Skip to main content

Posts

sukamclicks

ಕಲಾ ವೈಭವ  SDM, Ujire 6/3/22 ನೃತ್ಯ ತಲ್ಲೀನ ಸ್ವರ್ಣಶ್ವೇತ ಹರ್ಷಸಿಂಚನ ಕೃಷ್ಣ ಸ್ಮರಣೆ ಹಸ್ತಚಿತ್ತ ಚೆಲುವು ಅಲ್ಪಬಿಂಬ ಕಾತರಧ್ಯಾನ ಮೊಗ್ಗುಬಿಂದಿ ಏಕಾಗೃತ ಚಿತ್ರ ಸಾಲು ಸುಮಾ.ಕಂಚೀಪಾಲ್

ಶಿಲ್ಪಕಲೆಯತ್ತ ಒಲವಿತ್ತ ಪ್ರಿಯದರ್ಶನ್.

ಶಿಲ್ಪಕಲೆಯತ್ತ ಒಲವಿತ್ತ ಪ್ರಿಯದರ್ಶನ್. ಚಿತ್ರಬಿಡಿಸುವ, ಹಾಡುಹೇಳುವ ಇಲ್ಲ ನೃತ್ಯಮಾಡುವ ವಿಶೇಷ ಪ್ರತಿಭಾವಂತರ ಕುರಿತು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ ಈ ಕಾಲದಲ್ಲಿ ಕಲ್ಲಿನ ಕೆತ್ತನೆ ಹಾಗೂ ವಿಗ್ರಹ ನಿರ್ಮಾಣ ಮಾಡುವ ಆಸಕ್ತಿ ಹೊತ್ತ ಯುವಕರನ್ನು ಕಾಣುವುದು ಅತೀ ವಿರಳ. ಆದರೆ ಕಲಾಪ್ರಿಯ ಪ್ರಿಯದರ್ಶನ್ ನಾಯ್ಕ ಅವರು ಕೆತ್ತನೆ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಚಾಮರಾಜ ನಾಯ್ಕ ಹಾಗೂ ಸರೋಜಾ ನಾಯ್ಕ ಇವರ ಪುತ್ರರಾದ ಪ್ರಿಯದರ್ಶನ್ ಅವರು ಹುಟ್ಟಿ ಬೆಳೆದದ್ದು ಉತ್ತರ ಕನ್ನಡದ ಬನವಾಸಿ ಸಮೀಪದ ಮಧುರವಳ್ಳಿಯಲ್ಲಿ. ತಮ್ಮದೇ ಸ್ವ ಆಸಕ್ತಿಯ ಮೂಲಕ ಈ ಕಲೆಯತ್ತ ತಮ್ಮ ಮನಸ್ಸು ಕೊಟ್ಟು ಕಲಿಕೆ ಆರಂಭಿಸಿದರು. ಇವರಿಗೆ ಈಗ ಕೇವಲ ಹತ್ತೊಂಬತ್ತು ವರ್ಷ. ತಮ್ಮ ಆಸಕ್ತಿ ಒಟ್ಟಿಗೆ ನಿರಂತರ ಅಭ್ಯಾಸಮಾಡಿ, ಆಕಾರವಿಲ್ಲದ ಶಿಲೆಗಳಿಗೆ ಚಂದದ ರೂಪ ನೀಡುತ್ತಿದ್ದಾರೆ. ಪದವಿ ಹಂತದಲ್ಲೇ ಇವರಿಗೆ ಕೆತ್ತನೆ ಕ್ಷೇತ್ರದಲ್ಲಿ ಆಸಕ್ತಿ ಬೆಳೆದಿದ್ದು ಯಾರ ಒತ್ತಾಯವೂ ಇಲ್ಲದೆ ತಮ್ಮನ್ನು ತಾವು ಈ ಕ್ಷೇತ್ರಕ್ಕೆ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿ. ಸಾಗರದ ಗುರುಕುಲದಲ್ಲಿ ವಿಪಿನ್ ಸಿಂಗ್‌ರವರ ಬಳಿ ಶಿಲ್ಪಕಲೆ ಅಭ್ಯಾಸ ಮಾಡಿದ್ದಾರೆ. ಇವರು ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದು ಶೈಕ್ಷಣಿಕ ಅಧ್ಯಯನ ಒಟ್ಟಿಗೆ ಕೌಶಲ್ಯಕ್ಕೂ ಸಹ ಪ್ರಾಮುಖ್ಯತೆ ನೀಡಿದ್ದಾರೆ. ಇದರೊಟ್ಟಿಗೆ ಮಣ್ಣಿನ‌ಮೂರ್ತಿ ನಿರ್ಮಾಣ, ಮರದ ಕೆತ್ತನ...

ಆಸೆ

ಅವಧಿ   ಆಸೆ . ತನ್ನ ವಲಯದ ಹೊರಗೆ ನಿಂತಿದ್ದ ಅವಳಿಗೆ ಅವನದೇ ಚಿಂತೆ ಅವನಂತೋ ಬಿಡಿ ಮೂತ್ರ ಗುರುತು ರೇಖೆ ಎಳೆದ ನಾಯಿಯಂತೆ ತನ್ನದ್ದನ್ನು ಬಿಟ್ಟು ಕದಲದ ಜಾಯಮಾನ ಇವಳಿಗೆ ಅವಮಾನ ಅವನಾಸೆಯ ಸತ್ತ ಹೆಣಗಳು ಇವಳಲ್ಲಿ ಕೊಳೆಯುತ್ತಿದ್ದರೂ ಇವಳಿಗೆ ಕಾಣಿಸುವುದು ಅವನದೇ ಸರೋವರ ತನ್ನ ಬಯಕೆಯ ಹಡಗು ಆದರೆ.. ಇವಳ ಕಣ್ಣಲ್ಲಿ ಕಂಡ ಆಸೆಯ ಮೀನನ್ನು ಅವನು ತನ್ನ ಗಾಳಕ್ಕೆ ಬಲಿಯಾಗಿಸಿದ್ದ ಸುಮಾ.ಕಂಚೀಪಾಲ್

ನಾನು ಓದಿದ್ದು ಹೀಗೆ - 'ಝಿಪ್ಪಿಗ್ರಫಿ'

ನಾನು ಓದಿದ್ದು ಹೀಗೆ - 'ಝಿಪ್ಪಿಗ್ರಫಿ' ಝಿಪ್ಪಿಗ್ರಫಿ ಹೆಸರೊಂತರ ಚನಾಗಿದೆ, ಕೇಳೊಕೆ ಸೇಮ್ ಸಿನಿಮಾ ಹೆಸರಿನ‌ಹಾಗಿದೆ ಅಂತ ಎಷ್ಟೋ ಜನ‌ ಈ ಪುಸ್ತಕದ ಕುರಿತು ಮಾತಾಡ್ತಾ ಇದ್ರು. ಶೃತಿ ಜೈನ್ ಅವರು ಬರೆದ ಈ ಪುಸ್ತಕ ಶ್ವಾನ ಪ್ರೇಮಿಗಳಿಗೆ ಬಹಳ ಹಿಡಿಸುವ ಪುಸ್ತಕ ಅಂತಲೂ ಸುದ್ದಿಯಲ್ಲಿತ್ತು. ಕುತೂಹಲದಿಂದ ಓದಿದಾಗ ಇದು ಕೇವಲ ಶ್ವಾನ ಪ್ರಿಯರಿಗಷ್ಟೇ ಅಲ್ಲ ಎಂಬ ಸತ್ಯ ಅರಿವಿಗೆ ಬಂತು. ಝಿಪ್ಪಿಯ ದಿನಚರಿ ಅದರೊಟ್ಟಿಗೆ ಕಳೆದ ಸಮಯದ ವಿವರಣೆಗಳನ್ನು ಹೊರತುಪಡಿಸಿ ಕೆಲವು ವೈಜ್ಞಾನಿಕ ವಿಷಯಗಳೂ ಸಹ ಈ ಪುಸ್ತಕದಲ್ಲಿ ಅಡಕವಾಗಿದೆ ಎಂಬ ವಿಷಯ ಯಾವ ಓದುಗರ ಅಭಿಪ್ರಾಯದಲ್ಲೂ ನಾನು ಕೇಳಿರಲಿಲ್ಲ. ನಾನೇ ಸ್ವತಃ ಓದಿದ ನಂತರ ಶ್ವಾನಗಳ ಕುರಿತು ಎಷ್ಟೋ ಗೊತ್ತಿಲ್ಲದ ವಿಚಾರಗಳು ಸುಲಭವಾಗಿ ಉದಾಹರಣೆ ಸಹಿತವಾಗಿ ಅರ್ಥವಾಗುವಂತ ಸರಳ ಪುಸ್ತಕ ಝಿಪ್ಪಿಗ್ರಫಿ. ಲಾಬ್ರಿಡಾರ್ ರಿಟ್ರೀವರ್ ಎಂಬ ತಳಿ ಇಂಗ್ಲೆಂಡ್ ಮತ್ತು ಅಮೇರಿಕದಲ್ಲಿ ಮೊದಲು ಇದ್ದದ್ದು ಮತ್ತು ಲೆಬ್ರಿಡಾರ್ ಎಂಬುದು ನಾಯಿಗೂ ಮೊದಲು ಒಂದು ಊರಿನ ಹೆಸರು ಎಂಬುದು ವಿಶೇಷ.  ಸೂಕ್ಷ್ಮ ಮತಿ, ಚತುರತೆ, ಬೇಟೆಗಾಗಿ ಮತ್ತು ಮೀನುಗಾರು ಬಳಸುತ್ತಿದ್ದ ಸ್ನೇಹಪರ ಪ್ರಾಣಿಗಳೆಂದರೆ ಅವು ಲ್ಯಾಬ್ರಿಡಾರ್‌ಗಳು. ತಮ್ಮನ್ನೇ ಪ್ರೀತಿಸಬೇಕು ಎಂಬ ಚಿಕ್ಕ ಸ್ವಾರ್ಥದೊಂದಿಗೆ ಮೊಬೈಲ್‌ಗಳನ್ನು ಇವು ದ್ವೇಷಿಸುತ್ತವೆ. ಅದರಲ್ಲೂ ಜನರನಡುವೆಯೇ ಇರ ಬಯಸುವ ಈ ಸ್ನೇಹಜೀವಿ ಝಿಪ್ಪಿಯೊಬ್ಬಳೇ ಕೆಲ ಕಾಲ ಒಂಟಿ...

sukamclicks

ದೃಷ್ಟಿ ಸೂಚಿ ರೆಕ್ಕೆ ಚಾಚಿ  ಹಾರಬೇಕು ಹಸಿರ ಕಡೆಗೆ. ಕಂದು ಬಣ್ಣದ ಒಡಲು ಇದು ಸಡಿಲಗೊಳಿಸಿ ಅರಳಿದವಳು ನೀನು. ಅರಳಿನಿಂತ ಕೆಂಪು ಚಲುವೆ ಅದರ ಒಳಗು ಬಿಳಿಯ ಕುಸುಮ ತಿಳಿಹಸಿರು ಎಳೆಬಿಸಿಲು. ತುಳಸಿದಳ  ಚಿತ್ರ - ಸಾಲು  ಸುಮಾ.ಕಂಚೀಪಾಲ್

ನೃತ್ಯ ನಿರಂತರ

ಬರ್ರಪ್ಪಾ ಎಲ್ರೂ ಡಾನ್ಸ ಮಾಡಿ.  ಒಂದಾದ ಮೇಲೊಂದು ಮಾಡೋಣ.  ಅಯ್ಯೋ ಗಲಾಟೆ ಮಾಡ್ಬೇಡಿ  ಎಂದು ಒಂದಿಬ್ರು ಕೂಗಿದರೆ ಮತ್ತೊಂದಷ್ಟು ಜನ ಗುಂಪುಗುಂಪಲ್ಲಿ ಪ್ರಾಕ್ಟೀಸ್ ನಿರತರಾಗಿರ್ತಾರೆ. ಅದರದೇ ಚರ್ಚೆ ಅದರದ್ದೇ ಗಲಾಟೆ ಒಟ್ಟಿನಲ್ಲಿ ಎಲ್ಲಾ ಕಪ್ಪೆಗಳನ್ನು ಒಂದೇ ಕೊಳಗದಲ್ಲಿ ಕುರಿಸೋಕೆ ಸಾಧ್ಯಾನೆ ಆಗ್ತಿರಲಿಲ್ಲ. ಆದರು ಕದನಗಳ ನಂತರ ಒಂದು ಒಗ್ಗಟ್ಟು ಬಂತು ನಮ್ಮ ಕ್ಲಾಸಿನ ಜನಕ್ಕೆ.  ಹುಡುಗರಿಗೆಲ್ಲ ಕುಣಿತದ ಉಮೇದಿ ಇದೆ ಆದ್ರೆ ಅವರು ಹೇಳಿದ ಹಾಗೆ ಅವರ ಕೈ ಕಾಲು ಆಡೋಲ್ಲ ಅನ್ನೋದೆ ಅವರ ಸಮಸ್ಯೆ. ಕೊನೆಗೆ ಕೈ ಕಾಲು ಆಡಿದ ತರವೇ ಅವರು ಕೇಳಿಕೊಂಡು ತೊಂಡೆಕಾಯಿ ಬೆಂಡೆಕಾಯಿ ನಿತ್ಯ ಹಸಿರಾದ ಮಕ್ಕಳ ಹಾಡಿಗೆ ಸ್ಟೆಪ್ ಹಾಕೇ ಬಿಟ್ರು.  ಇನ್ನು ಒಂದು ಮಾನವನ ನಿರಂತರ ಜೀವನ ಚಕ್ರದ ಕುರಿತು ನೃತ್ಯ ರೂಪಕದ ಮೂಲಕ ಸಾಬೀತು ಪಡಿಸುವ ಇಚ್ಚೆ ನಮಗಿತ್ತು ಅದರಂತೆ ನಾವೊಂದಿಷ್ಟು ಜನ ಸೇರಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಾಯ್ತು. ಬಾಲ್ಯ, ಯವ್ವನ, ಗ್ರಹಸ್ತಾಶ್ರಮ - ಪಂಚೇಂದ್ರಿಯಗಳ ನಿಗ್ರಹ, ವಾನಪ್ರಸ್ತ, ಹೀಗೆ ಎಲ್ಲ ಸನ್ನಿವೇಶಗಳನ್ನು ಒಂದೊಂದಾಗಿ ಜೋಡಿಸಿ ಹೆಣೆದ ಸುಂದರ ಜಡೆಯಾಯ್ತು ನಮ್ಮ ರೂಪಕ.  ಇನ್ನೇದು ವೇದಿಕೆ ಹತ್ತೋಕೆ ಅರ್ಧ ಗಂಟೆ ಇದೆ ಎನ್ನುವಾಗ ನಮ್ಮ ಹೊಟ್ಟೆಯೊಳಗೆಲ್ಲ ಪಾತರಗಿತ್ತಿಗಳ ಸಂಚಲನ ಪ್ರೋಪರ್ಟಿ ಸೆಟ್ಟಪ್ ಮಾಡುವ ಗಡಿಬಿಡಿ ಆರಂಭವಾಗಿಬಿಟ್ಟಿತ್ತು. ಎಲ್ಲರೂ ಹೊಸ ಉಡುಪು ಹಾ...

sukamcliks

ದೀಪವಾಗಿಸು, ಜೀವ ಜ್ಯೋತಿ ಹೊತ್ತಿಸು ಉರಿಸಿ ಹರಸು ಬಾಳ ಹರಿಸು ಬೆಳ್ಳಿ ಬೆಳಕ. ದರ್ಪಣದ ಪ್ರತಿಫಲನ ಕೆಂಪು ಜ್ವಾಲೆ ಸುತ್ತ ಹೊತ್ತಿಹುದು ನಿನದೆ ಛಾಯೆ. ದರ್ಪಣದಿ ಕಂಡೆ ಹರಿ - ಗೋಪಿ ಮೊಗವ. ಕಪ್ಪು ಕಣ್ ಕಾಡಿಗೆಯ ಕಸ್ತೂರಿ ಚಂದ ತಿಲಕವ. ನಿತ್ಯ ಆಭರಣ ದೃಷ್ಟಿ ಸಂಚಲನ ಸತ್ವ ಅಭಿನಮನ. ಚಿತ್ರ - ಸಾಲು ಸುಮಾ.ಕಂಚೀಪಾಲ್