ನನ್ನ ಹೆಸರು ಇಷ್ಟೊಂದು ಪ್ರತಿಷ್ಠಿತ ಪ್ರಶಸ್ತಿಯ ಅಡಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಂತೂ ನನಗಿತ್ತು, ಆದರೆ ಅದು ಸಾಧ್ಯವಾಗಬಹುದೇ ಎಂಬ ಅನುಮಾನವೂ ಇತ್ತು. ಈ ವರ್ಷ ನನಗೆ ಸಿಕ್ಕ ಅತಿ ದೊಡ್ಡ ಖುಷಿಯಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ನನ್ನ ಬರವಣಿಗೆ ಮೆಚ್ಚಿ ಪ್ರೋತ್ಸಾಹಿಸಿದ ಎಲ್ಲರಿಗೂ ನಾನಿದನ್ನು ಅರ್ಪಿಸುವೆ. ನಾನು ಬರೆದದ್ದಕ್ಕಲ್ಲ ಈ ಪ್ರಶಸ್ತಿ ಬರಬಹುದಾ? ಎಂದು ಅನುಮಾನಿಸಿದಾಗ ಒತ್ತಾಯ ಮಾಡಿ "ಇದು ತಮಾಷೆ ಅಲ್ಲ, ಮೊದಲು ಇದನ್ನು ಸೀರಿಯಸ್ಆಗಿ ಆಲೋಚಿಸಿ ಈ ಬಗ್ಗೆ ಮುಂದೇನು ಮಾಡಬೇಕು ಯೋಚಿಸು, ಧ್ಯಾನದಂತೆ ಬರಿ" ಎಂದು ನನಗೆ ಗುರಿ ತೋರಿಸಿ. ಬರೆಯಲು ಕುಳಿತಾಗ ಯಾವ ಕೆಲಸವಿದ್ದರೂ ತಾನೇ ಮಾಡಿಕೊಂಡು, ಬಾಯಲ್ಲಷ್ಟೇ ಅಲ್ಲ ಕೃತಿಯಲ್ಲೂ ನನಗೆ ಪ್ರೋತ್ಸಾಹಿಸುವ ನೀನಿರುವಾಗ ನಾನು ಇನ್ನಷ್ಟು ಸಾಧಿಸಬಲ್ಲೆನು.ಇವಳೇಕೆ ವಿನ್ನಿಂಗ್ ಸ್ಪೀಚ್ ಕೊಡುತ್ತಿದ್ದಾಳೆ ಎಂದುಕೊಂಡವರಿಗೆ ಇದಕ್ಕಿಂತ ದೊಡ್ಡ ಗೆಲುವು ಇನ್ನೊಂದಿಲ್ಲ ಎಂದು ಹೇಳಲು ಬಯಸುವೆ.