂ ಇಲ್ಲ. ಮತ್ತೆ ಬೆಳಗಾದರೆ ನಿನ್ನೆಯದೇ ಕೆಲಸಗಳ ಪುನರಾವರ್ತನೆ ಹೀಗೆ ದಿನ ಕಳೆಯುವುದರಲ್ಲಿಯೇ ಅವರು ತಮ್ಮ ಜೀವನದ ಬಹುಪಾಲನ್ನು ಕಳೆದು ಬಿಡುತ್ತಾರೆ . ತಿಂಗಳಿಗೊಮ್ಮೆ ದೇವಸ್ಥಾನದ ಭಜನೆಯೂ ಹೋಮ . ಹವನಗಳು ನೆಂಟರ ಮನೆಗೆಂದು ಹೋಗಿ ಬಂದರೆ ಮುಗಿದೇ ಹೋಯಿತು . ಪೇಟೆಯಲ್ಲಿ ವಾಸವಿರುವವರಂತೆ ಹಾಲು ತರುವುದು, ತರಕಾರಿ ತರುವುದು, ದಿನಸಿ ತರುವುದು, ಮಕ್ಕಳನ್ನು ಶಾಲೆಗೆ ಬಿಡುವುದು, ಈ ಯಾವ ಕೆಲಸಗಳೂ ಅವರಿಗಿರುವುದಿಲ್ಲ. 

ಇನ್ನು ಮನರಂಜನೆಗೆ ಸಂಬಂಧಿಸಿದಂತೆ ಹೇಳುವುದಾದರೆ ಅವರು ಮೊಬೈಲ್‌ನ್ನು ಹೆಚ್ಚಾಗಿ ಬಳಸುವುದಿಲ್ಲ. ಯಾವುದೇ ಸಿನಿಮಾ ನೋಡುವವರಲ್ಲ . ಮತ್ತು ದಿನಪತ್ರಿಕೆ ಓದುವದರಲ್ಲಿ ಆಸಕ್ತಿಯೂ ಇಲ್ಲ. ಸಂಜೆಯ ಹೊತ್ತಿಗೆ ಕೆಲಸ ತುಸು ಕಡಿಮೆಯಾದಾಗ ಕುಳಿತು ಒಂದೆರಡು ಧಾರವಾಹಿ ನೋಡುವುದೇ ಇವರಿಗೆ ದೊರಕುವ ದೊಡ್ಡ ಮನರಂಜನೆ. ಆರ್ಥಿಕವಾಗಿ ಇಂತಹ ಮಹಿಳೆಯರಿಗೆ ಯಾವುದೇ ವಸ್ತುವನ್ನು ಕೊಳ್ಳುವ ಅವಶ್ಯಕತೆಯಿದ್ದಾಗ ಮನೆಯವರೇ ತಂದುಕೊಡುತ್ತಾರೆ. ವಸ್ತು ಕೊಂಡುಕೊಳ್ಳುವುದರ ಕುರಿತು ಹಣ ಕೇಳಿ ಪಡೆಯುವ ಯಾವುದೇ ತೊಂದರೆ ಇಲ್ಲದೆಯೂ ಇವರು ಇರಬಹುದು. ಹಳ್ಳಿಯಲ್ಲಿನ ಮಹಿಳೆಯರ ಆರೋಗ್ಯದಲ್ಲಿ ಅಷ್ಟೇನು ಸಮಸ್ಯೆ ಕಂಡು ಬರುವುದಿಲ್ಲ . ಏಕೆಂದರೆ ಆವರು ತಮ್ಮನ್ನು ದೈಹಿಕವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 

ಆದ್ದರಿಂದ ಸಮಸ್ಯೆ ಕಂಡುಬರುವುದಿಲ್ಲ . ಮನುಷ್ಯ ಎಂದಮೇಲೆ ಖಾಯಿಲೆಗಳು ಸರ್ವೇ ಸಾಮಾನ್ಯ ಆದ್ದರಿಂದ ಆರೋಗ್ಯ  ಸಮಸ್ಯೆ ಉಂಟಾದಾಗ ಮನೆಮದ್ದು . ಮೂಢನಂಬಿಕೆಗಳಿಗೆ ಒಳಗಾಗಿ ಆಪಾಯವುಂಟು ಮಾಡಿಕೊಳ್ಳುವುದು ಇದೆ . ತಮ್ಮ ಮಕ್ಕಳಿಂದ ಆಧುನಿಕತೆಗೆ ಸ್ರ್ತೀ ವಾದದ ಅಲೆಯಲ್ಲಿ ಆದೇ ಸಮೃದ್ಧ ಜೀವನದ ಹೊಸ ತಿರುವಿನಲ್ಲಿ ಸಮಾನತೆಯ ಸಂತೋಷದ ಜೀವನ ನಡೆಸುವಂತಾಗಲಿ. ಇದೇ ಸ್ತ್ರೀವಾದ ಸಮಾನತೆಯ ಅಡಿಪಾಯ.ಹೊರತಾಗಿ ಪುರುಷವಿರೋಧಿಯಲ್ಲ.

ಸುಮಾ.ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...