ಅಕ್ಕೋರಾಗುವುದು ತುಂಬಾ ಕಷ್ಟ ಇದೆ. ನಾನು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆಗೆ ನನ್ನ ಚಿಕ್ಕಮ್ಮನ ಮಗಳನ್ನು ಕರೆದುಕೊಂಡು ಹೋಗಿದ್ದೆ. ಎಲ್ಲಾ ಮಕ್ಕಳಿಗೂ ರಜ. ಅರವತ್ತಕ್ಕೂ ಹೆಚ್ಚು ಮಕ್ಕಳು ಅಲ್ಲಿ ಹಾಜರಿದ್ದರು. ಒಂದೊಂದು ತರಗತಿಯವರನ್ನು ಒಂದೊಂದು ಕಡೆ ಕೂರಿಸಿದ್ದರು. ಅವರ ಗಲಾಟೆಯನ್ನು ಕೇಳಲಾಗದೆ ಸಭಾ ಭವನವೇ ಅಳುತ್ತಿತ್ತು. ಕೆಳಗಡೆ ದೇವಸ್ಥಾನ. ಆ ದೇವರಿಗೂ ಅನಿಸಿರಬಹುದು ಅಬ್ಬಾ! ಈ ಮಕ್ಕಳು ಎಷ್ಟು ಗಲಾಟೆ ಮಾಡ್ತಾರೆ ಅಂತ. ಮದುವೆ ಮನೆಯಲ್ಲಾದರೂ ಇನ್ನಷ್ಟು ಶಾಂತ ವಾತಾವರಣ ಇರುತ್ತದೆ. ಆದರೆ, ಇಲ್ಲಿ ಮಾತ್ರ ಕೋಲಾಹಲ. ಕಾರ್ಯಕ್ರಮ ಆಯೋಜನೆ ಮಾಡುವವರು ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಹೇಗೆ ಕೂರಿಸಬೇಕು? ಎಲ್ಲಿ ಕೂರಿಸಬೇಕು? ಅವರ ವಯೋಮಾನದ ಮಿತಿಯನ್ನು ಎಷ್ಟರವರೆಗೆ ನಿಗದಿಪಡಿಸಬೇಕು ಇದ್ಯಾವುದನ್ನೂ ಸರಿಯಾಗಿ ನಿಗದಿ ಮಾಡಿಕೊಂಡಿರಲಿಲ್ಲ. ಆ ಕಾರಣಕ್ಕಾಗಿ ಇನ್ನಷ್ಟು ಗಲಿಬಿಲಿಯಾಯಿತು. ಜಡ್ಜ್ ಬಂದು ಇನ್ನು ನಾನು ತೀರ್ಪು ನೀಡಬಹುದಾ ಎಂದರು. ಮೂರು ಗಂಟೆಗೆ ಮಕ್ಕಳು ಚಿತ್ರ ಬಿಡಿಸಲಾರಂಭಿಸಿದ್ದಾರೆ ಎಂಬ ಕಲ್ಪನೆ ಅವರದು. ನಾಕು ಗಂಟೆಯಾದರೂ ಇನ್ನೂ ಮಕ್ಕಳ ಕೈಗೆ ಬಣ್ಣ ಅಂಟಿರಲಿಲ್ಲ. ಇನ್ನು ಅವರ ಜೊತೆಗೂಡಿ ಬಂದ ಪಾಲಕರದ್ದು ಇನ್ನೊಂದು ತರ. ರಜಾ ದಿನಗಳಲ್ಲೇ ಕೆಲಸ ಮಾಡಿಕೊಳ್ಳಬೇಕು ಎಂದುಕೊಂಡ ಅದೆಷ್ಟೋ ಜನರಿಗೆ ನಿಗದಿತ ಸಮಯ ಜಾರುತ್ತಿರುವುದು ಇನ್ನಷ್ಟು ತಲ...